ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ 2024 (Flipkart Big Billion Days) ಮಾರಾಟದ ದಿನಾಂಕವನ್ನು ಪ್ರಕಟಿಸಲಾಗಿದೆ: ಐಪ್ಯಾಡ್(iPad), ಐಫೋನ್(iPhone) ಗಳಲ್ಲಿ ಭಾರಿ ರಿಯಾಯಿತಿ.
ಇಂದು ಜನರು ಆಧುನಿಕರಣದತ್ತ ತಮ್ಮ ಒಲವನ್ನು ತೋರಿಸುತ್ತಿದ್ದಾರೆ. ಆದ್ದರಿಂದ ಇ-ಕಾಮರ್ಸ್ ಫ್ಲಾಟ್ ಫಾರ್ಮ್ ಗಳು (E-commerce flat form)ಜನರ ಮನಸ್ಸನ್ನು ಸೆಳೆದಿವೆ. ಅಮೆಜಾನ್(Amazon), ಫ್ಲಿಪ್ಕಾರ್ಟ್(Flipkart) ಈ ರೀತಿಯ ಹಲವು ಈ ಕಾಮರ್ಸ್ ಪ್ಲಾಟ್ ಫಾರ್ಮ್ ಗಳಲ್ಲಿ ಜನರಿಗೆ ತಮ್ಮ ನೆಚ್ಚಿನ ವಸ್ತುಗಳನ್ನು ಖರೀದಿಸುವಲ್ಲಿ ಬಹಳ ಸಹಕಾರ ಮಾಡುತ್ತಿದ್ದಾವೆ. ಈ ಪೈಕಿ ಅತಿ ದೊಡ್ಡ ಹಾಗೂ ಪ್ರಸಿದ್ಧ ಇ -ಕಾಮರ್ಸ್ ಪ್ಲಾಟ್ ಫಾರ್ಮ್ ಗಳಲ್ಲಿ ಫ್ಲಿಪ್ಕಾರ್ಟ್ ಕೂಡ ಒಂದು. ಇದೀಗ ಫ್ಲಿಪ್ಕಾರ್ಟ್ 2024ನೇ ವರ್ಷದ ಅತಿ ದೊಡ್ಡ ಬಿಗ್ ಬಿಲಿಯನ್ ಡೇಸ್ ದಿನಾಂಕವನ್ನು ಘೋಷಣೆ ಮಾಡಿದೆ. ಎಂದಿನಿಂದ ಪ್ರಾರಂಭವಾಗಲಿದೆ ಈ ಬಿಗ್ ಬಿಲಿಯನ್ ಡೇಸ್? ಯಾವೆಲ್ಲ ರಿಯಾಯಿತಿಗಳು ಕೊಡುಗೆಗಳನ್ನು ನೀಡಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಫ್ಲಿಪ್ಕಾರ್ಟ್ 2024ನೇ ವರ್ಷದ ಅತಿ ದೊಡ್ಡ ಬಿಗ್ ಬಿಲಿಯನ್ ಡೇಸ್ ದಿನಾಂಕವನ್ನು ಘೋಷಣೆ ಮಾಡಿದೆ. ಈ ಸಂದರ್ಭದಲ್ಲಿ ಜನರು ಅನೇಕ ರೀತಿಯ ಬ್ರ್ಯಾಂಡ್ ಗಳ ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್ ಗಳ ಭಾರಿ ರಿಯಾಯಿತಿಯನ್ನು ನೋಡಬಹುದು. ಬ್ಯಾಂಕ್ ಕೊಡಿಗೆಗಳ ಜೊತೆಯಲ್ಲಿ ಅನೇಕ ರೀತಿಯ ಆಫರ್ ಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಅದರಲ್ಲೂ ಬಹು ನಿರೀಕ್ಷಿತ 9ನೇ ಜನರೇಷನ್ (9th Generation) ಆಪಲ್ ಐಪ್ಯಾಡ್ (Apple iPad) ಅನ್ನು ಕಡಿಮೆ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಎಲ್ಲಾ ವಸ್ತುಗಳ ಮೇಲೆ ಕಡಿಮೆ ಅಂದರೆ ಅತಿ ಕಡಿಮೆ ದರದ ರಿಯಾಯಿತಿಯಲ್ಲಿ ವಸ್ತುಗಳು ಖರೀದಿಗೆ ಲಭ್ಯವಿರುತ್ತವೆ.
ಎಂದು ಪ್ರಾರಂಭವಾಗುತ್ತಿದೆ ಅತಿ ದೊಡ್ಡ ಬಿಗ್ ಬಿಲಿಯನ್ ಡೇಸ್ :
ಫ್ಲಿಪ್‌ಕಾರ್ಟ್ ಅಂತಿಮವಾಗಿ ಬಿಗ್ ಬಿಲಿಯನ್ ಡೇಸ್ 2024 ಮಾರಾಟದ ಮಾರಾಟದ ದಿನಾಂಕವನ್ನು ದೃಢಪಡಿಸಿದೆ. ಫ್ಲಿಪ್‌ಕಾರ್ಟ್ ಪ್ಲಸ್ ಚಂದಾದಾರರಿಗೆ ಒಂದು ದಿನ ಮುಂಚಿತವಾಗಿ ಸೇಲ್ಗೆ ಪ್ರವೇಶ ಇರಲಿದೆ. ಅಂದರೆ ಪ್ಲಸ್ ಚಂದಾದಾರರಿಗೆ ಸೆಪ್ಟೆಂಬರ್ 26 ರಿಂದಲೇ ಪ್ರಾರಂಭವಾಗುತ್ತದೆ. ಮತ್ತು ಇತರೆ ಎಲ್ಲಾ ಬಳಕೆದಾರರಿಗೆ ಸೆಪ್ಟೆಂಬರ್ 27 ರಂದು ಪ್ರಾರಂಭವಾಗುತ್ತದೆ.
ಬಿಗ್ ಬಿಲಿಯನ್ ಡೇಸ್ ಡೀಲ್‌ಗಳು :
ಅನೇಕ ರೀತಿಯ ಬ್ರ್ಯಾಂಡ್ ಗಳ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಮೊಬೈಲ್ ಫೋನ್ ಗಳ ಭಾರಿ ರಿಯಾಯಿತಿಗಳು ಇದ್ದು, ಈ ಪೈಕಿ ಎಲೆಕ್ಟ್ರಾನಿಕ್ಸ್ ಮತ್ತು ಆಕ್ಸೆಸರಿಗಳ (ಸ್ಮಾರ್ಟ್ ಟಿವಿಗಳು, ಲ್ಯಾಪ್‌ಟಾಪ್‌ಗಳು, ಹೆಡ್‌ಫೋನ್‌ಗಳು, ಗೇಮಿಂಗ್ ಕನ್ಸೋಲ್‌ಗಳು ಮತ್ತು ಇತರ ತಾಂತ್ರಿಕ ವಸ್ತುಗಳಿಗೆ) ವಸ್ತುಗಳಿಗೆ ಭಾರಿ ಆಫರ್ ಸಿಗುವ ಸಾಧ್ಯತೆ ಇದೆ. ಅಂದರೆ ಶೇ 50 ರಿಂದ 80ರ ವರೆಗೆ ರಿಯಾಯಿತಿ ಸಿಗುವ ನಿರೀಕ್ಷೆ ಇದೆ. ಗೃಹೋಪಯೋಗಿ ಉಪಕರಣಗಳಿಗೂ ಶೇ 80 ವರೆಗೆ ರಿಯಾಯಿತಿ ಸಿಗುವ ಸಾಧ್ಯತೆ ಇದೆ. ಹಾಗೂ ಇದರ ಜೊತೆಯಲ್ಲಿ ಕೆಲವು ರೆಫ್ರಿಜರೇಟರ್‌ಗಳು ಮತ್ತು 4K ಸ್ಮಾರ್ಟ್ ಟಿವಿಗಳಿಗೆ ಶೇ 75ರ ವರೆಗೆ ಆಫರ್ ಸಿಗುವ ನಿರೀಕ್ಷೆ ಇದೆ. ಈಗಿನ ಇ-ಕಾಮರ್ಸ್ ಸೈಟ್‌ನಲ್ಲಿ 69,900 ರೂಗಳಲ್ಲಿ ಲಭ್ಯವಿರುವ iPhone 15 ಅನ್ನು ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದ ಸಮಯದಲ್ಲಿ ಸಾರ್ವಕಾಲಿಕ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. Samsung ಮತ್ತು Motorola ನಂತಹ ಬ್ರ್ಯಾಂಡ್‌ಗಳ ಇತರ ಪ್ರಮುಖ ಮಾದರಿಗಳು ಸಹ ಫ್ಲಿಪ್ಕಾರ್ಟ್ (Big Billion 2024) ಮಾರಾಟದಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿರುತ್ತವೆ. ಹಾಗೂ ಆಪಲ್ ಐಪ್ಯಾಡ್( 9th ಜನರೇಶನ್) ಮಾರಾಟದ ಸಮಯದಲ್ಲಿ ಸುಮಾರು 18,500 ರೂಗಳಿಗೆ ಸಿಗಲಿದೆ.
ಬಿಗ್ ಬಿಲಿಯನ್ ಡೇಸ್ ಬ್ಯಾಂಕ್ ಆಫರ್ಸ್ ಹಾಗೂ ಇತರೆ ಕೊಡುಗೆಗಳು :
ಹೌದು, ಫ್ಲಿಪ್ಕಾರ್ಟ್ ಅರ್ಹ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಸ್(Credit and Debit Cards) ಗಳಿಗೆ ಆಫರ್ ಗಳನ್ನು ನೀಡಲು ಉನ್ನತ ಬ್ಯಾಂಕುಗಳೊಂದಿಗೆ ಪಾಲುದಾರಿಕೆಯನ್ನು (partnership) ಮಾಡಿಕೊಂಡಿದೆ. ಈಗಾಗಲೇ HDFC ಬ್ಯಾಂಕ್‌ನೊಂದಿಗೆ ತನ್ನ ವಿಶೇಷ ಪಾಲುದಾರಿಕೆಯನ್ನು ದೃಢಪಡಿಸಿದೆ. ಅತ್ಯಾಕರ್ಷಕ ವಿನಿಮಯ ಡೀಲ್‌ಗಳು, ನೋ-ಕಾಸ್ಟ್ ಇಎಂಐ ಮತ್ತು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಕೊಡುಗೆಗಳು ಇರುತ್ತವೆ. ಶಾಪಿಂಗ್ ಮಾಡಿದರೆ ಶೇಕಡ 5 ರಿಂದ 15 ರ ತನಕ ಡಿಸ್ಕೌಂಟ್ ಸಿಗುವ ಸಾಧ್ಯತೆ ಇದೆ.
ವಿನಿಮಯ (Exchange) ಆಫರ್ಸ್:
ಇನ್ನೂ ಗ್ರಾಹಕರು ಈಗಾಗಲೇ ಹಳೆಯದಾಗಿರುವಂತಹ ಸ್ಮಾರ್ಟ್ ಫೋನ್ ಗಳು ಅಥವಾ ಲ್ಯಾಪ್ಟಾಪ್ ಗಳನ್ನು ಕೂಡ ಎಕ್ಸ್ಚೇಂಜ್ ಮಾಡಿಕೊಂಡು ಹೊಸ ವಸ್ತುವನ್ನು ಖರೀದಿಸಲು ಅವಕಾಶವನ್ನು ನೀಡಿದೆ.
ನೋ-ಕಾಸ್ಟ್ EMI(No-cost EMI):
ಸ್ಮಾರ್ಟ್ ಟಿವಿ ಅಥವಾ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಿದರೆ ಇಎಂಐ ಆಯ್ಕೆಗಳನ್ನು ಕೂಡ ನೀಡುತ್ತದೆ. ಗ್ರಾಹಕರಿಗೆ ಯಾವುದೇ ಹೆಚ್ಚುವರಿ ರೀತಿಯ ಬಡ್ಡಿ ಇಲ್ಲದೆ ಸುಲಭ ಕಂತುಗಳಲ್ಲಿ ಈಎಂಐ ಕಂತು ಪಾವತಿಸಲು ಅವಕಾಶ ನೀಡುತ್ತದೆ.
ಕ್ಯಾಶ್‌ಬ್ಯಾಕ್ ಮತ್ತು ಕೂಪನ್‌ಗಳು:
ಗ್ರಾಹಕರು ಕ್ಯಾಶ್‌ಬ್ಯಾಕ್ ಡೀಲ್‌ಗಳು ಮತ್ತು ಡಿಸ್ಕೌಂಟ್ ಕೂಪನ್‌ಗಳಿಂದ ಲಾಭ ಪಡೆಯಬಹುದು. ಆ ಮೂಲಕ ತಮ್ಮ ಬಜೆಟ್ ಅನ್ನು ಮತ್ತಷ್ಟು ವಿಸ್ತರಿಸಲು ನೆರವಾಗಬಹುದು. ಒಟ್ಟಾರೆ ಉಳಿತಾಯಕ್ಕೆ ಅನುವು ಮಾಡಿಕೊಡುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




