WhatsApp Image 2025 11 14 at 4.11.41 PM

ರಾಜ್ಯದಲ್ಲಿ 2026ರ ಮುಂದಿನ ವರ್ಷದಲ್ಲಿ ಬರೋಬ್ಬರಿ 7000 ಸರ್ಕಾರಿ ಶಾಲೆಗಳು ಬಂದ್.!

Categories: ,
WhatsApp Group Telegram Group

ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹೊಂಗನೂರಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಒಟ್ಟುಗೂಡಿಸಿ ‘ಕರ್ನಾಟಕ ಪಬ್ಲಿಕ್ ಶಾಲೆ’ (ಕೆಪಿಎಸ್)ಯನ್ನಾಗಿ ಪರಿವರ್ತಿಸಲಾಗುತ್ತಿದೆ. ಈ ಶಾಲೆಯ ಸುತ್ತಲು 6 ಕಿ.ಮೀ. ವ್ಯಾಪ್ತಿಯಲ್ಲಿರುವ 7 ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸಲು ಶಿಕ್ಷಣ ಇಲಾಖೆ ಅನುಮತಿ ನೀಡಿದ್ದು, ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ಕ್ರಮ ಕೈಗೊಂಡಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

700 ಹೊಸ ಕೆಪಿಎಸ್ ಶಾಲೆಗಳು – 7000 ಶಾಲೆಗಳ ವಿಲೀನ

ಈ ಉದಾಹರಣೆಯಂತೆ ರಾಜ್ಯದಲ್ಲಿ 2026-27ನೇ ಶೈಕ್ಷಣಿಕ ಸಾಲಿನಿಂದ ಗ್ರಾಮ ಪಂಚಾಯಿತಿಗೊಂದು ಕೆಪಿಎಸ್ ಶಾಲೆಯನ್ನಾಗಿ ಮಾಡಲು ಸರ್ಕಾರ ಅನುಮೋದನೆ ನೀಡಿದೆ. ಈಗಾಗಲೇ 700 ಹೊಸ ಕೆಪಿಎಸ್ ಶಾಲೆಗಳನ್ನು (ಕಲ್ಯಾಣ ಕರ್ನಾಟಕದಲ್ಲಿ 200 ಸೇರಿ) ಆರಂಭಿಸಲು ತೀರ್ಮಾನಿಸಲಾಗಿದೆ. ಪ್ರತಿ ಕೆಪಿಎಸ್ ಶಾಲೆಗೆ ಸುತ್ತಲು 5ರಿಂದ 10 ಕಿ.ಮೀ. ವ್ಯಾಪ್ತಿಯಲ್ಲಿರುವ ಕನಿಷ್ಠ 5ರಿಂದ ಗರಿಷ್ಠ 10 ಶಾಲೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ ಸದ್ದಿಲ್ಲದೆ ಆರಂಭವಾಗಿದೆ. ಇದರಿಂದ ಮುಂದಿನ ಸಾಲಿನಲ್ಲಿ 5,000ರಿಂದ 7,000 ಸರ್ಕಾರಿ ಶಾಲೆಗಳು ವಿಲೀನಗೊಂಡು ಬಂದ್ ಆಗುವ ಸಾಧ್ಯತೆ ಇದೆ.

ಈಗಾಗಲೇ 307 ಕೆಪಿಎಸ್ ಶಾಲೆಗಳು

ರಾಜ್ಯದಲ್ಲಿ ಈಗಾಗಲೇ 307 ಕೆಪಿಎಸ್ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ ಸಾವಿರಾರು ಸಣ್ಣ ಶಾಲೆಗಳನ್ನು ಹಿಂದೆ ವಿಲೀನಗೊಳಿಸಲಾಗಿದೆ. ಇದೀಗ ಹೊಸದಾಗಿ 700 ಕೆಪಿಎಸ್ ಶಾಲೆಗಳು ಆರಂಭವಾದರೆ ಒಟ್ಟು ಸಂಖ್ಯೆ 1,000ಕ್ಕೂ ಮೀರಲಿದೆ. ಜಿಲ್ಲಾ ಡಿಡಿಪಿಐಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ವಿಲೀನ ಪ್ರಕ್ರಿಯೆಯನ್ನು ಶಾಂತವಾಗಿ ನಡೆಸಲಾಗುತ್ತಿದೆ.

ಶಿಕ್ಷಕರ ಕೊರತೆ ಮತ್ತು ಮೂಲಸೌಕರ್ಯ ಸಮಸ್ಯೆ

ರಾಜ್ಯದಲ್ಲಿ 60,000ಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇದೆ. ಪ್ರತಿ ವರ್ಷ 6,000 ಶಿಕ್ಷಕರು ನಿವೃತ್ತರಾಗುತ್ತಿದ್ದಾರೆ. ಆದರೆ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ಸರ್ಕಾರಗಳು ಆಸಕ್ತಿ ತೋರಿಲ್ಲ. ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿ ಕನಿಷ್ಠ ವಿಷಯಕ್ಕೊಬ್ಬ ಅಥವಾ ತರಗತಿಗೊಬ್ಬ ಶಿಕ್ಷಕರನ್ನು ನೇಮಿಸುವಂತೆ ಶಿಕ್ಷಕ ಸಂಘಗಳು ಆಗ್ರಹಿಸಿವೆ. ತರಗತಿ ಕೊಠಡಿ, ಬೋಧನಾ ಸಾಮಗ್ರಿ, ಬಿಸಿಯೂಟ ಕೊಠಡಿ, ಗ್ರಂಥಾಲಯ, ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಸಮಸ್ಯೆಗಳಿವೆ.

ಶಾಲೆಗಳ ಸಂಖ್ಯೆಯಲ್ಲಿ ಇಳಿಕೆ

2010ರಲ್ಲಿ ರಾಜ್ಯದಲ್ಲಿ 50,000 ಸರ್ಕಾರಿ ಶಾಲೆಗಳಿದ್ದವು. ಈಗ ಅದು 46,000ಕ್ಕೆ ಇಳಿದಿದೆ. ಕಳೆದ 15 ವರ್ಷಗಳಲ್ಲಿ ಮಕ್ಕಳ ದಾಖಲಾತಿ ಶೇ.30ರಷ್ಟು ಕುಸಿದಿದೆ. 50ಕ್ಕಿಂತ ಕಡಿಮೆ ಮಕ್ಕಳಿರುವ 25,000ಕ್ಕೂ ಹೆಚ್ಚು ಶಾಲೆಗಳಿವೆ. ಹಂತಹಂತವಾಗಿ ಈ ಶಾಲೆಗಳನ್ನು ಕೆಪಿಎಸ್‌ಗಳಲ್ಲಿ ವಿಲೀನಗೊಳಿಸುವ ಯೋಜನೆ ಸರ್ಕಾರದ್ದಾಗಿದೆ.

ಶಿಕ್ಷಣ ತಜ್ಞರ ಆತಂಕ

ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಅವರು ಈ ನಿರ್ಧಾರವನ್ನು ಟೀಕಿಸಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಪಾಲಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಾರದೆ ಸಚಿವರು ಈ ನಿರ್ಧಾರ ತೆಗೆದುಕೊಂಡಂತೆ ಕಾಣುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳೇ ಜನತೆಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ವಿಲೀನಕ್ಕೆ ಕಾರಣಗಳು

  • ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು
  • ಶಿಕ್ಷಕರು, ಕಟ್ಟಡ, ಮೂಲಸೌಕರ್ಯಗಳ ಕೊರತೆ
  • ಗ್ರಾ.ಪಂ.ಗೊಂದು ಕೆಪಿಎಸ್ ಆರಂಭಿಸಿ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಏಕಕಾಲಿಕ ಶಿಕ್ಷಣ
  • ಸುತ್ತಲಿನ 5-10 ಶಾಲೆಗಳ ವಿಲೀನ
WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories