- 54 ನಿಗಮ, ಮಂಡಳಿ ಅಧ್ಯಕ್ಷರಿಗೆ ಬಂಫರ್ ರಾಜ್ಯ ಸಚಿವ ಸ್ಥಾನಮಾನ.
- ತಕ್ಷಣ ಜಾರಿಗೆ ಬರುವಂತೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ.
- ವೇತನ, ಸಾರಿಗೆ ಸೇರಿದಂತೆ ಸಚಿವ ದರ್ಜೆಯ ಎಲ್ಲಾ ಸೌಲಭ್ಯ ಲಭ್ಯ.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸುದೀರ್ಘ ಕಾಯುವಿಕೆಯ ನಂತರ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ನಿಗಮ-ಮಂಡಳಿಗಳ ಅಧ್ಯಕ್ಷರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಒಟ್ಟು 54 ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ‘ರಾಜ್ಯ ಸಚಿವ’ ಸ್ಥಾನಮಾನ ನೀಡಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ಈ ಕುರಿತಂತೆ ಅಧಿಸೂಚನೆ ಹೊರಡಿಸಿರುವಂತ ರಾಜ್ಯ ಸರ್ಕಾರವು, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರುಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರಾಜ್ಯ ಸಚಿವರ ಸ್ಥಾನಮಾನ ನೀಡಿ ಆದೇಶಿಸಿರುವುದಾಗಿ ತಿಳಿಸಿದೆ.
ಯಾರಿಗೆಲ್ಲ ರಾಜ್ಯ ಸಚಿವರ ಸ್ಥಾನಮಾನ? ಇಲ್ಲಿದೆ ಲೀಸ್ಟ್
ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷೆ ಮಮತಾ ಗಟ್ಟಿ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದಂತ ಎನ್.ರಂಗಸ್ವಾಮಿ, ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ವಡ್ನಾಳ್ ಜಗದೀಶ್, ರಾಜ್ಯ ತಜ್ಞರ ಮೌಲ್ಯ ಮಾಪನ ಸಮಿತಿಯ ಅಧ್ಯಕ್ಷ ಮಹೇಶ್.ಎಂ.ಎನ್, ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ್.ಎಂ, ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯುನಿಕೇಷನ್ ಮತ್ತು ಅಡ್ವರ್ಟೈಸಿಂಗ್ ಲಿಮಿಟೆಡ್ ಅಧ್ಯಕ್ಷ ಸತೀಶ್ ಕೃಷ್ಣ ಸೈಲ್, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಬಿ ನಾಗೇಂದ್ರ ಕುಮಾರ್ ಸೇರಿದಂತೆ 54 ನಿಗಮ, ಮಂಡಳಿ, ಪ್ರಾಧಿಕಾರದ ಅಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಿ ಆದೇಶ ಹೊರಡಿಸಿದೆ.



ಗಮನಿಸಿ: ಈ ಬದಲಾವಣೆಯು ಕೇವಲ ಅಧ್ಯಕ್ಷರ ಸ್ಥಾನಮಾನಕ್ಕೆ ಸಂಬಂಧಿಸಿದ್ದಾಗಿದ್ದು, ನಿಮ್ಮ ಕೆಲಸ ಕಾರ್ಯಗಳಿಗಾಗಿ ಆಯಾ ನಿಗಮಗಳ ಕಚೇರಿಯನ್ನು ಎಂದಿನಂತೆ ಸಂಪರ್ಕಿಸಬಹುದು.
ನಮ್ಮ ಸಲಹೆ
ನಮ್ಮ ಸಲಹೆ: ಈ 54 ನಿಗಮಗಳಲ್ಲಿ ನಿಮ್ಮ ಜಿಲ್ಲೆಯ ಅಥವಾ ಸಮುದಾಯದ ನಿಗಮಗಳೂ ಇರುತ್ತವೆ (ಉದಾಹರಣೆಗೆ ಕಾಡುಗೊಲ್ಲ ಅಭಿವೃದ್ಧಿ ನಿಗಮ). ಇನ್ಮುಂದೆ ಈ ನಿಗಮಗಳ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ಇರುವುದರಿಂದ, ಯೋಜನೆಗಳ ಬಗ್ಗೆ ಏನಾದರೂ ದೂರುಗಳಿದ್ದರೆ ಅಥವಾ ಕೆಲಸಗಳು ವಿಳಂಬವಾಗುತ್ತಿದ್ದರೆ ನೇರವಾಗಿ ಅವರ ಕಚೇರಿಯನ್ನು ಭೇಟಿ ಮಾಡಿ ಒತ್ತಾಯಿಸಬಹುದು. ಈಗ ಅವರು ಸಚಿವ ದರ್ಜೆಯವರಾಗಿರುವುದರಿಂದ ನಿಮ್ಮ ಸಮಸ್ಯೆಗಳಿಗೆ ಶಕ್ತಿ ಮೀರಿ ಸ್ಪಂದಿಸುವ ಜವಾಬ್ದಾರಿ ಅವರ ಮೇಲಿರುತ್ತದೆ!
ಸಾಮಾನ್ಯ ಪ್ರಶ್ನೆಗಳು (FAQs)
ಪ್ರಶ್ನೆ 1: ಸಚಿವ ಸ್ಥಾನಮಾನ ಸಿಕ್ಕರೆ ಜನರಿಗೆ ಏನು ಲಾಭ?
ಉತ್ತರ: ಇದು ನೇರವಾಗಿ ಜನರಿಗೆ ಹಣ ನೀಡುವ ಯೋಜನೆಯಲ್ಲ. ಆದರೆ, ನಿಗಮದ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ಸಿಗುವುದರಿಂದ ಸರ್ಕಾರದಿಂದ ನಿಗಮಕ್ಕೆ ಬರಬೇಕಾದ ಅನುದಾನ ಮತ್ತು ಫೈಲ್‌ಗಳು ವೇಗವಾಗಿ ವಿಲೇವಾರಿಯಾಗಲು ಇದು ಸಹಾಯ ಮಾಡುತ್ತದೆ.
ಪ್ರಶ್ನೆ 2: ಈ 54 ಮಂದಿಯಲ್ಲಿ ಯಾರ್ಯಾರಿದ್ದಾರೆ? ಪೂರ್ಣ ಪಟ್ಟಿ ಎಲ್ಲಿ ಸಿಗುತ್ತದೆ?
ಉತ್ತರ: ಪಟ್ಟಿಯಲ್ಲಿ ಮಮತಾ ಗಟ್ಟಿ, ಬಿ ನಾಗೇಂದ್ರ ಕುಮಾರ್, ಮಹೇಶ್ ಎಂ.ಎನ್ ಸೇರಿದಂತೆ 54 ಹೆಸರಿದ್ದು, ನೀವು ನಿಮ್ಮ ಸ್ಥಳೀಯ ತಹಶೀಲ್ದಾರ್ ಕಚೇರಿ ಅಥವಾ ಸರ್ಕಾರದ ಅಧಿಕೃತ ಗೆಜೆಟ್ ವೆಬ್‌ಸೈಟ್‌ನಲ್ಲಿ ಪೂರ್ಣ ಲಿಸ್ಟ್ ಪಡೆಯಬಹುದು.
ಈ ಮಾಹಿತಿಗಳನ್ನು ಓದಿ
- SSLC 2026: ಎಕ್ಸಾಂ ಟೆನ್ಷನ್ ಬಿಡಿ! SSLC ವಿದ್ಯಾರ್ಥಿಗಳಿಗೆ ಬಂಪರ್ ಗುಡ್ ನ್ಯೂಸ್: 2026ರ ಅಧಿಕೃತ ಮಾದರಿ ಪ್ರಶ್ನೆಪತ್ರಿಕೆ PDF ರಿಲೀಸ್.
- Gold Rate Today: ಚಿನ್ನದ ಬೆಲೆ ಮತ್ತೇ ₹2000/- ದಿಡೀರ್ ಇಳಿಕೆ. ಮದುವೆ ಮನೆಯವರಿಗೆ ‘ಗೋಲ್ಡನ್ ಚಾನ್ಸ್’! ಇಂದಿನ ದರ ಪಟ್ಟಿ ಇಲ್ಲಿದೆ.
- ರಾಜ್ಯದ ರೈತರಿಗೆ ಸಿಹಿಸುದ್ದಿ: 2025-26 ನೇ ಸಾಲಿನ ಖಾರಿಫ್ ಬೆಳೆ ವಿಮೆ ಹಣ ಬಿಡುಗಡೆ ಬ್ಯಾಂಕ್ ಖಾತೆಗೆ ಜಮಾ!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಶಿವರಾಜ್ ಅವರು NeedsOfPublic.in ನಲ್ಲಿ ಸಾರ್ವಜನಿಕ, ಶೈಕ್ಷಣಿಕ ಮತ್ತು ಸ್ಥಳೀಯ ಸುದ್ದಿಗಳ ವಿಭಾಗದ ಹಿರಿಯ ಸಂಪಾದಕರಾಗಿದ್ದಾರೆ (Senior Editor). ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದರೂ, ಮಾಧ್ಯಮ ಕ್ಷೇತ್ರದ ಮೇಲಿರುವ ಅತೀವ ಆಸಕ್ತಿಯಿಂದಾಗಿ 2019 ರಲ್ಲಿ ಡಿಜಿಟಲ್ ಜಗತ್ತಿಗೆ ಕಾಲಿಟ್ಟರು. ಇವರು ಆರಂಭಿಸಿದ “Suddi No.1 Kannada” ಯೂಟ್ಯೂಬ್ ಚಾನೆಲ್ ಪ್ರಸ್ತುತ 300K ಗೂ ಹೆಚ್ಚು ಸಬ್ಸ್ಕ್ರೈಬರ್ಗಳನ್ನು ಹೊಂದುವ ಮೂಲಕ ಜನಪ್ರಿಯವಾಗಿದೆ. ಡಿಜಿಟಲ್ ಮಾಧ್ಯಮದಲ್ಲಿ ಉತ್ತಮ ಅನುಭವ ಹೊಂದಿರುವ ಇವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಕೀರ್ಣ ಯೋಜನೆಗಳನ್ನು ಹಾಗೂ ವಿದ್ಯಾರ್ಥಿವೇತನಗಳನ್ನು (Scholarships) ಸರಳವಾಗಿ ವಿಶ್ಲೇಷಿಸಿ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತಲುಪಿಸುವಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ. ಇದರ ಜೊತೆಗೆ ಪ್ರಮುಖ ಶೈಕ್ಷಣಿಕ ಅಪ್ಡೇಟ್ಗಳು ಮತ್ತು ನಿಖರ ಮಾಹಿತಿ ನೀಡುವ ವಿಡಿಯೋ ಕಂಟೆಂಟ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ಇವರ ಬರವಣಿಗೆಯ ವಿಶಿಷ್ಟ ಶೈಲಿಯಾಗಿದೆ.


WhatsApp Group




Leave a Reply