ಇ-ಖಾತಾ(E-Khatha) ಮಹಾಅಭಿಯಾನ: ಬೆಂಗಳೂರು ಆಸ್ತಿದಾರರಿಗೆ ಸರ್ಕಾರದ ಭರ್ಜರಿ ಅಪ್ಡೇಟ್ಸ್ – ಜುಲೈ 1ರಿಂದ ಒಂದು ತಿಂಗಳ ವಿಶೇಷ ಮೇಳ
ಬೆಂಗಳೂರು ನಗರದ ಲಕ್ಷಾಂತರ ಆಸ್ತಿದಾರರಿಗಾಗಿ ರಾಜ್ಯ ಸರ್ಕಾರದಿಂದ(State government) ಮತ್ತೊಂದು ಮಹತ್ವದ ಹಾಗೂ ಬಹುದೊಡ್ಡ ಘೋಷಣೆ ಪ್ರಕಟವಾಗಿದೆ. ಇತ್ತೀಚೆಗೆ ಪ್ರಾಮಾಣಿಕ ಆಸ್ತಿ ದಾಖಲೆಗಳ ಪತ್ತೆ ಹಾಗೂ ದ್ವಂದ್ವ ತಕರಾರುಗಳ ನಿವಾರಣೆಗೆ ಬಹುಮುಖ್ಯ ದಾಖಲೆ ಎಂಬಂತೆ ಹೊರಹೊಮ್ಮುತ್ತಿರುವ ಇ-ಖಾತಾ ಪಡೆದುಕೊಳ್ಳುವ ಪ್ರಕ್ರಿಯೆ, ಇದೀಗ ಸರ್ಕಾರದ ಪ್ರಥಮ ಆದ್ಯತೆಯ ಕೆಲಸವಾಗಿ ಪರಿಗಣಿತವಾಗಿದೆ. ಈ ಹಿನ್ನೆಲೆಯಲ್ಲಿ ಜುಲೈ 1ರಿಂದ ಒಂದು ತಿಂಗಳ ಕಾಲ ರಾಜ್ಯದ ನಗರಾಭಿವೃದ್ಧಿ ಇಲಾಖೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಕ್ರೀಯವಾಗಿ ಕೈಜೋಡಿಸಿ “ಬೃಹತ್ ಇ-ಖಾತಾ ಅಭಿಯಾನ” ಆರಂಭಿಸುತ್ತಿದೆ. ಹಾಗಿದ್ದರೆ ಈ-ಖಾತಾ ಅಭಿಯಾನದ ಹಿನ್ನಲೆ ಏನು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಅಭಿಯಾನಕ್ಕೆ ಭಾನುವಾರ ಅಧಿಕೃತವಾಗಿ ಚಾಲನೆ ನೀಡಿದವರು ನಾಡಿನ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್(D.K. Shivakumar). ಬ್ಯಾಟರಾಯನಪುರ(Batarayanpur) ಕ್ಷೇತ್ರದ ಸಹಕಾರ ನಗರದಲ್ಲಿನ ಆಟದ ಮೈದಾನದಲ್ಲಿ ನಡೆದ ಬೃಹತ್ ಇ-ಖಾತಾ ಮೇಳದಲ್ಲಿ ಅವರು ಈ ಮಹತ್ವದ ಯೋಜನೆಯನ್ನು ಉದ್ಘಾಟಿಸಿದರು. ಈ ಮೇಳದ ಮೂಲಕ ಇ-ಖಾತಾ ಪಡೆಯುವ ಪ್ರಕ್ರಿಯೆ ಈಗ ಹೆಚ್ಚು ಸುಲಭವಾಗಲಿದ್ದು, ಬಿಬಿಎಂಪಿ(BBMP)ವ್ಯಾಪ್ತಿಯ ಎಲ್ಲಾ ವಾರ್ಡುಗಳಲ್ಲಿ ಈ ಸೇವೆ ಲಭ್ಯವಾಗಲಿದೆ.
ಈ-ಖಾತಾ ಅಭಿಯಾನದ ಹಿನ್ನಲೆ:
ಈಗಾಗಲೇ ಬೆಂಗಳೂರಿನಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚು ಆಸ್ತಿದಾರರು ಇದ್ದರೂ, ಇವರಲ್ಲಿ ಕೇವಲ 5 ಲಕ್ಷಕ್ಕೂ ಹೆಚ್ಚು ಜನರು ಮಾತ್ರ ಇ-ಖಾತಾ ದಾಖಲಿಸಿಕೊಂಡಿದ್ದಾರೆ ಎಂಬುದೇ ಈ ವಿಶೇಷ ಅಭಿಯಾನದ ಹಿನ್ನೆಲೆಯಾಗಿದೆ. ಇನ್ನು ಉಳಿದಿರುವ 20 ಲಕ್ಷಕ್ಕಿಂತ ಹೆಚ್ಚು ಆಸ್ತಿ ಮಾಲೀಕರಿಗೆ ಈ ಡಿಜಿಟಲ್ ದಾಖಲೆ(Digital doccument) ಸಿಗುವಂತೆ ಮಾಡಲು ಸರ್ಕಾರ ಸುದೀರ್ಘ ಯೋಜನೆಯೊಂದನ್ನು ಕೈಗೊಂಡಿದೆ.
ಕಾರ್ಯಕ್ರಮ ಉದ್ಘಾಟಿಸಿದ ವೇಳೆ ಡಿ.ಕೆ. ಶಿವಕುಮಾರ್(D.K. Shivakumar) ಮಾತನಾಡಿ, “ಇ-ಖಾತಾ ಇಲ್ಲದೆ ಆಸ್ತಿ ಹಕ್ಕು ವಿವಾದ, ವಂಚನೆ, ಖರೀದಿಯಲ್ಲಿ ಗೊಂದಲಗಳು ಸಂಭವಿಸುತ್ತವೆ. ಆದ್ದರಿಂದ ಎಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಿ. ನಿಮ್ಮ ಆಸ್ತಿ ಖಚಿತಪಡಿಸಿಕೊಳ್ಳಿ ಎಂದು ತಿಳಿಸಿದ್ದಾರೆ.
ಮೇಳದ ವೈಶಿಷ್ಟ್ಯಗಳು ಏನು?:
ಬೃಹತ್ ಮೇಳದಲ್ಲಿ ಸಾರ್ವಜನಿಕರ ಸ್ಪಂದನೆ ಅಪಾರವಾಗಿದ್ದು, ಶನಿವಾರ ಹಾಗೂ ಭಾನುವಾರದ ಮೇಳದಲ್ಲಿ 4,000 ಜನರಿಗೆ ಟೋಕನ್ ನೀಡಲಾಗಿತ್ತು. ಈ ಪೈಕಿ 1,679 ಅರ್ಜಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದ್ದು, ನೇರವಾಗಿ 677 ಮಂದಿಗೆ ಸ್ಥಳದಲ್ಲಿಯೇ ಇ-ಖಾತಾ ಪ್ರಕಟಿಸಲಾಗಿದೆ ಎಂದು ಯಲಹಂಕ ವಲಯದ ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್(Mohammad Naeem Momin) ತಿಳಿಸಿದ್ದಾರೆ.
ಮೇಳದಲ್ಲಿ ಒಟ್ಟು 7 ವಾರ್ಡ್‌ಗಳಿಗೆ ಮತ್ತು 3 ಉಪವಿಭಾಗಗಳಿಗೆ ಪ್ರತ್ಯೇಕ ಬಣ್ಣದ ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಬೇರೆ ವಲಯದವರು ಬಂದರೆ ಅವರಿಗೂ ಪ್ರತ್ಯೇಕ ಸೌಲಭ್ಯ ಕಲ್ಪಿಸಲಾಗಿದೆ. 100ಕ್ಕಿಂತ ಹೆಚ್ಚು ಲ್ಯಾಪ್‌ಟಾಪ್‌ಗಳನ್ನು(Laptop), ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ತಕ್ಷಣದ ಸೇವೆಗಾಗಿ ಪರಿಪೂರ್ಣ ಸಜ್ಜು ಮಾಡಲಾಗಿದೆ.
ಇನ್ನು, ಜುಲೈ 1ರಿಂದ ಇ-ಖಾತಾ ಅಭಿಯಾನ ರಾಜ್ಯವ್ಯಾಪಿ ತೀವ್ರಗೊಳಿಸಲಾಗುವುದು. ಪ್ರತಿಯೊಂದು ವಾರ್ಡ್‌ನಲ್ಲಿಯೂ ಬಿಬಿಎಂಪಿ ಅಧಿಕೃತ ಕೌಂಟರ್(BBMP official counter), ಸಹಾಯವಾಣಿ(helpline), ಹಾಗೂ ತಾಂತ್ರಿಕ ನೆರವು ಸಿಗಲಿದೆ. ಈ ಮೂಲಕ ಯಾವುದೇ ಮಧ್ಯವರ್ತಿಗಳ ನೆರವಿಲ್ಲದೆ ಜನರು ನೇರವಾಗಿ ಖಾತಾ ಪಡೆಯಬಹುದಾಗಿದೆ.
ಇ-ಖಾತಾ ಪಡೆಯುವ ಪ್ರಕ್ರಿಯೆ ಹೀಗಿದೆ:
1. ಸ್ಥಳೀಯ ವಾರ್ಡ್ ಕಚೇರಿಗೆ ಭೇಟಿ ನೀಡಿ.
2. ಆಸ್ತಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ.
3. ಅಗತ್ಯ ಪರಿಶೀಲನೆಯ ಬಳಿಕ ಇ-ಖಾತಾ ಮಂಜೂರು.
4. ಅಂತಿಮ ದಾಖಲೆ ಡಿಜಿಟಲ್ ಸಹಿತವಾಗಿ ನೀಡಲ್ಪಡುತ್ತದೆ.
ಏಕೆ ಇ-ಖಾತಾ ಮುಖ್ಯ?:
ಆಸ್ತಿಯ ಮೇಲೆ ಹಕ್ಕು ದೃಢಪಡಿಸಲು.
ದ್ವಂದ್ವ ನಿವಾರಣೆ ಮತ್ತು ಕಾನೂನು ಸಹಾಯಕ್ಕೆ ಪೂರಕ.
ಆಸ್ತಿ ಮಾರಾಟ/ಖರೀದಿಗೆ ನಿಖರ ದಾಖಲೆ.
ಡಿಜಿಟಲ್ ಲೆಕ್ಕ ಪಟ್ಟಿ ಹಾಗೂ ಭದ್ರತೆಗೆ ಇ-ಖಾತಾ ಮುಖ್ಯ.
ಒಟ್ಟಾರೆಯಾಗಿ, ಈ-ಖಾತಾ ಅಭಿಯಾನ ಒಂದು ಡಿಜಿಟಲ್(Digital) ಬದಲಾವಣೆಯ ಮಹತ್ವದ ಹಂತವಾಗಿದ್ದು, ರಾಜ್ಯ ಸರ್ಕಾರವು ಭದ್ರತೆ, ಪ್ರಾಮಾಣಿಕತೆ ಮತ್ತು ಸಾರ್ವಜನಿಕ ನೆರವಿಗೆ ಆದ್ಯತೆ ನೀಡುತ್ತಿದೆ. ಬೆಂಗಳೂರು ನಗರದಲ್ಲಿ ಆಸ್ತಿಯ ಹಕ್ಕು ಹಾಗೂ ದಾಖಲೆಗಳನ್ನು ಲಿಂಕ್ ಮಾಡುವಲ್ಲಿ ಇದು ಐತಿಹಾಸಿಕ ಹೆಜ್ಜೆಯಾಗಿದೆ. ಎಲ್ಲ ಆಸ್ತಿ ಮಾಲೀಕರೂ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದು ಸರ್ಕಾರದ ಮನವಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.