WhatsApp Image 2025 07 27 at 3.12.03 PM

ಸಾರ್ವಜನಿಕರೇ ಇಲ್ಲಿ ಕೇಳಿ ಈ ಊರಲ್ಲಿ ಯಾರ ಮನೆಗಳಿಗೂ ಬಾಗಿಲುಗಳೇ ಇಲ್ಲಾ ವಿಚಿತ್ರ ಎಂದರೂ ಇದೇ ನಿಜ..!

Categories:
WhatsApp Group Telegram Group

ರೋಣ ತಾಲ್ಲೂಕಿನ ಮಾರನಬಸರಿ ಗ್ರಾಮದ ಆದಾಂಬಿ 24 ವರ್ಷಗಳ ಹಿಂದೆ ಈ ಊರಿಗೆ ಸೊಸೆಯಾಗಿ ಬಂದವರು. ಅದಕ್ಕೂ ಮೊದಲು ಈ ಊರಿನ ವಿಶೇಷತೆ ಬಗ್ಗೆ ಏನೇನೂ ತಿಳಿಯದವರು. ಗ್ರಾಮದ ಯುವಕ ನೂರ್‌ಅಹ್ಮದ್‌ ಮುಜಾವರ್‌ ಅವರನ್ನು ವರಿಸಿ ಗ್ರಾಮಕ್ಕೆ ಬಂದ ಸಂದರ್ಭದಲ್ಲಿ ಮನೆಗೆ ಬಾಗಿಲು ಇಲ್ಲದಿರುವುದನ್ನು ಕಂಡು ದಿಗ್ಭ್ರಮೆಗೊಳಗಾದರು. ಪರದೆ ಸರಿಸಿ ನಿದ್ರೆಗೆ ಜಾರುವುದಾದರೂ ಹೇಗಪ್ಪ ಎನ್ನುವ ಚಿಂತೆಯಲ್ಲಿಯೇ ಕೆಲವು ವಾರಗಳನ್ನು ಕಳೆದರು. ಆನಂತರ ಅಲ್ಲಿನ ಪರಿಸರಕ್ಕೆ ಹೊಂದಿಕೊಂಡವರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

WhatsApp Image 2025 07 27 at 3.00.43 PM 1

‘ತವರೂರಿನಲ್ಲಿ ಮನೆಗೆ ಬಾಗಿಲುಗಳಿದ್ದವು. ಮದುವೆ ಆಗಿ ಇಲ್ಲಿಗೆ ಬಂದಾಗ ಮನೆಗೆ ಬಾಗಿಲು ಇಲ್ಲದ ಕಾರಣಕ್ಕೆ ಬಾಳ ಸಮಸ್ಯೆ ಆಗಿತ್ತು. ಆದರೂ ಎರಡು ತಿಂಗಳಲ್ಲಿ ಹೊಂದಿಕೊಂಡೆ. ಈಗ, ಬೇರೆ ಯಾವುದಾದರೂ ಊರಿಗೆ ಹೋದಾಗ ಬಾಗಿಲು, ಚಿಲಕ ಅಂದರೆ ಹೆದರಿಕೆ ಬರುತ್ತದೆ. ಬಾಗಿಲು ನೋಡಿದಾಗ ಬಂಧಿಯಾದೆ, ಸ್ವಾತಂತ್ರ್ಯ ಕಳೆದುಕೊಂಡೆ ಅಂತ ಅನ್ನಿಸಲು ಶುರುವಾಗುತ್ತದೆ. ಅಷ್ಟರ ಮಟ್ಟಿಗೆ ಈ ಊರಿನ ನೆಲದ ನಂಬಿಕೆಗೆ ಒಗ್ಗಿಹೋಗಿರುವೆ’ ಎಂದು ನಕ್ಕರು ಆದಾಂಬಿ.

WhatsApp Image 2025 07 27 at 3.00.43 PM

ಈ ಊರಿನಲ್ಲಿ ದೊಡ್ಡ ಮನೆ ಕಟ್ಟಿಸಿರುವ ಇವರು, ಸದ್ಯದಲ್ಲೇ ಗೃಹಪ್ರವೇಶ ಮಾಡುವ ಸಂಭ್ರಮದಲ್ಲಿದ್ದಾರೆ. ಹಲವು ಸೌಕರ್ಯ ಹೊಂದಿರುವ ಮನೆಗೆ ಅವರು ಬಾಗಿಲು ಇರಿಸುವ ಬಗ್ಗೆ ಮಾತ್ರ ಯೋಚಿಸಿಯೇ ಇಲ್ಲ! ಮನೆಗೆ ಬಾಗಿಲಿಗೆ ಪರದೆ ಕಟ್ಟಿರುವುದು’ಬಾಗಿಲುಗಳು ಇಲ್ಲದ ಊರು’ ಎಂಬ ಮಾತು ಕಿವಿಗೆ ಬಿದ್ದರೆ ಅದೊಂದು ಕಾಲ್ಪನಿಕ ಊರು ಇರಬಹುದಾ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಆದರೆ, ಗದಗ ಜಿಲ್ಲೆಯ ಮುಳಗುಂದ ಪಟ್ಟಣದಿಂದ ಅನತಿ ದೂರದಲ್ಲಿರುವ ದಾವಲ್‌ ಮಲಿಕ್‌ ಎಂಬ ಗ್ರಾಮದಲ್ಲಿ ನೂರು ಮನೆಗಳಿದ್ದು, ಹೆಚ್ಚಿನ ಮನೆಗಳಿಗೆ ಬಾಗಿಲುಗಳೇ ಇಲ್ಲ. ಈ ಗ್ರಾಮದಲ್ಲಿ ಹೊಸ ಮನೆ ಕಟ್ಟಿಸುವವರು ಕೂಡ ಮನೆಗೆ ಬಾಗಿಲು ಇರಿಸುವುದರ ಬಗ್ಗೆ ಯೋಚಿಸುವುದಿಲ್ಲ.

WhatsApp Image 2025 07 27 at 2.48.38 PM

‘ಇಲ್ಲಿನ ಜನರು ಮನೆಗಳಿಗೆ ಬಾಗಿಲು ಯಾಕೆ ಇರಿಸುವುದಿಲ್ಲ’ ಎಂಬ ಪ್ರಶ್ನೆಯ ಜಾಡು ಹಿಡಿದರೆ, ಅದಕ್ಕೆ ಉತ್ತರವಾಗಿ ಊರಿನ ಹಿರಿಯರ ಬಾಯಲ್ಲಿ ‘ನಂಬಿಕೆ’ಯ ಕಥೆ ತೆರೆದುಕೊಳ್ಳುತ್ತದೆ. ಈ ಊರಿನ ಮನೆಗಳನ್ನು ಬೀಗ ಹಾಕಿ ರಕ್ಷಣೆ ಮಾಡುವ ಅಗತ್ಯವಿಲ್ಲ. ನಮ್ಮ ನಂಬಿಕೆಗೆ ಬಾಗಿಲುಗಳು ಬೇಕಿಲ್ಲ ಎಂದು ಹೇಳುತ್ತಲೇ ಅವರಿಗೆ ಅವರ ಪೂರ್ವಜರು ಹೇಳಿದ ದಾವಲ್‌ ಮಲಿಕ್‌ ಪವಾಡವನ್ನು ಉತ್ಸಾಹದಿಂದ ಹೇಳುತ್ತಾರೆ.

‘ನಾವು ಮೂಲತಃ ಆದಿವಾಸಿಗಳು. ಬೊದ್ಲೆ ಬುರಾನ್‌ ಶಾವಲಿ ನಮ್ಮ ಮೂಲ ಪುರುಷ. ದಾವಲ್‌ ಮಲಿಕ್‌ ಸುಮಾರು 700-800 ವರ್ಷಗಳ ಹಿಂದೆ ಉತ್ತರ ಭಾರತದಿಂದ ಈ ಸ್ಥಳಕ್ಕೆ ಬಂದರು. ಇಲ್ಲಿದ್ದ ಆದಿವಾಸಿಗಳಿಗೆ ಇಸ್ಲಾಂ ಧರ್ಮದ ಬಗ್ಗೆ ತಿಳಿವಳಿಕೆ ಕೊಟ್ಟರು. ಅವರು ಇಲ್ಲಿಂದ ಮುಂದೆ ಹೋಗುವಾಗ ಈ ಊರಿನಲ್ಲಿ ಕಳವು ಆಗುವುದಿಲ್ಲ; ಈ ಜಾಗಕ್ಕೆ ಬಂದು ನಂಬಿಕೆಯಿಂದ ಏನೇ ಬೇಡಿಕೊಂಡರೂ ಈಡೇರುತ್ತದೆ ಎಂದು ಹೇಳಿದರು. ಅವರು ಅಂದು ಹೇಳಿದ ಮಾತಿನ ನಂಬಿಕೆಯಿಂದ ಈಗಲೂ ಈ ಊರಿನ ಮನೆಗಳಿಗೆ ಬಾಗಿಲು ಇರಿಸಿಲ್ಲ’ ಎಂದು ಅಬ್ದುಲ್‌ ಹಮೀದ್‌ ಮುಜಾವರ್‌ ಹೇಳುತ್ತಾರೆ.

WhatsApp Image 2025 07 27 at 3.00.44 PM 1

ದರ್ಗಾಕ್ಕೂ ಬಾಗಿಲಿಲ್ಲ , ಊರಿನ ಜನರು ಅವರ ಪೂರ್ವಜರಿಂದ ಕೇಳಿ ತಿಳಿದಿರುವಂತೆ ದಾವಲ್‌ ಮಲಿಕ್‌ ಕುದುರೆ ಏರಿ ದಕ್ಷಿಣಕ್ಕೆ ಬಂದರು. ಇಲ್ಲಿನ ಬೆಟ್ಟದ ಮೇಲೆ ಕುಳಿತು 40 ದಿನ ತಪಸ್ಸು ಮಾಡಿದ್ದರು. ಅವರ ತಪಸ್ಸು ಮಾಡಿದ ಜಾಗದಲ್ಲಿ ದರ್ಗಾ ನಿರ್ಮಿಸಿ, ಕಟ್ಟಿಗೆಯ ಕುದುರೆಗಳನ್ನು ಇರಿಸಿ ಪೂಜಿಸಲಾಗುತ್ತದೆ. ಈ ದರ್ಗಾಕ್ಕೂ ಬಾಗಿಲಿಲ್ಲ. ದಾವಲ್‌ ಮಲಿಕ್‌ಗೆ ಬಾಗಿಲು ಇಲ್ಲವೆಂದ ಮೇಲೆ ಊರಿನ ಮನೆಗಳಿಗೇಕೆ ಬಾಗಿಲು ಎನ್ನುತ್ತಾರೆ ಸ್ಥಳೀಯರು. ಈ ಊರಿನ ಮನೆಗಳಿಗೆ ಬಾಗಿಲು ಇಲ್ಲದಿದ್ದರೂ ಇಲ್ಲಿವರೆಗೂ ಕಳ್ಳತನ ನಡೆದಿಲ್ಲ. ಭಕ್ತರು ಹೆಚ್ಚಿರುವ ಸಂದರ್ಭದಲ್ಲಿ ಕೂಡ ಪಿಕ್‌ಪಾಕೆಟ್‌ ಪ್ರಕರಣಗಳು ನಡೆದಿಲ್ಲ. ದಾವಲ್‌ ಮಲಿಕ್‌ ದರ್ಗಾಕ್ಕೆ ಮುಸ್ಲಿಮರಲ್ಲದೇ ಹಿಂದೂ, ಕ್ರೈಸ್ತರು ನಡೆದುಕೊಳ್ಳುತ್ತಾರೆ. ಪ್ರತಿ ಗುರುವಾರ ಮತ್ತು ಅಮಾವಾಸ್ಯೆಯಂದು ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಗದಗ ಜಿಲ್ಲೆಯಿಂದಷ್ಟೇ ಅಲ್ಲದೇ ಅಕ್ಕಪಕ್ಕದ ಜಿಲ್ಲೆಗಳು ಹಾಗೂ ಕೇರಳ, ಮಹಾರಾಷ್ಟ್ರದಿಂದಲೂ ಇಲ್ಲಿಗೆ ಭಕ್ತರು ಬರುತ್ತಾರೆ. ಕೆಲಸದ ನಿಮಿತ್ತ ಊರಿನಿಂದ ಹೊರ ಹೋಗಿರುವ ಜನರು ರಂಜಾನ್‌, ಮೊಹರಂ ಹಬ್ಬದಂದು ಇಲ್ಲಿಗೆ ಬಂದು ಚಾಕರಿಕೆ ಮಾಡುತ್ತಾರೆ.

WhatsApp Image 2025 07 27 at 3.00.44 PM

ಬೆಟ್ಟದ ಮೇಲಿರುವ ದಾವಲ್‌ ಮಲಿಕ್‌ ದರ್ಗಾ ಚಿತ್ರಗಳು: ಬನೇಶ ಕುಲಕರ್ಣಿ ದಾವಲ್‌ ಮಲಿಕ್‌ ಗ್ರಾಮದಲ್ಲಿ ನೂರು ಮನೆಗಳು, ಸಾವಿರ ಜನಸಂಖ್ಯೆ ಇದೆ. ಮುಜಾವರ್‌ ಮನೆತನದವರನ್ನು ಹೊರತುಪಡಿಸಿ, ಅನ್ಯಧರ್ಮಿಯರು ಯಾರೂ ಇಲ್ಲ. ಜೀವನೋಪಾಯಕ್ಕಾಗಿ ಕೃಷಿ ಮತ್ತು ವ್ಯಾಪಾರ ನೆಚ್ಚಿಕೊಂಡಿದ್ದಾರೆ. ದರ್ಗಾಕ್ಕೆ ಸೇರಿರುವ 12 ಕೂರಿಗೆ (1 ಕೂರಿಗೆ ಅಂದರೆ 4 ಎಕರೆ) ಜಮೀನಿದ್ದು, ಅದನ್ನು ಇಲ್ಲಿರುವ 65 ಮುಜಾವರ್‌ ಕುಟುಂಬದವರು ಸಮನಾಗಿ ಹಂಚಿಕೊಂಡು ಕೃಷಿ ಮಾಡುತ್ತಿದ್ದಾರೆ. ಹಾಗೆಯೇ, ಇಲ್ಲಿನ 65 ಕುಟುಂಬಗಳೂ ದರ್ಗಾದಲ್ಲಿ ಚಾಕರಿ (ಸಕ್ಕರೆ ಓದುವುದು, ಪೂಜಾರಿಕೆ) ಮಾಡುತ್ತಾರೆ. ಈ ಸರದಿ ವಾರಕ್ಕೊಮ್ಮೆ ಬದಲಾಗುತ್ತದೆ. ಯಾರು ದರ್ಗಾದಲ್ಲಿ ಪೂಜೆ ನಿರ್ವಹಿಸುವ ಜವಾಬ್ದಾರಿ ಹೊಂದಿರುತ್ತಾರೋ ಆ ವಾರ ದರ್ಗಾದಲ್ಲಿ ಸಂಗ್ರಹವಾಗುವ ಕಾಣಿಕೆ ಅವರ ಕುಟುಂಬಕ್ಕೆ ಸೇರುತ್ತದೆ.ವಾರಕ್ಕೊಮ್ಮೆ ದರ್ಗಾ ಚಾಕರಿ ಸರದಿದರ್ಗಾ ಅಭಿವೃದ್ಧಿಗೆ ಟ್ರಸ್ಟ್‌

ಭಕ್ತರ ಸಂಖ್ಯೆ ಹೆಚ್ಚಾದಂತೆ ದರ್ಗಾ ಅಭಿವೃದ್ಧಿಗಾಗಿ 2016ರಲ್ಲಿ ಹಜರಲ್‌ ದಾವಲ್‌ ಮಲಿಕ್‌ ಟ್ರಸ್ಟ್‌ ಆರಂಭಿಸಲಾಗಿದೆ. ₹70 ಲಕ್ಷ ವ್ಯಯಿಸಿ ಮೂಲಸೌಕರ್ಯ ಕಲ್ಪಿಸಲಾಗಿದೆ. ಇದಕ್ಕೂ ಮುನ್ನ 1997ರಲ್ಲಿ ಪ್ರಾರಂಭವಾಗಿದ್ದ ನವ ಜವಾನ್‌ ಕಮಿಟಿ ಮೂಲಕ ಸಾಕಷ್ಟು ಸುಧಾರಣೆ ಮಾಡಲಾಗಿದೆ. ಇಲ್ಲಿನ ಮಕ್ಕಳಿಗಾಗಿ ಹೊಸ ಶಾಲೆ ನಿರ್ಮಾಣವಾಗಿದ್ದು, ಊರೊಳಗನ ಉರ್ದು ಶಾಲೆ ಸದ್ಯದಲ್ಲೇ ಅಲ್ಲಿಗೆ ಸ್ಥಳಾಂತರಗೊಳ್ಳಲಿದೆ.

ಹಜರತ್‌ ದಾವಲ್‌ ಮಲಿಕ್‌ ಮತ್ತು ಈ ಗ್ರಾಮದ ಇತಿಹಾಸದ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಈಗ ಹೇಳುವುದೆಲ್ಲವೂ ಬಾಯಿಂದ ಬಾಯಿ ದಾಟಿ ಬಂದದ್ದು. ಹಾಗಾಗಿ, ಊರಿನ ಇತಿಹಾಸದ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಿ, ಅದನ್ನು ಪುಸ್ತಕರೂಪದಲ್ಲಿ ಹೊರತರುವ ಯೋಚನೆ ಇದೆ’ ಎನ್ನುತ್ತಾರೆ ಅಬ್ದುಲ್‌ ಹಮೀದ್ ಮುಜಾವರ್‌.

WhatsApp Image 2025 07 27 at 3.03.09 PM

“ಬಾಗಿಲು ಬೇಡ” ಎಂಬ ಆಶೀರ್ವಾದ

ದಾವಲ್ ಮಲಿಕ್ ತಮ್ಮ ಭಕ್ತರಿಗೆ “ಈ ಗ್ರಾಮದಲ್ಲಿ ಎಂದೂ ಕಳವು ಆಗುವುದಿಲ್ಲ” ಎಂದು ಆಶೀರ್ವದಿಸಿದರಂತೆ. ಇದರ ಪರಿಣಾಮವಾಗಿ, ಇಂದಿಗೂ ಗ್ರಾಮದ ಮನೆಗಳಿಗೆ ಬಾಗಿಲುಗಳಿಲ್ಲ. ಸ್ಥಳೀಯರು ಇದನ್ನು ನಂಬಿಕೆ ಮತ್ತು ಗೌರವದ ಸಂಕೇತವಾಗಿ ಪಾಲಿಸುತ್ತಿದ್ದಾರೆ.

ಗ್ರಾಮದ ವಿಶೇಷತೆಗಳು

1. ಬಾಗಿಲುಗಳಿಲ್ಲದ ಮನೆಗಳು
  • ಇಲ್ಲಿ ಹೊಸ ಮನೆ ಕಟ್ಟುವವರು ಸಹ ಬಾಗಿಲು ಹಾಕುವುದಿಲ್ಲ.
  • ಮನೆಗಳಿಗೆ ಬದಲಾಗಿ ಪರದೆಗಳು ಅಥವಾ ತೆರೆಗಳನ್ನು ಬಳಸಲಾಗುತ್ತದೆ.
  • ಕಳವು ಅಥವಾ ಅಪರಾಧಗಳಿಲ್ಲ ಎಂಬುದು ಇಲ್ಲಿನ ಜನರ ಹೆಮ್ಮೆ.
2. ದಾವಲ್ ಮಲಿಕ್ ದರ್ಗಾ
  • ಗ್ರಾಮದ ಬೆಟ್ಟದ ಮೇಲೆ ದಾವಲ್ ಮಲಿಕ್ ದರ್ಗಾ ಇದೆ.
  • ಇದಕ್ಕೂ ಬಾಗಿಲು ಇಲ್ಲ, ಏಕೆಂದರೆ ಸಂತರ ಆಶೀರ್ವಾದದ ಪ್ರಕಾರ ಯಾವುದೇ ಬಂಧನ ಇರಬಾರದು.
  • ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲ ಧರ್ಮದ ಭಕ್ತರು ಇಲ್ಲಿ ನಮಸ್ಕರಿಸುತ್ತಾರೆ.
  • ಪ್ರತಿ ಗುರುವಾರ ಮತ್ತು ಅಮಾವಾಸ್ಯೆಯಂದು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ.
3. ಸಾಮಾಜಿಕ ಜೀವನ ಮತ್ತು ಆರ್ಥಿಕತೆ
  • ಗ್ರಾಮದಲ್ಲಿ ಸುಮಾರು 100 ಮನೆಗಳು ಮತ್ತು 1000 ಜನಸಂಖ್ಯೆ ಇದೆ.
  • ಮುಜಾವರ್ ಕುಟುಂಬಗಳು ದರ್ಗಾದ ಸೇವೆಯನ್ನು ನೋಡಿಕೊಳ್ಳುತ್ತಾರೆ.
  • ಕೃಷಿ ಮತ್ತು ವ್ಯಾಪಾರ ಪ್ರಮುಖ ಜೀವನಾಧಾರ.
  • ದರ್ಗಾದ ಸುತ್ತ 12 ಕೂರಿ (48 ಎಕರೆ) ಭೂಮಿಯನ್ನು ಸಾಮೂಹಿಕವಾಗಿ ಸಾಗುವಳಿ ಮಾಡಲಾಗುತ್ತದೆ.

ದಾವಲ್ ಮಲಿಕ್ ಆಕರ್ಷಣೆ ಮತ್ತು ಯಾತ್ರಾ ಸ್ಥಳ

ಭಕ್ತರಿಗೆ ವಿಶೇಷ ಸೇವೆಗಳು
  • ರಂಜಾನ್, ಮೊಹರಂ ಹಬ್ಬಗಳ ಸಂದರ್ಭದಲ್ಲಿ ದೂರದ ಊರಿನಿಂದ ಜನರು ಬಂದು ಸೇವೆ ಸಲ್ಲಿಸುತ್ತಾರೆ.
  • ಹಜರತ್ ದಾವಲ್ ಮಲಿಕ್ ಟ್ರಸ್ಟ್ (2016ರಲ್ಲಿ ಸ್ಥಾಪಿತ) ದರ್ಗಾ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ.
  • ಶಾಲೆ, ರಸ್ತೆ, ನೀರಿನ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ.
ಪವಾಡಗಳು ಮತ್ತು ನಂಬಿಕೆ
  • ಇಲ್ಲಿ ಮನೋಕಾಮನೆಗಳು ಪೂರೈಸುತ್ತವೆ ಎಂಬ ನಂಬಿಕೆ ಇದೆ.
  • ಕುರುಡರು ನೋಡುವ, ರೋಗಿಗಳು ಗುಣಹೊಂದುವ ಪವಾಡಗಳ ಕಥೆಗಳು ಹೇಳಲ್ಪಡುತ್ತವೆ.

ನಂಬಿಕೆ ಮತ್ತು ಸುರಕ್ಷಿತ ಸಮಾಜದ ಮಾದರಿ

ದಾವಲ್ ಮಲಿಕ್ ಗ್ರಾಮ ನಂಬಿಕೆ, ಶಾಂತಿ ಮತ್ತು ಸಾಮೂಹಿಕ ಸೌಹಾರ್ದದ ಜೀವಂತ ಉದಾಹರಣೆ. ಇಲ್ಲಿ ಬಾಗಿಲುಗಳಿಲ್ಲದಿದ್ದರೂ ಮನಸ್ಸಿನ ಬಾಗಿಲುಗಳು ಎಂದೂ ಬಂಧಿಸಲ್ಪಟ್ಟಿಲ್ಲ. ಈ ಗ್ರಾಮವು ಭಾರತದ ಅಪೂರ್ವ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದೆ ಪ್ರವಾಸಿ ಮಾಹಿತಿ

  • ಸ್ಥಳ: ದಾವಲ್ ಮಲಿಕ್, ಮುಳಗುಂದ ತಾಲೂಕು, ಗದಗ ಜಿಲ್ಲೆ.
  • ಸಮಯ: ಗುರುವಾರ ಮತ್ತು ಅಮಾವಾಸ್ಯೆಗೆ ಭೇಟಿ ನೀಡಿದರೆ ವಿಶೇಷ ಪೂಜೆಗಳನ್ನು ನೋಡಬಹುದು.
  • ಹೋಟೆಲ್ಗಳು: ಮುಳಗುಂದದಲ್ಲಿ ಉತ್ತಮ ವಸತಿ ಮತ್ತು ಊಟದ ಸೌಲಭ್ಯಗಳಿವೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories