ಸರ್ಕಾರಿ ನೌಕರರ ಜೀವನದಲ್ಲಿ ಪ್ರತಿಯೊಂದು ವೇತನ ಆಯೋಗದ ಶಿಫಾರಸುಗಳು ಮಹತ್ತರ ಬದಲಾವಣೆ ತರುತ್ತವೆ. 6ನೇ ಮತ್ತು 7ನೇ ವೇತನ ಆಯೋಗದ ಅನುಷ್ಠಾನದಿಂದ ಈಗಾಗಲೇ ಸಂಬಳದ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡಿದ್ದೇವೆ. ಇದೀಗ, ಎಂಟನೇ ವೇತನ ಆಯೋಗ (8th Pay Commission) ಕುರಿತು ಚರ್ಚೆಗಳು ತೀವ್ರಗೊಂಡಿವೆ. ಸರ್ಕಾರಿ ನೌಕರರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಿಬ್ಬಂದಿಗಳು ಎಲ್ಲರೂ “ಈ ಬಾರಿಯ ಹೈಕ್ ಎಷ್ಟು ಇರಬಹುದು?” ಎಂಬ ಕುತೂಹಲದಲ್ಲಿ ಇದ್ದಾರೆ. ಬೋಕರೇಜ್ ಕಂಪನಿಗಳು, ಆರ್ಥಿಕ ತಜ್ಞರು ಮತ್ತು ಮಾರುಕಟ್ಟೆ ವಿಶ್ಲೇಷಕರು ಈಗಾಗಲೇ ತಮ್ಮ ಲೆಕ್ಕಾಚಾರಗಳನ್ನು ಹಂಚಿಕೊಳ್ಳುತ್ತಿದ್ದು, ಅಂದಾಜು ಶೇಕಡಾ 13ರಿಂದ 54ರಷ್ಟು ಹೆಚ್ಚಳದ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಭಾರತದ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ಎಂದರೆ ಅದು ಕೇವಲ ಆರ್ಥಿಕ ಲಾಭವಷ್ಟೇ ಅಲ್ಲ, ಬದುಕಿನ ಗುಣಮಟ್ಟವನ್ನು ಉತ್ತಮಗೊಳಿಸುವ ಮಹತ್ವದ ಹಂತವೂ ಆಗಿದೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ಜಾರಿಗೆ ಬರುವ ವೇತನ ಆಯೋಗ (Pay Commission) ಸರ್ಕಾರಿ ನೌಕರರ ವೇತನ, ಭತ್ಯೆ ಹಾಗೂ ನಿವೃತ್ತಿ ಸೌಲಭ್ಯಗಳನ್ನು ಪರಿಷ್ಕರಿಸಿ ಶಿಫಾರಸು ಮಾಡುತ್ತದೆ. ಈಗ ಎಲ್ಲರ ಗಮನ 8ನೇ ವೇತನ ಆಯೋಗದತ್ತ ಹರಿಯುತ್ತಿದೆ.
ಫಿಟ್‌ಮೆಂಟ್ ಫ್ಯಾಕ್ಟರ್ ಎಂದರೇನು?:
ಫಿಟ್‌ಮೆಂಟ್ ಫ್ಯಾಕ್ಟರ್ ಎಂದರೆ ಪ್ರಸ್ತುತ ಇರುವ ಮೂಲ ವೇತನವನ್ನು ಗುಣಿಸುವ ಪ್ರಮಾಣ. 7ನೇ ವೇತನ ಆಯೋಗದಲ್ಲಿ ಈ ಅಂಶ 2.57 ಇತ್ತು. ಉದಾಹರಣೆಗೆ, 6ನೇ ವೇತನ ಆಯೋಗದಲ್ಲಿ ಕನಿಷ್ಠ ಮೂಲ ವೇತನ ₹7,000 ಇದ್ದರೆ, 7ನೇ ಆಯೋಗದಲ್ಲಿ ಅದು ₹18,000ಕ್ಕೆ ಏರಿತು. ಈ ಏರಿಕೆಗೆ ಫಿಟ್‌ಮೆಂಟ್ ಫ್ಯಾಕ್ಟರ್ ಕಾರಣ.
ಫಿಟೆಂಟ್ ಅಂಶವೇ ವೇತನ ಪರಿಷ್ಕರಣೆಯ ಕೀಲಿಕೈ:
ಸಂಬಳ ಹೆಚ್ಚಳದ ಪ್ರಮಾಣವನ್ನು ನಿರ್ಧರಿಸುವ ಪ್ರಮುಖ ಅಂಶವೇ Fitment Factor. ಇದು ಅಸ್ತಿತ್ವದಲ್ಲಿರುವ ಮೂಲ ವೇತನವನ್ನು (Basic Pay) ನಿರ್ದಿಷ್ಟ ಸಂಖ್ಯೆಯಿಂದ ಗುಣಿಸುವ ಮೂಲಕ ಹೊಸ ಮೂಲ ವೇತನವನ್ನು ನಿಗದಿ ಮಾಡುತ್ತದೆ.
ಸಂಶೋಧನಾ ಸಂಸ್ಥೆಗಳ ಅಂದಾಜು:
ಆಂಬಿಟ್ ಕ್ಯಾಪಿಟಲ್ ವರದಿಯ ಪ್ರಕಾರ, 8ನೇ ವೇತನ ಆಯೋಗದ ಫಿಟ್‌ಮೆಂಟ್ ಫ್ಯಾಕ್ಟರ್ 1.83 ರಿಂದ 2.46ರೊಳಗೆ ಇರಬಹುದು.
1.83 ಆಗಿದ್ದರೆ ವೇತನ ಸುಮಾರು 14% ಹೆಚ್ಚಾಗಬಹುದು.
2.15 ಇದ್ದರೆ ಸುಮಾರು 34% ಏರಿಕೆ.
2.46 ಇದ್ದರೆ ಶೇಕಡಾ 54% ಏರಿಕೆ ಸಾಧ್ಯ.
ಕೋಟಕ್ ಇನ್‌ಸ್ಟಿಟ್ಯೂಷನಲ್ ಇಕ್ವಿಟೀಸ್ ವರದಿಯ ಪ್ರಕಾರ, 1.8ರ ಫಿಟ್‌ಮೆಂಟ್ ಫ್ಯಾಕ್ಟರ್ ಅಂದಾಜಿಸಿದ್ದು, ಇದು ಶೇಕಡಾ 13ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ.
ಹಿಂದಿನ ಆಯೋಗಗಳ ಲೆಕ್ಕಾಚಾರ:
6ನೇ ವೇತನ ಆಯೋಗ(6th Pay Commission),
ಮೂಲ ವೇತನ ₹7,000 + DA ₹8,750 + HRA ₹2,100 + TA ₹1,350 = ₹19,200
7ನೇ ವೇತನ ಆಯೋಗ(7th Pay Commission),
ಮೂಲ ವೇತನ ₹18,000 + HRA ₹4,320 + TA ₹1,350 + DA ₹0 = ₹23,670
2016ರಲ್ಲಿ ಜಾರಿಗೆ ಬಂದ 7ನೇ ವೇತನ ಆಯೋಗದ ನಂತರ ಕನಿಷ್ಠ ವೇತನದಲ್ಲಿ ಸುಮಾರು 14% ಏರಿಕೆ ಕಂಡಿತ್ತು.
₹50,000 ಮೂಲ ವೇತನದ ಲೆಕ್ಕಾಚಾರ:
ಪ್ರಸ್ತುತ ಸ್ಥಿತಿ,
ಮೂಲ ವೇತನ: ₹50,000
HRA (24%): ₹12,000
TA: ₹2,160
DA (55%): ₹27,500
ಒಟ್ಟು ಸಂಬಳ = ₹91,660
1.82ರ ಫಿಟ್‌ಮೆಂಟ್ ಫ್ಯಾಕ್ಟರ್ ಇದ್ದರೆ,
ಹೊಸ ಮೂಲ ವೇತನ = ₹50,000 × 1.82 = ₹91,000
HRA (24%) = ₹21,840
TA = ₹2,160
DA = ₹0
ಹೊಸ ಒಟ್ಟು ಸಂಬಳ ≈ ₹1,15,000 (ಸುಮಾರು 25.46% ಹೆಚ್ಚಳ)
2.15ರ ಫಿಟ್‌ಮೆಂಟ್ ಫ್ಯಾಕ್ಟರ್ ಇದ್ದರೆ,
ಹೊಸ ಮೂಲ ವೇತನ = ₹50,000 × 2.15 = ₹1,07,500
HRA (24%) = ₹25,800
TA = ₹2,160
DA = ₹0
ಹೊಸ ಒಟ್ಟು ಸಂಬಳ ≈ ₹1,35,460 (ಸುಮಾರು 47.78% ಹೆಚ್ಚಳ)
ಈ ಲೆಕ್ಕಾಚಾರ ಕೇವಲ ಅಂದಾಜು. ನಿಜವಾದ ಏರಿಕೆ ಪ್ರಮಾಣವನ್ನು ಎಂಟನೇ ವೇತನ ಆಯೋಗ ಅಧಿಕೃತವಾಗಿ ಶಿಫಾರಸು ಮಾಡಿದ ನಂತರವೇ ತಿಳಿಯುತ್ತದೆ. ಕೇಂದ್ರ ಸರ್ಕಾರದ ಘೋಷಣೆಯ ನಂತರ, ರಾಜ್ಯ ಸರ್ಕಾರಿ ನೌಕರರಿಗೂ ಅದರ ಪ್ರಯೋಜನ ವಿಸ್ತರಿಸುವ ಸಾಧ್ಯತೆ ಇದೆ. ಆದ್ದರಿಂದ, ಮುಂದಿನ ವರ್ಷಗಳಲ್ಲಿ ಸರ್ಕಾರಿ ನೌಕರರ ಸಂಬಳದಲ್ಲಿ ಭಾರೀ ಬದಲಾವಣೆ ಆಗುವ ನಿರೀಕ್ಷೆ ಇದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.