ಇದೀಗ ರಾಜ್ಯದ ಜನತೆಗೆ ಒಂದು ಸಿಹಿ ಸುದ್ದಿ ( Gud News ) ತಿಳಿದು ಬಂದಿದೆ. ಹೌದು, ರಾಜ್ಯದ ಜನತೆಗೆ ಸುಲಭವಾಗಿ ಸರ್ಕಾರಿ ಸೇವೆ ( Government Service ) ಒದಗಿಸಲು ಮನೆ ಬಾಗಿಲಿಗೆ ಜನ ಮಿತ್ರರು ಆಗಮಿಸಿದ್ದಾರೆ. ಈ ಹೊಸ ಸೇವೆಯ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ( Employment for Unemployes ) ಅವಕಾಶ ಕಲ್ಪಿಸಲಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಅದರ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇಂದು ನಿರುದ್ಯೋಗ ಯುವಕರಲ್ಲಿ ಕಾಡುವಂತ ಗಂಭೀರ ಸಮಸ್ಯೆಯಾಗಿದೆ. ಮಾಡಲು ಕೆಲಸವಿಲ್ಲದೇ ತಮಗೇ ಕೆಲಸ ಸಿಗದ ಸಾವಿರಾರು ಜನರಿದ್ದಾರೆ. ನಿರುದ್ಯೋಗವು ( Unemployment ) ವ್ಯಕ್ತಿಯು ಕೆಲಸ ಮಾಡಲು ಬಯಸುತ್ತಿದ್ದರೂ ಕೂಡ ಅವರು ಉದ್ಯೋಗವನ್ನು ಹುಡುಕಲಾಗದ ಪರಿಸ್ಥಿತಿಯನ್ನು ಉಂಟುಮಾಡುತ್ತದೆ. ಇಷ್ಟೆಲ್ಲ ಸಮಸ್ಯೆಯನ್ನು ಪರಿಗಣಿಸಿ ಇಂದು ಸರ್ಕಾರವು ನಿರುದ್ಯೋಗಿಗಳ ಸರ್ಕಾರಿ ಸೇವೆ ಒದಗಿಸಲು ಮುಂದಾಗಿದೆ.
ಜನ ಮಿತ್ರರ ಮೂಲಕ ಸರ್ಕಾರಿ ಸೇವೆ ಒದಗಿಸುವ ಉದ್ದೇಶ ( Purpose ) :
ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳನ್ನು ಸುಲಭವಾಗಿ ಪಡೆಯಲು ಜನಮಿತ್ರರ ನೇಮಕಕ್ಕೆ ಸರ್ಕಾರ ಇ- ಆಡಳಿತ ಇಲಾಖೆಯನ್ನು ( E-Administration Department ) ಬಳಸಿಕೊಂಡಿದೆ. ತಾಲೂಕು ಕಚೇರಿಗಳಲ್ಲಿ ( Taluk Office ) ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ ಜನರಿಗೆ ಅನುಕೂಲ ರೂಪಿಸುವ ಯೋಜನೆಯು ಇದಾಗಿದೆ. ಈ ಉದ್ದೇಶದಿಂದ ಸರ್ಕಾರ ಈ ಒಂದು ಹೊಸ ಯೋಜನೆಯನ್ನು ಜಾರಿ ಗೊಳಿಸಿದೆ.
ಈ ಯೋಜನೆಯ ಪ್ರಮುಖ ಪ್ರಯೋಜನಗಳು ( Benefits ) :
ನಾಗರಿಕರು ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ
ಸಮಯ, ಹಣ ಮತ್ತು ಶ್ರಮದ ಉಳಿತಾಯ
ಮಧ್ಯವರ್ತಿಗಳ ಹಾವಳಿಗೆ ಬ್ರೇಕ್
ಸರ್ಕಾರಿ ಕಚೇರಿಯಲ್ಲಿ ಜನದಟ್ಟಣೆಯ ತಡೆ
ನಿಗದಿತ ಅವಧಿಯಲ್ಲಿ ಸೇವೆ ಲಭ್ಯ
ಗ್ರಾಮೀಣ ಉದ್ಯೋಗಾವಕಾಶಕ್ಕೆ ಉತ್ತೇಜನ
ಅಧಿಕಾರಿಗಳು ಕಚೇರಿಯಲ್ಲಿ ಹೆಚ್ಚಿನ ಸಮಯ ಇರಬಹುದು
ಯಾವುದೇ ಸೇವಾ ಕೇಂದ್ರಗಳಿಗೆ ಅಲೆದಾಡಬೇಕಿಲ್ಲ :
ಆದಾಯ ಪ್ರಮಾಣಪತ್ರ, ರಸಗೊಬ್ಬರಕ್ಕೆ ಅರ್ಜಿ ಸಲ್ಲಿಕೆ, ಜಾತಿ ಪ್ರಮಾಣಪತ್ರ, ವಿವಿಧ ಲೈಸನ್ಸ್‌ಗಳ ನವೀಕರಣ, ಪರಿಹಾರ ನಿಧಿಗೆ ಅರ್ಜಿ ಸಲ್ಲಿಕೆ, ಟ್ರೇಡರ್ ಲೈಸನ್ಸ್, ಮಣ್ಣಿನ ಗುಣಮಟ್ಟ ಪರೀಕ್ಷೆಗೆ ಅರ್ಜಿ ಸಲ್ಲಿಕೆ, ಮೀನು ಸಾಗಣೆ ಅರ್ಜಿ ಸಲ್ಲಿಕೆ, ಅಂಕಪಟ್ಟಿ, ಪೊಲೀಸರಿಗೆ ದೂರು ದಾಖಲು, ಮರಣ ಪ್ರಮಾಣಪತ್ರ, ವಿವಿಧ ಸಾಮಾಜಿಕ ಪಿಂಚಣಿಗಳಿಗೆ ಅರ್ಜಿ ಸಲ್ಲಿಕೆ ಹೀಗೆ ವಿವಿಧ ಸೇವೆಗಳನ್ನು ಜನಮಿತ್ರರ ಮೂಲಕ ಪಡೆಯಬಹುದು. ಪ್ರತಿ ನಾಗರಿಕ ಸೇವಾ ಕೇಂದ್ರಗಳಿಗೆ 2 ರಿಂದ 4 ಜನಮಿತ್ರರನ್ನು ನೇಮಿಸಲಾಗುತ್ತದೆ. ಒಟ್ಟಾರೆ ರಾಜ್ಯಾದ್ಯಂತ ಅಂದಾಜು 25 ಸಾವಿರ ಜನ ಈ ಸೇವೆಗೆ ನೇಮಕ ಮಾಡುವ ಉದ್ದೇಶವಿದೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ( Qualifications ) :
ಅದೇ ಗ್ರಾಪಂ ವ್ಯಾಪ್ತಿಯಲ್ಲಿ ವಾಸಿಸಬೇಕು
ಕನಿಷ್ಠ ಹತ್ತನೇ ತರಗತಿ ಓದಿರಬೇಕು
ಕಂಪ್ಯೂಟರ್ ಕೌಶಲ ಇರಬೇಕು
ಚಾಲನಾ ಪರವಾನಗಿ, ದ್ವಿಚಕ್ರ ವಾಹನದ ಮಾಲೀಕತ್ವ
ಪೊಲೀಸ್ ಪ್ರಕರಣಗಳಿಂದ ಮುಕ್ತವಾಗಿರಬೇಕು.
ಆಯ್ಕೆ ಪ್ರಕ್ರಿಯೆ ( Selection Method ) :
ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕಾರ
ಆನ್‌ಲೈನ್‌ನಲ್ಲಿಯೇ ಪರಿಶೀಲನೆ ಹಾಗೂ ಆಯ್ಕೆ
ಆನ್‌ಲೈನ್ ಮೂಲಕವೇ ತರಬೇತಿ
ಜನ ಮಿತ್ರರ ಸೇವೆಯ ಬಳಕೆಯ ವಿಧಾನ ( Steps for using ) :
ಜನಮಿತ್ರರ ಸೇವೆ ಬೇಕು ಎಂಬುವವರು ಮೊಬೈಲ್‌ಗೆ ಮಿಸ್ ಕಾಲ್ ( Miss call ) ನೀಡಬೇಕು. ಅವರು ಹೆಸರು ಹಾಗೂ ಪಿನ್‌ಕೋಡ್ ( Pincode ) ಪಡೆಯುತ್ತಾರೆ. ಅವರಿಗೆ ನೋಂದಣಿ ಸಂಖ್ಯೆಯನ್ನು ಎಸ್ ಎಂಎಸ್ ಮೂಲಕ ನೀಡಲಾಗುತ್ತದೆ. ನಂತರ ಜನಮಿತ್ರ ಆಪ್ ( Janamithra App ) ಮೂಲಕ ಜನಮಿತ್ರನಿಗೆ ಮಾಹಿತಿ ಕಳುಹಿಸಲಾಗುತ್ತದೆ. ಒಂದು ಗಂಟೆಯೊಳಗೆ ಸಂಬಂಧಿಸಿದ ನಾಗರಿಕರನ್ನು ಜನಮಿತ್ರ ಭೇಟಿ ಮಾಡುತ್ತಾರೆ. ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯ ತನಕ ನೋಂದಣಿಗೆ ಅವಕಾಶ ನೀಡಲಾಗುತ್ತದೆ. ರಾತ್ರಿ 8 ಗಂಟೆಯ ನಂತರದ ಅವಧಿಯನ್ನು ಮಾರನೇ ದಿನಕ್ಕೆ ಲೆಕ್ಕ ಹಾಕಲಾಗುತ್ತದೆ.
ಅರ್ಜಿ ಶುಲ್ಕದ ಬೆಲೆ ಮತ್ತು ಈ ಯೋಜನೆ ಸದ್ಯಕ್ಕೆ ಪ್ರಾಯೋಗಿಕ ಜಾರಿ ( Practical Implementation ) :
ಅರ್ಜಿ ಸಲ್ಲಿಕೆ ಮತ್ತು ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸಲು ಅರ್ಜಿ ಶುಲ್ಕದ ಜೊತೆಗೆ 50 ರೂ. ಪ್ರಮಾಣ ಪತ್ರ ವಿತರಣೆಗೆ ಶುಲ್ಕದ ಜೊತೆಗೆ 25 ರೂ. ನಿಗದಿ ಮಾಡಲಾಗುವುದು. ಶುಲ್ಕ ಸರ್ಕಾರಕ್ಕೆ ಬಂದರೆ ಉಳಿದ ಮೊತ್ತ ಜನಮಿತ್ರರಿಗೆ ಸಿಗಲಿದೆ. ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತ ನಂತರ ಕಂದಾಯ ವಿಭಾಗಗಳ ತಲಾ ಒಂದು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿ ಮಾಡಿ ನಂತರ ರಾಜ್ಯದಾದ್ಯಂತ ವಿಸ್ತರಿಸಲಾಗುವುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಕೇಂದ್ರ ಸರ್ಕಾರದಿಂದ ಯಾವುದೇ ಗ್ಯಾರಂಟಿ ಇಲ್ಲದೇ 10 ಲಕ್ಷ ರೂ.ವರೆಗೆ ಸಾಲ ಸೌಲಭ್ಯ
- ನಿಮ್ಮ ವಾಹನದ ಫ್ಯಾಸ್ಟ್ ಟ್ಯಾಗ್ e-kyc ಮಾಡಲು ಇಂದೇ ಕೊನೆಯ ದಿನ, ಇಲ್ಲಿದೆ ಮಾಹಿತಿ
- ಮನೆ ಇಲ್ಲದವರಿಗೆ, ಸ್ವಂತ ಮನೆ ಕಟ್ಟಲು ಕೇಂದ್ರ ಸರ್ಕಾರದಿಂದ ಸಾಲ ಮತ್ತು ಸಹಾಯಧನಕ್ಕೆ ಅರ್ಜಿ ಆಹ್ವಾನ
- ಈ ರೈತರಿಗೆ ಬೆಳೆ ಹಾನಿ ಪರಿಹಾರದ 2000/- ರೂ. ಜಮಾ ಆಗಿದೆ, ನಿಮ್ಮ ಖಾತೆ ಹೀಗೆ ಚೆಕ್ ಮಾಡಿ
- ಜಗದೀಶ್ ಶೆಟ್ಟರ್ ಬಿಜೆಪಿಗೆ ಮತ್ತೆ ಸೇರ್ಪಡೆ ; ಇಂದು ದೆಹಲಿಯ ಬಿಜೆಪಿ ಆಫೀಸ್ ನಲ್ಲಿ ಅಧಿಕೃತವಾಗಿ ಘರ್ ವಾಪಾಸ್!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group





