ಇದೀಗ ರಾಜ್ಯದ ರೈತರಿಗೆ ಸಿಹಿ ಸುದ್ದಿ ತಿಳಿದು ಬಂದಿದೆ. ರಾಜ್ಯದಲ್ಲಿ ರೈತರು ಬೆಳೆ ಬೆಳೆಯಲು ಆಗದೆ ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಬರಗಾಲ(drought). ಹೌದು, ಮುಂಗಾರು ಮಳೆ ಇಲ್ಲದೆ ಬೆಳೆ ಬೆಳೆಯಲು ರೈತರು ಬಹಳ ಕಷ್ಟವಾಗುತ್ತಿದೆ. ಹಾಗಾಗಿ ರೈತರಿಗೆ ಸರ್ಕಾರದಿಂದ ( From Government ) ಬಹಳ ಯೋಜನೆಗಳು, ಸಾಲ(loan) ಸೌಲಭ್ಯಗಳು ಲಭ್ಯವಿವೆ. ಹಾಗೆಯೇ ಇದೀಗ ಬರದಿಂದ ಕಂಗಾಲಾಗಿರುವ ರೈತರ ನೆರವಿಗೆ ಸರ್ಕಾರ ಮುಂದಾಗುತ್ತಿದೆ. ಇದೀಗ ರಾಜ್ಯ ಸರ್ಕಾರ ( State Government ) ರೈತರ ಖಾತೆಗೆ ಬರ ಪರಿಹಾರದ ಮೊದಲನೇ ಕಂತಿನ ಹಣವನ್ನು ಜಮಾ ಮಾಡಲು ನಿರ್ಧರಿಸಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಯೋಜನೆಯ ಮುಖ್ಯ ಉದ್ದೇಶ ( Purpose ) :
ಈಗಾಗಲೇ ಹಲವಾರು ರೈತರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿ, ಬರಗಾಲ ಮುಂತಾದ ಹಲವಾರು ಸಮಸ್ಯೆಗಳು ಇದ್ದಾವೆ. ರೈತರು ನಮ್ಮ ದೇಶದ ಬೆನ್ನೆಲುಬು. ಅನ್ನದಾತೋ ಸುಖಿನೋ ಭವ ಎಂಬ ಮಾತಿದೆ. ಹೌದು, ರೈತರು ಸುಖವಾಗಿ ಇದ್ದರೆ, ಇಡೀ ದೇಶವೇ ಸುಖವಾಗಿ ಇರುತ್ತದೆ. ಆದ್ದರಿಂದ ರೈತರು ಯಾವುದೇ ಸಮಸ್ಯೆಗಳನ್ನು ಎದುರಿಸಬಾರದು ಅವರಿಗೆ ಯಾವುದೇ ಸಮಸ್ಯೆ ಬಂದರೂ ಕೂಡ ಅವರ ಪರವಾಗಿ ರಾಜ್ಯ ಸರ್ಕಾರ ಇದೆ. ಅವರ ಈ ಎಲ್ಲ ಸಮಸ್ಯೆಗಳನ್ನು ದೂರ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ರೈತರಿಗಾಗಿ ಹಲವು ಯೋಜನೆ ಮತ್ತು ಸಾಲ ಸೌಲಭ್ಯಗಳನ್ನು ಜಾರಿಗೆ ತಂದಿದೆ. ಹಾಗೆಯೇ ರೈತರಿಗಾಗಿ ಬರ ಪರಿಹಾರವನ್ನು ನೀಡುತ್ತಿದೆ.
ಒಂದು ವಾರದೊಳಗೆ ( Within Week ) ಮೊದಲನೇ ಕಂತಿನ ( 1st Instalment ) ಹಣ ಜಮಾ ಆಗುತ್ತದೆ : ಸಿದ್ದರಾಮಯ್ಯ ( CM Siddaramaiya )
ಈಗಾಗಲೇ ರೈತರಿಗೆ ಬರ ಪರಿಹಾರ ಬಿಡುಗಡೆ ಆಗಿದ್ದು, ಬರ ಪರಿಹಾರದ ಮೊದಲ ಕಂತಿನ 2,000 ರೂ. ಹಣವನ್ನು ಪ್ರತಿಯೊಬ್ಬ ರೈತನಿಗೂ ಒಂದು ವಾರದೊಳಗೆ ಹಣ ಅವರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಪಿರಿಯಾಪಟ್ಟಣ ( Piriyapattana ) ತಾಲೂಕಿನ ಬೈಲುಕುಪ್ಪೆಯಲ್ಲಿ ( Bailukuppe ) ಮಾತನಾಡಿದ ಅವರು, ಕೇಂದ್ರ ಸರ್ಕಾರ ಇನ್ನೂ ಕರ್ನಾಟಕ ರಾಜ್ಯಕ್ಕೆ ಬರ ಪರಿಹಾರ ಕೊಟ್ಟಿಲ್ಲ. 2 ತಿಂಗಳ ಹಿಂದೆಯೇ ಖುದ್ದಾಗಿ ಭೇಟಿ ನೀಡಿ ಪರಿಹಾರಕ್ಕೆ ಮನವಿ ಸಲ್ಲಿಸಿದ್ದೇನೆ. ಬೇಗನೆ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿ, ಎಂದು ಕೇಳಿದ್ದೆವು. ಪ್ರಧಾನಿ ಬೆಂಗಳೂರಿಗೆ ಬಂದಾಗಲೂ ಬರ ಪರಿಹಾರ ನೀಡುವಂತೆ ಕೇಳಿದ್ದೆ. ಸದ್ಯಕ್ಕೆ ರಾಜ್ಯದಲ್ಲಿ ನಾವೇ ಬರ ಪರಿಸ್ಥಿತಿ ನಿರ್ವಹಣೆ ಮಾಡುತ್ತಿದ್ದೇವೆ ಎಂದು ರೈತರಿಗೆ ಭರವಸೆ ನೀಡಿದರು.
ಬರ ಪರಿಹಾರದ ( Baraparihaar scheme ) ಮೊದಲ ಕಂತಿನ ಹಣ 2000 ರೂ. ಪ್ರತಿಯೊಬ್ಬ ರೈತನ ಖಾತೆಗೆ ಜಮಾ ಆಗಲಿದೆ :
ರಾಜ್ಯ ಸರ್ಕಾರ ಈವರೆಗೆ ಬೆಳೆ ಹಾನಿಗೆ ಒಳಗಾದವರಿಗೆ ಮತ್ತು ಬರ ಪರಿಹಾರಕ್ಕೆ 550 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ರೈತರಿಗೆ 2,000 ರೂಪಾಯಿ ಬರ ಪರಿಹಾರಕ್ಕಾಗಿ ನೀಡುತ್ತಿದೆ. ಒಂದು ವಾರದೊಳಗೆ ಎಲ್ಲಾ ರೈತರ ಖಾತೆಗೆ ಮೊದಲ ಕಂತಿನ ಹಣ ತಲುಪುತ್ತೆ’’ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯ ಸರಕಾರದಿಂದ ಅರ್ಹ ರೈತರಿಗೆಗೆ ಮೊದಲ ಕಂತಿನ ಬರ ಪರಿಹಾರದ ಹಣವನ್ನು ವರ್ಗಾವಣೆ ಕಾರ್ಯವು ಈಗಾಗಲೇ ಪ್ರಾರಂಭವಾಗಿದೆ. FID ಸಂಖ್ಯೆ ಹೊಂದಿರುವ ಅರ್ಹ ರೈತರ ಖಾತೆಗೆ ಮೊದಲ ಕಂತಿನ ರೂ 2,000 ಹಣ ವರ್ಗಾವಣೆ ಪಕ್ರಿಯೆಯು ಕೂಡ ಆರಂಭವಾಗಿದೆ.
ರೈತರು ತಮ್ಮ ಬ್ಯಾಂಕ್ ಖಾತೆಗೆ ಮೊದಲ ಕಂತಿನ ಹಣ ಜಮಾ ಆಗಿದೆಯೇ ಎಂದು ಚೆಕ್ ಮಾಡುವ ವಿಧಾನ :
ವಿಧಾನ 1 :
ರಾಜ್ಯ ಸರ್ಕಾರದ ಬರ ಪರಿಹಾರದ ಅಧಿಕೃತ ವೆಬೈಟ್ ಗೆ ( Website ) ಭೇಟಿ ನೀಡಿ:
ಅಧಿಕೃತ ವೆಬ್ ಸೈಟ್ ನ ಲಿಂಕ್ : https://landrecords.karnataka.gov.in/pariharapayment/ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂದು ತಿಳಿಯಬಹುದು.
ಅಥವಾ ನಿಮ್ಮ ಬ್ಯಾಂಕಿನ ಸಹಾಯವಾಣಿಗೆ ಮಿಸ್ ಕಾಲ್ ಮಾಡಿ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಬ್ಯಾಲೆನ್ಸ್ ಚೆಕ್ ( Balance Check ) ಮಾಡುವ ಮೂಲಕ ನಿಮ್ಮ ಖಾತೆಗೆ 2000 ರೂ. ವರ್ಗಾವಣೆ ಆಗಿರುವುದನ್ನು ತಿಳಿದುಕೊಳ್ಳಬಹುದು.
ವಿಧಾನ 2 :
ರಾಜ್ಯ ಸರ್ಕಾರದ ವಿವಿಧ ಯೋಜನೆಗಳು ನೇರ ನಗದು ವರ್ಗಾವಣೆ ಡಿಬಿಟಿ ಮೂಲಕ ವರ್ಗಾವಣೆಯಾದ ಹಣದ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ( DBT Application) ಅನ್ನು ಬಿಡುಗಡೆ ಮಾಡಿದ್ದು ರೈತರು ಆ ಅಪ್ಲಿಕೇಶನ್ ನಲ್ಲಿ ಡೌನ್ಲೋಡ್.( Download ) ಮಾಡಿಕೊಂಡು ಹಣ ಜಮಾ ಆಗಿದೆಯೇ ಎಂದು ಚೆಕ್ ಮಾಡಿಕೊಳ್ಳಬಹುದು.
ಈ ಬರ ಪರಿಹಾರದ ಹಣದ ಜಮಾ ವಿವರವನ್ನು ಈ ವಿಧಾನದ ಮೂಲಕ ನೀವು ಚೆಕ್ ಮಾಡಿಕೊಳ್ಳಬಹುದು.
ಈ ಎರಡು ವಿಧಾನವನ್ನು ಅನುಸರಿಸಿ ರೈತರು ತಮ್ಮ ಜಮೀನು ಮತ್ತು ಬ್ಯಾಂಕ್ ಖಾತೆ ವಿವರ ಕೃಷಿ ಇಲಾಖೆಯ ಫ್ರೂಟ್ಸ್ ವೆಬೈಟ್ ನಲ್ಲಿ ದಾಖಲಾಗಿ FID ನಂಬರ್ ಸೃಜನೆ ಅಗಿರುತ್ತದೆ ಕೂಡ ಎಂದು ಚೆಕ್ ಮಾಡಿಕೊಳ್ಳಬಹುದಾಗಿದೆ.
ಎಫ್ಐಡಿ ನಂಬರ್ ಕಡ್ಡಾಯ ( FID Number is Compulsory ) :
ಬರ ಪರಿಹಾರ ಮತ್ತು ಸರ್ಕಾರದ ಇತರೆ ಇಲಾಖೆಗಳ ಸಹಾಯಧನ ಪಡೆಯಲು ಕಡ್ಡಾಯವಾಗಿ ಸರಕಾರದ ವಿವಿಧ ಇಲಾಖೆ ಮೂಲಕ ತಿಳಿಸಿರುವ ಮಾಹಿತಿಯ ಪ್ರಕಾರ ಈ ವರ್ಷ ಬರ ಪರಿಹಾರ ಪಡೆಯಲು FID ನಂಬರ್ ಕಡ್ಡಾಯವಾಗಿ ಮಾಡಲಾಗಿದ್ದು. ಈ ನಂಬರ್ ಹೊಂದಿರುವವರಿಗೆ ಮಾತ್ರ ಪರಿಹಾರದ ಹಣ ಜಮಾ ಅಗಲಿದೆ ಎಂದು ಈ ಮೂಲಕ ತಿಳಿಸಲಾಗಿದೆ.
ಆಧಾರ್ ಕಾರ್ಡ್ ಲಿಂಕ್ ಕೂಡ ಕಡ್ಡಾಯ ( Adhar Linking is Compulsory ) :
ಬರ ಪರಿಹಾರದ ಹಣ ಪಡೆಯಲು ಅಥವಾ ಹಣ ಜಮಾ ಆಗಿದೆಯೋ ಇಲ್ಲವೋ ಎಂದು ತಿಳಿದು ಕೊಳ್ಳಲು ಆಧಾರ್ ಲಿಂಕ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಕೇಂದ್ರ ಸರ್ಕಾರದಿಂದ ಯಾವುದೇ ಗ್ಯಾರಂಟಿ ಇಲ್ಲದೇ 10 ಲಕ್ಷ ರೂ.ವರೆಗೆ ಸಾಲ ಸೌಲಭ್ಯ
- ಅತೀ ಕಡಿಮೆ ಬಡ್ಡಿಗೆ ವೈಯಕ್ತಿಕ ಸಾಲ ಕೊಡುವ ಬ್ಯಾಂಕ್ ಗಳ ಪಟ್ಟಿ ಇಲ್ಲಿದೆ
- ಮನೆ ಇಲ್ಲದವರಿಗೆ, ಸ್ವಂತ ಮನೆ ಕಟ್ಟಲು ಕೇಂದ್ರ ಸರ್ಕಾರದಿಂದ ಸಾಲ ಮತ್ತು ಸಹಾಯಧನಕ್ಕೆ ಅರ್ಜಿ ಆಹ್ವಾನ
- ಹಾಲಿನ ಪ್ರೋತ್ಸಾಹ ಧನ ನೀಡಲು ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಹೀಗೆ ಚೆಕ್ ಮಾಡಿ
- ಜಗದೀಶ್ ಶೆಟ್ಟರ್ ಬಿಜೆಪಿಗೆ ಮತ್ತೆ ಸೇರ್ಪಡೆ ; ಇಂದು ದೆಹಲಿಯ ಬಿಜೆಪಿ ಆಫೀಸ್ ನಲ್ಲಿ ಅಧಿಕೃತವಾಗಿ ಘರ್ ವಾಪಾಸ್!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group





