ಬೆಂಗಳೂರು ನಗರದ ಆಟೋರಿಕ್ಷಾ ಪ್ರಯಾಣಿಕರಿಗೆ ಮಹತ್ವದ ಬದಲಾವಣೆ ಎದುರುನೋಡಬೇಕಾಗಿದೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು (RTA) ಆಟೋ ಮೀಟರ್ ದರಗಳನ್ನು ಪರಿಷ್ಕರಿಸುವ ಅಧಿಕೃತ ಆದೇಶವನ್ನು ಹೊರಡಿಸಿದೆ. ಈ ಹೊಸ ದರಗಳು 2025ರ ಆಗಸ್ಟ್ 1ರಿಂದ ಜಾರಿಗೆ ಬರಲಿವೆ. ಇದು ನಗರದ ಸಾರಿಗೆ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಯನ್ನು ತರಲಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೊಸ ದರಗಳ ವಿವರಗಳು
ಕನಿಷ್ಠ ದರ:
- ಮೊದಲ 2 ಕಿಲೋಮೀಟರ್ ಪ್ರಯಾಣಕ್ಕೆ ₹36 (ಮೂವತ್ತಾರು ರೂಪಾಯಿ ಮಾತ್ರ).
- ಇದು ಮೂರು ಪ್ರಯಾಣಿಕರವರೆಗೆ ಅನ್ವಯಿಸುತ್ತದೆ.
ಹೆಚ್ಚುವರಿ ದೂರದ ದರ:
- 2 ಕಿಲೋಮೀಟರ್ ಗಿಂತ ಹೆಚ್ಚಿನ ಪ್ರತಿ ಕಿಲೋಮೀಟರ್ಗೆ ₹18 (ಹದಿನೆಂಟು ರೂಪಾಯಿ).
ಕಾಯುವಿಕೆ ಶುಲ್ಕ:
- ಮೊದಲ 5 ನಿಮಿಷಗಳು ಉಚಿತ.
- ನಂತರ ಪ್ರತಿ 15 ನಿಮಿಷ ಅಥವಾ ಅದರ ಭಾಗಕ್ಕೆ ₹10 ಶುಲ್ಕ ವಿಧಿಸಲಾಗುತ್ತದೆ.
ಸಾಮಾನು ಶುಲ್ಕ:
- ಮೊದಲ 20 ಕೆಜಿ ಸಾಮಾನು ಉಚಿತ.
- 20 ಕೆಜಿಗಿಂತ ಹೆಚ್ಚಿನ ಪ್ರತಿ 20 ಕೆಜಿ (ಅಥವಾ ಅದರ ಭಾಗ) ಗೆ ₹10 ಶುಲ್ಕ.
- ಗರಿಷ್ಠ 50 ಕೆಜಿ ಸಾಮಾನನ್ನು ಮಾತ್ರ ಸಾಗಿಸಲು ಅನುಮತಿ.
ರಾತ್ರಿ ಸಮಯದ ಹೆಚ್ಚುವರಿ ಶುಲ್ಕ:
- ರಾತ್ರಿ 10:00 PM ರಿಂದ ಬೆಳಗ್ಗೆ 5:00 AM ವರೆಗೆ, ಸಾಮಾನ್ಯ ದರದ ಅರ್ಧದಷ್ಟು ಹೆಚ್ಚು ಶುಲ್ಕ ವಿಧಿಸಲಾಗುತ್ತದೆ.
ಆಟೋ ಚಾಲಕರು ಪಾಲಿಸಬೇಕಾದ ನಿಯಮಗಳು
- ಪ್ರತಿ ಆಟೋರಿಕ್ಷಾದಲ್ಲಿ ಪರಿಷ್ಕೃತ ದರಗಳ ಪಟ್ಟಿಯನ್ನು ಗಮನಸೆಳೆಯುವ ಸ್ಥಳದಲ್ಲಿ ಪ್ರದರ್ಶಿಸಬೇಕು.
- ಮೀಟರ್ ಮರುಸ್ಥಾಪನೆ: ಎಲ್ಲಾ ಆಟೋ ಮೀಟರ್ ಗಳನ್ನು 2025ರ ಅಕ್ಟೋಬರ್ 31ರೊಳಗಾಗಿ (90 ದಿನಗಳಲ್ಲಿ) ಪರಿಷ್ಕೃತ ದರಗಳಿಗೆ ಅನುಗುಣವಾಗಿ ಮರುಸ್ಥಾಪಿಸಿ, ಅಧಿಕೃತ ಮುದ್ರೆ ಹಾಕಿಸಿಕೊಳ್ಳಬೇಕು.
ಪ್ರಯಾಣಿಕರಿಗೆ ಸೂಚನೆ
ಹೊಸ ದರಗಳು ಜಾರಿಯಾದ ನಂತರ, ಪ್ರಯಾಣಿಕರು ಮೀಟರ್ ಪ್ರಕಾರ ಶುಲ್ಕ ಪಾವತಿಸಬೇಕು. ಯಾವುದೇ ಅನಿಯಮಿತ ಶುಲ್ಕ ವಿಧಿಸಿದಲ್ಲಿ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಅಥವಾ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಬಹುದು.
ಈ ಬದಲಾವಣೆಯು ಸಾರಿಗೆ ವೆಚ್ಚವನ್ನು ಸ್ವಲ್ಪ ಹೆಚ್ಚಿಸಿದರೂ, ಆಟೋ ಚಾಲಕರು ಮತ್ತು ಪ್ರಯಾಣಿಕರ ನಡುವಿನ ಪಾರದರ್ಶಕತೆ ಹೆಚ್ಚುತ್ತದೆ ಎಂದು ನಿರೀಕ್ಷಿಸಲಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.