jindal scholarship 2026

ಪ್ರತಿ ತಿಂಗಳು ₹3,600 ನೀಡುವ ‘ಜಿಂದಾಲ್ ಸ್ಕಾಲರ್‌ಶಿಪ್ 2026-27’ ಅರ್ಜಿ ಆರಂಭ; ಇಂದೇ ಅಪ್ಲೈ ಮಾಡಿ!

ಕರ್ನಾಟಕದ ಪಿಯುಸಿ, ಐಟಿಐ, ಡಿಗ್ರಿ, ಇಂಜಿನಿಯರಿಂಗ್ ಹಾಗೂ ಮೆಡಿಕಲ್ ವಿದ್ಯಾರ್ಥಿಗಳಿಗೆ ಸೀತಾರಾಮ್ ಜಿಂದಾಲ್ ಫೌಂಡೇಶನ್ ವತಿಯಿಂದ ವಾರ್ಷಿಕ ₹15,000 ದಿಂದ ₹35,000 ವರೆಗೆ ಸ್ಕಾಲರ್‌ಶಿಪ್. ಅರ್ಜಿ ಸಲ್ಲಿಕೆ, ಅರ್ಹತೆ ಮತ್ತು ಬೇಕಾಗುವ ದಾಖಲೆಗಳ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

  • *ಅರ್ಜಿ ಆರಂಭ: ಜಿಂದಾಲ್ ಸ್ಕಾಲರ್‌ಶಿಪ್ 2026ರ ಅರ್ಜಿ ಪ್ರಕ್ರಿಯೆ ಶುರು!
  • *ನೆರವು: ಅರ್ಹ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ₹3,600 ಸ್ಕಾಲರ್‌ಶಿಪ್.
  • *ಸುವರ್ಣಾವಕಾಶ: ಪಿಯುಸಿ, ಡಿಗ್ರಿ, ಮೆಡಿಕಲ್ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ.

ಬೆಂಗಳೂರು: ಬಡತನ ಹಾಗೂ ಆರ್ಥಿಕ ಹಿಂಜರಿತವು ಯಾವೊಬ್ಬ ಪ್ರತಿಭಾವಂತ ವಿದ್ಯಾರ್ಥಿಯ ಉನ್ನತ ಶಿಕ್ಷಣಕ್ಕೂ ಅಡ್ಡಿಯಾಗಬಾರದು. ಆದರೆ, ಇಂದಿನ ದುಬಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಲಕ್ಷಾಂತರ ರೂಪಾಯಿ ಶುಲ್ಕ ಭರಿಸಿ ಡಿಗ್ರಿ, ಇಂಜಿನಿಯರಿಂಗ್, ಮೆಡಿಕಲ್ ಅಥವಾ ಸ್ನಾತಕೋತ್ತರ ಪದವಿ ಪಡೆಯುವುದು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಒಂದು ದೊಡ್ಡ ಸವಾಲೇ ಸರಿ. ಇಂತಹ ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ಬೆನ್ನಿಗೆ ನಿಂತು, ಅವರ ವಿದ್ಯಾಭ್ಯಾಸಕ್ಕೆ ಆಸರೆಯಾಗಲು ದೇಶದ ಪ್ರತಿಷ್ಠಿತ ಎನ್‌ಜಿಒ (NGO) ಸಂಸ್ಥೆಯೊಂದು ಇದೀಗ ಭರ್ಜರಿ ಸಿಹಿಸುದ್ದಿ ನೀಡಿದೆ.

ಹೌದು, ಕರ್ನಾಟಕ ಸೇರಿದಂತೆ ದೇಶಾದ್ಯಂತ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಪ್ರಮುಖ ಯೋಜನೆಗಳಲ್ಲಿ ಒಂದಾದ ‘ಸೀತಾರಾಮ್ ಜಿಂದಾಲ್ ಫೌಂಡೇಶನ್ ಸ್ಕಾಲರ್‌ಶಿಪ್’ (Sitaram Jindal Scholarship 2026-27) ಪ್ರಸ್ತುತ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರಿ ಸ್ಕಾಲರ್‌ಶಿಪ್‌ಗಳ (SSP/NSP) ಜೊತೆಗೆ ಹೆಚ್ಚುವರಿಯಾಗಿ ಖಾಸಗಿ ಸಂಸ್ಥೆಯಿಂದ ಸಿಗುವ ಅತಿದೊಡ್ಡ ಆರ್ಥಿಕ ನೆರವು ಇದಾಗಿದ್ದು, ಅರ್ಹ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ₹3,600 ರವರೆಗೆ (ವಾರ್ಷಿಕವಾಗಿ 15 ಸಾವಿರದಿಂದ 35 ಸಾವಿರ ರೂಪಾಯಿಗಳವರೆಗೆ) ವಿದ್ಯಾರ್ಥಿ ವೇತನ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.

ಹಾಗಾದರೆ, ಈ ಜಿಂದಾಲ್ ಸ್ಕಾಲರ್‌ಶಿಪ್‌ಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಅರ್ಹತೆಗಳೇನು? ಅರ್ಜಿ ಸಲ್ಲಿಸಲು ಬೇಕಾಗುವ ಕಡ್ಡಾಯ ದಾಖಲೆಗಳೇನು? ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಅಷ್ಟೇ ಅಲ್ಲದೇ ಅರ್ಜಿ ಸಲ್ಲಿಸುವ ಲೈವ್ ವಿಡಿಯೋ ಕೆಳಗೆ ಕೊಡಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಹಾಗೂ ಪೋಷಕರೂ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ

ಏನಿದು ಸೀತಾರಾಮ್ ಜಿಂದಾಲ್ ಸ್ಕಾಲರ್‌ಶಿಪ್?

ಸೀತಾರಾಮ್ ಜಿಂದಾಲ್ ಫೌಂಡೇಶನ್ (Sitaram Jindal Foundation) ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಒಂದು ಲಾಭರಹಿತ ಸಂಸ್ಥೆಯಾಗಿದೆ. ಸಮಾಜದ ಕಟ್ಟಕಡೆಯ ಬಡ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತನಾಗಬಾರದು ಎಂಬ ಸದುದ್ದೇಶದಿಂದ, 11ನೇ ತರಗತಿಯಿಂದ (PUC) ಹಿಡಿದು ಸ್ನಾತಕೋತ್ತರ ಪದವಿ (PG) ಮತ್ತು ಇಂಜಿನಿಯರಿಂಗ್/ಮೆಡಿಕಲ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಸಂಸ್ಥೆಯು ಪ್ರತಿ ವರ್ಷ ಕೋಟ್ಯಂತರ ರೂಪಾಯಿಗಳ ವಿದ್ಯಾರ್ಥಿ ವೇತನವನ್ನು ವಿತರಿಸುತ್ತದೆ.

ಈ ಸ್ಕಾಲರ್‌ಶಿಪ್‌ನ ಅತಿದೊಡ್ಡ ವಿಶೇಷತೆ ಎಂದರೆ, ಇದು ಕೇವಲ ಒಂದು ನಿರ್ದಿಷ್ಟ ಜಾತಿಗೆ ಅಥವಾ ವರ್ಗಕ್ಕೆ ಸೀಮಿತವಾಗಿಲ್ಲ. ಬದಲಾಗಿ, ಎಲ್ಲಾ ಧರ್ಮ, ಜಾತಿ ಹಾಗೂ ವರ್ಗದ ಬಡ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅಂಕಗಳ (Merit) ಆಧಾರದ ಮೇಲೆ ಈ ಸ್ಕಾಲರ್‌ಶಿಪ್ ಪಡೆಯಲು ಅರ್ಹರಾಗಿರುತ್ತಾರೆ.

ಯಾವೆಲ್ಲಾ ಕೋರ್ಸ್‌ಗಳಿಗೆ ಎಷ್ಟು ಸ್ಕಾಲರ್‌ಶಿಪ್ ಸಿಗಲಿದೆ? (ವರ್ಗಾವಾರು ಮಾಹಿತಿ)

ಸಂಸ್ಥೆಯು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕೋರ್ಸ್‌ಗಳ ಆಧಾರದ ಮೇಲೆ ಅವರನ್ನು ವಿವಿಧ ಕೆಟಗರಿಗಳಾಗಿ (Categories) ವಿಂಗಡಿಸಿದೆ. ಕೋರ್ಸ್‌ಗೆ ತಕ್ಕಂತೆ ಆರ್ಥಿಕ ನೆರವು ನೀಡಲಾಗುತ್ತದೆ:

ಪಿಯುಸಿ ಮತ್ತು ಐಟಿಐ ವಿದ್ಯಾರ್ಥಿಗಳಿಗೆ:

  • 11ನೇ ಮತ್ತು 12ನೇ ತರಗತಿ (1st & 2nd PUC) ಓದುತ್ತಿರುವ ವಿದ್ಯಾರ್ಥಿಗಳು.
  • ಯಾವುದೇ ಸರ್ಕಾರಿ ಅಥವಾ ಮಾನ್ಯತೆ ಪಡೆದ ಐಟಿಐ (ITI) ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳು.
  • ವಿದ್ಯಾರ್ಥಿ ವೇತನ: ಹುಡುಗಿಯರಿಗೆ ತಿಂಗಳಿಗೆ ₹700 ಹಾಗೂ ಹುಡುಗರಿಗೆ ₹500 ನೀಡಲಾಗುತ್ತದೆ.

ಪದವಿ / U.G ಕೋರ್ಸ್‌ಗಳು:

  • ಬಿ.ಎ (BA), ಬಿ.ಕಾಂ (B.Com), ಬಿ.ಎಸ್ಸಿ (B.Sc), ಬಿ.ಸಿ.ಎ (BCA), ಬಿ.ಬಿ.ಎ (BBA) ಮುಂತಾದ ಯಾವುದೇ 3 ಅಥವಾ 4 ವರ್ಷಗಳ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು.
  • ವಿದ್ಯಾರ್ಥಿ ವೇತನ: ಹುಡುಗಿಯರಿಗೆ ತಿಂಗಳಿಗೆ ₹1,400 ಹಾಗೂ ಹುಡುಗರಿಗೆ ₹1,100 ನೀಡಲಾಗುತ್ತದೆ. ವಿಕಲಚೇತನ ವಿದ್ಯಾರ್ಥಿಗಳಿಗೆ ತಿಂಗಳಿಗೆ ₹1,400 ಸಿಗಲಿದೆ.

ಸ್ನಾತಕೋತ್ತರ ಪದವಿ / P.G ಕೋರ್ಸ್‌ಗಳು:

  • ಎಂ.ಎ (MA), ಎಂ.ಎಸ್ಸಿ (M.Sc), ಎಂ.ಕಾಂ (M.Com), ಎಂ.ಬಿ.ಎ (MBA), ಎಂ.ಸಿ.ಎ (MCA) ಮುಂತಾದ ಪಿಜಿ ಕೋರ್ಸ್‌ಗಳು.
  • ವಿದ್ಯಾರ್ಥಿ ವೇತನ: ಹುಡುಗಿಯರಿಗೆ ತಿಂಗಳಿಗೆ ₹1,800 ಹಾಗೂ ಹುಡುಗರಿಗೆ ₹1,500 ನೀಡಲಾಗುತ್ತದೆ.

ಡಿಪ್ಲೊಮಾ ಕೋರ್ಸ್‌ಗಳು:

  • ಎಸ್.ಎಸ್.ಎಲ್.ಸಿ (SSLC) ಅಥವಾ ಪಿಯುಸಿ (PUC) ನಂತರ ಮಾಡುವ 3 ವರ್ಷದ ಡಿಪ್ಲೊಮಾ ವಿದ್ಯಾರ್ಥಿಗಳು.
  • ವಿದ್ಯಾರ್ಥಿ ವೇತನ: ಹುಡುಗಿಯರಿಗೆ ತಿಂಗಳಿಗೆ ₹1,200 ಹಾಗೂ ಹುಡುಗರಿಗೆ ₹1,000 ನೀಡಲಾಗುತ್ತದೆ.

ಇಂಜಿನಿಯರಿಂಗ್ & ಮೆಡಿಕಲ್ ವಿದ್ಯಾರ್ಥಿಗಳಿಗೆ:

  • ಇಂಜಿನಿಯರಿಂಗ್ (B.E / B.Tech) ಹಾಗೂ ಮೆಡಿಕಲ್ (MBBS, BDS, BAMS, B.Pharma) ಮುಂತಾದ ವೃತ್ತಿಪರ ಕೋರ್ಸ್‌ಗಳು.
  • ವಿದ್ಯಾರ್ಥಿ ವೇತನ: ಮೆಡಿಕಲ್ ಮತ್ತು ಇಂಜಿನಿಯರಿಂಗ್ ಓದುತ್ತಿರುವ ಹುಡುಗಿಯರಿಗೆ ತಿಂಗಳಿಗೆ ಬರೋಬ್ಬರಿ ₹3,200 ದಿಂದ ₹3,600 ಹಾಗೂ ಹುಡುಗರಿಗೆ ₹2,800 ದಿಂದ ₹3,200 ವರೆಗೆ ಸ್ಕಾಲರ್‌ಶಿಪ್ ನೀಡಲಾಗುತ್ತದೆ.

(ಸೂಚನೆ: ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಓದುತ್ತಿರುವ ವಿದ್ಯಾರ್ಥಿಗಳಿಗೆ ಮೇಲಿನ ಮೊತ್ತಕ್ಕಿಂತ ಹೆಚ್ಚುವರಿಯಾಗಿ ಆರ್ಥಿಕ ನೆರವು ಸಿಗಲಿದೆ).

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ಅರ್ಹತೆಗಳು (Eligibility Criteria)

ಈ ಸ್ಕಾಲರ್‌ಶಿಪ್ ಪಡೆಯಲು ಕೇವಲ ಬಡತನವೊಂದೇ ಮಾನದಂಡವಲ್ಲ, ವಿದ್ಯಾರ್ಥಿಯು ಓದಿನಲ್ಲಿ ಪ್ರತಿಭಾವಂತನಾಗಿರಬೇಕು:

  1. ಅಂಕಗಳ ಮಿತಿ (Marks): ಹಿಂದಿನ ತರಗತಿಯ ಪರೀಕ್ಷೆಯಲ್ಲಿ ಹುಡುಗರು ಕನಿಷ್ಠ 60% ರಿಂದ 65% ಅಂಕಗಳನ್ನು ಪಡೆದಿರಬೇಕು. ಹುಡುಗಿಯರಿಗೆ 55% ರಿಂದ 60% ಅಂಕಗಳನ್ನು ನಿಗದಿಪಡಿಸಲಾಗಿದೆ (ಕೋರ್ಸ್‌ಗೆ ಅನುಗುಣವಾಗಿ ಅಂಕಗಳ ಮಿತಿ ಬದಲಾಗುತ್ತದೆ). ಕರ್ನಾಟಕದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಅಂಕಗಳಲ್ಲಿ ಶೇ.5 ರಷ್ಟು ಸಡಿಲಿಕೆ ಇರುತ್ತದೆ.
  2. ಆದಾಯ ಮಿತಿ (Income Limit): ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು ₹2,50,000 (ಕೆಲವು ವೃತ್ತಿಪರ ಕೋರ್ಸ್‌ಗಳಿಗೆ ₹4,000,000) ದಿಂದ ಮೀರಬಾರದು.
  3. ವಿದ್ಯಾರ್ಥಿಯು ಪ್ರಸ್ತುತ ಯಾವುದೇ ಮಾನ್ಯತೆ ಪಡೆದ ಕಾಲೇಜಿನಲ್ಲಿ ರೆಗ್ಯುಲರ್ (Regular) ಆಗಿ ವ್ಯಾಸಂಗ ಮಾಡುತ್ತಿರಬೇಕು. ಅಂಚೆ ತೆರಪಿನ ಶಿಕ್ಷಣ (Distance Education) ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಇದು ಅನ್ವಯಿಸುವುದಿಲ್ಲ.

ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಬೇಕಾಗುವ ದಾಖಲೆಗಳು (Documents Required)

ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಥಿಗಳು ಈ ಕೆಳಗಿನ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು:

  • ಹಿಂದಿನ ತರಗತಿಯಲ್ಲಿ ಪಾಸ್ ಆದ ಮಾರ್ಕ್ಸ್ ಕಾರ್ಡ್ (Marks Card).
  • ಪ್ರಸ್ತುತ ವರ್ಷದ ಕಾಲೇಜು ಶುಲ್ಕ ಕಟ್ಟಿರುವ ರಸೀದಿ (Fee Receipt).
  • ತಹಶೀಲ್ದಾರ್ ಅವರಿಂದ ಪಡೆದ ಕಡ್ಡಾಯ ಆದಾಯ ಪ್ರಮಾಣ ಪತ್ರ (Income Certificate).
  • ವಿದ್ಯಾರ್ಥಿಯ ಆಧಾರ್ ಕಾರ್ಡ್ (Aadhaar Card).
  • ವಿದ್ಯಾರ್ಥಿಯ ಬ್ಯಾಂಕ್ ಪಾಸ್‌ಬುಕ್‌ನ (Bank Passbook) ಮುಖಪುಟದ ಜೆರಾಕ್ಸ್ (ಖಾತೆ ಚಾಲ್ತಿಯಲ್ಲಿರಬೇಕು).
  • ಹಾಸ್ಟೆಲ್ ವಿದ್ಯಾರ್ಥಿಯಾಗಿದ್ದರೆ, ಹಾಸ್ಟೆಲ್ ವಾರ್ಡನ್ ಅವರಿಂದ ದೃಢೀಕರಣ ಪತ್ರ.
  • ಪಿಕಲಚೇತನ ವಿದ್ಯಾರ್ಥಿಯಾಗಿದ್ದರೆ, ಅಂಗವೈಕಲ್ಯ ಪ್ರಮಾಣ ಪತ್ರ (Disability Certificate).

ಅರ್ಜಿ ಸಲ್ಲಿಸುವುದು ಹೇಗೆ? (How to Apply)

ಅಧಿಕೃತ ವೆಬ್‌ಸೈಟ್‌ನಲ್ಲಿ ಯಾವುದೇ ತಪ್ಪುಗಳಿಲ್ಲದೆ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಸರಿಯಾಗಿ ಅನುಸರಿಸಿ:

ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

ನಿಮ್ಮ ಮೊಬೈಲ್‌ನ ಬ್ರೌಸರ್ ಓಪನ್ ಮಾಡಿ sitaramjindalfoundation.org ವೆಬ್‌ಸೈಟ್‌ಗೆ ಭೇಟಿ ನೀಡಿ.

ಮುಖಪುಟದಲ್ಲಿ ಕಾಣಿಸುವ ‘Launching Our New Scholarship Portal!’ ಲಿಂಕ್ ಮೇಲೆ ಕ್ಲಿಕ್ ಮಾಡಿ.

zindal

ಹಂತ 2: ಹೊಸ ವಿದ್ಯಾರ್ಥಿ ನೋಂದಣಿ (New Student Registration)

ಮೊದಲ ಬಾರಿಗೆ ಪೋರ್ಟಲ್ ಬಳಸುತ್ತಿದ್ದರೆ ‘New Registration’ ಬಟನ್ ಕ್ಲಿಕ್ ಮಾಡಿ.

zindal 1

ನಿಮ್ಮ ಚಾಲ್ತಿಯಲ್ಲಿರುವ ಮೊಬೈಲ್ ನಂಬರ್, ಇಮೇಲ್ ಐಡಿ ಮತ್ತು ನಿಮ್ಮ ಹೆಸರನ್ನು ನಮೂದಿಸಿ ‘Generate OTP’ ಕ್ಲಿಕ್ ಮಾಡಿ.

ನಿಮ್ಮ ಮೊಬೈಲ್‌ಗೆ ಬರುವ ಒಟಿಪಿಯನ್ನು ಹಾಕಿ ವೆರಿಫೈ ಮಾಡಿದ ನಂತರ, ಲಾಗಿನ್ ಆಗಲು ಒಂದು ಪ್ರತ್ಯೇಕ ಪಾಸ್‌ವರ್ಡ್ ಅನ್ನು ರಚಿಸಿಕೊಳ್ಳಿ.

zindal 2

ಹಂತ 3: ಪ್ರೊಫೈಲ್ ಮತ್ತು ಶೈಕ್ಷಣಿಕ ವಿವರಗಳ ಭರ್ತಿ (Profile & Academic Details)

ನೋಂದಣಿ ಮುಗಿದ ಬಳಿಕ ನಿಮ್ಮ ಮೊಬೈಲ್ ನಂಬರ್ ಹಾಗೂ ಪಾಸ್‌ವರ್ಡ್ ಬಳಸಿ ಲಾಗಿನ್ (Sign In) ಆಗಿ.

zindal 3

ಈಗ ಸ್ಕಾಲರ್‌ಶಿಪ್ ಅಪ್ಲಿಕೇಶನ್ ಫಾರ್ಮ್ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ವೈಯಕ್ತಿಕ ವಿವರಗಳು (ತಂದೆ/ತಾಯಿಯ ಹೆಸರು, ಕಾಯಂ ವಿಳಾಸ, ಲಿಂಗ) ಭರ್ತಿ ಮಾಡಿ.

zindal 4

ಮುಂದಿನ ವಿಭಾಗದಲ್ಲಿ ನಿಮ್ಮ ಶೈಕ್ಷಣಿಕ ವಿವರಗಳನ್ನು ನಮೂದಿಸಬೇಕು. ಪ್ರಸ್ತುತ ನೀವು ಓದುತ್ತಿರುವ ಕಾಲೇಜಿನ ಹೆಸರು, ಕೋರ್ಸ್, ರೋಲ್ ನಂಬರ್ ಮತ್ತು ಹಿಂದಿನ ವರ್ಷದ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳ ಶೇಕಡಾವಾರು () ವಿವರವನ್ನು ನಿಖರವಾಗಿ ಹಾಕಿ.

ಹಂತ 4: ಬ್ಯಾಂಕ್ ಖಾತೆಯ ವಿವರಗಳು (Bank Account Details)

ಸ್ಕಾಲರ್‌ಶಿಪ್ ಹಣವು ನೇರವಾಗಿ ನಿಮ್ಮ ಖಾತೆಗೆ ಜಮೆಯಾಗುವುದರಿಂದ, ವಿದ್ಯಾರ್ಥಿಯ ಹೆಸರಿನಲ್ಲೇ ಇರುವ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಬೇಕು.

ಬ್ಯಾಂಕ್ ಹೆಸರು, ಶಾಖೆ (Branch), ಖಾತೆ ಸಂಖ್ಯೆ (Account Number) ಮತ್ತು ಐಎಫ್‌ಎಸ್‌ಸಿ ಕೋಡ್ (IFSC Code) ಅನ್ನು ಪಾಸ್‌ಬುಕ್ ನೋಡಿ ಸರಿಯಾಗಿ ಟೈಪ್ ಮಾಡಿ.

ಹಂತ 5: ಕಡ್ಡಾಯ ದಾಖಲೆಗಳ ಅಪ್ಲೋಡ್ (Documents Upload)

ಆನ್‌ಲೈನ್ ಅರ್ಜಿಯ ಯಶಸ್ಸಿಗೆ ದಾಖಲೆಗಳನ್ನು ಸ್ಪಷ್ಟವಾಗಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವುದು ಅತ್ಯಗತ್ಯ. ಕೆಳಗಿನ ದಾಖಲೆಗಳನ್ನು JPEG ಅಥವಾ PDF ಮಾದರಿಯಲ್ಲಿ ಸಿದ್ಧವಾಗಿಟ್ಟುಕೊಂಡು ಅಪ್ಲೋಡ್ ಮಾಡಿ:

  1. ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ.
  2. ಹಿಂದಿನ ತರಗತಿಯ ಅಧಿಕೃತ ಅಂಕಪಟ್ಟಿ (Marks Card).
  3. ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ (Income Certificate).
  4. ಪ್ರಸ್ತುತ ವರ್ಷದ ಕಾಲೇಜು ಪ್ರವೇಶಾತಿ ರಶೀದಿ ಅಥವಾ ಶುಲ್ಕದ ರಶೀದಿ (Fee Receipt).
  5. ವಿದ್ಯಾರ್ಥಿಯ ಆಧಾರ್ ಕಾರ್ಡ್ ಪ್ರತಿ.
  6. ಬ್ಯಾಂಕ್ ಪಾಸ್‌ಬುಕ್‌ನ ಮುಖಪುಟದ ಸ್ಪಷ್ಟ ಚಿತ್ರ.
  7. ಕಾಲೇಜು ದೃಢೀಕರಣ ಪತ್ರ (Annexure Form): ಪೋರ್ಟಲ್‌ನಲ್ಲಿ ಲಭ್ಯವಿರುವ ಪ್ರಾಂಶುಪಾಲರ ದೃಢೀಕರಣ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ, ನಿಮ್ಮ ಕಾಲೇಜು ಪ್ರಾಂಶುಪಾಲರಿಂದ (Principal) ಸಹಿ ಮತ್ತು ಮೊಹರು ಹಾಕಿಸಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು. ಇದು ಅತ್ಯಂತ ಕಡ್ಡಾಯವಾಗಿದೆ.

ಹಂತ 6: ಪರಿಶೀಲನೆ ಮತ್ತು ಸಬ್ಮಿಟ್ (Final Submission)

ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ ‘Preview’ ಬಟನ್ ಕ್ಲಿಕ್ ಮಾಡಿ ನಿಮ್ಮ ಅರ್ಜಿ ಮತ್ತೊಮ್ಮೆ ಸರಿಯಾಗಿದೆಯೇ ಎಂದು ಪರಿಶೀಲಿಸಿಕೊಳ್ಳಿ.

ಯಾವುದೇ ತಪ್ಪುಗಳಿಲ್ಲದಿದ್ದರೆ, ಕೊನೆಯದಾಗಿ ‘Submit Application’ ಬಟನ್ ಪ್ರೆಸ್ ಮಾಡಿ.

ಅರ್ಜಿ ಸಲ್ಲಿಕೆಯಾದ ನಂತರ ನಿಮ್ಮ ಮೊಬೈಲ್‌ಗೆ ‘Application Reference ID’ ಬರುತ್ತದೆ. ಇದನ್ನು ಬಳಸಿಕೊಂಡು ನೀವು ಮುಂದಿನ ದಿನಗಳಲ್ಲಿ ನಿಮ್ಮ ಅರ್ಜಿಯ ಸ್ಥಿತಿಯನ್ನು (Application Status) ಆನ್‌ಲೈನ್‌ನಲ್ಲೇ ಟ್ರ್ಯಾಕ್ ಮಾಡಬಹುದು.

ಆನ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಲೈವ್ ಆಗಿ ವೀಕ್ಷಿಸಲು ಹಾಗೂ ಯಾವುದೇ ಗೊಂದಲಗಳಿದ್ದರೆ ಪರಿಹರಿಸಿಕೊಳ್ಳಲು ಈ ಅಧಿಕೃತ ವೀಡಿಯೊ ಮಾರ್ಗದರ್ಶನವನ್ನು ತಪ್ಪದೇ ವೀಕ್ಷಿಸಿ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳು!

ಅನೇಕ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಸಣ್ಣಪುಟ್ಟ ತಪ್ಪುಗಳನ್ನು ಮಾಡಿ ಸ್ಕಾಲರ್‌ಶಿಪ್‌ ಸೌಲಭ್ಯದಿಂದ ವಂಚಿತರಾಗುತ್ತಾರೆ. ಈ ತಪ್ಪುಗಳನ್ನು ನೀವೂ ಮಾಡಬೇಡಿ:

  • ಅಸ್ಪಷ್ಟ ದಾಖಲೆಗಳು: ಮೊಬೈಲ್‌ನಲ್ಲಿ ಫೋಟೋ ತೆಗೆದು ಹಾಗೆಯೇ ಅಪ್ಲೋಡ್ ಮಾಡಬೇಡಿ. ಡಾಕ್ಯುಮೆಂಟ್ ಸ್ಕ್ಯಾನರ್ ಆಪ್ ಬಳಸಿ ದಾಖಲೆಗಳು ಸ್ಪಷ್ಟವಾಗಿ ಓದಲು ಸಿಗುವಂತೆ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  • ಆದಾಯ ಮಿತಿ: ನಿಮ್ಮ ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ ಚಾಲ್ತಿಯಲ್ಲಿರಬೇಕು ಮತ್ತು ಆದಾಯ ಮಿತಿ ₹2,50,000 ದಾಟಿರಬಾರದು.
  • ತಪ್ಪು ಬ್ಯಾಂಕ್ ವಿವರ: IFSC ಕೋಡ್ ನಮೂದಿಸುವಾಗ ಶೂನ್ಯ (0) ಮತ್ತು ಇಂಗ್ಲಿಷ್ ಅಕ್ಷರ ‘O’ ನಡುವೆ ಗೊಂದಲ ಮಾಡಿಕೊಳ್ಳಬೇಡಿ. ತಪ್ಪು ವಿವರ ನೀಡಿದರೆ ಹಣ ಬೇರೆಯವರ ಖಾತೆಗೆ ಹೋಗುವ ಅಥವಾ ರಿಜೆಕ್ಟ್ ಆಗುವ ಸಾಧ್ಯತೆ ಇರುತ್ತದೆ.

(ಸೂಚನೆ: ಈ ಸ್ಕಾಲರ್‌ಶಿಪ್‌ಗೆ ಯಾವುದೇ ಕಟ್ಟುನಿಟ್ಟಾದ ಕೊನೆಯ ದಿನಾಂಕ ಇರುವುದಿಲ್ಲ, ಆದರೆ ನೀವು ಹೊಸ ತರಗತಿಗೆ ಪ್ರವೇಶ ಪಡೆದ ತಕ್ಷಣವೇ ಅರ್ಜಿ ಸಲ್ಲಿಸುವುದು ಉತ್ತಮ.)

ವರದಿ: ಕೃಷ್ಣಸಾಗರಿ – ನೀಡ್ಸ್ ಆಫ್ ಪಬ್ಲಿಕ್, ದಾವಣಗೆರೆ

ಈ ಮಾಹಿತಿಗಳನ್ನು ಓದಿ:

WhatsApp Group Join Now
Telegram Group Join Now

97 responses to “ಪ್ರತಿ ತಿಂಗಳು ₹3,600 ನೀಡುವ ‘ಜಿಂದಾಲ್ ಸ್ಕಾಲರ್‌ಶಿಪ್ 2026-27’ ಅರ್ಜಿ ಆರಂಭ; ಇಂದೇ ಅಪ್ಲೈ ಮಾಡಿ!”

  1. ALSHAY N J Avatar
    ALSHAY N J

    3600 rupees

  2. Somashekhar sangappa Gubachi Avatar
    Somashekhar sangappa Gubachi
  3. Varshini.n Avatar
    Varshini.n

    Good guides

  4. Karthik 420 Avatar
    Karthik 420

    Hi

  5. Sudeep hanchinal Avatar
    Sudeep hanchinal

    Good guides

  6. Priya.R Avatar
    Priya.R

    Kenchanapura

  7. Priya.R Avatar
    Priya.R

    Thankyou

  8. Omshree Avatar
    Omshree

    Reply

  9. Kushalkumar Avatar
    Kushalkumar

    For education purposes

  10. Vedashri Moger Avatar
    Vedashri Moger

    Bhatkala uttar kannada bandar mavinkurve

  11. Ankitha Avatar
    Ankitha

    Ankitha june 11 /2026

  12. SriGuruDatta SB Avatar
    SriGuruDatta SB

    It is a very good

  13. Pradeep M Somakkalavar Avatar
    Pradeep M Somakkalavar

    ನನಗೆ ಓದಲು ಹಣದ ಅಭಾವ ಇರುವುದರಿಂದ ಓದಲು ಸಾಧ್ಯವಾಗುತ್ತಿಲ್ಲ ಅದಕ್ಕಾಗಿ ತಾವುಗಳು ನನ್ನ ಅರ್ಜಿಯನ್ನು ತೆಗೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ

    ಇಂತಿ ತಮ್ಮ ವಿಶ್ವಾಸಿ
    Pradeep

  14. REETHAN Avatar
    REETHAN

    It’s help for poor students Thanks for giving this wonderful opportunity

  15. Gunavathi KM Avatar
    Gunavathi KM

    I’m very glad to got this opportunitie, and thank you so much for this scolarship.

  16. Rohini S Avatar
    Rohini S

    Rohini S
    rohinis725988@gmail

  17. Sinchana rani Avatar
    Sinchana rani

    I’m very glad to get these opportunity

  18. Sinchana rani Avatar
    Sinchana rani

    Please give me the opportunity

  19. Yashavanthakumar Avatar
    Yashavanthakumar
  20. Nakul DS Avatar

    Shivamogga Bhadravati jannapura

  21. Nakul DS Avatar

    Kuvempu University Shimoga ATNCC college

  22. Poojitha R Sanil Avatar
    Poojitha R Sanil

    Hope to receive this scholarship

  23. Karthik Gowda Avatar
    Karthik Gowda

    K

  24. Swamy SK Avatar
    Swamy SK

    Good

  25. Janhavi h Avatar
    Janhavi h

    Janhavi h D/O Hanumanthappa haranahalli shivamogga 577416 karnataka india haranahalli upparra beedhi relve testion road

  26. Vinod B Avatar
    Vinod B

    Megala gollarahatti .huliyar hobali, bellara tumkur karnataka 572218

  27. Ayishathul bashira Avatar
    Ayishathul bashira

    Arkana masjid Bali pajeer vilage ulla taluku D.k

  28. Tamrin Avatar
    Tamrin

    Good and family problem

  29. Aishwarya Avatar
    Aishwarya

    I am apply what next i don’t know

  30. Sanjana pujari Avatar
    Sanjana pujari

    Sanjana pujari
    October 25 2009
    [email protected]
    Ronihal

  31. Sanjana pujari Avatar
    Sanjana pujari

    ವಿದ್ಯಾಭ್ಯಾಸ ಆಡತನೆ ಇರುವ ಕಾರಣ ಹಣದ ಅವಶ್ಯಕತೆ ತುಂಬ ಇದೆ ಅರ್ಜಿಯನ್ನು ಸ್ವೀಕತಸಬೇಕು ಎಂದು ಕೇಳಿಕೊಳ್ಳುತೇನೆ ||

  32. Akash chandru sangaigol Avatar

    jindal scholarship apply pliz

  33. Jeevan Avatar
    Jeevan

    Scholarship

  34. Akash Bhajannavar Avatar
    Akash Bhajannavar

    Scholarship advised

  35. Kalpana Avatar
    Kalpana

    Address.nalgamadinni tq/Manvi Dt/Raichur and I am nursing student and I have got in 2puc marks 65%

  36. Kalpana Avatar
    Kalpana

    I think this helps for poor peoples

  37. Rathnamma H S Avatar

    Hampapura srirangapatna tq mandya district

  38. Pavan Avatar
    Pavan

    Poor people for help

  39. Vijendra Avatar
    Vijendra

    Please give me
    College fees scholarship

  40. Akash chandru sangaigol Avatar

    Education problem solve this scholarship apply

  41. Akash chandru sangaigol Avatar

    Education problem solve the scholarship apply

Leave a Reply

Your email address will not be published. Required fields are marked *


Popular Categories