ರಾಜ್ಯದ ಮಹಿಳಾ ಸಬಲೀಕರಣ ಮತ್ತು ಕುಟುಂಬ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕರುನಾಡಿನ ಗೃಹಲಕ್ಷ್ಮೀಯೋಜನೆಯ ಫಲಾನುಭವಿಗಳಿಗೆ ಗಣೇಶ ಚತುರ್ಥಿಗೆ ಮುನ್ನ ಸಂತೋಷದ ಸುದ್ದಿ ನೀಡಿದ್ದಾರೆ. ಉಡುಪಿಯಲ್ಲಿ ನಡೆದ ಸಮಾವೇಶದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಗೃಹಲಕ್ಷ್ಮಿಯ ಹಣ ಜೂನ್ ಜುಲೈ ತಿಂಗಳಿನದ್ದು ವರಮಹಾಲಕ್ಷ್ಮೀ ಹಬ್ಬಕ್ಕೆ ಬಿಡುಗಡೆ ಮಾಡಿದ್ದೇವೆ , ಆ ಹಣವನ್ನ ಬಿಡುಗಡೆ ಮಾಡಿಯೇ 4-5 ದಿನ ಆಯಿತು ಮುಗಿಸಿಗೊಂಡೆ ಉಡುಪಿಗೆ ಬಂದಿದ್ದೇನೆ ಎಂದು ನಿಖರವಾದ ಮಾಹಿತಿಯನ್ನು ನೀಡಿದ್ದಾರೆ.. ಈ ಹಣವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಶೀಘ್ರದಲ್ಲೇ ಜಮೆಯಾಗುವುದರೊಂದಿಗೆ, ಗಣೇಶೋತ್ಸವದ ವೇಳೆಗೆ ಮನೆಮಾತಾಗಿ ಸಿಹಿ ಸುದ್ದಿಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ರಾಜ್ಯದ ಮಹಿಳೆಯರಿಗೆ ಮಾಸಿಕ ₹2,000 ನೇರ ಹಣಸಹಾಯ (DBT) ನೀಡಲಾಗುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾಗಿದ್ದು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯವನ್ನು ಉತ್ತೇಜಿಸುತ್ತದೆ. ಸಚಿವೆಯವರು ಈ ಹಣವನ್ನು ಸಮಯಕ್ಕೆ ಮುನ್ನ ಬಿಡುಗಡೆ ಮಾಡುವುದರ ಮೂಲಕ ಹಬ್ಬದ ಸಂತೋಷವನ್ನು ದ್ವಿಗುಣಗೊಳಿಸಿದ್ದಾರೆ.
ಈ ಬಾರಿ ಎಷ್ಟು ಹಣ ಬಿಡುಗಡೆಯಾಗಿದೆ?
ಈ ಬಾರಿ ಜೂನ್ ಮತ್ತು ಜುಲೈ ತಿಂಗಳ ಎರಡೂ ಕಂತುಗಳು ಬಿಡುಗಡೆಯಾಗಿದ್ದು ಸದ್ಯ ಜೂನ್ ತಿಂಗಳ 2000 ರೂಪಾಯಿ ನೀಡಲಾಗುತ್ತಿದೆ ಹಲವಾರು ಮಹಿಳೆಯರ ಖಾತೆಗೆ ಜಮೆ ಆದ್ತಾ ಇದೆ ಜುಲೈ ತಿಂಗಳ ಹಣ ಗನೇಶ ಹಬ್ಬಕ್ಕೆ ಜಮೆ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. ಇದನ್ನು DBT ಮೂಲಕ ನೇರವಾಗಿ ಲಾಭಾರ್ಥಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ. 1.23 ಕೋಟಿ ಮಹಿಳೆಯರು ಈ ಯೋಜನೆಯ ಅರ್ಹರಾಗಿದ್ದಾರೆ.
ಹಣ ಯಾವಾಗ ಬರಲಿದೆ?
ಸರ್ಕಾರಿ ಮೂಲಗಳ ಪ್ರಕಾರ, ಶುಕ್ರವಾರ (ಆಗಸ್ಟ್ 8, 2025) ಸಂಜೆ ವೇಳೆಗೆ 40 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಬಿಡುಗಡೆಯಾಗಿದೆ ಶೀಘ್ರದಲ್ಲೇ ಖಾತೆಗೆ ಹಣ ಜಮೆಯಾಗಿದೆ ಸುಮಾರು ಮಹಿಳೆಯರಿಗೆ ಜಮಾ ಆಗಿದೆ ನಿಮಗೂ ಆಗಲಿದೆ.
ಜುಲೈ ತಿಂಗಳ ಬಾಕಿ ₹2000ಹಣ ಇದೇ ತಿಂಗಳ ಕೊನೆಯ ವಾರದಲ್ಲಿ ಗನೇಶನ ಹಬ್ಬಕ್ಕೆ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕೆಳಗಂಡಂತೆ ವಿವರಣೆ ಹೀಗಿದೆ
ಗಮನಿಸಿ ; ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದರೂ ಖಾತೆಗೆ ಬರಲು 5-6 ದಿನ ತಡವಾಗಬಹುದು
ನಿಮ್ಮ ಖಾತೆಗೆ ಹಣ ಬಂದಿದೆಯೇ? ಹೇಗೆ ಪರಿಶೀಲಿಸುವುದು?
ನಿಮ್ಮ ಖಾತೆಗೆ ಗೃಹಲಕ್ಷ್ಮೀ ಹಣ ಬಂದಿದೆಯೇ ಎಂದು DBT ಕರ್ನಾಟಕ ಅಪ್ಲಿಕೇಶನ್ ಬಳಸಿ ಪರಿಶೀಲಿಸಬಹುದು. ಹಂತ ಹಂತವಾದ ಮಾರ್ಗದರ್ಶನ ಇಲ್ಲಿದೆ:
ಹಂತ 1: DBT ಕರ್ನಾಟಕ ಅಪ್ಲಿಕೇಶನ್ ಡೌನ್ಲೋಡ್ ಮಾಡಿ
- ನಿಮ್ಮ ಸ್ಮಾರ್ಟ್ಫೋನ್ನಲ್ಲಿ Google Play Store ಗೆ ಹೋಗಿ.
- “DBT Karnataka” ಎಂದು ಸರ್ಚ್ ಮಾಡಿ.
- ಅಧಿಕೃತ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ.
ಹಂತ 2: ಆಧಾರ್ ನಂಬರ್ ಮತ್ತು OTP ನಮೂದಿಸಿ
- ಅಪ್ಲಿಕೇಶನ್ ತೆರೆದ ನಂತರ, ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಿ.
- “Get OTP” ಬಟನ್ ಕ್ಲಿಕ್ ಮಾಡಿ.
- ನಿಮ್ಮ ಮೊಬೈಲ್ಗೆ ಬರುವ OTP ನಮೂದಿಸಿ.
ಹಂತ 3: mPIN ಸೆಟಪ್ ಮಾಡಿ
- ನಿಮಗೆ ಬೇಕಾದ 4-ಅಂಕಿಯ mPIN ರಚಿಸಿ.
- ಅದೇ PIN ಅನ್ನು ಮತ್ತೊಮ್ಮೆ ನಮೂದಿಸಿ (Confirm mPIN).
- “Submit” ಬಟನ್ ಕ್ಲಿಕ್ ಮಾಡಿ.
ಹಂತ 4: ಪಾವತಿ ಸ್ಥಿತಿ ಪರಿಶೀಲಿಸಿ
- ಹೋಂ ಪೇಜ್ನಲ್ಲಿ “Payment Status” ಕ್ಲಿಕ್ ಮಾಡಿ.
- ಗೃಹಲಕ್ಷ್ಮೀ ಯೋಜನೆ ಆಯ್ಕೆಮಾಡಿ.
- ನಿಮ್ಮ ಹಣ ಖಾತೆಗೆ ಬಂದಿದ್ದರೆ, ಅದು ಇಲ್ಲಿ ತೋರಿಸುತ್ತದೆ.
ಹಂತ 5: ಆಧಾರ್-ಬ್ಯಾಂಕ್ ಲಿಂಕ್ ಪರಿಶೀಲಿಸಿ
- “Seeding Status of Aadhaar in Bank Account” ಕ್ಲಿಕ್ ಮಾಡಿ.
- ನಿಮ್ಮ ಆಧಾರ್ ಕಾರ್ಡ್ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆ ಎಂದು ತಿಳಿಯಬಹುದು.
ಹಣ ಬರದಿದ್ದರೆ ಏನು ಮಾಡಬೇಕು?
- ನಿಮ್ಮ ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಆಗಿಲ್ಲದಿದ್ದರೆ, ನಿಮ್ಮ ಬ್ಯಾಂಕ್ ಶಾಖೆಯಲ್ಲಿ ಆಧಾರ್ ಸೀಡಿಂಗ್ ಮಾಡಿಸಿ.
- DBT ಕರ್ನಾಟಕ ಹೆಲ್ಪ್ಲೈನ್ (1800-425-1555) ಅಥವಾ ನಿಮ್ಮ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಪರ್ಕಿಸಿ.
ಗೃಹಲಕ್ಷ್ಮೀ ಯೋಜನೆಯು ರಾಜ್ಯದ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ನೀಡುವ ಪ್ರಮುಖ ಕಾರ್ಯಕ್ರಮವಾಗಿದೆ. ಈ ಬಾರಿ ₹4,000 ರೂಪಾಯಿ ಒಟ್ಟಿಗೆ ಬಿಡುಗಡೆಯಾಗಿರುವುದರಿಂದ, ಫಲಾನುಭವಿಗಳು ತಮ್ಮ ಅಗತ್ಯಗಳನ್ನು ಪೂರೈಸಲು ಅನುಕೂಲವಾಗಿದೆ. ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು DBT ಅಪ್ಲಿಕೇಶನ್ ಬಳಸಿ ಪರಿಶೀಲಿಸಿ ಮತ್ತು ಅಗತ್ಯವಿದ್ದರೆ ಸರ್ಕಾರಿ ಸಹಾಯ ಪಡೆಯಿರಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ರಾಜ್ಯದ ಮಹಿಳೆಯರಿಗೆ ಶುಭಸುದ್ದಿ “ಗೃಹಲಕ್ಷ್ಮಿ” ಯೋಜನೆಯ ಬಾಕಿ ಕಂತಿನ ₹4000 ಹಣ ನಾಳೆ ವರಮಹಾಲಕ್ಷ್ಮಿ ಹಬ್ಬಕ್ಕೆ ಖಾತೆಗೆ ಜಮಾ.!
- ಖಾತೆಗೆ ಬರದ ಹಣ: ಗೃಹಲಕ್ಷ್ಮಿ ಯೋಜನೆ ವಿರುದ್ಧ ಮಹಿಳೆಯರ ಆಕ್ರೋಶ; 21ನೇ ಕಂತು ಬಿಗ್ ಅಪ್ಡೇಟ್ ಕೊಟ್ಟ ಅಧಿಕಾರಿಗಳು
- ಸರ್ಕಾರದಿಂದ `ನಿರುದ್ಯೋಗಿಗಳಿಗೆ ಬಂಪರ್ ಗಿಫ್ಟ್’ : ಎಲೆಕ್ಟ್ರಿಕ್ ವಾಹನ ಖರೀದಿಗೆ 3 ಲಕ್ಷ ರೂ. ಸಹಾಯಧನ ಸೇರಿ 17 ಬಿಲ್ ಗೆ ಸಂಪುಟ ಒಪ್ಪಿಗೆ.!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.