Picsart 25 08 12 00 15 46 902 scaled

ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಅಲ್ಪಸಂಖ್ಯಾತರಿಗೆ ಆಕರ್ಷಕ ಸಾಲ-ಸಹಾಯಧನ ಯೋಜನೆಗಳು, ಅಪ್ಲೈ ಮಾಡಿ

Categories:
WhatsApp Group Telegram Group

ಕರ್ನಾಟಕ ಸರ್ಕಾರವು (Karnataka government) ಪರಿಶಿಷ್ಟ ಜಾತಿ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಆರ್ಥಿಕ ಸಬಲೀಕರಣಕ್ಕಾಗಿ ಹಲವು ಪ್ರಮುಖ ನಿಗಮಗಳ ಮೂಲಕ ಆಕರ್ಷಕ ಸಾಲ ಮತ್ತು ಸಹಾಯಧನ ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಬಡ, ಹಿಂದುಳಿದ, ನಿರುದ್ಯೋಗಿ ಯುವಕರು (Unemployed youths) ಹಾಗೂ ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ತಮ್ಮ ಜೀವನವನ್ನು ಸುಧಾರಿಸಿಕೊಳ್ಳುವ ಉದ್ದೇಶದಿಂದ ಈ ಯೋಜನೆಗಳನ್ನು ರೂಪಿಸಲಾಗಿದೆ. ಹೈನುಗಾರಿಕೆ, ಸಾರಿಗೆ, ಸಣ್ಣ ಉದ್ಯಮ, ಮಹಿಳಾ ಸ್ವಸಹಾಯ ಸಂಘಗಳ ಆರ್ಥಿಕ ಚಟುವಟಿಕೆ, ಭೂ ಒಡೆತನ, ನೀರಾವರಿ ಯೋಜನೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಉದ್ಯಮ ಆರಂಭಿಸಲು ಈ ಸೌಲಭ್ಯ ನೆರವಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯದಲ್ಲಿನ ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮಗಳು ತಮ್ಮ ವ್ಯಾಪ್ತಿಯ ಸಮುದಾಯಗಳಿಗೆ ಈ ಸಾಲ ಮತ್ತು ಸಹಾಯಧನ ಯೋಜನೆಗಳನ್ನು ಘೋಷಿಸಿವೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದು.

ಯೋಜನೆಯ ವಿವರ ಕೆಳಗಿನಂತಿದೆ:

1. ಸ್ವಯಂ ಉದ್ಯೋಗ ನೇರಸಾಲ ಯೋಜನೆ / ಉದ್ಯಮಶೀಲತಾ ಅಭಿವೃದ್ಧಿ ಯೋಜನೆ (ಬ್ಯಾಂಕುಗಳ ಸಹಯೋಗದಲ್ಲಿ):
ಹೈನುಗಾರಿಕೆ: ಎರಡು ಎಮ್ಮೆ/ಹಸುಗಳ ಖರೀದಿಗೆ ಘಟಕ ವೆಚ್ಚದ 50% ಸಹಾಯಧನ ಅಥವಾ ಗರಿಷ್ಠ ₹1.25 ಲಕ್ಷ. ಉಳಿದ ಮೊತ್ತವನ್ನು ಬ್ಯಾಂಕ್ (Bank) ಸಾಲವಾಗಿ ಒದಗಿಸಲಾಗುತ್ತದೆ.
ವ್ಯಾಪಾರ ಹಾಗೂ ಇತರೆ ಉದ್ಯಮಗಳು: ಘಟಕ ವೆಚ್ಚದ 70% ಸಹಾಯಧನ ಅಥವಾ ಗರಿಷ್ಠ ₹2 ಲಕ್ಷ. ಉಳಿದ ಮೊತ್ತ ಬ್ಯಾಂಕ್ ಸಾಲ.

2. ಸ್ವಾವಲಂಬಿ ಸಾರಥಿ:
ಸರಕು ವಾಹನ/ಟ್ಯಾಕ್ಸಿ (ಹಳದಿ ಬೋರ್ಡ್): ಘಟಕ ವೆಚ್ಚದ 75% ಸಹಾಯಧನ ಅಥವಾ ಗರಿಷ್ಠ ₹4 ಲಕ್ಷ.
ಪುಡ್ ಟ್ರಕ್ ಟ್ರೈಲರ್ / ಮೊಬೈಲ್ ಕಿಚನ್ / ಪುಡ್ ಕಿಯೋಸ್ಕ್: ಘಟಕ ವೆಚ್ಚದ 75% ಸಹಾಯಧನ ಅಥವಾ ಗರಿಷ್ಠ ₹4 ಲಕ್ಷ.

3. ಮೈಕ್ರೋ ಕ್ರೆಡಿಟ್ (Micro credit) ಯೋಜನೆ (ನೋಂದಾಯಿತ ಸ್ವಸಹಾಯ ಮಹಿಳಾ ಸಂಘಗಳಿಗೆ):
ಕನಿಷ್ಠ 10 ಮಹಿಳಾ ಸದಸ್ಯರಿರುವ ಸ್ವಸಹಾಯ ಸಂಘಗಳಿಗೆ ಒಟ್ಟು ₹5 ಲಕ್ಷ.
₹2.50 ಲಕ್ಷ ಸಹಾಯಧನ
₹2.50 ಲಕ್ಷ ಸಾಲ (ಬಡ್ಡಿ ದರ 4%)

4. ಗಂಗಾ ಕಲ್ಯಾಣ ಯೋಜನೆ ಮತ್ತು ಭೂ ಒಡೆತನ ಯೋಜನೆ:
ನೀರಾವರಿ, ಕೃಷಿ ಅಭಿವೃದ್ಧಿ ಹಾಗೂ ಭೂಮಿಯ ಸ್ವಾಮ್ಯಕ್ಕೆ ನೆರವಾಗುವ ಉದ್ದೇಶದ ಯೋಜನೆಗಳು.

ಅರ್ಜಿ ಸಲ್ಲಿಸುವ ಹೇಗೆ?:

ಅರ್ಹ ಅಭ್ಯರ್ಥಿಗಳು ತಮ್ಮ ಸಮುದಾಯಕ್ಕೆ ಸಂಬಂಧಿಸಿದ ನಿಗಮದ ವೆಬ್‌ಸೈಟ್ ಅಥವಾ ಸೇವಾ ಸಿಂಧು ತಂತ್ರಾಂಶ (Seva Sindhu) ವೆಬ್‌ಸೈಟ್ – https://sevasindhu.karnataka.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಹಾಗೂ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 10. ಅರ್ಜಿ ಸಲ್ಲಿಸಿದ ಪ್ರತಿಯನ್ನು ಸಂಬಂಧಿತ ನಿಗಮದ ಜಿಲ್ಲಾ ಕಚೇರಿಗೆ ಸಲ್ಲಿಸಬೇಕು.

ನಿಗಮಗಳ ಅಧಿಕೃತ ವೆಬ್‌ಸೈಟ್‌ಗಳು(websites) :

ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ: https://adcl.karnataka.gov.in

ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ: https://adijambava.karnataka.gov.in

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ: https://www.kbdc.karnataka.gov.in

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ: https://kssksc.kar.nic.in

ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ: https://ktdc.karnataka.gov.in

ಹೆಚ್ಚಿನ ಮಾಹಿತಿಗಾಗಿ, ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕೊಡಗು ಜಿಲ್ಲೆ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು: 08272-228857

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Popular Categories