Picsart 25 06 25 23 23 16 385 scaled

ಸರ್ಕಾರಿ ನಿವೇಶನ ಹರಾಜು ಆರಂಭಕ್ಕೆ ದಿನಾಂಕ ನಿಗದಿ.! ಕನಸಿನ ಮನೆ ನಿರ್ಮಾಣಕ್ಕೆ ಮತ್ತೊಂದು ಹೆಜ್ಜೆ!

Categories:
WhatsApp Group Telegram Group

ಬೆಂಗಳೂರು ಬಿಎಡಿಯಿಂದ(BAD) ಸಿಹಿ ಸುದ್ದಿ: ನಿವೇಶನ ಹರಾಜು ಆರಂಭಕ್ಕೆ ದಿನಾಂಕ ನಿಗದಿ.! ಕನಸಿನ ಮನೆ ನಿರ್ಮಾಣಕ್ಕೆ ಮತ್ತೊಂದು ಹೆಜ್ಜೆ!

ಬೆಂಗಳೂರು ಕರ್ನಾಟಕದ (bengaluru Karnataka) ಹೃದಯಭಾಗದಲ್ಲಿ ಸಮೃದ್ಧ ಭವಿಷ್ಯದ ಕನಸುಗಳನ್ನು ಹೊತ್ತೊಯ್ಯುವ ನಗರ. ಉದ್ಯೋಗ, ಶಿಕ್ಷಣ, ತಂತ್ರಜ್ಞಾನ ಮತ್ತು ಅಭಿವೃದ್ಧಿಯಲ್ಲಿ (Technology and development) ಮುನ್ನಡೆಸುವ ಈ ಸಿಟಿಯಲ್ಲಿ ಮನೆ ಕಟ್ಟಿಕೊಳ್ಳಬೇಕೆಂಬ ಆಸೆ ಇಲ್ಲಿ ನೆಲೆಗೊಂಡು ಜೀವಿಸುತ್ತಿರುವ ಸಾವಿರಾರು ಕುಟುಂಬಗಳ ಕನಸು. ಹೂಡಿಕೆಯ ದೃಷ್ಟಿಯಿಂದ ಕೂಡ, ಬೆಂಗಳೂರು ನಗರದ ನಿವೇಶನಗಳು ಅಪಾರ ಮೌಲ್ಯ (value) ಹೊಂದಿವೆ. ಈ ಹಿನ್ನೆಲೆಯಲ್ಲಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಈಗ ಮತ್ತೊಮ್ಮೆ ಆಸಕ್ತ ಜನತೆಗೆ ಸಿಹಿ ಸುದ್ದಿ ನೀಡಿದೆ. ಹೌದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಮೂಲದಿಂದ ಬಹು ನಿರೀಕ್ಷಿತ ಮತ್ತು ಆಕರ್ಷಕವಾದ ನಿವೇಶನ ಹರಾಜು ಪ್ರಕಟವಾಗಿದೆ. ಯಾವೆಲ್ಲ ಪ್ರದೇಶಗಳಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ? ಯಾವ ದಿನದಂದು ಈ ಹರಾಜು ಪ್ರಕ್ರಿಯೆ ನಡೆಯಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

133 ಕೋನ ಮತ್ತು ಮಧ್ಯಂತರ ನಿವೇಶನಗಳ ಮಾರಾಟಕ್ಕೆ ಬಿಎಡಿಯಿಂದ ಹರಾಜು ಪ್ರಕ್ರಿಯೆ:

ಬಿಎಡಿಯು ಇತ್ತೀಚೆಗೆ ಪ್ರಕಟಿಸಿರುವ ಮಹತ್ವದ ಮಾಹಿತಿಯ ಪ್ರಕಾರ, ನಗರದ ವಿವಿಧ ಭಾಗಗಳಲ್ಲಿ ಒಟ್ಟು 133 ಬಗೆಯ ಕೋನ ಹಾಗೂ ಮಧ್ಯಂತರ ನಿವೇಶನಗಳನ್ನು ಇ-ಹರಾಜು ಹಾಗೂ ನೇರ ಹರಾಜು (E-auction and live auction) ಪ್ರಕ್ರಿಯೆಯ ಮೂಲಕ ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ಬಿಎಡಿಯು ನಗರದ ವ್ಯಾಪ್ತಿಯಲ್ಲಿ ನೂರಾರು ಕುಟುಂಬಗಳಿಗೆ ಸ್ವಂತ ಮನೆ ಕಟ್ಟಿಕೊಳ್ಳಲು ಅವಕಾಶವನ್ನು ನೀಡುತ್ತಿದೆ.

ಹರಾಜಿನ ದಿನಾಂಕಗಳು (auction dates) ಮತ್ತು ಪ್ರಕ್ರಿಯೆ ಹೀಗಿದೆ:

ಇ-ಹರಾಜು ದಿನಾಂಕ: ಜುಲೈ 19, 2025.
ನೇರ ಹರಾಜು (ಲೈವ್): ಜುಲೈ 21, 2025.
ಈ ಎರಡು ದಿನಗಳಲ್ಲಿ ನೀವು ಬಿಎಡಿಯ ಅಧಿಕೃತ ವೆಬ್‌ಸೈಟ್ (website) ಅಥವಾ ನೇರ ಹರಾಜಿನಲ್ಲಿ ಪಾಲ್ಗೊಂಡು ನಿಮ್ಮ ಇಷ್ಟದ ನಿವೇಶನಕ್ಕೆ ಬಿಡ್ ಮಾಡಬಹುದು. ಇದು ನಿಮ್ಮ ಕನಸಿನ ಮನೆಯ ನಿರ್ಮಾಣದ ಮೊದಲ ಹೆಜ್ಜೆ ಆಗಬಹುದು.

ಹರಾಜಿಗೆ ಪಟ್ಟಿ ಮಾಡಲಾದ ಬಡಾವಣೆಗಳು ಯಾವುವು?:

ಈ ಹರಾಜಿನಲ್ಲಿ ನಗರಾದ್ಯಂತದ ಹಲವಾರು ಪ್ರಮುಖ ಬಡಾವಣೆಗಳಲ್ಲಿ ನಿವೇಶನಗಳನ್ನು ಮಾರಾಟಕ್ಕೆ ಇರಿಸಲಾಗಿದ್ದು, ಅವುಗಳಲ್ಲಿ ಪ್ರಮುಖವಾಗಿ:
ಅಂಜನಾಪುರ ಟೌನ್‌ಶಿಪ್.
ಜೆ.ಪಿ. ನಗರ 9ನೇ ಹಂತ.
ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆ.
ನಾಗರಭಾವಿ 2ನೇ ಹಂತ.
ಬಿಟಿಎಂ ಲೇಔಟ್ 4ನೇ ಹಂತ.
ಬನಶಂಕರಿ 3ನೇ ಹಂತ.
ಆಸ್ಟಿನ್ ಟೌನ್.
ಎಚ್‌ಬಿಆರ್ ಲೇಔಟ್ 1ನೇ ಹಂತ 2ನೇ ಬ್ಲಾಕ್.
ಅರ್ಕಾವತಿ ಲೇಔಟ್ – ಜಕ್ಕೂರಿನ 7ನೇ ಬ್ಲಾಕ್.

ನಿವೇಶನಗಳ ಗಾತ್ರ ಮತ್ತು ಮಾದರಿಗಳು ಯಾವ ರೀತಿಯಿವೆ?:

ಹರಾಜಿನಲ್ಲಿ ಲಭ್ಯವಿರುವ ನಿವೇಶನಗಳು 600 ಚದರ ಅಡಿಗಳಿಂದ ಶುರುವಾಗಿ 4,500 ಚದರ ಅಡಿವರೆಗೆ ವಿಸ್ತೃತವಾಗಿದ್ದು, ವಿಭಿನ್ನ ಆಯಾಮಗಳಲ್ಲಿ ಲಭ್ಯವಿರುತ್ತವೆ. ಇವು, ನಿವೇಶನಗಳು ವಾಸಸ್ಥಳಗಳಾಗಿ ಮಾತ್ರವಲ್ಲ, ವ್ಯವಹಾರಿಕ ಉದ್ದೇಶಗಳಿಗೂ (For business purposes) ಸೂಕ್ತವಾಗಿವೆ.

ಬೆಲೆ ವಿವರ ಹೀಗಿದೆ:

ಪ್ರತಿ ಚದರ ಮೀಟರ್‌ಗೆ ₹500 ಆಧಾರ ದರ ನಿಗದಿಪಡಿಸಲಾಗಿದ್ದು, ಇದು ಇತ್ತೀಚಿನ ಬಿಎಡಿಯ ಮೌಲ್ಯಮಾಪನದೊಂದಿಗೆ ಹೊಂದಾಣಿಕೆಯಾಗುತ್ತದೆ. ಮಾರಾಟವಾಗುವ ನಿವೇಶನಗಳು ಯಾವುದೇ ಕಾನೂನು ತೊಂದರೆಗಳಿಲ್ಲದ ಶುದ್ಧ ಹಕ್ಕಿನ ಆಸ್ತಿಗಳಾಗಿದ್ದು(Purely legal properties), ಖರೀದಿದಾರರು ಯಾವುದೇ ಅಡಚಣೆ ಇಲ್ಲದೆ ತಮ್ಮ ಹೆಸರಿನಲ್ಲಿ ನೋಂದಾಯಿಸಿಕೊಳ್ಳಬಹುದು.

ಸಂಪೂರ್ಣ ಮಾಹಿತಿ ಪ್ರಸ್ತುತ ಬಿಎಡಿಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ:

ಬಿಡಿಎ ಇತ್ತೀಚಿನ ಪ್ರಕಟಣೆಯಲ್ಲಿ ತಿಳಿಸಿದಂತೆ, ಹರಾಜಿಗೆ ಸಂಬಂಧಿಸಿದ ಭೌಗೋಳಿಕ ಸ್ಥಳಮಾನ, ನಿವೇಶನದ ಗಾತ್ರ, ಹುದ್ದೆಗಳ ಸ್ಫಷ್ಟ ಚಿತ್ರಣ ಮೊದಲಾದ ಎಲ್ಲಾ ಮಾಹಿತಿಯನ್ನು ಬಿಎಡಿಯ ಅಧಿಕೃತ ವೆಬ್‌ಸೈಟ್‌ನಲ್ಲಿ (website ) ಮುಂಬರುವ ವಾರದಲ್ಲಿ ಪ್ರಕಟಿಸಲಿದೆ. ಆಸಕ್ತರು ಅದನ್ನು ಪರಿಶೀಲಿಸಿ, ಬಿಡ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ.BDA ವೆಬ್‌ಸೈಟ್
https://www.bdabangalore.org/

ಒಟ್ಟಾರೆಯಾಗಿ, ಈ ಹರಾಜು ಪ್ರಕ್ರಿಯೆ, ಬೆಂಗಳೂರಿನಲ್ಲಿ ಮನೆ ಕಟ್ಟುವ ಕನಸು ಹೊತ್ತಿರುವ ಮಧ್ಯಮವರ್ಗದ ಜನತೆಗೆ ಹಾಗೂ ಉದ್ದಿಮೆದಾರರಿಗೆ ಒಂದು ಅರ್ಥಪೂರ್ಣ ಅವಕಾಶ. ಸರ್ಕಾರದ ನೇತೃತ್ವದಲ್ಲಿ ನಡೆಯುತ್ತಿರುವ ಪಾರದರ್ಶಕ ಹರಾಜು ಪ್ರಕ್ರಿಯೆ ನಿಮ್ಮ ಕನಸನ್ನು ಸಾಕಾರಗೊಳಿಸಬಲ್ಲದು. ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗೆ: BDA ವೆಬ್‌ಸೈಟ್
https://www.bdabangalore.org/ ಗೆ ಭೇಟಿ ನೀಡಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Popular Categories