ನೀಡ್ಸ್ ಆಫ್ ಪಬ್ಲಿಕ್ ಡೆಸ್ಕ್: 2026ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್ಸಿಬಿ ಭರ್ಜರಿ ಜಯ ಸಾಧಿಸಿದ ಆ ರೋಚಕ ಕ್ಷಣಗಳನ್ನು ಮತ್ತೊಮ್ಮೆ ಮೆಲುಕು ಹಾಕಲು, ನಮ್ಮ ಪತ್ರಿಕೆಯ ಓದುಗರಾದ ಮೇಡ್ಲೇರಿಯ ಹನುಮಂತ.ಆರ್. ಬೋವಿ ಅವರು ಬರೆದು ಕಳುಹಿಸಿರುವ ವಿಶೇಷ ಅತಿಥಿ ಲೇಖನ ಇಲ್ಲಿದೆ.
“ಯುವರಾಜನಂಗಳದಲ್ಲಿ ರಾಜನ ಆರ್ಭಟ”
‘ಡಿಪೆಂಡಿಂಗ್ ಚಾಂಪಿಯನ್ಸ್ ನ ಅಟ್ಯಾಕಿಂಗ್ ಆಟಕ್ಕೆ ಒಲಿದ ಎರಡನೇ ಕಪ್’
ಟಾಟಾ ಐಪಿಎಲ್-2026 ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಸತತ ಎರಡನೇ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಪ್ ಅನ್ನು ತಮ್ಮದಾಗಿಸಿಕೊಂಡಿತು.
ಪ್ರಪಂಚದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಹಮದಾಬಾದ್ ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಟಾಟಾ ಐಪಿಎಲ್ ನ 19ನೇ ಆವೃತ್ತಿಯ ಫೈನಲ್ ಪಂದ್ಯ ಡಿಪೆಂಡಿಂಗ್ ಚಾಂಪಿಯನ್ ಆರ್ ಸಿಬಿ ಮತ್ತು ಗುಜರಾತ್ ಟೈಟನ್ಸ್ ತಂಡಗಳ ನಡುವೆ ಜರುಗಿತು

ಮೊದಲಿಗೆ ಟಾಸ್ ಸೋತು ಬ್ಯಾಟಿಂಗ್ ಮಾಡಲು ಬಂದ ಗುಜರಾತ್ ತಂಡದ ಪ್ರಸ್ತುತ ಸಾಲಿನ ಅತಿ ಹೆಚ್ಚು ರನ್ ಗಳಿಸಿರುವವರ ಅಗ್ರ ಪಟ್ಟಿಯಲ್ಲಿ ಎರಡು ಮತ್ತು ಮೂರನೇ ಕ್ರಮಾಂಕದಲ್ಲಿರುವ ಗುಜರಾತ್ ತಂಡದ ನಾಯಕ ಶುಭಾಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಬೃಹತ್ ಮೊತ್ತ ಸೇರಿಸುವ ಆತ್ಮವಿಶ್ವಾಸದಲ್ಲಿ ಅಂಕಣಕ್ಕಿಳಿದು ಮೊದಲ ಓವರ್ ನಲ್ಲೇ 13 ರನ್ ಗಳಿಸಿದರು.
ಆದರೆ ವೈಟ್ ಬಾಲ್ ಕ್ರಿಕೆಟ್ ಪಂದ್ಯಗಳಲ್ಲಿ ತಾನು ಹಾಡಿದ ತಂಡ ಫೈನಲ್ ಪ್ರವೇಶಿಸಿದರೆ ಎಂದೂ ಸೋಲನ್ನು ಕಂಡಿಲ್ಲ ಎಂಬ ಖ್ಯಾತಿಗೊಳಗಾದ ಆರ್ಸಿಬಿಯ ಸ್ಪೀಡ್ ಬೌಲರ್ ಜೋಶ್ ಹೇಜಲ್ ವುಡ್ ತಮ್ಮ ಖಾತೆಯ ಮೊದಲನೇ ಓವರ್ ನ ಎರಡನೇ ಎಸೆತದಲ್ಲಿ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಉತ್ತಮ ಲಯದಲ್ಲಿದ್ದ ಗುಜರಾತ್ ತಂಡದ ನಾಯಕ ಶುಭ್ಮನ್ ಗಿಲ್ (10 ರನ್)ಅವರನ್ನು ಪೆವಿಲಿಯನ್ ಗೆ ಕಳುಹಿಸಿದರು.
ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವವರ ಅಗ್ರ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ತಂಡದ ನಾಲ್ಕನೇ ಓವರ್ ನಲ್ಲಿ ಗುಜರಾತ್ ತಂಡದ ಮತ್ತೊಬ್ಬ ಆರಂಭಿಕ ಆಟಗಾರ ಸಾಯಿ ಸುದರ್ಶನ್ (12 ರನ್) ವಿಕೆಟ್ ಪಡೆದು ಗುಜರಾತ್ ತಂಡದ ಅಬ್ಬರದ ಆರಂಭಿಕ ಆಟದ ಆಸೆಗೆ ತಣ್ಣೀರೆರೆಚಿದರು. ಗುಜರಾತ್ ತಂಡ ಪವರ್ ಪ್ಲೇ ಮುಕ್ತಾಯಕ್ಕೆ ಎರಡು ವಿಕೆಟ್ ನಷ್ಟಕ್ಕೆ ಕೇವಲ 45 ರನ್ ಕಲೆ ಹಾಕಲಷ್ಟೇ ಸಾಧ್ಯವಾಯಿತು.
ಉಳಿದ 14 ಓವರ್ ಗಳಲ್ಲಿ ಆರ್ ಸಿ ಬಿ ಬೌಲರ್ ಗಳು ಶಿಸ್ತುಭದ್ದಿನ ದಾಳಿ ಮಾಡಿ ಸತತ ವಿಕೆಟ್ ಕಬಳಿಸಿದರು. ಆರ್ ಸಿ ಬಿ ಪರ ರಸಿಕ್ ಸಲಾಂದರ್-3, ಭುವನೇಶ್ವರ್ ಕುಮಾರ್ ಹಾಗೂ ಜೋಶ್ ಹೇಜಲ್ ವುಡ್ ತಲಾ 2 ಮತ್ತು ಕ್ರುನಲ್ ಪಾಂಡ್ಯ 1 ವಿಕೆಟ್ ಪಡೆದು ಗುಜರಾತ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು. ಗುಜರಾತ್ ಪರ ಒಂದು ಜೀವದಾನ ಪಡೆದಿದ್ದ ವಾಷಿಂಗ್ಟನ್ ಸುಂದರ್ ತಮ್ಮ ಐಪಿಎಲ್ ವೃತ್ತಿ ಜೀವನದ ಮೂರನೇ ಅರ್ಧ ಶತಕ ಬಾರಿಸಿ ತಂಡ 150 ರನ್ ಗಳ ಗಡಿ ದಾಟಲು ಆಸರೆಯಾದರು.
ಪಂದ್ಯದ ಮೊದಲ ಇನ್ನಿಂಗ್ಸ್ ಮುಕ್ತಾಯಕ್ಕೆ ಗುಜರಾತ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಸೇರಿಸಿ ಎದುರಾಳಿ ತಂಡಕ್ಕೆ 156 ರನ್ ಗಳ ಗುರಿ ನೀಡಿತು.
ಅಹಮದಾಬಾದ್ ನ ಬೌನ್ಸರ್ ಪಿಚ್ ನಲ್ಲಿ 156 ರನ್ ಗಳ ಮೊತ್ತವನ್ನು ಬೆನ್ನತ್ತಿದ ಆರ್ಸಿಬಿ ತಂಡದ ಆರಂಭಿಕ ಜೋಡಿಯಾದ ವಿರಾಟ್ ಕೊಹ್ಲಿ ಮತ್ತು ವೆಂಕಟೇಶ್ ಅಯ್ಯರ್ ಅಬ್ಬರದ ಬ್ಯಾಟಿಂಗ್ ಮಾಡಿದರು. 16 ಬಾಲ್ ಗಳಲ್ಲಿ 32 ರನ್ ಸೇರಿಸಿದ ವೆಂಕಟೇಶ್ಅಯ್ಯರ್ ಅವರು ಮೊಹಮ್ಮದ್ ಸಿರಾಜ್ ಗೆ ವಿಕೆಟ್ ಒಪ್ಪಿಸಿದರು.

ಮೂರನೇ ಕ್ರಮಾಂಕದಲ್ಲಿ ಬಂದ ದೇವದತ್ ಪಡಿಕಲ್ ಆಟ ಕೂಡ 1 ರನ್ ಗೆ ಮುಕ್ತಾಯಗೊಂಡಿತು.
ಒಂದೆಡೆ ವಿಕೆಟ್ ಉರುಳಿದರು ಛಲ ಬಿಡದೆ ಹೋರಾಡಿದ ವಿರಾಟ್ ಕೊಹ್ಲಿ ಕಗಿಸೋ ರಬಾಡ ರವರ ಖಾತೆಯ ಎರಡನೇ ಓವರ್ ನಲ್ಲಿ 3-ಬೌಂಡರಿ ಮತ್ತು 1-ಸಿಕ್ಸರ್ ನೊಂದಿಗೆ 19 ರನ್ ಗಳಿಸಿ ಪವರ್ ಪ್ಲೇ ಅಂತ್ಯಕ್ಕೆ ಆರ್ಸಿಬಿ ತಂಡ ಎರಡು ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿ ಪಂದ್ಯವನ್ನು ಹಿಡಿತದಲ್ಲಿಟ್ಟುಕೊಂಡರು.
ಆದರೆ ಗುಜರಾತ್ ತಂಡದ ಪರ ಒಂಭತ್ತನೆ ಓವರ್ ಬೌಲಿಂಗ್ ಮಾಡಲು ಬಂದ ರಶೀದ್ ಖಾನ್ ತಮ್ಮ ಖಾತೆಯ ಮೊದಲ ಓವರ್ ನಲ್ಲೇ ಆರ್ ಸಿಬಿ ತಂಡದ ನಾಯಕ ರಜತ್ ಪಾಟೀದಾರ್ ಮತ್ತು ಕ್ರುನಾಲ್
ಪಾಂಡ್ಯ ವಿಕೆಟ್ ಪಡೆದು ಗುಜರಾತ್ ತಂಡದಲ್ಲಿ ಗೆಲುವಿನ ಭರವಸೆ ಮೂಡಿಸಿದರು.
ಆರ್ಸಿಬಿ ತಂಡ 91 ರನ್ನಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ವಿರಾಟ್ ಕೊಹ್ಲಿ ಜೊತೆಗೂಡಿದ ಟೀಮ್ ಡೇವಿಡ್ ಸಮಯೋಚಿತ 24 ರನ್ ಸಿಡಿಸಿ ಹರ್ಷದ್ ಖಾನ್ ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಜಿತೇಶ್ ಶರ್ಮಾ ಜೊತೆಗೂಡಿದ ವಿರಾಟ್ ಕೊಹ್ಲಿ ತಮ್ಮ ಐಪಿಎಲ್ ವೃತ್ತಿ ಜೀವನದ ವೇಗದ ಮತ್ತು 68ನೇ ಅರ್ಧಶತಕ ಸಿಡಿಸಿ ಅಜೇಯ 42 ಬಾಲ್ ಗಳಲ್ಲಿ 75 ರನ್ ಗಳಿಸಿ ತಾವೇಕೆ ಚೇಸ್ ಮಾಸ್ಟರ್ ಎಂದು ಮತ್ತೊಮ್ಮೆ ನಿರೂಪಿಸಿ ಆರ್ ಸಿಬಿ ತಂಡಕ್ಕೆ ಎರಡನೇ ಬಾರಿ ಐಪಿಎಲ್ ಕಪ್ ಅನ್ನು ಗೆಲ್ಲಿಸಿಕೊಟ್ಟರು.

ಲೇಖನ: ಹನುಮಂತ.ಆರ್. ಬೋವಿ
ಮೇಡ್ಲೇರಿ, ರಾಣೇಬೆನ್ನೂರು.
✍️ ನಿಮಗೂ ಬರೆಯುವ ಆಸಕ್ತಿ ಇದೆಯೇ? ‘ನೀಡ್ಸ್ ಆಫ್ ಪಬ್ಲಿಕ್’ ನಿಮಗೊಂದು ವೇದಿಕೆ!
ಕ್ರೀಡೆ, ಸಿನಿಮಾ, ಪ್ರಚಲಿತ ವಿದ್ಯಮಾನಗಳು, ಕೃಷಿ, ಅಥವಾ ನಿಮ್ಮೂರಿನ ಸ್ಥಳೀಯ ಸಮಸ್ಯೆಗಳ ಬಗ್ಗೆ ಲೇಖನ/ವರದಿ ಬರೆಯುವ ಹವ್ಯಾಸ ನಿಮಗಿದೆಯೇ? ಹಾಗಾದರೆ ತಡವೇಕೆ? ನಿಮ್ಮ ಆಸಕ್ತಿದಾಯಕ ಬರಹಗಳನ್ನು ನಮಗೆ ಕಳುಹಿಸಿಕೊಡಿ.
ಆಯ್ಕೆಯಾದ ಅತ್ಯುತ್ತಮ ಲೇಖನಗಳನ್ನು ನಿಮ್ಮ ಫೋಟೋ ಮತ್ತು ಹೆಸರಿನೊಂದಿಗೆ ನಮ್ಮ ‘ನೀಡ್ಸ್ ಆಫ್ ಪಬ್ಲಿಕ್’ ಅಧಿಕೃತ ಪೋರ್ಟಲ್ನಲ್ಲಿ ಪ್ರಕಟಿಸುತ್ತೇವೆ!
ಇದೇ ರೀತಿಯ ನಿಖರ ಸುದ್ದಿಗಳಿಗೆ ನಮ್ಮ ನೀಡ್ಸ್ ಪಬ್ಲಿಕ್ ಆಪ್ ಡೌನ್ಲೋಡ್ App ಮಾಡಿ
ಈ ಮಾಹಿತಿಗಳನ್ನು ಓದಿ:

“‘ನೀಡ್ಸ್ ಆಫ್ ಪಬ್ಲಿಕ್ ಡೆಸ್ಕ್’ (Needs of Public Desk) ಎಂಬುದು ನಮ್ಮ ನ್ಯೂಸ್ ಪೋರ್ಟಲ್ನ ಅಧಿಕೃತ ಸಂಪಾದಕೀಯ ವಿಭಾಗವಾಗಿದೆ. ಯಾವುದೇ ವ್ಯಕ್ತಿಗತ ಅಭಿಪ್ರಾಯಗಳಿಲ್ಲದೆ, ಕೇವಲ ನೈಜ ಮತ್ತು ಅಧಿಕೃತ ಮಾಹಿತಿಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮಹತ್ತರ ಜವಾಬ್ದಾರಿಯನ್ನು ಈ ಡೆಸ್ಕ್ ಹೊಂದಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಬ್ರೇಕಿಂಗ್ ನ್ಯೂಸ್, ಸರ್ಕಾರದ ಹೊಸ ಮಾರ್ಗಸೂಚಿಗಳು, ಪ್ರೆಸ್ ರಿಲೀಸ್ಗಳು, ಮತ್ತು ಸಾಮಾಜಿಕ ಜಾಲತಾಣದ ಟ್ರೆಂಡಿಂಗ್ ಸುದ್ದಿಗಳು ಸೇರಿದಂತೆ ಪ್ರಮುಖ ವಿದ್ಯಮಾನಗಳನ್ನು ಯಾವುದೇ ವಿಳಂಬವಿಲ್ಲದೆ ಸಕಾಲದಲ್ಲಿ ಪ್ರಕಟಿಸುವುದು ಇದರ ಪ್ರಮುಖ ಉದ್ದೇಶ. ‘ವೇಗ ಮತ್ತು ವಿಶ್ವಾಸಾರ್ಹತೆ’ಯ ಸಂಕೇತವಾಗಿರುವ ಈ ಡೆಸ್ಕ್ ಅನ್ನು ನಮ್ಮ ನುರಿತ ಪತ್ರಕರ್ತರ ತಂಡವು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡುತ್ತದೆ.”


WhatsApp Group




Leave a Reply