DHFWS kolar

DHFWS Kolar Recruitment 2026: 15 ವೈದ್ಯಾಧಿಕಾರಿ, ನರ್ಸ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS) ‘ನಮ್ಮ ಕ್ಲಿನಿಕ್’ ಯೋಜನೆಯಡಿ 15 ವೈದ್ಯಾಧಿಕಾರಿ, ಶುಶ್ರೂಷಕ ಹಾಗೂ ತಾಂತ್ರಿಕ ಹುದ್ದೆಗಳ ಭರ್ತಿಗೆ ನೇರ ಸಂದರ್ಶನ (Walk-in Interview) ನಡೆಸುತ್ತಿದೆ. ವಿದ್ಯಾರ್ಹತೆ, ವೇತನ, ಸಂದರ್ಶನದ ದಿನಾಂಕ, ಸ್ಥಳ ಹಾಗೂ ಸಂಪೂರ್ಣ ಮಾಹಿತಿ ಇಲ್ಲಿದೆ.,

Highlights:

  • ನೇಮಕಾತಿ ಸಂಸ್ಥೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಕೋಲಾರ (DHFWS Kolar – PM-ABHIM / ನಮ್ಮ ಕ್ಲಿನಿಕ್).
  • ಖಾಲಿ ಹುದ್ದೆಗಳು: 15 (ಗುತ್ತಿಗೆ ಆಧಾರಿತ).
  • ಸಂದರ್ಶನ ನಡೆಯುವ ಸಮಯ: ಪ್ರತಿ ಸೋಮವಾರ ಬೆಳಿಗ್ಗೆ 11:00 ಗಂಟೆಗೆ (27-ಜುಲೈ-2026 ರಿಂದ ಪ್ರಾರಂಭ).
  • ಮಾಸಿಕ ವೇತನ: ರೂ. 15,667/- ದಿಂದ ರೂ. 60,000/- ರವರೆಗೆ.

ಕೋಲಾರ ಜಿಲ್ಲಾ ಆರೋಗ್ಯ ಇಲಾಖೆ ನೇಮಕಾತಿ 2026: 15 ಹುದ್ದೆಗಳಿಗೆ ನೇರ ಸಂದರ್ಶನ (Walk-in Interview)

ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS) ವತಿಯಿಂದ ‘ನಮ್ಮ ಕ್ಲಿನಿಕ್’ (PM-ABHIM) ಯೋಜನೆಯಡಿ ಖಾಲಿ ಇರುವ ಒಟ್ಟು 15 ವಿವಿಧ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. 2026-27ನೇ ಸಾಲಿಗೆ ಗುತ್ತಿಗೆ ಆಧಾರದ ಮೇಲೆ ವೈದ್ಯಾಧಿಕಾರಿ, ಶುಶ್ರೂಷಕ ಅಧಿಕಾರಿ ಹಾಗೂ ಇತರೆ ತಾಂತ್ರಿಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನ (Walk-in Interview) ಮೂಲಕ ಆಯ್ಕೆ ನಡೆಸಲಾಗುತ್ತಿದೆ.

dhfws

ಹುದ್ದೆಗಳ ವಿವರ, ವಿದ್ಯಾರ್ಹತೆ ಮತ್ತು ವೇತನ (Vacancy, Qualification & Salary)

ಹುದ್ದೆಯ ಹೆಸರು (Post Name)ಒಟ್ಟು ಹುದ್ದೆಗಳುನಿಗದಿತ ಶೈಕ್ಷಣಿಕ ವಿದ್ಯಾರ್ಹತೆ (Qualification)ಮಾಸಿಕ ವೇತನ (ರೂ. ಗಳಲ್ಲಿ)ಗರಿಷ್ಠ ವಯೋಮಿತಿ
ವೈದ್ಯಾಧಿಕಾರಿಗಳು (Medical Officer)08ಎಂ.ಬಿ.ಬಿ.ಎಸ್ (MBBS) ಪದವಿ ಮತ್ತು ಕರ್ನಾಟಕ ವೈದ್ಯಕೀಯ ಮಂಡಳಿ (KMC) ನೋಂದಣಿ ಕಡ್ಡಾಯ. PDFರೂ. 60,000/-60 ವರ್ಷಗಳು
ಕಿರಿಯ ಪ್ರಯೋಗಾಶಾಲಾ ತಾಂತ್ರಿಕ ಅಧಿಕಾರಿಗಳು (JLTO)02ಎಸ್‌ಎಸ್‌ಎಲ್‌ಸಿ/ಪಿಯುಸಿ ಹಾಗೂ ಪ್ರಯೋಗಶಾಲಾ ತಂತ್ರಜ್ಞತೆಯ ಡಿಪ್ಲೋಮೋ (DMLT), ಕರ್ನಾಟಕ ಅರೆವೈದ್ಯಕೀಯ ಮಂಡಳಿ ನೋಂದಣಿ ಮತ್ತು ಕಂಪ್ಯೂಟರ್ ಸಾಕ್ಷರತೆ. PDFರೂ. 16,067/-45 ವರ್ಷಗಳು
ಶುಶ್ರೂಷಕ ಅಧಿಕಾರಿಗಳು (Nursing Officer)04ಬಿ.ಎಸ್‌ಸಿ ನರ್ಸಿಂಗ್ / ಜಿಎನ್‌ಎಂ (B.Sc Nursing / GNM), ಕರ್ನಾಟಕ ನರ್ಸಿಂಗ್ ಕೌನ್ಸಿಲ್ (KNC) ನೋಂದಣಿ ಮತ್ತು ಕಂಪ್ಯೂಟರ್ ಸಾಕ್ಷರತೆ. PDFರೂ. 16,067/-45 ವರ್ಷಗಳು
ಕಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು (JPHCO)01ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ (ANM/LHVO) ತರಬೇತಿ, ಕರ್ನಾಟಕ ಅರೆವೈದ್ಯಕೀಯ ಮಂಡಳಿ ನೋಂದಣಿ ಮತ್ತು ಕಂಪ್ಯೂಟರ್ ಸಾಕ್ಷರತೆ.ರೂ. 15,667/-40 ವರ್ಷಗಳು

ಮುಖ್ಯವಾದ ಷರತ್ತುಗಳು ಮತ್ತು ಪ್ರಮುಖ ಸೂಚನೆಗಳು

  1. ಕಂಪ್ಯೂಟರ್ ಪ್ರಮಾಣಪತ್ರ ಕಡ್ಡಾಯ: ವೈದ್ಯಾಧಿಕಾರಿ ಹುದ್ದೆಯನ್ನು ಹೊರತುಪಡಿಸಿ, ಉಳಿದೆಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಿಯೋನಿಕ್ಸ್ (KEONICS) ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಕಂಪ್ಯೂಟರ್ ತರಬೇತಿ ಪ್ರಮಾಣಪತ್ರವನ್ನು ಹೊಂದಿರಬೇಕು.
  2. ಕೌನ್ಸಿಲ್ ನೋಂದಣಿ: ಅಭ್ಯರ್ಥಿಗಳು ತಮ್ಮ ಕೆ.ಎಂ.ಸಿ (KMC), ಕೆ.ಎನ್‌ಸಿ (KNC) ಅಥವಾ ಅರೆವೈದ್ಯಕೀಯ ಮಂಡಳಿಯ ನೋಂದಣಿ ಪ್ರಮಾಣಪತ್ರವನ್ನು ಮೂಲ ದಾಖಲೆಗಳ ಪರಿಶೀಲನೆ ಸಮಯದಲ್ಲಿ ಕಡ್ಡಾಯವಾಗಿ ಹಾಜರುಪಡಿಸಬೇಕು.
  3. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ: ರೋಸ್ಟರ್ ಮತ್ತು ಮೆರಿಟ್-ಕಮ್ ಆಧಾರದಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಫಲಿತಾಂಶಕ್ಕೆ ಕಾಯುತ್ತಿರುವ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದಿಲ್ಲ.

ನೇರ ಸಂದರ್ಶನದ ವಿವರ (Walk-in Interview Details)

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೇಟಾ, ಮೂಲ ಅಂಕಪಟ್ಟಿಗಳು ಮತ್ತು ಎಲ್ಲಾ ಶೈಕ್ಷಣಿಕ ದಾಖಲೆಗಳ ಒಂದು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು.

  • ಸಂದರ್ಶನ ನಡೆಯುವ ದಿನಾಂಕ: 27-ಜುಲೈ-2026 ರಿಂದ ಪ್ರಾರಂಭಿಸಿ ಪ್ರತಿ ಸೋಮವಾರ.
  • ಸಂದರ್ಶನದ ಸಮಯ: ಬೆಳಿಗ್ಗೆ 11:00 ಗಂಟೆಗೆ.
  • ಸಂದರ್ಶನ ನಡೆಯುವ ಸ್ಥಳ (Venue):ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ,ಕೆ.ಎನ್.ಟಿ.ಬಿ. ಸ್ಯಾನಿಟೋರಿಯಂ ಆಸ್ಪತ್ರೆ ಆವರಣ,ಬಂಗಾರಪೇಟೆ ರಸ್ತೆ, ಕೋಲಾರ – 563102.

DHFWS Kolar Recruitment 2026 –: Important Links

ವರದಿ: ಲಿಂಗರಾಜ, ನೀಡ್ಸ್ ಆಫ್ ಪಬ್ಲಿಕ್




WhatsApp Group Join Now
Telegram Group Join Now

Leave a Reply

Your email address will not be published. Required fields are marked *


Popular Categories