Picsart 25 08 22 14 20 11 456 scaled

ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕದ ಖಜಾನೆಗೆ ಭಾರ: ಸಿಎಜಿ ವರದಿ ಎಚ್ಚರಿಕೆ

WhatsApp Group Telegram Group

ಕರ್ನಾಟಕವು ಆರ್ಥಿಕ ಪ್ರಗತಿಯಲ್ಲಿ (Economically development) ಇತ್ತೀಚಿನ ವರ್ಷಗಳಲ್ಲಿ ಹೊಸ ಇತಿಹಾಸ ನಿರ್ಮಿಸಿರುವುದು ಸತ್ಯ. 2024-25ನೇ ಸಾಲಿನಲ್ಲಿ ರಾಜ್ಯವು ದೇಶದ ಎಲ್ಲಾ ರಾಜ್ಯಗಳನ್ನು ಹಿಂದಿಕ್ಕಿ ತಲಾ ಆದಾಯದಲ್ಲಿ ನಂಬರ್ 1 ಸ್ಥಾನ ಗಳಿಸಿದೆ. ಆರ್ಥಿಕ ಶಕ್ತಿಯಲ್ಲಿ (Economic power) ಮುನ್ನಡೆಯುತ್ತಿರುವ ಕರ್ನಾಟಕ ಈಗ ಭಾರತದ ಮಾದರಿ ರಾಜ್ಯವೆಂದು ಹೇಳಿಸಿಕೊಳ್ಳುತ್ತಿದೆ. ಆದರೆ, ಈ ಆರ್ಥಿಕ ಅಭಿವೃದ್ಧಿಯ ಹಿಂದಿನ ವಾಸ್ತವ ಚಿತ್ರವೇನೆಂದರೆ, ಸಾಮಾಜಿಕ ಕಲ್ಯಾಣ ಯೋಜನೆಗಳ ಭಾರದಿಂದಾಗಿ ರಾಜ್ಯದ ವಿತ್ತೀಯ ಸ್ಥಿತಿಗೆ ದೊಡ್ಡ ಹೊಡೆತ ಬಿದ್ದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯದ ಜನಜೀವನ ಸುಧಾರಿಸುವ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು(Congress government) ‘ಪಂಚ ಗ್ಯಾರಂಟಿ’ಗಳಾದ ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮೀ, ಯುವ ನಿಧಿ ಮತ್ತು ಗೃಹ ಜ್ಯೋತಿ ಯೋಜನೆಗಳನ್ನು ಜಾರಿಗೊಳಿಸಿದೆ. ಸಾಮಾನ್ಯ ಜನರಿಗೆ ನೇರ ಪ್ರಯೋಜನ ತಲುಪಿಸುತ್ತಿರುವ ಈ ಯೋಜನೆಗಳು, ಮತ್ತೊಂದೆಡೆ ರಾಜ್ಯದ ಖಜಾನೆಗೆ ಭಾರಿಯಾದ ಹೊರೆ ಆಗಿ ಪರಿಣಮಿಸಿರುವುದನ್ನು ಕಂಪ್ಟ್ರೋಲರ್ ಅಂಡ್ ಆಡಿಯಿಟರ್ ಜನರಲ್ (Computer and Auditor General) ವರದಿ ಸ್ಪಷ್ಟಪಡಿಸಿದೆ.

ಗ್ಯಾರಂಟಿ ಯೋಜನೆಗಳಿಂದ ಸಾಲದ ಅವಲಂಬನೆ

ಸಿಎಜಿ ವರದಿ ಪ್ರಕಾರ, ಈ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು 2023-24 ನೇ ಸಾಲಿನಲ್ಲಿ 63,000 ಕೋಟಿ ರೂಪಾಯಿ ಮಾರುಕಟ್ಟೆ ಸಾಲ ಪಡೆಯಲಾಗಿದೆ. ಇದರಿಂದಾಗಿ ರಾಜ್ಯದ ವಿತ್ತೀಯ ಕೊರತೆ 46,623 ಕೋಟಿಯಿಂದ 65,522 ಕೋಟಿಗೆ ಏರಿಕೆಯಾಗಿದೆ.

ಗೃಹಲಕ್ಷ್ಮೀ ಯೋಜನೆಗೆ – ₹16,964 ಕೋಟಿ
ಗೃಹಜ್ಯೋತಿ ಯೋಜನೆಗೆ – ₹8,900 ಕೋಟಿ
ಅನ್ನಭಾಗ್ಯ ಯೋಜನೆಗೆ – ₹7,384 ಕೋಟಿ
ಶಕ್ತಿ ಯೋಜನೆಗೆ – ₹3,200 ಕೋಟಿ
ಯುವನಿಧಿಗೆ – ₹88 ಕೋಟಿ ವೆಚ್ಚ ಮಾಡಲಾಗಿದೆ.

ಮೂಲಸೌಕರ್ಯ ಬಂಡವಾಳ ವೆಚ್ಚ ಕುಸಿತ:

ಗ್ಯಾರಂಟಿ ಯೋಜನೆಗಳಿಗಾಗಿ ಹೆಚ್ಚುವರಿ ಸಾಲ ಮಾಡಿರುವುದರಿಂದ ಮೂಲಸೌಕರ್ಯ ಅಭಿವೃದ್ಧಿಗೆ (All facility development) ಮೀಸಲಾದ ಬಂಡವಾಳ ವೆಚ್ಚವನ್ನು 5,229 ಕೋಟಿ ರೂಪಾಯಿ ಕಡಿಮೆ ಮಾಡಲಾಗಿದೆ. ಅಂದರೆ, ಜನಪರ ಯೋಜನೆಗಳು ನಡೆಯುತ್ತಿದ್ದರೂ ರಸ್ತೆ, ಸೇತುವೆ, ಕೈಗಾರಿಕಾ ಹೂಡಿಕೆಗಳಂತಹ ದೀರ್ಘಕಾಲೀನ ಅಭಿವೃದ್ಧಿ ಯೋಜನೆಗಳು ಹಿನ್ನಡೆಯಾಗುವ ಅಪಾಯವಿದೆ.

ತೆರಿಗೆ ಆದಾಯ ಹೆಚ್ಚಳ, ಆದರೆ ಸಮತೋಲನ ಇಲ್ಲ:

2023-24 ರಲ್ಲಿ ರಾಜ್ಯದ ಸ್ವಂತ ತೆರಿಗೆ ಆದಾಯದಲ್ಲಿ 13.78% ಹೆಚ್ಚಳ ಕಂಡುಬಂದಿದೆ. ಒಟ್ಟು ರಾಜಸ್ವ ಸ್ವೀಕೃತಿಗಳಲ್ಲಿ ರಾಜ್ಯದ ಸಂಪನ್ಮೂಲಗಳ ಪಾಲು 76% ತಲುಪಿದೆ. ಜೊತೆಗೆ ಕೇಂದ್ರ ತೆರಿಗೆ ವರ್ಗಾವಣೆ 19.07% ಹೆಚ್ಚಾಗಿದೆ. ಆದಾಗ್ಯೂ, ತೆರಿಗೇತರ ಆದಾಯದಲ್ಲಿ 797 ಕೋಟಿ ರೂಪಾಯಿ ಇಳಿಕೆ ಆಗಿದ್ದು, ಇದು ರಾಜ್ಯದ ಆದಾಯ ಸಮತೋಲನಕ್ಕೆ ಧಕ್ಕೆಯನ್ನುಂಟುಮಾಡಿದೆ.

ಖರ್ಚು ಏರಿಕೆ – ಆರ್ಥಿಕ ಒತ್ತಡ:

ರಾಜ್ಯದ ಆದಾಯವು ಶೇ. 1.86ರಷ್ಟು ಮಾತ್ರ ಹೆಚ್ಚಾಗಿದ್ದರೆ, ಖರ್ಚು ಶೇ. 12.54ರಷ್ಟು ಏರಿಕೆಯಾಗಿದೆ. ಈ ಅಸಮತೋಲನದ ಪ್ರಮುಖ ಕಾರಣವೇ ಗ್ಯಾರಂಟಿ ಯೋಜನೆಗಳು(Gauranty Schems). ವರದಿ ಪ್ರಕಾರ, ಮುಂದಿನ ವರ್ಷಗಳಲ್ಲಿ ಈ ಯೋಜನೆಗಳ ನಿರಂತರ ಜಾರಿ ರಾಜ್ಯದ ಆರ್ಥಿಕತೆಯ ಮೇಲೆ ಗಂಭೀರ ಒತ್ತಡ ತರುತ್ತದೆ.

ಒಟ್ಟಾರೆಯಾಗಿ, ಒಂದೆಡೆ ಜನಪರ ಕಲ್ಯಾಣ ಯೋಜನೆಗಳಿಂದ (Public Welfare Schemes) ಸಾಮಾನ್ಯ ಕುಟುಂಬಗಳಿಗೆ ನೇರ ಸಹಾಯ ಲಭಿಸುತ್ತಿದ್ದರೂ, ಇನ್ನೊಂದೆಡೆ ರಾಜ್ಯದ ಖಜಾನೆ ಮೇಲೆ ಹೆಚ್ಚುವರಿ ಸಾಲದ ಭಾರವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಿಎಜಿ ವರದಿ ತೋರಿಸುತ್ತಿರುವಂತೆ, ಗ್ಯಾರಂಟಿ ಯೋಜನೆಗಳ ಜಾರಿ, ಆರ್ಥಿಕ ಪ್ರಗತಿ ಹಾಗೂ ವಿತ್ತೀಯ ಸಮತೋಲನ ನಡುವೆ ದೊಡ್ಡ ಸವಾಲು ಎದ್ದುಕೊಂಡಿದೆ. ಈಗ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಈ ಎರಡು ಅಂಶಗಳನ್ನು ಹೇಗೆ ಸಮನ್ವಯಗೊಳಿಸುತ್ತದೆ ಎಂಬುದು ಪ್ರಮುಖ ಪ್ರಶ್ನೆಯಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories