Picsart 25 04 30 06 40 50 132 scaled

Gold Rate Today : ಅಕ್ಷಯ ತೃತೀಯ, ಚಿನ್ನದ ಬೆಲೆ ದಿಢೀರ್ ಇಳಿಕೆ.! ಇಂದಿನ, ಚಿನ್ನ ಬೆಳ್ಳಿ ಬೆಲೆ ಇಲ್ಲಿದೆ

Categories:
WhatsApp Group Telegram Group

ಅಕ್ಷಯ ತೃತೀಯದಂದು ಚಿನ್ನದ ಬೆಲೆಯ ದಿಢೀರ್ ಇಳಿಕೆ: ಹೂಡಿಕೆದಾರರಿಗಿಂತ ಗ್ರಾಹಕರಿಗೆ ಸಂತೋಷ

ಇಡೀ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ (Global economic system) ನಡೆಯುತ್ತಿರುವ ತೀವ್ರ ತಾರತಮ್ಯಗಳು ಮತ್ತು ಹೂಡಿಕೆದಾರರ ತೀರ್ಮಾನಗಳು ಮೌಲ್ಯದ ಲೋಹಗಳಾದ ಚಿನ್ನ ಮತ್ತು ಬೆಳ್ಳಿಯ ಬೆಲೆಯ ಮೇಲೂ ನೇರ ಪರಿಣಾಮ ಬೀರುತ್ತಿವೆ. ಇತ್ತೀಚೆಗೆ, ಈ ಬದಲಾವಣೆಗಳು ಭಾರತದ ಮಾರುಕಟ್ಟೆಯಲ್ಲೂ ತೀವ್ರವಾಗಿ ಕಾಣಿಸಿಕೊಂಡಿವೆ. ಅಮೆರಿಕ-ಚೀನಾ ನಡುವಿನ ವ್ಯಾಪಾರ ಉದ್ವಿಗ್ನತೆ, ಡಾಲರ್ ಮೌಲ್ಯದ (Dollar value) ಏರಿಕೆ ಹಾಗೂ ಹೂಡಿಕೆದಾರರ ಗಮನ ಷೇರುಪೇಟೆಯತ್ತ ತಿರುಗಿರುವುದು ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿವೆ. ಈ ಬೆಳವಣಿಗೆ ಭಾರತದಲ್ಲಿನ ಚಿನ್ನ ಮತ್ತು ಬೆಳ್ಳಿಯ ದರದ ಮೇಲೆ ನೇರ ಪರಿಣಾಮ ಬೀರಿದ್ದು, ಏಪ್ರಿಲ್ 29, 2025 ರಂದು ದೇಶದ ರಾಜಧಾನಿಯಲ್ಲಿ ಚಿನ್ನದ ದರದಲ್ಲಿ ದಿಢೀರ್ ಇಳಿಕೆ ಕಂಡುಬಂದಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 30, 2025: Gold Price Today

ಈ ತಿಂಗಳ ಆರಂಭದಲ್ಲಿ ಏರಿಕೆಯನ್ನು ಕಂಡಂತಹ ಚಿನ್ನದ ದರ ತಿಂಗಳ ಅಂತ್ಯದಲ್ಲಿ ಇಳಿಕೆಯನ್ನು ಕಾಣುತ್ತಿದೆ. ಅದರಲ್ಲೂ ಇಂದು ಅಕ್ಷಯ ತೃತೀಯ ಇರುವುದರಿಂದ ಗ್ರಾಹಕರಿಗೂ ಹೆಚ್ಚಿನ ಸಂತೋಷವಾಗಲಿದೆ. ಏಕೆಂದರೆ ಇಂದು ಚಿನ್ನ ಖರೀದಿಸುವವರ ಸಂಖ್ಯೆ ಹೆಚ್ಚಾಗುವುದರಿಂದ ಈ ರೀತಿಯ ಇಳಿಕೆ ಗ್ರಾಹಕರಿಗೆ ಕೊಂಚ ನೀರಳತೆ ಹಾಗೂ ಸಂತೋಷವನ್ನು ತಂದು ಕೊಟ್ಟಿದೆ. ಹಾಗಿದ್ದರೆ, ಏಪ್ರಿಲ್ 30, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 981  ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,798 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,349 ಆಗಿದೆ.  ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,00,400 ರೂ. ನಷ್ಟಿದ್ದು.

22 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ (INR)

ಗ್ರಾಂಇಂದುನಿನ್ನೆಬದಲಾವಣೆ
1₹8,981₹8,980+ ₹1
8₹71,848₹71,840+ ₹8
10₹89,810₹89,800+ ₹10
100 (100)₹8,98,100₹8,98,000+ ₹100

24 ಕ್ಯಾರೆಟ್ ಚಿನ್ನದ ದರ ಗ್ರಾಂಗೆ (INR)

ಗ್ರಾಂಇಂದುನಿನ್ನೆಬದಲಾವಣೆ
1₹9,798₹9,797+ ₹1
8₹78,384₹78,376+ ₹8
10₹97,980₹97,970+ ₹10
100 (100)₹9,79,800₹9,79,700+ ₹100

18 ಕ್ಯಾರೆಟ್ ಚಿನ್ನದ ದರ ಗ್ರಾಂಗೆ (INR)

ಗ್ರಾಂಇಂದುನಿನ್ನೆಬದಲಾವಣೆ
1₹7,349₹7,348+ ₹1
8₹58,792₹58,784+ ₹8
10₹73,490₹73,480+ ₹10
100 (100)₹7,34,900₹7,34,800+ ₹100

* ಮೇಲಿನ ಚಿನ್ನದ ದರಗಳು ಸೂಚಕವಾಗಿದ್ದು, GST, TCS ಮತ್ತು ಇತರ ಸುಂಕಗಳನ್ನು ಒಳಗೊಂಡಿಲ್ಲ. ನಿಖರವಾದ ದರಗಳಿಗಾಗಿ ನಿಮ್ಮ ಸ್ಥಳೀಯ ಆಭರಣ ವ್ಯಾಪಾರಿಯನ್ನು ಸಂಪರ್ಕಿಸಿ.

ಚಿನ್ನದ ದರದಲ್ಲಿ ಶೇ. 99.9 ಮತ್ತು 99.5ರಷ್ಟು ಶುದ್ಧತೆಯ ಮೇಲೆ ಪರಿಣಾಮ:
ಅಖಿಲ ಭಾರತ ಸರಾಫ್ ಸಂಘ (All India Saraf Association) ನೀಡಿರುವ ಮಾಹಿತಿಯಂತೆ, ಶೇ. 99.9ರಷ್ಟು ಶುದ್ಧತೆಯ ಚಿನ್ನದ ದರ ಗುರುವಾರ 99,400 ರೂ.ಗೆ ಇತ್ತು. ಆದರೆ ಸೋಮವಾರ ಅದು 1,000 ರೂ. ಇಳಿಯುತ್ತಾ 98,400 ರೂ.ಗೆ ತಲುಪಿದೆ. ಅದೇ ರೀತಿ, ಶೇ. 99.5ರಷ್ಟು ಶುದ್ಧತೆಯ ಚಿನ್ನವು 98,900 ರೂ. ಇದೀಗ ಅದು 97,900 ರೂ.ಗೆ ಕುಸಿತ ಕಂಡಿದೆ. ಈ ಇಳಿಕೆಯಿಂದ ಚಿನ್ನದ ಹೂಡಿಕೆದಾರರಲ್ಲಿ ತಾತ್ಕಾಲಿಕ ಆತಂಕ ಉಂಟಾಗಿದೆ.

ಬೆಳ್ಳಿಯಲ್ಲೂ (Silver) ಭಾರೀ ಇಳಿಕೆ:

ಚಿನ್ನದಂತೆ ಬೆಳ್ಳಿಯ ದರದಲ್ಲೂ ಕುಸಿತ ಕಾಣಿಸಿದ್ದು, ಕೆಜಿಗೆ 1,400 ರೂ.ಗಳಷ್ಟು ಇಳಿಕೆ ಕಂಡುಬಂದಿದೆ. ಗುರುವಾರ 99,900 ರೂ. ಇದ್ದ ಬೆಳ್ಳಿ ದರ, ಸೋಮವಾರದ ಹೊತ್ತಿಗೆ 98,500 ರೂ.ಗೆ ತಲುಪಿದೆ.

ಇಳಿಕೆಯ ಹಿಂದಿರುವ ಅಂತರರಾಷ್ಟ್ರೀಯ ಕಾರಣಗಳು (International causes) ಏನು?:

ಅಮೆರಿಕದ ವಸ್ತುಗಳ ಆಮದಿಗೆ ಪ್ರಸ್ತಾಪಿಸಿರುವ ಶೇ. 125ರಷ್ಟು ತೆರಿಗೆ ವಿರುದ್ಧ ಕೆಲ ವಸ್ತುಗಳಿಗೆ ನೀಡಿರುವ ವಿನಾಯಿತಿ, ಚೀನಾದಿಂದ ಅಮೆರಿಕದತ್ತ ಹರಿಯುವ ಉತ್ಪನ್ನಗಳ ಮೇಲೆ ಹೊಸ ತೆರಿಗೆಗಳು ಹಾಗೂ ಡಾಲರ್ ಮೌಲ್ಯದ ಏರಿಕೆ ಇತ್ಯಾದಿ ಪ್ರಮುಖ ಅಂತರರಾಷ್ಟ್ರೀಯ ಬೆಳವಣಿಗೆಗಳು ಈ ಇಳಿಕೆಗೆ ಕಾರಣಗಳಾಗಿವೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಅಬನ್ಸ್ ಫೈನಾನ್ಸಿಯಲ್ ಸರ್ವಿಸಸ್‌ನ (Abans Financial Services) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಿಂತನ್ ಮೆಹ್ರಾ ಹೇಳಿವು ಪ್ರಕಾರ “ಚಿನ್ನ ಒಂದು ಸುರಕ್ಷಿತ ಹೂಡಿಕೆ ಆಯ್ಕೆಯಾದರೂ ಇತ್ತೀಚೆಗೆ ಹೂಡಿಕೆದಾರರ ಆಸಕ್ತಿ ಷೇರುಪೇಟೆಯತ್ತ ಹರಿದಿರುವುದರಿಂದ ಚಿನ್ನದ ಹೊಳಪು ಸ್ವಲ್ಪ ಮಟ್ಟಿಗೆ ಕುಸಿದಿದೆ ಎಂದು ತಿಳಿಸಿದ್ದಾರೆ.

ಈ ಇಳಿಕೆಯಿಂದ ಯಾವ ರೀತಿಯ ಬದಲಾವಣೆ ಆಗಲಿವೆ?:
ಈ ಇಳಿಕೆ ಚಿನ್ನಾಭರಣ ಖರೀದಿಸುವ ಗ್ರಾಹಕರಿಗೆ (Buyer’s) ಸದುಪಯೋಗವಾಗಬಹುದು. ಆದರೆ ದೀರ್ಘಕಾಲಿಕ ಹೂಡಿಕೆದಾರರಿಗೆ ಇದು ಎಚ್ಚರಿಕೆಯ ಸೂಚನೆಯಾಗಿದ್ದು, ಮಾರುಕಟ್ಟೆ ಸ್ಥಿತಿಗತಿಯ (Market Changes) ಆಧಾರದ ಮೇಲೆ ಮುಂದಿನ ತೀರ್ಮಾನ ಕೈಗೊಳ್ಳುವ ಅಗತ್ಯವಿದೆ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories