ತಂಪಾದ ಹವಾಮಾನ, ಜಿಟಿ ಜಿಟಿ ಮಳೆಯ ನಡುವೆ ಬಜ್ಜಿ, ಬೋಂಡಾ, ಕಬಾಬ್, ಪಕೋಡಾ ಹೀಗೆ ಕರಿದ ತಿಂಡಿಗಳನ್ನು ಕಾಫಿ ಜೊತೆಗೆ ಸವಿಯುವ ಸಂಭ್ರಮ ಅದೆಷ್ಟು ರುಚಿಕರವಾಗಿ ಇರುತ್ತದೆ. ರಸ್ತೆಯ ಬದಿಯಲ್ಲಿ ಹೊಗೆ ಎಬ್ಬಿಸುತ್ತಿರುವ ಬಜ್ಜಿ ಅಂಗಡಿಗಳ ಕ್ಯೂ ನೋಡಿದರೆ ಗೊತ್ತಾಗುತ್ತೆ ಎಷ್ಟೊಂದು ಜನ ಈ ತಿಂಡಿಗಳನ್ನು ಇಷ್ಟ ಪಡುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ, ಈ ರುಚಿಯ ಹಿಂದೆ ಇರುವ ಅಪಾಯವನ್ನು ಬಹುಪಾಲು ಜನರು ಗಮನಿಸುತ್ತಿಲ್ಲ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಅದು ಏನೆಂದರೆ, ಈ ತಿಂಡಿಗಳಿಗೆ ಬಳಸುವ ಅಡುಗೆ ಎಣ್ಣೆಯ ಗುಣಮಟ್ಟ. ಇತ್ತೀಚೆಗೆ ಬೆಂಗಳೂರಿನ ಹಲವೆಡೆ ಆಹಾರ ಮತ್ತು ಆರೋಗ್ಯ ಇಲಾಖೆಯು ನಡೆಸಿದ ಪರಿಶೀಲನೆಗಳು ತೀವ್ರ ಆತಂಕ ಮೂಡಿಸುತ್ತಿವೆ. ಈ ಪರಿಶೀಲನೆಯಿಂದ ಬಹುತೇಕ ರೆಸ್ಟೋರೆಂಟ್‌ಗಳು, ರಸ್ತೆಬದಿಯ ಫಾಸ್ಟ್‌ಫುಡ್ ಅಂಗಡಿಗಳು, ಟೀ ಸ್ಟಾಲ್‌ಗಳಲ್ಲಿ ಮರುಬಳಕೆಯ ಅಡುಗೆ ಎಣ್ಣೆ ಬಳಸಲಾಗುತ್ತಿದೆ ಎಂಬ ಸಥ್ಯ ಬಹಿರಂಗವಾಗಿದೆ.
ಮರುಬಳಕೆಯ ಅಡುಗೆ ಎಣ್ಣೆ – ನಿಶ್ಬದ್ಧ ಹಾನಿಯ ಮೂಲ!:
ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡಿದಾಗ ಅದರ ರಾಸಾಯನಿಕ ಸ್ವರೂಪದಲ್ಲಿ ಪ್ರಮುಖ ಬದಲಾವಣೆ ಉಂಟಾಗುತ್ತದೆ. ವಿಶೇಷವಾಗಿ, ಹೆಚ್ಚು ಬಾರಿ ಕರಿಯುವ ಎಣ್ಣೆಯಲ್ಲಿ ಟ್ರಾನ್ಸ್‌ಫ್ಯಾಟ್(Transfat) ಅಂಶ ಹೆಚ್ಚಾಗುತ್ತೆ. ಅಂತರಾಷ್ಟ್ರೀಯ ಆಹಾರ ಸುರಕ್ಷತಾ ಮಾರ್ಗದರ್ಶಿಗಳ ಪ್ರಕಾರ, ಯಾವುದೇ ಅಡುಗೆ ಎಣ್ಣೆಯಲ್ಲಿ ಟ್ರಾನ್ಸ್‌ಫ್ಯಾಟ್ ಶೇಕಡಾ 2ಕ್ಕಿಂತ ಕಡಿಮೆಯಿರಬೇಕು. ಇದರ ಮೀರಿದ ಎಣ್ಣೆ “ವಿಷಕಾರಿ” ಎನ್ನಬಹುದಾದ ಮಟ್ಟಿಗೆ ಅಪಾಯಕಾರಿ.
ಈ ಎಣ್ಣೆಯಲ್ಲಿ ಕಾರ್ಸಿನೋಜನಿಕ್ (ಅಥವಾ ಕ್ಯಾನ್ಸರ್ ಉಂಟುಮಾಡುವ) ಅಂಶಗಳು, ನ್ಯೂರೋ-ಟಾಕ್ಸಿನ್ಸ್(Neuro-toxins), ಹಾಗೂ ದೇಹದ ಜೀವಕೋಶಗಳಿಗೆ ಹಾನಿಕಾರಕವಾದ ಫ್ರೀ ರ್ಯಾಡಿಕಲ್ಸ್‌ಗಳು ಉತ್ಪತ್ತಿಯಾಗುತ್ತವೆ. ಇವು ಮುಂದುವರಿದರೆ ಗಂಭೀರ ಆರೋಗ್ಯ ಸಮಸ್ಯೆಗಳ ಮೂಲವಾಗಬಹುದು.
ಮರುಬಳಕೆ ಎಣ್ಣೆಯಿಂದ ಉಂಟಾಗುವ ಆರೋಗ್ಯ ಹಾನಿ:
ಹೃದಯ ಸಂಬಂಧಿತ ತೊಂದರೆಗಳು: ಟ್ರಾನ್ಸ್‌ಫ್ಯಾಟ್ ದೇಹದ HDL (ಉತ್ತಮ ಕೊಲೆಸ್ಟ್ರಾಲ್) ಅನ್ನು ಕಡಿಮೆಮಾಡಿ LDL (ಕೆಟ್ಟ ಕೊಲೆಸ್ಟ್ರಾಲ್) ಅನ್ನು ಹೆಚ್ಚಿಸುತ್ತದೆ. ಇದು ಹೃದಯಾಘಾತ, ಅಲಕ್ಷಣೀಯ ಹೃದಯ ಸ್ಥಂಭನಕ್ಕೆ ಕಾರಣವಾಗಬಹುದು.
ನ್ಯೂರೋಲಾಜಿಕಲ್ ಡಿಸಾರ್ಡರ್‌ಗಳು(Neurological disorders): ನ್ಯೂರೋ ಟಾಕ್ಸಿನ್‌ಗಳಿಂದ ಮೂಳೆಮಜ್ಜೆಗೆ ಹಾನಿ, ಮೆದುಳಿನ ಕಾರ್ಯತಂತ್ರದಲ್ಲಿ ವ್ಯತ್ಯಯ ಉಂಟಾಗಬಹುದು.
ರಕ್ತ ಹೆಪ್ಪುಗಟ್ಟುವಿಕೆ: ಬ್ಲಡ್ ಕ್ಲಾಟ್(Blood clot) ಉಂಟಾಗುವ ಸಾಧ್ಯತೆ, ಇತರ ಜಟಿಲತೆಯ ಅಪಾಯ.
ಪಚನ ತಂತ್ರದಲ್ಲಿ ತೊಂದರೆ: ಲಿವರ್ ಹಾಗೂ ಆಮಾಷೆಯ ಮೇಲೆ ನಕಾರಾತ್ಮಕ ಪರಿಣಾಮ.
ಆಹಾರ ಮತ್ತು ಸುರಕ್ಷತಾ ಇಲಾಖೆಯು ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ತಿನಿಸು ಅಂಗಡಿಗಳಲ್ಲಿ ಮರುಬಳಕೆಯ ಅಡುಗೆ ಎಣ್ಣೆ ಬಳಸಿರುವುದನ್ನು ದೃಢಪಡಿಸಿದೆ. ಕೆಲವೆಡೆ 3-4 ಬಾರಿ ಅದೇ ಎಣ್ಣೆಯಲ್ಲಿ ತಿಂಡಿ ಕರೆಯಲಾಗುತ್ತಿದೆ. ಇದು ನೇರವಾಗಿ ಆಹಾರ ನಿಯಮಗಳ ಉಲ್ಲಂಘನೆ ಮಾತ್ರವಲ್ಲ, ಸಾರ್ವಜನಿಕ ಆರೋಗ್ಯದ ಮೇಲೆಯೂ ಭಾರಿ ಅಪಾಯವೆಂಬುದನ್ನು ತಿಳಿಸಿ ಹೇಳುತ್ತಿದೆ.
ಸುರಕ್ಷಿತ ತಿನಿಸು ಸೇವನೆಯ ಶಿಫಾರಸು:
1. ಕರಿದ ತಿಂಡಿಗಳನ್ನು ಮನೆಯಲ್ಲೇ ಎಣ್ಣೆಯಲ್ಲಿ ತಯಾರಿಸಿ ಸೇವಿಸುವುದು ಉತ್ತಮ.
2. ಬಹುಮಾನ್ಯ ಎಣ್ಣೆ (sunflower, groundnut, rice bran) ಬಳಸಿದರೂ ಒಂದು ಅಥವಾ ಗರಿಷ್ಠ ಎರಡು ಬಾರಿ ಮಾತ್ರ ಬಳಸಬೇಕು.
3. ಮೂರನೇ ಬಾರಿ ಬಳಸುವ ಎಣ್ಣೆಯನ್ನು ತಕ್ಷಣವಾಗಿ ಬಯೋ ಡೀಸೆಲ್ ಘಟಕಗಳಿಗೆ ಹಸ್ತಾಂತರಿಸುವಂತೆ ಆರ್‌ಯುಸಿಒ (RUCO) ಏಜೆನ್ಸಿಗಳು ಸೂಚಿಸುತ್ತಿವೆ.
4. ಸಾರ್ವಜನಿಕರು ತಾವು ತಿನ್ನುವ ಸ್ಥಳಗಳ ಬಗ್ಗೆ ಮಾಹಿತಿ ಹೊಂದಬೇಕು – ಹೆಚ್ಚು ಹೊತ್ತು ಕರಿಯುವ ಎಣ್ಣೆಯ ದುರ್ವ್ಯವಹಾರ ನಡೆಯದಂತೆ ಎಚ್ಚರ ವಹಿಸಬೇಕು.
ಒಟ್ಟಾರೆಯಾಗಿ, ಬಜ್ಜಿ-ಬೋಂಡಾ ಖಾದ್ಯಗಳ ಹಿಂಭಾಗದಲ್ಲಿ ಇಂಥ ಅಪಾಯವಿದೆ ಎಂಬುದು ದೊಡ್ಡ ಆಘಾತ. ತಾತ್ಕಾಲಿಕ ರುಚಿಗಿಂತ ದೀರ್ಘಕಾಲಿಕ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಸರ್ಕಾರಿ ಇಲಾಖೆ, ಆಹಾರ ನಿಯಂತ್ರಣ ಪ್ರಾಧಿಕಾರಗಳು ಮತ್ತಷ್ಟು ನಿಗಾವಹಿಸಬೇಕು ಮತ್ತು ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸಬೇಕು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.