🏦 ಪ್ರಮುಖ 6 ಬದಲಾವಣೆಗಳು
- ಸಿಬಿಲ್ ಅಪ್ಡೇಟ್: ತಿಂಗಳಿಗೆ 4 ಬಾರಿ (ವಾರಕ್ಕೊಮ್ಮೆ) ಅಪ್ಡೇಟ್ ಆಗಲಿದೆ.
- ಶೂನ್ಯ ದಂಡ: ಸಾಲವನ್ನು ಅವಧಿಗೆ ಮುನ್ನ ತೀರಿಸಿದರೆ ದಂಡ ಇಲ್ಲ (Foreclosure Charges 0%).
- ₹100 ಪರಿಹಾರ: ವಿಫಲ ವಹಿವಾಟಿಗೆ ಬ್ಯಾಂಕ್‌ನಿಂದಲೇ ಪರಿಹಾರ.
- ನಾಮಿನಿ: ಜಂಟಿ ಖಾತೆಗೆ 4 ನಾಮಿನಿಗಳ ಅವಕಾಶ.
- ಬಡ್ಡಿ ಇಳಿಕೆ: ಸಿಬಿಲ್ ಸುಧಾರಿಸಿದರೆ ತಕ್ಷಣ ಬಡ್ಡಿ ದರ ಕಡಿಮೆ ಮಾಡಬಹುದು.
ಪ್ರಮುಖ 6 ಬದಲಾವಣೆಗಳು
- ಸಿಬಿಲ್ ಅಪ್ಡೇಟ್: ತಿಂಗಳಿಗೆ 4 ಬಾರಿ (ವಾರಕ್ಕೊಮ್ಮೆ) ಅಪ್ಡೇಟ್ ಆಗಲಿದೆ.
- ಶೂನ್ಯ ದಂಡ: ಸಾಲವನ್ನು ಅವಧಿಗೆ ಮುನ್ನ ತೀರಿಸಿದರೆ ದಂಡ ಇಲ್ಲ (Foreclosure Charges 0%).
- ₹100 ಪರಿಹಾರ: ವಿಫಲ ವಹಿವಾಟಿಗೆ ಬ್ಯಾಂಕ್‌ನಿಂದಲೇ ಪರಿಹಾರ.
- ನಾಮಿನಿ: ಜಂಟಿ ಖಾತೆಗೆ 4 ನಾಮಿನಿಗಳ ಅವಕಾಶ.
- ಬಡ್ಡಿ ಇಳಿಕೆ: ಸಿಬಿಲ್ ಸುಧಾರಿಸಿದರೆ ತಕ್ಷಣ ಬಡ್ಡಿ ದರ ಕಡಿಮೆ ಮಾಡಬಹುದು.
ಬೆಂಗಳೂರು: “ಗ್ರಾಹಕನೇ ದೇವರು” ಎಂಬ ಮಾತು ಬ್ಯಾಂಕಿಂಗ್ ವಲಯದಲ್ಲಿ ನಿಜವಾಗುವ ಕಾಲ ಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) 2026ರ ಆರಂಭದಿಂದಲೇ ಗ್ರಾಹಕರ ಪರವಾದ 6 ಕ್ರಾಂತಿಕಾರಿ ಬದಲಾವಣೆಗಳನ್ನು ಜಾರಿಗೆ ತಂದಿದೆ. ಬ್ಯಾಂಕ್‌ಗಳ ದಬ್ಬಾಳಿಕೆಗೆ ಬ್ರೇಕ್ ಹಾಕಿ, ಜನಸಾಮಾನ್ಯರಿಗೆ ಹಣ ಉಳಿಸಲು ಈ ನಿಯಮಗಳು ಸಹಕಾರಿಯಾಗಲಿವೆ.
ಅವು ಯಾವವು? ಇಲ್ಲಿದೆ ಸಂಪೂರ್ಣ ವಿವರ:

1. ಸಾಲ ತೀರಿಸಲು ದಂಡ ಇಲ್ಲ (Zero Foreclosure Charges):
ಹಿಂದೆ ನೀವು ಸಾಲವನ್ನು (Home/Car/Personal Loan) ಅವಧಿಗೂ ಮುನ್ನವೇ ತೀರಿಸಲು ಹೋದರೆ ಬ್ಯಾಂಕ್‌ಗಳು 2% ರಿಂದ 4% ದಂಡ ಹಾಕುತ್ತಿದ್ದವು. ಆದರೆ ಇನ್ಮುಂದೆ ‘ಫ್ಲೋಟಿಂಗ್ ಬಡ್ಡಿ ದರ’ (Floating Rate) ಇರುವ ಸಾಲಗಳಿಗೆ ಒಂದು ರೂಪಾಯಿ ದಂಡ ಕಟ್ಟುವ ಹಾಗಿಲ್ಲ!
2. ಎಟಿಎಂ ಹಣ ಕಟ್ ಆದರೆ ಪರಿಹಾರ (Failed Transaction):
ನೀವು ಎಟಿಎಂ ಅಥವಾ ಆನ್‌ಲೈನ್ ಟ್ರಾನ್ಸಾಕ್ಷನ್ ಮಾಡುವಾಗ ಹಣ ಕಟ್ ಆಗಿ, ಅದು ಯಾರಿಗೆ ಸೇರಬೇಕೋ ಅವರಿಗೆ ಸೇರಲಿಲ್ಲವೇ?
- ಬ್ಯಾಂಕ್ 5 ದಿನದೊಳಗೆ ಹಣ ವಾಪಸ್ ಮಾಡಬೇಕು.
- ತಪ್ಪಿದಲ್ಲಿ, 6ನೇ ದಿನದಿಂದ ದಿನಕ್ಕೆ ₹100 ಪರಿಹಾರವನ್ನು ಬ್ಯಾಂಕ್ ನಿಮಗೆ ನೀಡಲೇಬೇಕು.
3. ವಾರಕ್ಕೊಮ್ಮೆ ಸಿಬಿಲ್ ಅಪ್ಡೇಟ್ (Weekly CIBIL Update):
ಇದುವರೆಗೆ ಸಾಲ ತೀರಿಸಿದರೂ ಸಿಬಿಲ್ ಸ್ಕೋರ್ ಅಪ್ಡೇಟ್ ಆಗಲು 30-45 ದಿನ ಬೇಕಿತ್ತು. ಈಗ ಬ್ಯಾಂಕ್‌ಗಳು ತಿಂಗಳಿಗೆ 4 ಬಾರಿ (ವಾರಕ್ಕೊಮ್ಮೆ) ಸಿಬಿಲ್ ಮಾಹಿತಿಯನ್ನು ಅಪ್ಡೇಟ್ ಮಾಡುವುದು ಕಡ್ಡಾಯ. ಇದರಿಂದ ನಿಮಗೆ ಅರ್ಜನೆಟ್ ಆಗಿ ಲೋನ್ ಬೇಕಿದ್ದರೆ ಬೇಗ ಸಿಗುತ್ತದೆ.
4. 4 ಜನ ನಾಮಿನಿ (Multiple Nominees):
ಒಂದೇ ಖಾತೆಗೆ ಅಥವಾ ಲಾಕರ್‌ಗೆ ಇನ್ಮುಂದೆ ನೀವು ಗರಿಷ್ಠ 4 ಜನರನ್ನು ನಾಮಿನಿ ಮಾಡಬಹುದು. ಯಾರಿಗೆ ಎಷ್ಟು ಪಾಲು (ಉದಾ: ಪತ್ನಿಗೆ 50%, ಮಗನಿಗೆ 25%, ಮಗಳಿಗೆ 25%) ಸಿಗಬೇಕು ಎಂಬುದನ್ನು ನೀವೇ ನಿರ್ಧರಿಸಬಹುದು.
5. ಬಡ್ಡಿ ದರ ಇಳಿಕೆ (Interest Rate Reduction):
ನೀವು ಸಾಲ ಪಡೆದಾಗ ಸಿಬಿಲ್ ಕಡಿಮೆ ಇತ್ತು, ಈಗ ಜಾಸ್ತಿ ಆಗಿದ್ಯಾ? ಹಾಗಾದ್ರೆ ಕೂಡಲೇ ಬ್ಯಾಂಕ್‌ಗೆ ಹೋಗಿ ಬಡ್ಡಿ ದರ ಕಡಿಮೆ ಮಾಡಲು ಅರ್ಜಿ ಹಾಕಬಹುದು. ಹಳೆಯ ಲಾಕ್-ಇನ್ ಅವಧಿ ಈಗಿಲ್ಲ.
6. ಚಿನ್ನದ ಸಾಲದ ಅವಧಿ ವಿಸ್ತರಣೆ (Gold Metal Loan):
ಚಿನ್ನದ ಆಭರಣ ತಯಾರಕರಿಗೆ ನೀಡುವ ಸಾಲದ ಅವಧಿಯನ್ನು 180 ದಿನಗಳಿಂದ 270 ದಿನಗಳಿಗೆ ಏರಿಸಲಾಗಿದೆ.
ಈ ಮಾಹಿತಿಗಳನ್ನು ಓದಿ
- Medical Shock: 3 ದಿನದ ಹಿಂದಷ್ಟೇ ECG ನಾರ್ಮಲ್ ಬಂದಿತ್ತು! ಆದರೂ ಪ್ರಖ್ಯಾತ ವೈದ್ಯರಿಗೆ ಹೃದಯಾಘಾತ – ಇದು ಹೇಗೆ ಸಾಧ್ಯ?
- ನೀವು ಕುಡಿಯುವ ಕಲುಷಿತ ನೀರಿನಿಂದ ಬರುವ ಮಾರಕ ಕಾಯಿಲೆ ತಡೆಯಲು ಇಲ್ಲಿವೆ 5 ಸುಲಭ ಪರೀಕ್ಷಾ ವಿಧಾನಗಳು.ಮನೆಯಲ್ಲೇ ಹೀಗೆ ಚೆಕ್ ಮಾಡಿ!
- Knee Pain Relief: ಹರಳೆಣ್ಣೆಗೆ ಈ ಬಿಳಿ ವಸ್ತುವನ್ನು ಬೆರೆಸಿ ಹಚ್ಚಿ! ಎಷ್ಟೇ ಹಳೆಯ ಮಂಡಿ ನೋವಿದ್ದರೂ ಒಂದೇ ರಾತ್ರಿಯಲ್ಲಿ ಮಾಯ?
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಲಿಂಗರಾಜ ರಾಮಪುರ (Lingaraj Ramapur) ಅವರು NeedsOfPublic.in ನ ಸಂಸ್ಥಾಪಕರು ಮತ್ತು ಪ್ರಧಾನ ಸಂಪಾದಕರಾಗಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಐಟಿ (BCA, MCA) ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ (M.A) ಪದವಿ ಪಡೆದಿರುವ ಇವರು ತಾಂತ್ರಿಕ ಮತ್ತು ಮಾಧ್ಯಮ ರಂಗದ ಅಪರೂಪದ ಸಂಗಮವಾಗಿದ್ದಾರೆ. ಡಿಜಿಟಲ್ ಪತ್ರಿಕೋದ್ಯಮಕ್ಕೆ ಕಾಲಿಡುವ ಮುನ್ನ ಬೆಂಗಳೂರಿನ ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿಗಳಾದ Infosys ಮತ್ತು Concentrix ನಲ್ಲಿ ತಾಂತ್ರಿಕ ಹುದ್ದೆಗಳಲ್ಲಿ ಕೆಲಸ ಮಾಡಿದ ಜಾಗತಿಕ ಅನುಭವ ಇವರಿಗಿದೆ. 2017 ರಿಂದ ಮಾಧ್ಯಮ ರಂಗದಲ್ಲಿದ್ದು, ಕಳೆದ 9 ವರ್ಷಗಳಿಂದ ಡೇಟಾ-ಆಧಾರಿತ ವರದಿಗಾರಿಕೆ, ನಿಖರವಾದ ಫ್ಯಾಕ್ಟ್-ಚೆಕಿಂಗ್ ಮತ್ತು ಸಾರ್ವಜನಿಕರಿಗೆ ವಿಶ್ವಾಸಾರ್ಹ ಮಾಹಿತಿಯನ್ನು ತಲುಪಿಸುವ ಸಂಪಾದಕೀಯ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.


WhatsApp Group




Leave a Reply