ಫಿಕ್ಸೆಡ್ ಡೇಪೊಸಿಟ್ ಸ್ಕೀಮ್ ( Fixed Deposit Scheme ) ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಹಲವಾರು ಜನರು ಈ ಫಿಕ್ಸೆಡ್ ಡೇಪೋಸಿಟ್ ನಲ್ಲಿ ಹಣ ಹೂಡಿಕೆ(Invest) ಮಾಡಿದ್ದಾರೆ. ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆರಂಭಿಸಿದ ಅಮೃತ್ ಕಳಶ್ ವಿಶೇಷ ಎಫ್ ಡಿ ಸ್ಕೀಮ್ (SBI Amrit Kalash FD scheme) ನ ದಿನಾಂಕವನ್ನು ವಿಸ್ತರಿಸಿದ್ದಾರೆ. ಇದು ಎಲ್ಲರಿಗೂ ಖುಷಿಯ ವಿಚಾರ ಆಗಿದೆ. ಇದರ ಬಗ್ಗೆ ಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
SBI ಅಮೃತ್ ಕಳಶ್ ಎಫ್ ಡಿ ಸ್ಕೀಮ್ (SBI Amrit Kalash FD scheme) :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (state bank of india)ದ ಫಿಕ್ಸೆಡ್ ಡೆಪಾಸಿಟ್ (FD) ಸ್ಕೀಮ್ಗಳಲ್ಲಿ ಅಮೃತ್ ಕಳಶ್ ಫಿಕ್ಸೆಡ್ ಡೆಪಾಸಿಟ್ ಪ್ಲಾನ್ (SBI Amrit Kalash FD Scheme) ಹೆಚ್ಚು ಜನರ ಗಮನ ಸೆಳೆದಿದೆ.
ಬ್ಯಾಂಕ್ ಆಫ್ ಇಂಡಿಯಾ ಆರಂಭಿಸಿದ ಅಮೃತ್ ಕಳಶ್ ವಿಶೇಷ ಎಫ್ ಡಿ ಸ್ಕೀಮ್ 2023ರ ಫೆಬ್ರುವರಿ 15ರಂದು ಎಸ್ ಬಿಐ ಆರಂಭಿಸಲಾಗಿತ್ತು. ಆದರೆ ಈ ಹಿಂದೆ ಆಗಸ್ಟ್ 15ರವರೆಗೆ ಮಾತ್ರ ಇದ್ದ ಈ ಸ್ಕೀಮ್ ಅನ್ನು ಗ್ರಾಹಕರ ಬೇಡಿಕೆಯ ಕಾರಣಕ್ಕೆ ಒಂದೆರಡು ಬಾರಿ ಕಾಲಾವಕಾಶ ಹೆಚ್ಚಿಸಲಾಗಿದೆ. ಆದರೆ ಇದೀಗ ಈ ಸ್ಕೀಮ್ ಡಿಸೆಂಬರ್ 31ರವರೆಗೂ ತೆರೆದಿರುತ್ತದೆ. ಇದು ಖುಷಿಯ ವಿಚಾರ ನೀಡಿದೆ.

ಅಮೃತ್ ಕಳಶ್ ಸ್ಕೀಮ್ನಲ್ಲಿ ಬಡ್ಡಿ ಹಣ ಪಾವತಿ, ಟಿಡಿಎಸ್ ಕಡಿತದ ವಿವರ ಹೀಗಿದೆ :
ಎಸ್ಬಿಐನ 400 ದಿನಗಳ ಅಮೃತ್ ಕಳಶ್ ಸ್ಕೀಮ್ನಲ್ಲಿ ಗ್ರಾಹಕರಿಗೆ ಸಿಗುವ ಬಡ್ಡಿ(Interest) ಹಣಕ್ಕೆ ಟಿಡಿಎಸ್(TDS) ಕಡಿತ ಮಾಡಲಾಗುತ್ತದೆ. ಇನ್ನು, ಬಡ್ಡಿ ಹಣವನ್ನು ಠೇವಣಿಯಲ್ಲೇ ಮುಂದುವರಿಸುವ ಬದಲು ಗ್ರಾಹಕ ಖಾತೆಗೆ ವರ್ಗಾಯಿಸಲಾಗುತ್ತದೆ. ಮಾಸಿಕವಾಗಿಯಾದರೂ ಬಡ್ಡಿಹಣ ಪಡೆಯಬಹುದು. ಅಥವಾ ಮೂರು ತಿಂಗಳಿಗೊಮ್ಮೆಯೋ ಅಥವಾ ಅರ್ಧ ವರ್ಷಕ್ಕೆ ಒಮ್ಮೆಯೋ ಬಡ್ಡಿಹಣವನ್ನು ಪಡೆಯುವ ಅವಕಾಶ ಗ್ರಾಹಕರಿಗೆ ಇರುತ್ತದೆ. ಬಡ್ಡಿ ಹಣಕ್ಕೆ ಟಿಡಿಎಸ್ ಕಡಿತವಾದರೂ ಆ ಹಣವನ್ನು ಐಟಿ ರಿಟರ್ನ್(IT Returns) ಸಲ್ಲಿಸುವ ವೇಳೆ ಡಿಡಕ್ಷನ್ ಕ್ಲೈಮ್ ( Deduction Claim ) ಮಾಡಬಹುದು.
ಈ ಸ್ಕೀಮ್ ನಲ್ಲಿ ನೀಡಲಾದ ಬಡ್ಡಿ ದರದ ವಿವರ ಹೀಗಿದೆ :
ಅಮೃತ್ ಕಳಶ್ ಸ್ಕೀಮ್ 400 ದಿನಗಳ ಠೇವಣಿ ಯೋಜನೆಯಾಗಿದೆ. ಹಾಗೆಯೇ ಇದರಲ್ಲಿ ಡೇಪೋಸಿಟ್ ಮಾಡಿದ ಪ್ರತಿಯೊಬ್ಬರಿಗೂ ಗರಿಷ್ಠ ಬಡ್ಡಿ ಸಿಗುತ್ತದೆ. ಈ ಸ್ಕೀಮ್ ನಲಿ ಸಾಮಾನ್ಯ ಎಸ್ ಬಿಐ ಗ್ರಾಹಕರಿಗೆ ಶೇ. 7.1 ಮತ್ತು ಹಿರಿಯ ನಾಗರಿಕರಿಗೆ ಶೇ. 7.6ರಷ್ಟು ಬಡ್ಡಿಯನ್ನು ನೀಡಿದೆ.
ಎಸ್ ಬಿಐ ಅಮೃತ್ ಕಳಶ್ ಎಫ್ ಡಿ ಸ್ಕೀಮ್ ಅಂದರೆ ಏನು ? ಅದು ಹೇಗೆ ಗ್ರಾಹಕರಿಗೆ ಉಪಯೋಗ ಆಗಲಿದೆ ?
ಈ ಸ್ಕೀಮ್ 400 ದಿನಗಳ ಅವಧಿಯದ್ದಾದ್ದರಿಂದ ಅಮೃತ್ ಕಳಶ್ ಎಂದು ಹೆಸರು ಇಡಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶುರು ಮಾಡಿದ ಅಮೃತ್ ಕಳಶ್ ಎಫ್ ಡಿ ಸ್ಕೀಮ್ ಇತರ ನಿಶ್ಚಿತ ಠೇವಣಿಯಂತೆಯೇ ಇದ್ದು. ಉತ್ತಮ ಬಡ್ಡಿ ದರವನ್ನು ನೀಡುತ್ತದೆ.
ಆದರೆ ಈ ಸ್ಕೀಮ್ ನ ಅವಧಿಯಲ್ಲಿ ಮತ್ತು ಬಡ್ಡಿದರಲ್ಲಿ ಮಾತ್ರ ವ್ಯತ್ಯಾಸ ಇರುತ್ತದೆ.
ಇದರಲ್ಲಿ ಠೇವಣಿ ಅವಧಿ 400 ದಿನ ಇದೆ.
ಸಾಮಾನ್ಯ ಗ್ರಾಹಕರಿಗೆ ಈ ಅವಧಿ ಠೇವಣಿಗೆ ಶೇ. 7.1ರಷ್ಟು ಬಡ್ಡಿ ಸಿಗುತ್ತದೆ.
ಮತ್ತು ಹಿರಿಯ ನಾಗರಿಕರ ಠೇವಣಿಗೆ ಶೇ. 7.6ರಷ್ಟು ಬಡ್ಡಿ ಕೊಡಲಾಗುತ್ತದೆ.
ಎಸ್ ಬಿಐ ಅಮೃತ್ ಕಳಶ್ ಎಫ್ ಡಿ ಸ್ಕೀಮ್ ನಲ್ಲಿ ನೀಡಲಾದ ಇತರ ಲಾಭಗಳು ಈ ಕೆಳಗಿನಂತಿದೆ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ 400 ದಿನಗಳ ವಿಶೇಷ ಎಫ್ ಡಿ ಸ್ಕೀಮ್ ಭಾರತೀಯರಿಗೆ ಮಾತ್ರವಲ್ಲ ಎನ್ ಆರ್ ಐ ಗ್ರಾಹಕರಿಗೂ ಲಭ್ಯ ಇದೆ.
ಎರಡು ಕೋಟಿ ರೂಗಿಂತ ಕಡಿಮೆ ಮೊತ್ತದ ಹಣವನ್ನು ಠೇವಣಿ ಇಡಬಹುದು.
ಈ ಠೇವಣಿಯಿಂದ ಬರುವ ಬಡ್ಡಿಯನ್ನು ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಪಡೆಯುವ ಅವಕಾಶ ಇದೆ. ಈ ಬಡ್ಡಿ ಹಣವು ಗ್ರಾಹಕರ ಖಾತೆಗೆ ಠೇವಣಿ ಆಗುತ್ತದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಅಮೃತ್ ಕಳಶ್ ಸ್ಕೀಮ್ ನಲ್ಲಿ ವಿಶೇಷ ಠೇವಣಿಯ ಆಯ್ಕೆಯೂ ಇದ್ದು, ಇದರಲ್ಲಿ ಬಡ್ಡಿ ಹಣವು ಠೇವಣಿ ಅವಧಿ ಮುಗಿದು ಮೆಚ್ಯೂರ್ ಆದಾಗ ಒಟ್ಟಿಗೆ ಸಿಗುತ್ತದೆ.
ಅಮೃತ್ ಕಳಶ್ ಡೆಪಾಸಿಟ್ ಸ್ಕೀಮ್ ನಲ್ಲಿ ಬರುವ ಬಡ್ಡಿ ಹಣಕ್ಕೆ ಟಿಡಿಎಸ್ ಕಡಿತ ಮಾಡಲಾಗುತ್ತದೆ. ಐಟಿ ರಿಟರ್ನ್ ಫೈಲ್ ಮಾಡುವಾಗ ಇದನ್ನು ರೀಫಂಡ್ ಪಡೆಯುವ ಅವಕಾಶವೂ ಇರುತ್ತದೆ.
ಅಮೃತ್ ಕಳಶ್ ಸ್ಕೀಮ್ ನಲ್ಲಿ ಇಡಲಾಗುವ ಎಫ್ ಡಿಯಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಬಹುದು.
ಆದಷ್ಟು ಬೇಗ ಈ ಸ್ಕೀಮ್ ಗೆ ಅರ್ಜಿ ಸಲ್ಲಿಸಿ ಹಣವನ್ನು ಡಿಸೆಂಬರ್ 31 ರ ಒಳಗೆ ಡೇಪೋಸಿಟ್(Deposit) ಮಾಡಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group





