ಅಮರಾವತಿ: ವಿಶ್ವದ ಹಿಂದೂಗಳ ಪವಿತ್ರ ಧಾರ್ಮಿಕ ಕೇಂದ್ರವಾದ ತಿರುಮಲ ತಿರುಪತಿ ದೇವಸ್ಥಾನದ ಬಗ್ಗೆ ಅನೇಕ ರಹಸ್ಯಗಳು ಮತ್ತು ಕುತೂಹಲಕಾರಿ ವಿಷಯಗಳಿವೆ. ಈ ದೇವಸ್ಥಾನದ ದರ್ಶನ ಸಮಯ, ಸೇವೆಗಳು ಮತ್ತು ಇತರ ವಿಶೇಷ ವಿವರಗಳ ಬಗ್ಗೆ ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ) ಸದಸ್ಯ ಮತ್ತು ವಿಜಿಲೆನ್ಸ್ ಕಮಿಟಿ ಅಧ್ಯಕ್ಷ ಎಸ್. ನರೇಶ್ ಕುಮಾರ್ ಅವರು ಮೀಡಿಯಾ ಮಾಧ್ಯಮಗಳೊಂದಿಗೆ ವಿಶೇಷ ಸಂದರ್ಶನ ನಡೆಸಿದ್ದಾರೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಟಿಟಿಡಿಯಲ್ಲಿ ನರೇಶ್ ಕುಮಾರ್ ಅವರ ಪಾತ್ರ
ನರೇಶ್ ಕುಮಾರ್ ಅವರು ಟಿಟಿಡಿ ಸದಸ್ಯರಾಗಿ ಯಾವುದೇ ಸಂಬಳವನ್ನು ಪಡೆಯುವುದಿಲ್ಲ ಎಂದು ಹೇಳುತ್ತಾರೆ. “ಇದು ದೈವಿಕ ಸೇವೆ. ದೇವಾಲಯದಿಂದ ಯಾವುದೇ ಆದಾಯ ಅಥವಾ ಸೌಲಭ್ಯಗಳನ್ನು ನಾವು ಪಡೆಯುವುದಿಲ್ಲ. ಕೋಟ್ಯಂತರ ಭಕ್ತರು ಸಲ್ಲಿಸುವ ದಾನದ ಹಣವನ್ನು ನಾವು ವೈಯಕ್ತಿಕವಾಗಿ ಬಳಸುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.
ತಿರುಪತಿಯ ಹಿಂದಿನ ಇತಿಹಾಸ
ನರೇಶ್ ಕುಮಾರ್ ಅವರು ತಿರುಮಲ ತಿರುಪತಿ ದೇವಸ್ಥಾನದ ಕೆಲವು ಅಪರಿಚಿತ ವಿಷಯಗಳನ್ನು ಹಂಚಿಕೊಂಡಿದ್ದಾರೆ. “ವೆಂಕಟೇಶ್ವರ ಸ್ವಾಮಿ ಬೆಟ್ಟದ ಮೇಲೆ ನೆಲೆಸಲು ಕಾರಣ ಅನೇಕರಿಗೆ ತಿಳಿದಿಲ್ಲ. ಪುರಾಣಗಳ ಪ್ರಕಾರ, ವಸಿಷ್ಠ ಮಹರ್ಷಿಗಳು ವೆಂಕಟೇಶ್ವರ ಸ್ವಾಮಿಗೆ ಅವಮಾನ ಮಾಡಿದಾಗ ಲಕ್ಷ್ಮೀದೇವಿ ಬಿಟ್ಟು ಹೋಗುತ್ತಾಳೆ. 12 ವರ್ಷಗಳ ತಪಸ್ಸಿನ ನಂತರ ಪದ್ಮಾವತಿಯ ರೂಪದಲ್ಲಿ ಅವಳು ಮರಳುತ್ತಾಳೆ” ಎಂದು ಅವರು ವಿವರಿಸಿದ್ದಾರೆ.
ಟಿಟಿಡಿ ಮತ್ತು ಸರ್ಕಾರದ ಸಂಬಂಧ
“ತಿರುಪತಿ ದೇವಸ್ಥಾನವು ಸ್ವಾಯತ್ತ ಸಂಸ್ಥೆಯಾಗಿದ್ದು, ಆಂಧ್ರ ಪ್ರದೇಶ ಸರ್ಕಾರದ ನೇರ ನಿಯಂತ್ರಣದಲ್ಲಿಲ್ಲ. ಆದರೆ ನಾವು ಸರ್ಕಾರದೊಂದಿಗೆ ಸಹಕರಿಸುತ್ತೇವೆ. ಟಿಟಿಡಿ ತನ್ನದೇ ಆದ ಆಡಳಿತ ಮತ್ತು ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ” ಎಂದು ನರೇಶ್ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.
ತಿರುಪತಿ ಲಡ್ಡು ವಿವಾದ
“ಲಡ್ಡುವಿನಲ್ಲಿ ಕಲಬೆರಕೆ ಆಗಿತ್ತು ಎಂಬ ಸಿಬಿಐ ವರದಿ ನಿಜ. ತುಪ್ಪದ ಬದಲು ಡಾಲ್ಡಾ ಬಳಸಲಾಗಿತ್ತು. ಈಗ ಈ ಸಮಸ್ಯೆಯನ್ನು ಸರಿಪಡಿಸಲಾಗಿದೆ. ಹಿಂದೂ ಅಲ್ಲದವರನ್ನು ಟಿಟಿಡಿ ಬೋರ್ಡ್ ನಿಂದ ತೆಗೆದುಹಾಕಲಾಗಿದೆ” ಎಂದು ಅವರು ಹೇಳಿದ್ದಾರೆ.
ಭಕ್ತರ ಸಂಖ್ಯೆ ಕಡಿಮೆಯಿರುವ ದಿನಗಳು
ನರೇಶ್ ಕುಮಾರ್ ಅವರು ತಿರುಪತಿಯಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆಯಿರುವ 3 ದಿನಗಳನ್ನು ಹಂಚಿಕೊಂಡಿದ್ದಾರೆ:
- ಯುಗಾದಿಯ ಮರುದಿನ (ಕರ್ನಾಟಕ ಮತ್ತು ಆಂಧ್ರದಲ್ಲಿ ಹೊಸದೊಡಕು ಆಚರಣೆಯಿಂದ)
- ಮಹಾಲಯ ಅಮಾವಾಸ್ಯೆ (ಎಡೆ ಇಡುವ ಪದ್ಧತಿಯಿಂದ)
- ದೀಪಾವಳಿ ಅಮಾವಾಸ್ಯೆ
ತಿರುಪತಿಯ ಅನ್ನದಾನ
“ತಿರುಮಲ ತಿರುಪತಿಯಲ್ಲಿ ವಿಶ್ವದ ಅತ್ಯಂತ ದೊಡ್ಡ ಹಾಗೂ ಆಧುನಿಕ ಅಡುಗೆಮನೆ ಇದೆ. ಪ್ರತಿದಿನ 60,000 ಜನರಿಗೆ ಬೆಳಗ್ಗೆ ತಿಂಡಿ ಮತ್ತು 1 ಲಕ್ಷ ಭಕ್ತರಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡಲಾಗುತ್ತದೆ. ದಿನಕ್ಕೆ ಸುಮಾರು 45 ಲಕ್ಷ ರೂಪಾಯಿಗಳಷ್ಟು ಅನ್ನದಾನದಾಸೋಹಕ್ಕೆ ಬಳಸಲಾಗುತ್ತದೆ” ಎಂದು ನರೇಶ್ ಕುಮಾರ್ ಮೀಡಿಯಾ ಮಾಧ್ಯಮಗಳಲ್ಲಿ ತಿಳಿಸಿದ್ದಾರೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Kavitha holds a Master’s degree in Computer Applications (MCA) and has a deep interest in technology. Leveraging her academic background, she writes articles on science and technology, simplifying complex technical topics for general readers. Her work focuses on making cutting-edge advancements in tech accessible and engaging.


WhatsApp Group




