ಇದಕ್ಕಿದ್ದಂತೆ WhatsApp ಸೇವೆ ಸ್ಥಗಿತ, ಜನರ ಪರದಾಟ!
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ನಾನು ವಾಟ್ಸಪ್ ಸರ್ವರ್ ಡೌನ್ ಆಗಿರುವ ಬಗ್ಗೆ ಪೂರ್ಣವಾದ ಮಾಹಿತಿಯನ್ನು ಕೊಡಲಾಗುತ್ತದೆ. ಹೌದು ವಾಟ್ಸಪ್ ಸರ್ವರ್ ಡೌನ್ ಆಗಿದೆ ಸುಮಾರು 12:30 ಮಧ್ಯಾಹ್ನದಿಂದ ವಾಟ್ಸಾಪ್ ಸರ್ವರ್ ಡೌನ್ ಆಗಿತ್ತು ಬಳಕೆದಾರರು ಮೆಸೇಜ್ ಅಥವಾ ಸ್ಟೇಟಸ್ ಹಾಕಲು ಪರದಾಡುತ್ತಿರುವುದನ್ನು ಕಾಣಬಹುದಾಗಿದೆ. ಕೆಲವು ತಾಂತ್ರಿಕ ಕೊರತೆಯಿಂದಾಗಿ ವಾಟ್ಸಾಪ್ ಸರ್ವರ್ ಡೌನ್ ಆಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ
SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ – 2022-23 ನೇ ಸಾಲಿನ ಅರ್ಜಿ ಸಲ್ಲಿಕೆ ವಿವರ :
ತಾಂತ್ರಿಕ ಕಾರಣದಿಂದ ವ್ಯಾಟ್ಸ್ಆ್ಯಪ್(WhatsApp) ಸೇವೆ ತಾತ್ಕಾಲಿಕ ಸ್ಥಗಿತವಾಗಿದೆ. ಸೋಶಿಯಲ್ ಮೀಡಿಯಾ(Social Media) ಕ್ರಾಶ್‌ನಿಂದ ಜನರು ಪರದಾಡುತ್ತಿದ್ದಾರೆ. ವಿಶ್ವಾದ್ಯಂತ ಹಲವಾರು ಬಳಕೆದಾರರು ಫೇಸ್‌ಬುಕ್ ಒಡೆತನದ ವ್ಯಾಟ್ಸ್ಆ್ಯಪ್ ಆ್ಯಪ್ಲೇಕೇಶನ್ ಲೋಡಿಂಗ್ ಸಮಸ್ಯೆ ಎದುರಿಸುತ್ತಿರುವುದಾಗಿ ದೂರಿದ್ದಾರೆ
ತಾಂತ್ರಿಕ ಕಾರಣದಿಂದ ವ್ಯಾಟ್ಸ್ಆ್ಯಪ್ ಸೇವೆ ತಾತ್ಕಾಲಿಕ ಸ್ಥಗಿತವಾಗಿದೆ. ತಾಂತ್ರಿಕ ತಂಡ ಇದನ್ನು ಸರಿಸಡಿಸಲು ನಿರಂತರವಾಗಿ ಕೆಲಸ ಮಾಡುತ್ತಿದ್ದು, ಶೀಘ್ರದಲ್ಲೇ ದೋಷ ಸರಿಪಡಿಸುವು ನಿರೀಕ್ಷೆ ಇದೆ. ಅಕ್ಟೋಬರ್ 25 ರ 12:30 ಗಂಟೆಯಿಂದ ಸೇವೆ ಸ್ಥಗಿತಗೊಂಡಿದೆ. ಫೇಸ್‌ಬುಕ್ ಒಡೆತನದಲ್ಲಿರುವ ವ್ಯಾಟ್ಸ್ಆ್ಯಪ್ ಕೆಲಸ ನಿಲ್ಲಿಸಿದೆ.
ಇದನ್ನೂ ಓದಿ
ವಿದ್ಯಾಸಿರಿ ಸ್ಕಾಲರ್ಶಿಪ್ : ವಿದ್ಯಾಸಿರಿ ಸ್ಕಾಲರ್ಶಿಪ್ ಗೆ ಹೇಗೆ ಅಪ್ಲೈ ಮಾಡುವುದು ?
ವಾಟ್ಸಪ್ ಸರ್ವರ್ ಡೌನ್ ಆಗಿರುವುದರಿಂದ ಯಾವುದೇ ರೀತಿಯ ಕಾಲ್ಗಳಾಗಲಿ, ವಿಡಿಯೋ ಕಾಲ್ಗಳಾಗಲಿ ಅಥವಾ ಮೆಸೇಜ್ ಗಳನ್ನು ಆಗಲಿ, ಸ್ಟೇಟಸ್ಗಳನ್ನಾಗಲಿ ಹಾಕಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಕೇವಲ ಕರ್ನಾಟಕದಲ್ಲಿ ಅಲ್ಲದೆ ಇಡೀ ಭಾರತದಲ್ಲಿ ಕೂಡ ಈ ಸಮಸ್ಯೆ ಕಂಡು ಬರುತ್ತಿದ್ದು ಹಲವಾರು ಬಳಕೆದಾರರು ಮೆಸೇಜ್ ಮಾಡಲಾಗದೆ ಪರದಾಡುತ್ತಿದ್ದಾರೆ. ಈ ತಾಂತ್ರಿಕ ಕೊರತೆ ಯಾಕಾಯಿತು ಎಂದು ಇನ್ನೂ ಕಂಡು ಬರುತ್ತಿಲ್ಲ.
ನಿಮಗೆಲ್ಲಾ ತಿಳಿದಿರುವಂತೆ ವಾಟ್ಸಾಪ್ ಒಂದು ಮೆಸೇಜ್ ಮಾಡುವ ಆಪ್ ಆಗಿದೆ. ಇದನ್ನು ನಾವು ದೈನಂದಿನ ಜೀವನದಲ್ಲಿ ತುಂಬಾ ಅಳವಡಿಸಿಕೊಂಡಿದ್ದೇವೆ. ದಿನಕ್ಕೆ 10 ಬಾರಿಯಾದರೂ ವಾಟ್ಸಪ್ ಆಪ್ ಅನ್ನು ಓಪನ್ ಮಾಡಿ ನೋಡುತ್ತಲೇ ಇರುತ್ತೇವೆ. ಅಷ್ಟೇ ಏಕೆ ಮುಂಜಾನೆ ಎದ್ದ ಕೂಡಲೇ ವಾಟ್ಸಪ್ ಅನ್ನು ನಾವು ಖಂಡಿತವಾಗಿ ನೋಡಿಯೇ ನೋಡುತ್ತೇವೆ. ಹಾಗೆಯೇ ವಾಟ್ಸಪ್ ಒಂದು ಕೇವಲ ಟೆಕ್ಸ್ಟ್ ಮೆಸೇಜ್ ಗಳನ್ನು ಮಾಡುವ ಆಪ್ ಅಲ್ಲದೆ ಇದರಲ್ಲಿ ನಾವು ವಾಯ್ಸ್ ಕಾಲ್ ಹಾಗೂ ವಿಡಿಯೋ ಕಾಲ್ಗಳನ್ನು ಕೂಡ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಇದರಲ್ಲಿ ನಾವು ಸ್ಟೇಟಸ್ ಗಳನ್ನು ಕೂಡ ಹಾಕಬಹುದು. ಇಂತಹ ಒಳ್ಳೆಯ ಆಪ್ ವಾಟ್ಸಪ್ ಆಪ್ ಆಗಿದ್ದು ಇದು ಸ್ಥಗಿತಗೊಂಡರೆ ಜನಜೀವನ ತಳ್ಳನಕ್ಕೆ ಒಳಗಾಗುವುದು ಸರಿಯೇ ಸರಿ. ಆದರೆ ಈ ರೀತಿ ತಕ್ಷಣವಾಗಿ ಏಕೆ ವಾಟ್ಸಪ್ ಆಪ್ಸ್ ತೆಗಿತಗೊಂಡಿದೆ ಎಂಬುದರ ಬಗ್ಗೆ ಮೆಟಾ ಕಂಪನಿಯವರು ಆಗಿರಬಹುದು ಅಥವಾ ಇನ್ಯಾರೇ ಇರಬಹುದು ಇದರ ಬಗ್ಗೆ ಹಂಚಿಕೊಂಡಿಲ್ಲ.
ಈ ಲೇಖನವನ್ನು ನಿಮ್ಮ ಎಲ್ಲ ಸ್ನೇಹಿತರಿಗೂ ಶೇರ್ ಮಾಡಿ.
ಇದನ್ನೂ ಓದಿ
ಜಿಯೋ ನಲ್ಲಿ 3 ಟಾಪ್ ಓಟಿಟಿಗಳ ಉಚಿತ ಚಂದಾದಾರಿಕೆ ಮತ್ತು ಹಲವು ಸೌಲಭ್ಯಗಳು
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.

WhatsApp Group




