ರಾಜ್ಯದ ಈ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ, ಮಕ್ಕಳಿಗೆ ಸ್ಪೋಕನ್ ಇಂಗ್ಲಿಷ್ ತರಬೇತಿ ಪ್ರಾರಂಭ.! 

Picsart 25 05 01 01 26 22 227

WhatsApp Group Telegram Group

ಭಾಷಾ ಸಾಮರ್ಥ್ಯದತ್ತ ಹೊಸ ಹೆಜ್ಜೆ: ರಾಜ್ಯದ 1000 ಸರ್ಕಾರಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲಿಷ್ ತರಬೇತಿ

ಪ್ರತಿದಿನ ಬದಲಾವಣಿಯತ್ತ ಸಾಗುತ್ತಿರುವ ಶೈಕ್ಷಣಿಕ ಕ್ಷೇತ್ರದಲ್ಲಿ(Educational Field), ಭಾಷಾ ಸಾಮರ್ಥ್ಯವು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಪ್ರಮುಖ ಪಾತ್ರವಹಿಸುತ್ತಿದೆ. ವಿಶೇಷವಾಗಿ ಇಂಗ್ಲಿಷ್ ಭಾಷಾ ಕೌಶಲ್ಯ, ಉದ್ಯೋಗಾವಕಾಶಗಳ ಜೊತೆಗೆ ಜಾಗತಿಕ ಮಟ್ಟದಲ್ಲಿ ಸಂವಹನ ಸಾಧಿಸಲು ನೆರವಾಗುತ್ತದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಾಲಾ ಮಕ್ಕಳ ಭವಿಷ್ಯಮುಖಿ ಅಭಿವೃದ್ದಿಗಾಗಿ (Karnataka State Department of School Education and Literacy for the future development of school children) ಮಹತ್ವದ ಹೆಜ್ಜೆ ಇಟ್ಟಿದೆ. 2025-26ನೇ ಶೈಕ್ಷಣಿಕ ವರ್ಷದಿಂದಲೇ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ‘ಸ್ಪೋಕನ್ ಇಂಗ್ಲೀಷ್’ ತರಗತಿಗಳನ್ನು ಪ್ರಾರಂಭಿಸುವ ಮಹತ್ವದ ನಿರ್ಧಾರವನ್ನು ಪ್ರಕಟಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ಯೋಜನೆಯು ರಾಜ್ಯದ 1000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಜಾರಿಗೆ ಬರಲಿದ್ದು, ವರ್ಷಕ್ಕೆ ಒಟ್ಟು 180 ಗಂಟೆಗಳ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು (Spoken English classes) ನಡೆಸಲು ತೀರ್ಮಾನಿಸಲಾಗಿದೆ. ಇದರ ಮೂಲಕ ವಿದ್ಯಾರ್ಥಿಗಳಿಗೆ ನೈಜ ಜೀವನದಲ್ಲಿ ಉಪಯೋಗಿಸಬಹುದಾದ ಮಾತುಕತೆ ಆಧಾರಿತ ಇಂಗ್ಲಿಷ್ ಶಿಕ್ಷಣ ನೀಡುವ ಗುರಿಯನ್ನು ಹೊಂದಲಾಗಿದೆ.

ಈ ಯೋಜನೆ ಹಿಂದಿನ ವರ್ಷವೇ ವಾರಾಂತ್ಯ ತರಗತಿಗಳ ರೂಪದಲ್ಲಿ ಆರಂಭವಾಗಿದ್ದರೂ, ನಿರ್ವಹಣಾ ಕೊರತೆಗಳಿಂದಾಗಿ ಯಶಸ್ವಿಯಾಗಿ ಜಾರಿಗೆ ಬಂದಿರಲಿಲ್ಲ. ಆದರೆ ಈ ಬಾರಿ ಇಲಾಖೆಯು ಹೆಚ್ಚಿನ ಆಯೋಜನೆ, ಸಂಪನ್ಮೂಲಗಳ ಸಮರ್ಪಿತ ಬಳಕೆ ಹಾಗೂ ಶಿಕ್ಷಕರಿಗೆ ಉತ್ತಮ ತರಬೇತಿ ಒದಗಿಸುವ ದೃಷ್ಟಿಕೋನದೊಂದಿಗೆ ಯೋಜನೆಯನ್ನು ಸಂಘಟಿತವಾಗಿ ಕಾರ್ಯರೂಪಕ್ಕೆ ತರಲು ಮುಂದಾಗಿದೆ. ಇದಕ್ಕಾಗಿ ರಿಜನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಸಂಸ್ಥೆಯ (Institute of English organisation) ಸಹಾಯದಿಂದ ಶಿಕ್ಷಕರಿಗೆ ರಾಜ್ಯಮಟ್ಟದ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಈ ಯೋಜನೆಯು ಬಡ ಕುಟುಂಬಗಳ ಮಕ್ಕಳಿಗೂ ವಿಶ್ವದರ್ಜೆಯ ಭಾಷಾ ಕೌಶಲ್ಯ (World-class language skills) ಕಲಿಯುವ ಅವಕಾಶವನ್ನು ನೀಡುವ ಮೂಲಕ, ಶೈಕ್ಷಣಿಕ ಸಮಾನತೆಯೆಡೆಗೆ ರಾಜ್ಯ ಸರ್ಕಾರ (Karnataka government) ತಿರುಗಿರುವ ಮತ್ತೊಂದು ಶ್ಲಾಘನೀಯ ಹೆಜ್ಜೆ ಎನಿಸುತ್ತಿದೆ.

ಈ ಯೋಜನೆಯ ಯಶಸ್ಸು ವಿದ್ಯಾರ್ಥಿಗಳ ಭಾಷಾ ನಿಪುಣತೆಗೆ ಮಾತ್ರವಲ್ಲದೆ, ಅವರ ಆತ್ಮವಿಶ್ವಾಸ, ಅಭಿವ್ಯಕ್ತಿ ಹಾಗೂ ಭವಿಷ್ಯ ಉಜ್ವಲತೆಗೆ ದಾರಿ ಹಾಕಲಿದೆ ಎಂಬ ನಿರೀಕ್ಷೆಯಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!