ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಅರ್ಹತೆ ನಿರ್ಧರಿಸುವ ಕರ್ನಾಟಕ ಸ್ಟೇಟ್ ಎಲಿಜಿಬಿಲಿಟಿ ಟೆಸ್ಟ್ (K-SET) 2025 ಪರೀಕ್ಷೆಗೆ ಆನ್ ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆಗಸ್ಟ್ 28, ಮಂಗಳವಾರದಿಂದ ಪ್ರಾರಂಭವಾಗಲಿದೆ. ಈ ಪರೀಕ್ಷೆ ನವೆಂಬರ್ 2ರಂದು ನಡೆಯುವ ನಿಗದಿ ಇದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮುಖ್ಯ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನ : ಆಗಸ್ಟ್ 28
ಅರ್ಜಿ ಸಲ್ಲಿಸಲು ಕೊನೆಯ ದಿನ: ಸೆಪ್ಟೆಂಬರ್ 18
ಅರ್ಜಿ ಶುಲ್ಕ ಪಾವತಿ ಕೊನೆಯ ದಿನ: ಸೆಪ್ಟೆಂಬರ್ 19
ಪ್ರವೇಶ ಪತ್ರ (ಹಾಲ್ ಟಿಕೆಟ್) ದೊರಕುವ ದಿನ: ಅಕ್ಟೋಬರ್ 24
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿಗಳನ್ನು ಆನ್ ಲೈನ್ ಮಾತ್ರ ಸ್ವೀಕರಿಸಲಾಗುವುದು. ಇತರ ಯಾವುದೇ ವಿಧಾನದಲ್ಲಿ ಸಲ್ಲಿಸಿದ ಅರ್ಜಿಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕೃತ ವೆಬ್ ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದುವಂತೆ ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.
ಪರೀಕ್ಷೆಯ ವಿವರ:
ಈ ಪರೀಕ್ಷೆಯನ್ನು ಒಟ್ಟು 33 ವಿಷಯಗಳಲ್ಲಿ ನಡೆಸಲಾಗುವುದು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಕರ್ನಾಟಕ ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ವಿಶ್ವವಿದ್ಯಾಲಯಗಳು, ಮೊದಲ ದರ್ಜೆ ಕಾಲೇಜುಗಳು ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹತೆ ಪಡೆಯುತ್ತಾರೆ. ನೇಮಕಾತಿಯ ಎಲ್ಲಾ ನಿಯಮಗಳು ಆಯಾ ಸಂಸ್ಥೆ ಮತ್ತು ಸರ್ಕಾರದ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ.
ಅರ್ಹತಾ ನಿಬಂಧನೆಗಳು:
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು UGC ಯಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಹೊಂದಿರಬೇಕು.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಸ್ನಾತಕೋತ್ತರದಲ್ಲಿ 55% ಅಂಕಗಳು ಬೇಕು.
SC, ST, OBC (1, 2A, 2B, 3A, 3B), ವಿಕಲಚೇತನ (PwD) ಮತ್ತು ತೃತೀಯ ಲಿಂಗದ ಅಭ್ಯರ್ಥಿಗಳಿಗೆ 50% ಅಂಕಗಳು ಬೇಕು.
ಅಂತಿಮ ವರ್ಷದ ವಿದ್ಯಾರ್ಥಿಗಳು: ಪ್ರಸ್ತುತ ಸ್ನಾತಕೋತ್ತರ ಅಭ್ಯಾಸ ಮಾಡುತ್ತಿರುವ (ಅಂತಿಮ ವರ್ಷ) ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳಬಹುದು. ಆದರೆ, ಅವರ ಅರ್ಹತೆ ತಾತ್ಕಾಲಿಕವಾಗಿರುತ್ತದೆ. ಪರೀಕ್ಷೆಯ ಫಲಿತಾಂಶ ಬಂದ ದಿನದಿಂದ ಎರಡು ವರ್ಷದೊಳಗಾಗಿ ಅವರು ಮೇಲೆ ನಮೂದಿಸಿದ ಶೇಕಡಾ ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ ದಾಖಲೆ ಸಲ್ಲಿಸಬೇಕು. ಇಲ್ಲದಿದ್ದರೆ, ಅವರ ಅರ್ಹತೆ ರದ್ದಾಗುತ್ತದೆ.
ವಿಷಯದ ಆಯ್ಕೆ: ಅಭ್ಯರ್ಥಿಗಳು ತಮ್ಮ ಸ್ನಾತಕೋತ್ತರ ಪದವಿಯ ವಿಷಯದಲ್ಲಿಯೇ K-SET ಪರೀಕ್ಷೆಗೆ ಕುಳಿತುಕೊಳ್ಳಬೇಕು. K-SET ನಲ್ಲಿ ಇಲ್ಲದ ವಿಷಯಗಳಿಗೆ, UGC-NET ಅಥವಾ CSIR-NET ಪರೀಕ್ಷೆಗೆ ಅರ್ಜಿ ಸಲ್ಲಿಸಬೇಕು.
ಪಿಎಚ್ಡಿ ಹೊಂದಿರುವವರು: 19 ಸೆಪ್ಟೆಂಬರ್ 1991ಕ್ಕೂ ಮುಂಚೆ ಸ್ನಾತಕೋತ್ತರ ಪದವಿ ಮುಗಿಸಿದ್ದು, ಪಿಎಚ್ಡಿ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಶೇಕಡಾ ಅಂಕಗಳ ಮಾನದಂಡದಿಂದ (5%) ವಿನಾಯಿತಿ ಇದೆ.
ಮೀಸಲು ವರ್ಗದ ಅಭ್ಯರ್ಥಿಗಳು: SC, ST, OBC, ತೃತೀಯ ಲಿಂಗ ಮತ್ತು PwD ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ, ಸಂಬಂಧಿತ ಪ್ರಾಧಿಕಾರದಿಂದ ಪಡೆದ ಚಾಲ್ತಿಯಲ್ಲಿರುವ ಜಾತಿ/ವರ್ಗ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಪ್ರಮಾಣಪತ್ರದ ರೆವಿನ್ಯೂ ಡಿವಿಜನ್ (RD) ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು. ನಕಲಿ ದಾಖಲೆಗಳನ್ನು ಸಲ್ಲಿಸಿದರೆ, ಅಭ್ಯರ್ಥಿತ್ವ ರದ್ದಾಗಿ ಕಾನೂನು ಕ್ರಮ ಜರುಗಿಸಲಾಗುವುದು.
ಹೊರರಾಜ್ಯದ ಅಭ್ಯರ್ಥಿಗಳು: ಹೊರರಾಜ್ಯದ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಮೀಸಲಾತಿ ಲಭ್ಯವಿಲ್ಲ. ಅವರು ಸಾಮಾನ್ಯ ವರ್ಗದ ಅರ್ಹತಾ ಮಾನದಂಡವಾದ 55% ಅಂಕಗಳನ್ನು ಪೂರೈಸಿದರೆ ಮಾತ್ರ ಅರ್ಜಿ ಸಲ್ಲಿಸಬಹುದು. SC/ST/OBC/ತೃತೀಯ ಲಿಂಗ/PwD ರಿಯಾಯಿತಿಗಳು ಕೇವಲ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತವೆ.
ಈಗಾಗಲೇ ಉತ್ತೀರ್ಣರಾದವರು: K-SET ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಉತ್ತೀರ್ಣರಾದವರು ಅದೇ ವಿಷಯದಲ್ಲಿ ಮತ್ತೆ ಪರೀಕ್ಷೆಗೆ ಕುಳಿತುಕೊಳ್ಳುವ ಅವಕಾಶ ಇಲ್ಲ. ಹಾಗೆ ಅರ್ಜಿ ಸಲ್ಲಿಸಿದರೆ, ಅವರ ಹಿಂದಿನ ಅರ್ಹತೆಯನ್ನು ಕೂಡಾ ರದ್ದುಗೊಳಿಸಲಾಗುವುದು.
ವಿದೇಶಿ ಪದವಿದಾರರು: ವಿದೇಶಿ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದ ಅಭ್ಯರ್ಥಿಗಳು, ದೆಹಲಿಯ ಅಸೋಸಿಯೇಷನ್ ಆಫ್ ಇಂಡಿಯನ್ ಯೂನಿವರ್ಸಿಟೀಸ್ (AIU) (www.aiu.ac.in) ನಿಂದ ತಮ್ಮ ಪದವಿಯು ಭಾರತೀಯ ಸ್ನಾತಕೋತ್ತರ ಪದವಿಗೆ ಸಮನಾದದ್ದು ಎಂಬ ಸಮಾನತೆ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕು.
ವಯೋ ಮಿತಿ:
K-SET 2025 ಪರೀಕ್ಷೆಗೆ ಅರ್ಜಿ ಸಲ್ಲಿಸಲು ಯಾವುದೇ ಗರಿಷ್ಠ ವಯೋ ಮಿತಿ ಇಲ್ಲ.
ವಿನಾಯಿತಿ:
ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ K-SET ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ.
UGC-NET/CSIR-NET/ಜೆಆರ್ಎಫ್ ಪರೀಕ್ಷೆಯಲ್ಲಿ 1989ರ ಮುಂಚೆ ಉತ್ತೀರ್ಣರಾದವರು.
1 ಜೂನ್ 2002ಕ್ಕೂ ಮುಂಚೆ ನಡೆದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ (ರಾಜ್ಯ ಮಟ್ಟದ) ಉತ್ತೀರ್ಣರಾದವರು.
UGC ಇತರ ನಿಬಂಧನೆಗಳನ್ನು ಹೊರಡಿಸಿದರೆ, ಅದರಂತೆ ವಿನಾಯಿತಿ ನೀಡಲಾಗುವುದು.
ಒಂದು ಗಮನಿಸಬೇಕಾದ ಅಂಶವೆಂದರೆ, 1 ಜೂನ್ 2002 ನಂತರ K-SET ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಕೇವಲ ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹರಾಗಿರುತ್ತಾರೆ. 2002 ಮುಂಚೆ ಉತ್ತೀರ್ಣರಾದವರು ಭಾರತದಲ್ಲೂ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳಿಗೆ ಸೂಚನೆ:
ಅರ್ಜಿ ಸಲ್ಲಿಸುವ ಮುನ್ನ KEA ವೆಬ್ ಸೈಟ್ ನಲ್ಲಿ ಪ್ರಕಟವಾದ ಸಂಪೂರ್ಣ ಅಧಿಸೂಚನೆಯನ್ನು (notification) ಕ್ಷುಣ್ಣವಾಗಿ ಓದುವಂತೆ ಸೂಚಿಸಲಾಗುತ್ತದೆ. ಪ್ರವೇಶ ಪತ್ರ ಪಡೆದಿದ್ದರೂ ಕೂಡಾ, ಅರ್ಜಿ ಸಲ್ಲಿಸುವ ಸಮಯದಲ್ಲಿ ನೀಡಿದ ಮಾಹಿತಿ ಮತ್ತು ದಾಖಲೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ ಮಾತ್ರ ಅಂತಿಮ ಅರ್ಹತೆ ನಿರ್ಧಾರಿತವಾಗುತ್ತದೆ.








ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.