ಇಂದಿನ ಸಮಾಜದಲ್ಲಿ ಮಹಿಳೆಯರು ಕೇವಲ ಕುಟುಂಬದ ಆರೈಕೆಯಲ್ಲಿ ಮಾತ್ರವಲ್ಲ, ದೇಶದ ಆರ್ಥಿಕ (Nation economic) ಬೆಳವಣಿಗೆಯಲ್ಲಿಯೂ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಶಿಕ್ಷಣ, ಉದ್ಯೋಗ, ಉದ್ಯಮಶೀಲತೆ, ರಾಜಕೀಯ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಆದರೆ, ಇನ್ನೂ ಅನೇಕ ಮಹಿಳೆಯರು ಆರ್ಥಿಕ ಸ್ವಾತಂತ್ರ್ಯದ ದಾರಿಯಲ್ಲಿ ಮೊದಲ ಹೆಜ್ಜೆ ಇಡುವ ಅಗತ್ಯವಿದೆ. ಆರ್ಥಿಕ ಸ್ವಾವಲಂಬನೆ ಕೇವಲ ಆದಾಯದ ಮೂಲವಲ್ಲ, ಅದು ಆತ್ಮವಿಶ್ವಾಸ, ನಿರ್ಧಾರ ಸಾಮರ್ಥ್ಯ ಮತ್ತು ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಕೂಡ ಒದಗಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಭಾರತದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ (For the economic empowerment of women) ಹಲವು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಇದೇ ಶ್ರೇಣಿಯಲ್ಲಿ, ಭಾರತೀಯ ಜೀವ ವಿಮಾ ನಿಗಮ (LIC) ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ನೀಡುವುದರ ಜೊತೆಗೆ ಸಮಾಜದಲ್ಲಿ ಬದಲಾವಣೆಯನ್ನು ತರಲು ಉದ್ದೇಶಿಸಿರುವ ಒಂದು ಮಹತ್ವಾಕಾಂಕ್ಷೆಯ ಯೋಜನೆಯನ್ನು ಘೋಷಿಸಿದೆ ಅದು “ಎಲ್‌ಐಸಿ ಬಿಮಾ ಸಖಿ ಯೋಜನೆ 2025”. (LIC Bima Sakhi Yojana 2025) ಹಾಗಿದ್ದರೆ ಈ ಯೋಜನೆಯ ಉದ್ದೇಶವೇನು? ಇದರ ಪ್ರಮುಖ ಉದ್ದೇಶಗಳು ಏನು? ಅರ್ಹತಾ ಮಾನದಂಡಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ
ಯೋಜನೆಯ ಉದ್ದೇಶವೇನು?:
ಈ ಯೋಜನೆ ಕೇವಲ ಉದ್ಯೋಗಾವಕಾಶವಲ್ಲ, ಇದು ಮಹಿಳೆಯರ ಜೀವನದಲ್ಲಿ ದೀರ್ಘಕಾಲೀನ ಬದಲಾವಣೆ ತರಲು ವಿನ್ಯಾಸಗೊಳಿಸಿದ ಒಂದು ಸಾಮಾಜಿಕ-ಆರ್ಥಿಕ (Social economic) ಅಭಿಯಾನವಾಗಿದೆ. ಮಹಿಳೆಯರು ತಮ್ಮ ಸಮುದಾಯದಲ್ಲಿ ವಿಮಾ ಜಾಗೃತಿ ಮೂಡಿಸುವ ಮೂಲಕ, ತಮ್ಮ ಕುಟುಂಬದ ಆರ್ಥಿಕ ಬೆನ್ನೆಲುಬಾಗಿ ನಿಲ್ಲುವಂತೆ ಮಾಡುವುದೇ ಇದರ ಪ್ರಮುಖ ಗುರಿ.
ಪ್ರಮುಖ ಉದ್ದೇಶಗಳು ಏನು?:
ಮಹಿಳೆಯರ ಆರ್ಥಿಕ ಸ್ವಾವಲಂಬನೆ.
ವೃತ್ತಿಪರ ತರಬೇತಿಗಳ (Vocational trainings) ಮೂಲಕ ಕೌಶಲ್ಯಾಭಿವೃದ್ಧಿ.
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ವಿಮಾ ಜಾಗೃತಿ ವಿಸ್ತರಣೆ.
ಮಹಿಳೆಯರಿಗೆ ದೀರ್ಘಕಾಲೀನ ಆದಾಯದ ಅವಕಾಶ.
ಯೋಜನೆಯ ವಿಶೇಷತೆಗಳು ಕೆಳಗಿನಂತಿವೆ:
ಮಹಿಳಾ ಸಬಲೀಕರಣ: ಮಹಿಳೆಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಯೋಜನೆ.
ಸ್ಥಿರ ಆದಾಯ ಭರವಸೆ: ಕಾರ್ಯಕ್ಷಮತೆಯ ಆಧಾರದ ಮೇಲೆ ಮೊದಲ ಮೂರು ವರ್ಷಗಳವರೆಗೆ ಮಾಸಿಕ ಸ್ಟೈಫಂಡ್(Monthly stipend).
ವೃತ್ತಿಪರ ತರಬೇತಿ: ಯಶಸ್ವಿ ವಿಮಾ ಏಜೆಂಟ್ ಆಗಲು ಅಗತ್ಯವಾದ ಮಾರಾಟ ಕೌಶಲ್ಯ, ಗ್ರಾಹಕ ಸಂವಹನ, ವಿಮಾ ಉತ್ಪನ್ನ ಜ್ಞಾನ.
ಸಮುದಾಯ ಸೇವೆ: ತಮ್ಮ ಸಮುದಾಯದಲ್ಲಿ ವಿಮಾ ಜಾಗೃತಿ ಮೂಡಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ಅವಕಾಶ.
ಸರಳ ಅರ್ಹತೆ: ಕೇವಲ 10ನೇ ತರಗತಿ ಉತ್ತೀರ್ಣ ಹಾಗೂ 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಅವಕಾಶ.
ಅರ್ಹತಾ ಮಾನದಂಡಗಳು (Eligibility Criteria) ಯಾವುವು?:
ವಯಸ್ಸು: ಕನಿಷ್ಠ 18 ವರ್ಷ, ಗರಿಷ್ಠ 70 ವರ್ಷ.
ಶೈಕ್ಷಣಿಕ ಅರ್ಹತೆ: ಕನಿಷ್ಠ 10ನೇ ತರಗತಿ ಉತ್ತೀರ್ಣ.
ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಾರದು:
ಈಗಾಗಲೇ ಎಲ್‌ಐಸಿ ಏಜೆಂಟರಾಗಿರುವವರು(LIC agents).
ಎಲ್‌ಐಸಿ ನೌಕರರ ಕುಟುಂಬ ಸದಸ್ಯರು (ಪತಿ/ಪತ್ನಿ, ಮಕ್ಕಳು, ಪೋಷಕರು, ಸಹೋದರ-ಸಹೋದರಿಯರು, ಅತ್ತೆ-ಮಾವಂದಿರು).
ನಿವೃತ್ತ ನೌಕರರು ಅಥವಾ ಮಾಜಿ ಏಜೆಂಟರು.
ಆದಾಯದ ವಿವರಗಳು ಹೀಗಿದೆ:
1ನೇ ವರ್ಷ: ₹7,000/ತಿಂಗಳು ಸ್ಟೈಫಂಡ್.
2ನೇ ವರ್ಷ: ಮೊದಲ ವರ್ಷದ ಪಾಲಿಸಿಗಳಲ್ಲಿ ಕನಿಷ್ಠ 65% ಸಕ್ರಿಯ ಇದ್ದರೆ ₹6,000/ತಿಂಗಳು.
3ನೇ ವರ್ಷ: ಹಿಂದಿನ ಎರಡೂ ವರ್ಷಗಳ ಪಾಲಿಸಿಗಳಲ್ಲಿ ಕನಿಷ್ಠ 65% ಸಕ್ರಿಯ ಇದ್ದರೆ ₹5,000/ತಿಂಗಳು.
ಯಾವುದೇ ವರ್ಷದಲ್ಲಿ 65% ಗಿಂತ ಕಡಿಮೆ ಪಾಲಿಸಿಗಳು ಸಕ್ರಿಯ ಇದ್ದರೆ ಸ್ಟೈಫಂಡ್ ನೀಡಲಾಗುವುದಿಲ್ಲ.
ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು (Documents) ಯಾವುವು?:
ವಯಸ್ಸಿನ ಪುರಾವೆ (ಆಧಾರ್, ಜನನ ಪ್ರಮಾಣ ಪತ್ರ ಇತ್ಯಾದಿ).
ವಿಳಾಸ ಪುರಾವೆ.
10ನೇ ತರಗತಿ ಪ್ರಮಾಣ ಪತ್ರ.
ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ.
ಈ ಯೋಜನೆಯಲ್ಲಿ ತರಬೇತಿ ಕೊಡುವ ಜೊತೆಗೆ ಬೆಂಬಲವನ್ನು ಕೊಡಲಾಗುತ್ತದೆ:
ವಿಶೇಷ ತರಬೇತಿ: ವಿಮಾ ಉತ್ಪನ್ನಗಳು, ಮಾರಾಟ ತಂತ್ರಗಳು, ಗ್ರಾಹಕರೊಂದಿಗೆ ಸಂವಹನ.
ಮಾರ್ಕೆಟಿಂಗ್ ಬೆಂಬಲ(Marketing support) : ಪ್ರಚಾರ ಸಾಮಗ್ರಿಗಳು, ಬ್ರೋಷರ್‌ಗಳು ಹಾಗೂ ಇತರ ಸಾಧನಗಳು.
ಒಟ್ಟಾರೆಯಾಗಿ, ಎಲ್‌ಐಸಿ ಬಿಮಾ ಸಖಿ ಯೋಜನೆ 2025 ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ನೀಡುವುದರ ಜೊತೆಗೆ, ಸಮಾಜದಲ್ಲಿ ವಿಮಾ ಜಾಗೃತಿ (Insurance awareness) ಮೂಡಿಸಲು ಮತ್ತು ವೃತ್ತಿಪರವಾಗಿ ಬೆಳೆಸಲು ಒಂದು ಅತ್ಯುತ್ತಮ ವೇದಿಕೆ. ಇದು ಕೇವಲ ಆದಾಯದ ಮೂಲವಲ್ಲ, ಮಹಿಳೆಯರ ಜೀವನದಲ್ಲಿ ಶಾಶ್ವತ ಬದಲಾವಣೆಯ ಮಾರ್ಗವಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಎಲ್‌ಐಸಿ ಶಾಖೆಯನ್ನು ಸಂಪರ್ಕಿಸಬಹುದು ಅಥವಾ LIC ಅಧಿಕೃತ ವೆಬ್‌ಸೈಟ್ (https://licindia.in/) ಭೇಟಿ ನೀಡಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.