ತೆಂಗಿನಕಾಯಿ (Coconut) ದಕ್ಷಿಣ ಭಾರತದ ಅನೇಕ ಮನೆಗಳ ಅಡುಗೆ, ಹಬ್ಬ-ಜಾತ್ರೆ ಹಾಗೂ ಧಾರ್ಮಿಕ ವಿಧಿವಿಧಾನಗಳ ಅವಿಭಾಜ್ಯ ಅಂಗ. ಆಹಾರ ಪದಾರ್ಥಗಳ ರುಚಿಯನ್ನು ಹೆಚ್ಚಿಸುವುದಲ್ಲದೆ, ಅದರ ಎಣ್ಣೆ ಆರೋಗ್ಯಕರ ಅಡುಗೆಗೆ (Healthy food) ಪ್ರಮುಖ ಆಯ್ಕೆಯಾಗಿದೆ. ಇಂತಹ ತೆಂಗಿನಕಾಯಿಯ ಬೆಲೆ ಏರಿಕೆ-ಇಳಿಕೆಗಳು ನೇರವಾಗಿ ರೈತರ, ವ್ಯಾಪಾರಿಗಳ ಹಾಗೂ ಗ್ರಾಹಕರ ಜೀವನಕ್ಕೆ ಪರಿಣಾಮ ಬೀರುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕಳೆದ ವರ್ಷ ತೆಂಗಿನಕಾಯಿ ಮಾರುಕಟ್ಟೆ ಏರಿಕೆಯ ಹಾದಿಯಲ್ಲಿ ಸಾಗುತ್ತಿದ್ದರೆ, ಈ ವರ್ಷ ಆರಂಭದಿಂದಲೇ ಒಂದು ಹೊಸ ತಿರುವು ಕಂಡಿದೆ. ಏರಿಕೆಯಿಂದ ತೀವ್ರ ಕುಸಿತವಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಸಿತಕ್ಕೆ ಕಾರಣ ಮಾರುಕಟ್ಟೆಯ ಅನಿಶ್ಚಿತತೆ ಮತ್ತು ಹವಾಮಾನ(Weather), ಉತ್ಪಾದನೆ ಹಾಗೂ ಬೇಡಿಕೆಯ ತೀವ್ರ ಬದಲಾವಣೆಗಳ ನೇರ ಪರಿಣಾಮವಾಗಿದೆ.
ಬೆಲೆ ಏರಿಕೆಯ ಹಿನ್ನಲೆ ಏನು?:
ವರ್ಷಗಳಿಂದ ಕಡಿಮೆ ಬೆಲೆಯಿಂದ ಮಾರಾಟವಾಗುತ್ತಿದ್ದ ಹಸಿರು ತೆಂಗಿನಕಾಯಿಯ ದರ, ಕಳೆದ ವರ್ಷ ಸೆಪ್ಟೆಂಬರ್ ವೇಳೆಗೆ ಏರಿಕೆಯಾಗಲು ಪ್ರಾರಂಭಿಸಿತು. ಸರ್ಕಾರ (government) ನಿಗದಿಪಡಿಸಿದ್ದ ₹34 (ಕೆಜಿ) ದರವನ್ನು ದಾಟಿ, ಅಕ್ಟೋಬರ್ ಮಧ್ಯದಲ್ಲಿ ₹50 ತಲುಪಿತು. ಬಳಿಕ ಬೆಲೆಯಲ್ಲಿ ಭಾರೀ ಜಿಗಿತ ಕಂಡುಬಂದಿತು, ಕೆಲವೊಂದು ಹಂತಗಳಲ್ಲಿ ಕೆಜಿಗೆ ₹100 ಮೀರಿದ ಸಂದರ್ಭಗಳೂ ದಾಖಲಾಗಿವೆ.
ಬೆಲೆ ಏರಿಕೆಗೆ ಕಾರಣಗಳೇನು(Causes)?
ಅಡುಗೆಯಲ್ಲಿ ಬೇರೆ ಎಣ್ಣೆಗಳಿಗಿಂತ ತಾಳೆ ಎಣ್ಣೆಗೆ ಹೆಚ್ಚಿನ ಬೇಡಿಕೆ.
ಹವಾಮಾನ ವೈಪರೀತ್ಯ ಮತ್ತು ಕೊಯ್ಲಿನ ಕುಸಿತ.
ಪೂಜೆ, ಮದುವೆ, ಹಬ್ಬಗಳ ಸಮಯದಲ್ಲಿ ಹೆಚ್ಚಿನ ಬಳಕೆ.
ಪ್ರಸ್ತುತ ಕುಸಿತದ ಸ್ಥಿತಿ ಯಾವ ರೀತಿಯಿದೆ?:
ಕೊನೆಯ ವಾರದಿಂದ ಮಾರುಕಟ್ಟೆಯಲ್ಲಿ ತೀವ್ರ ಬದಲಾವಣೆ. ಆಗ ಹಸಿರು ತೆಂಗಿನಕಾಯಿ ಬೆಲೆ (Coconut price) ಕೆಜಿಗೆ ₹80 ತಲುಪಿದ್ದರೂ, ಕಳೆದ ಒಂದು ವಾರದಿಂದ ಬೆಲೆ ನಿರಂತರ ಇಳಿಯುತ್ತಿದೆ.
ಕಳೆದ ಶನಿವಾರದ ಚಿಲ್ಲರೆ ಬೆಲೆ: ₹57 (ಕೆಜಿ) – ಹಿಂದಿನ ದಿನ ₹62 ಇತ್ತು, ಒಂದೇ ದಿನದಲ್ಲಿ ₹5 ಇಳಿಕೆ.
ಕೊಬ್ಬರಿಯ ದರ: ಒಂದೇ ದಿನದಲ್ಲಿ ₹5–₹6 ಇಳಿಕೆ.
ವ್ಯಾಪಾರಿಗಳ ಅಂದಾಜು: ಮುಂದಿನ ದಿನಗಳಲ್ಲಿ ಬೆಲೆ ₹50 ತಲುಪುವ ಸಾಧ್ಯತೆ.
ಕುಸಿತದ ಪ್ರಮುಖ ಕಾರಣಗಳು ಏನು?:
ತಮಿಳುನಾಡು ಮತ್ತು ಕರ್ನಾಟಕದಲ್ಲಿ ಉತ್ತಮ ಬೆಳೆ.
ತೆಂಗಿನ ಎಣ್ಣೆಯ ದರ (Coconut oil price) ಏರಿಕೆಯಿಂದ ಜನರು ತಾಳೆ ಎಣ್ಣೆಗೆ ತಿರುಗಿದ್ದಾರೆ.
ವ್ಯಾಪಾರಿಗಳು ಹೆಚ್ಚಿನ ಪ್ರಮಾಣದಲ್ಲಿ ತೆಂಗಿನಕಾಯಿ ತರುತ್ತಿದ್ದಾರೆ.
ಹಿಂದಿನ ವರ್ಷಗಳ ಹೋಲಿಕೆ
2018: ಬೆಲೆ ₹45 (ಕೆಜಿ).
2022–23: ಸಾರ್ವಜನಿಕ ಮಾರುಕಟ್ಟೆಯಲ್ಲಿ ₹20–₹28.
2023 ಕೊನೆಯಲ್ಲಿ: ₹100 ಮೀರಿದ ದರ.
2024 ಆಗಸ್ಟ್: ₹80 ಇಂದ ₹57ಕ್ಕೆ ಕುಸಿತ. ಆದರೆ ಒಂದು ತಿಂಗಳಲ್ಲಿ ₹5,000 (ಟನ್ನಿಗೆ) ಇಳಿಕೆ.
ಮಾರುಕಟ್ಟೆಯ ಪ್ರಸ್ತುತ ಪ್ರವೃತ್ತಿ ಪ್ರಕಾರ, ಹಸಿರು ತೆಂಗಿನಕಾಯಿಯ ಬೆಲೆ (Green coconut price) ಇನ್ನೂ ಕೆಲವು ವಾರಗಳು ಕುಸಿಯುವ ಸಾಧ್ಯತೆ ಇದೆ. ವಿಶೇಷವಾಗಿ ದೀಪಾವಳಿ ಹಾಗೂ ಮದುವೆ ಹಬ್ಬಗಳ ನಂತರ, ಬೇಡಿಕೆ ಮತ್ತೆ ಏರಿಕೆಯಾಗಬಹುದು ಎಂದು ವ್ಯಾಪಾರಿಗಳು ನಿರೀಕ್ಷಿಸುತ್ತಿದ್ದಾರೆ.
ಒಟ್ಟಾರೆಯಾಗಿ, ತೆಂಗಿನಕಾಯಿ ಮಾರುಕಟ್ಟೆ ಪ್ರಸ್ತುತ ಖರೀದಿದಾರರ (Present market Buyer’s) ಪರವಾಗಿದೆ, ಆದರೆ ರೈತರಿಗೆ ಇದು ಆತಂಕದ ವಿಷಯ. ಬೆಲೆಯ ಏರಿಕೆ-ಇಳಿಕೆಯನ್ನು ಸಮತೋಲನಗೊಳಿಸಲು ಉತ್ಪಾದನೆ ಹಾಗೂ ಮಾರುಕಟ್ಟೆ ನೀತಿಗಳಲ್ಲಿ ಚುರುಕಾದ ಕ್ರಮ ಅಗತ್ಯ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.