WhatsApp Image 2025 08 20 at 12.28.07 PM

ದಲಿತ ಸಮುದಾಯದಲ್ಲಿ ಎಡಗೈ-ಬಲಗೈ ಎಂದ್ರೇನು? | ಶೇ. 6 ರಷ್ಟು ಸಮಾನ ಒಳಮೀಸಲಾತಿ.| ಇತರೆ 5% ಮೀಸಲಾತಿ

Categories:
WhatsApp Group Telegram Group

ಆರಂಭದಲ್ಲಿ ಶೂದ್ರರೇ ಆಗಿದ್ದ ಎಡಗೈ-ಬಲಗೈ ಜಾತಿಗಳ ಕಾಲಾಂತರದಲ್ಲಿ ಈ ಜಾತಿಗಳ ನಡುವೆ ನಡೆದ ಪರಸ್ಪರ ಹೋರಾಟಗಳು ಅಂದರೆ ಇವರ ನಡುವೆ ಅಂತಹಾ ವ್ಯತ್ಯಾಸಗಳಿರದಿದ್ದರೂ ವೈದಿಕರ ಕುತಂತ್ರದಿಂದ ಈ ಎರಡೂ ಬಣಗಳ ನಡುವೆ ಮತ್ತು ಬಣದೊಳಗಿನ ಸಮುಧಾಯಗಳ ನಡುವೆ ಮನಸ್ತಾಪ ಮತ್ತು ವೈಮನಸ್ಯಗಳು ಹೆಚ್ಚಾಗಿ, ಕಸುಬಿನ ಆಧಾರದಲ್ಲಿ ವಿಂಗಡನೆಯಾಗಿದ್ದ ಪಂಗಡಗಳು ವೈದಿಕರ ಹಸ್ತಕ್ಷೇಪದಿಂದ ಜಾತಿಗಳಾಗಿ, ಉಪಜಾತಿಗಳಾಗಿ, ಸ್ಪೃಶ್ಯ-ಅಸ್ಪೃಶ್ಯ ಜಾತಿಗಳಾಗಿ ನಾನಾ ವಿಧದಲ್ಲಿ ಒಡೆದು ಹೋಳಾದವು.

ಪಣವ್ಯಾಜ್ಯದಲ್ಲಿ ಪಾಂಚಾಲರು ಮತ್ತು ವೈದಿಕರ ನಡುವೆ ಯಜಮಾನಿಕೆಗಾಗಿ ನಡೆದ ತಿಕ್ಕಾಟದಲ್ಲಿ, ಹೊಲೆಯರು ವೈದಿಕರ ಅಂದರೆ ಬ್ರಾಹ್ಮಣರ ಬೆಂಬಲಕ್ಕೆ ನಿಂತು ಅವರ ಹಿತಾಶಕ್ತಿಗಾಗಿ ಹೋರಾಡಿದರೆ., ಮಾದಿಗರು ಪಾಂಚಾಲರನ್ನು ಅಂದರೆ ಬಡಗಿ, ಕಂಚುಗಾರ, ಕಮ್ಮಾರ, ಕಲ್ಕುಟಿಗ, ಅಕ್ಕ ಸಾಲಿಗರನ್ನು ಮೇಲೆತ್ತಲು ತಮ್ಮೆಲ್ಲಾ ಸೃಜನ ಶೀಲತೆಯನ್ನು ಧಾರೆಯೆರೆದರು. ಆಗಿನ ಎಡಗೈ-ಬಲಗೈ ಜಾತಿಗಳ ಪಟ್ಟಿ ಈ ಕೆಳಗಿನ ಹೀಗಿತ್ತು

xcvcvxvvc 1

ಮುಂದೆ ಪಾಂಚಾಲರಿಗೆ ಪಣವ್ಯಾಜ್ಯದ ಫಲ ದೊರೆಯಿತು. ಅವರು ವೈದಕೀಕರಣಕ್ಕೆ ಒಳಗಾದರು. ವೈದಿಕರೇ ಅವರಿಗೆ ಆದರ್ಶವಾದರು. ಇವರಿಬ್ಬರ ಔನ್ನತ್ಯಕ್ಕಾಗಿ ಹೋರಾಡಿದ ಹೆಲೆಯ ಮತ್ತು ಮಾದಿಗ ಜಾತಿಗಳವರು ಮತ್ತೂ ಕೆಳಗೆ ದೂಡಲ್ಪಟ್ಟರು!

ಕಾಲಾಂತರದಲ್ಲಿ ಪಾಂಚಾಲರ ಹೊರತಾದ ಇನ್ನುಳಿದ ಎಡಗೈ-ಬಲಗೈನ ಜಾತಿಗಳಲ್ಲಿ ಹೊಲೆಯರು ಮತ್ತು ಮಾದಿಗರನ್ನು ಬಿಟ್ಟು, ಜನ ಸಂಖ್ಯೆಯಲ್ಲಿ ಬಲಿಷ್ಠರಾಗಿದ್ದು ಕುಶಾಗ್ರಮತಿಗಳಾಗಿದ್ದ ಮಿಕ್ಕ ಜಾತಿಗಳವರೆಲ್ಲಾ ವೈದಕೀಕರಣಕ್ಕೊಳಗಾಗಿ ಮೂರನೇ ಸ್ಥಾನ ಪಡೆದುಕೊಂಡರು ಅಂದರೆ ಸ್ಪೃಶ್ಯರೂ, ಕೆನೆಪದರದ ಶೂದ್ರರೂ ಆದರು.

ನಂತರದಲ್ಲಿ ಎಡಗೈ-ಬಲಗೈ ಜಾತಿಗಳೆಂದರೆ ಕೇವಲ ಹೊಲೆಯರು-ಮಾದಿಗರೆಂದೇ ಬಿಂಬಿಸುತ್ತ, ಅವುಗಳ ನಡುವೆ ಸೌಹಾರ್ದತೆ ಏರ್ಪಡದಂತೆ ಕಂದಕ ತೋಡಿ ಅಂತರವನ್ನು ಹೆಚ್ಚಿಸುತ್ತಾ, ಅವರನ್ನು ಕಡಿಮೆ ಕೂಲಿಯ ಆಳುಗಳನ್ನಾಗಿ, ತಮ್ಮ ಮನೆಯೊಳಹೊರಗಿನ ಗಲೀಜನ್ನು ತೆಗೆಯುವ ಜೀತದಾಳುಗಳನ್ನಾಗಿ, ತಮ್ಮ ಆಜ್ಞೆ ಪಾಲಿಸುವ ಗುಲಾಮರನ್ನಾಗಿ ಮಾಡಿಕೊಂಡು ಮೇಲಿನ ಎಲ್ಲಾ ಜಾತಿಗಳು ಅನುಕೂಲ ಪಡೆದುಕೊಂಡವು.

ಆದರೆ ಸ್ವಾತಂತ್ರ್ಯಾನಂತರದಲ್ಲಿ ದಲಿತರಿಗೆ ಸಂವಿಧಾನಬದ್ಧವಾಗಿ ದೊರೆತ ನಾನಾ ಕ್ಷೇತ್ರಗಳಲ್ಲಿನ ಮೀಸಲಾತಿ ಮತ್ತು ಶಿಕ್ಷಣದಲ್ಲಿ ತಮ್ಮ ಮಕ್ಕಳಿಗೆ ಸಿಗುವ ಸ್ಕಾಲರ್ಶಿಪ್ ನ ಆಸೆಗಾಗಿ, ಮೇಲ್ಪಂಕ್ತಿಗೇರಿಸಿಕೊಂಡಿದ್ದ ಜಾತಿಗಳು ದಲಿತರ ಪಟ್ಟಿಯೊಳಗೂ ತಮ್ಮನ್ನು ತೂರಿಸಿಕೊಂಡು, ನ್ಯಾಯಯುತವಾಗಿ ನಿಜವಾಗಿಯೂ ದಮನಕ್ಕೊಳಗಾದ ದಲಿತರಿಗೆ ಸಿಗಬೇಕಾದ ಸವಲತ್ತುಗಳನ್ನು ಕಸಿದುಕೊಳ್ಳುತ್ತಾ ಅವರನ್ನು ಬಡತನದಿಂದ ಕಡುಬಡತನಕ್ಕೆ ದೂಡವ ಮತ್ತು ಸದಾ ದಮನಿತರನ್ನಾಗೇ ಉಳಿಸುವ ಕಾರ್ಯವನ್ನು ಮೇಲ್ಜಾತಿಗಳು ಸಮರೋಪಾದಿಯಲ್ಲಿ ಮಾಡುತ್ತಾ ಬಂದವು.

ಹೊಲೆ-ಮಾದಿಗರ ನಡುವಿನ ಅಂತರವನ್ನು ಹೆಚ್ಚಿಸಿ ಪರಸ್ಪರರ ನಡುವೆ ಕಲಹ ಉಂಟುಮಾಡಿ ಅವರನ್ನು ಒಡೆದು ಆಳುವುದರಲ್ಲಿ ಮೇಲ್ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಿತಾಶಕ್ತಿ ಅಡಗಿದೆ. ಅದಕ್ಕಾಗಿ ಅವರ ನಡುವೆ ಎಂದೂ ಸಾಮರಸ್ಯ ಏರ್ಪಡದಂತೆ ಮಾಡುವುದು ಮೇಲ್ಜಾತಿಗಳವರಿಗೆ ಅವಶ್ಯವಿದೆ.

ಈ ಕುತಂತ್ರಗಳು, ಹುನ್ನಾರಗಳನ್ನು ಅರ್ಥಮಾಡಿಕೊಂಡು ಒಂದಾಗದೇ ಎಡಗೈ-ಬಲಗೈ ಎಂದು ಹೊಲೆ-ಮಾದಿಗರು ಬಡಿದಾಡಿಕೊಳ್ಳುತ್ತಿದ್ದರೆ ಅವರು ಶಾಶ್ವತವಾಗಿ ದಮನಿತರಾಗೇ ಉಳಿದು ಎಂದೂ ತಮ್ಮ ಸಾಮಾಜಿಕ, ಆರ್ಥಿಕ, ರಾಜಕೀಯ ಉನ್ನತಿಯನ್ನು ಮಾಡಿಕೊಳ್ಳಲಾರರು.(#ಪಣವ್ಯಾಜ್ಯ )

ಬೆಂಗಳೂರು, ಆಗಸ್ಟ್ 20 ಇತ್ತೀಚಿನ ವರದಿ ದಲಿತರ ಸಮುದಾಯಗಳಿಗೆ ಶೇ. 6 ಸಮಾನ ಒಳಮೀಸಲಾತಿ.!

ಬೆಂಗಳೂರು, ಆಗಸ್ಟ್ 20 : ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ದಶಕಗಳಷ್ಟು ಕಾಲ ಬಿಸಿ ಬಟ್ಟೆ ಯಾಗಿದ್ದ, ಸಮಾಜದಲ್ಲಿ ಆಳವಾದ ವಿಭಜನೆ ಮಾಡಿದ್ದ ದಲಿತ ಒಳ ಮೀಸಲಾತಿ ವಿವಾದಕ್ಕೆ ಕೊನೆಗೂ ಒಂದು ನಿರ್ಣಾಯಕ ಮತ್ತು ಐತಿಹಾಸಿಕ ತೀರ್ಮಾನ ಜಾರಿಗೆ ಬಂದಿದೆ. ಕರ್ನಾಟಕ ಸರ್ಕಾರವು ಸಚಿವ ಸಂಪುಟದ ಸಭೆಯಲ್ಲಿ ತೆಗೆದುಕೊಂಡ ಮಹತ್ವದ ನಿರ್ಧಾರದ ಪ್ರಕಾರ, ಪರಿಶಿಷ್ಟ ಜಾತಿಯ (SC) ಎರಡು ಪ್ರಮುಖ ಪಂಗಡಗಳಾದ ‘ಎಡಗೈ’ ಮತ್ತು ‘ಬಲಗೈ’ ಸಮುದಾಯಗಳಿಗೆ ತಲಾ 6% ರಷ್ಟು ಸಮಾನ ಮೀಸಲಾತಿ ನೀಡಲು ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ. ಈ ನಿರ್ಧಾರವನ್ನು ವಿಧಾನಸಭೆಯ ಅಧಿವೇಶನದಲ್ಲಿ ಅಧಿಕೃತವಾಗಿ ಘೋಷಿಸಲಾಗುವ ಸಾಧ್ಯತೆಯಿದೆ.

ದಲಿತ ಎಡಗೈ ಜಾತಿಗಳಿಗೆ 6ರಷ್ಟು ಮೀಸಲಾತಿ

ಭಾಂಬಿ, ಅಸದರು, ಅಸೋಡಿ, ಚಮಡಿಯಾ, ಚಮರ್, ಚಂಬರ, ಚಮಗಾರ, ಹರಳಯ್ಯ, ಹರಳಿ, ಖಾಲ್ಪ, ಮಚಿಗಾರ, ಮೋಚಿಗಾರ, ಮಾದರ, ಮಾದಿಗ, ಮೋಚಿ, ಮುಚ್ಚಿ, ತೆಲುಗು ಮೋಚಿ, ಕಾಮತಿ ಮೋಚಿ, ರಾಣಿಗಾರ್, ರೋಹಿದಾಸ್, ರೋಹಿತ್, ಸಮ್ಗರ್, ಹಕ್ಕಳಯ್ಯ, ಧೋರ್ಕ, ಹಕ್ಕಳಯ್ಯ, ಧೋರ್ಕಾ ಹಲಸ್ವರ, ಹಸ್ಲ, ಕಡಯ್ಯನ್, ಕೆಪ್ಮರಿಸ್, ಕೊಲುಪುಲ್ವಂಡಿಯು, ಕುಟುಂಬನ್, ಮಾದಿಗ, ಮಾವಿಲನ್, ಮೊಗೇರ್, ಪಂಚಮ, ಪನ್ನಿಯಾಂಡಿ, ಪರಯ್ಯನ್, ಪರಯ, ಸಮಗಾರ, ಸಾಂಬನ್

ದಲಿತ ಬಲಗೈ ಜಾತಿಗಳಿಗೆ 6% ಮೀಸಲಾತಿ

ಅಣಮುಕ್, ಅರೆ ಮಾಳ, ಅರವ ಮಾಳ, ಬಲಗೈ, ಛಲವಾದಿ, ಚಲವಾದಿ, ಚನ್ನಯ್ಯ, ಪಲ್ಲನ್, ಹೊಲಯ, ಹೊಲೆಯ, ಹೊಲೆಯ, ಮಹ್ಯವಂಶಿ, ಧೇಡ್, ವಂಕರ್, ಮಾರು ವಂಕರ್, ಮಾಳ, ಮಲ ಹಣ್ಣಾಯಿ, ಮಾಳ ಜಂಗಮ, ಮಾಳ ಮಾಸ್ತಿ, ಮಲ ಮಾರಾಟ, ನೆಟ್ಕಣಿ, ಮಹಾರ್, ತರಲ್, ಧೇಳು, ದೇಗುಲ ಮೇಗುಂದ,ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ.

ಇತರೆ 5% ಮೀಸಲಾತಿ ಒಳಪಡುವ ಜಾತಿಗಳು

ಬಕುಡ; ಬಂಜಾರ, ಲಂಬಾಣಿ, ಲಂಬಾಡ, ಲಂಬಾಡಿ, ಲಮಾಣಿ, ಸುಗಾಲಿ, ಸುಕಾಲಿ; ಭೋವಿ, ಓಡ್, ಒಡ್ಡೆ, ವಡ್ಡರ, ವಡ್ಡರ, ವಡ್ಡರ, ವಡ್ಡರ, ಕಲ್ಲುವಡ್ಡರ, ಬೋವಿ (ಬೆಸ್ತರಲ್ಲದ), ಮಣ್ಣುವಡ್ಡರ; ಎಲ್ಲಮಾಳ್ವಾರ್, ಯೆಲ್ಲಮ್ಮಲವಾಂಡ್ಲು; ಕೊರಚ, ಕೊರಚಾರ್; ಕೊರಮ, ಕೊರವ, ಕೊರವರ; ಲಿಂಗಾಡರ್; ಮುಕ್ರಿ; ಮುಂಡಾಲ; ಪಂಬದ; ಸಪಾರಿ; ತಿರ್ಗರ್, ತಿರ್ಬಂದ.

ನಾಗಮೋಹನ್ ದಾಸ್ ಸಮಿತಿ ಶಿಫಾರಸು ಮತ್ತು ಹಿಂದಿನ ವಿವಾದ:

ಈ ನಿರ್ಧಾರಕ್ಕೆ ಮುನ್ನ, ನಾಗಮೋಹನ್ ದಾಸ್ ಅವರ ನೇತೃತ್ವದ ಸಮಿತಿಯು ತನ್ನ ವರದಿಯಲ್ಲಿ ಎಡಗೈ ಸಮುದಾಯಕ್ಕೆ 6% ಮತ್ತು ಬಲಗೈ ಸಮುದಾಯಕ್ಕೆ 5% ಮೀಸಲಾತಿ ನೀಡಲು ಶಿಫಾರಸು ಮಾಡಿತ್ತು. ಈ ‘ಅಸಮ ಪ್ರಮಾಣ’ವೇ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ಬಲಗೈ ಸಮುದಾಯವು ತಮಗೆ ಕಡಿಮೆ ಮೀಸಲಾತಿ ನೀಡುವ ಈ ಶಿಫಾರಸನ್ನು ತೀವ್ರವಾಗಿ ವಿರೋಧಿಸಿತು ಮತ್ತು ರಾಜ್ಯದಾದ್ಯಂತ ಹಲವಾರು ಪ್ರತಿಭಟನೆಗಳನ್ನು ಮಾಡಿತು. ಅವರ ವಾದವು ಜನಸಂಖ್ಯೆ ಮತ್ತು ಸಾಮಾಜಿಕ-ಆರ್ಥಿಕ ಹಿಂದುಳಿತದ ಆಧಾರದ ಮೇಲೆ ಸಮಾನ ಹಂಚಿಕೆ ಆಗಬೇಕು ಎಂಬುದಾಗಿತ್ತು.

ಹೊಸ ತೀರ್ಮಾನದ ಮಹತ್ವ ಮತ್ತು ವಿವರಗಳು:

ಸರ್ಕಾರದ ಈ ಹೊಸ ತೀರ್ಮಾನವು ಈ ದೀರ್ಘಕಾಲೀನ ಅಸಮಾಧಾನ ಮತ್ತು ಅಸ್ಥಿರತೆಗೆ ಪರಿಹಾರ ನೀಡುವ ಉದ್ದೇಶ ಹೊಂದಿದೆ. ಈಗಿನ ನಿರ್ಧಾರದ ಪ್ರಕಾರ:

  • ಎಡಗೈ ಸಮುದಾಯ (18 ಜಾತಿಗಳು): 6% ಮೀಸಲಾತಿ
  • ಬಲಗೈ ಸಮುದಾಯ (20 ಜಾತಿಗಳು): 6% ಮೀಸಲಾತಿ
  • ಇತರೆ ದಲಿತ ಜಾತಿಗಳು (ಬೋವಿ, ಲಂಬಾಣಿ, ಕೊರಮ, ಕೊರಚ, ಮುಂತಾದ 63 ಜಾತಿಗಳು): 5% ಮೀಸಲಾತಿ

ಈ ರೀತಿಯಾಗಿ, ಒಟ್ಟು ಪರಿಶಿಷ್ಟ ಜಾತಿಯ ಮೀಸಲಾತಿ 17% ಯಥಾತ್ತವಾಗಿ ಉಳಿದರೂ, ಅದರ ಆಂತರಿಕ ಹಂಚಿಕೆಯಲ್ಲಿ ಸಮತೋಲನ ಸಾಧಿಸಲಾಗಿದೆ.

ಸಚಿವ ಸಂಪುಟದ ಚರ್ಚೆ: ಸಮುದಾಯಗಳ ಹಿತಾಸಕ್ತಿಗಳ ಘರ್ಷಣೆ

ಈ ತೀರ್ಮಾನವನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸಚಿವ ಸಂಪುಟ ಸಭೆಯು ತೀವ್ರ ಚರ್ಚೆಗೆ ಒಳಗಾಯಿತು. ವಿವಿಧ ಸಮುದಾಯಗಳನ್ನು ಪ್ರತಿನಿಧಿಸುವ ಸಚಿವರು ತಮ್ಮ ತಮ್ಮ ಹಿತಾಸಕ್ತಿಗಳನ್ನು ಜೋರಾಗಿ ಮಂಡಿಸಿದರು.

  • ಶಿವರಾಜ್ ತಂಗಡಗಿ ಅವರು ಭೋವಿ ಸಮುದಾಯದ ಹಿತಾಸಕ್ತಿಗಳನ್ನು ಮುಂದಿಟ್ಟು, ಅವರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು.
  • ಡಾ. ಜಿ. ಪರಮೇಶ್ವರ್ ಮತ್ತು ಡಾ. ಹೆಚ್.ಸಿ. ಮಹದೇವಪ್ಪ ಅವರಂತಹ ದಲಿತ ನೇತೃತ್ವದ ಸಚಿವರು ತಮ್ಮ ಸಮುದಾಯಗಳಿಗೆ ಸಮಾನ ಮೀಸಲಾತಿ ಹಂಚಿಕೆಯಾಗಬೇಕೆಂದು ದೃಢವಾಗಿ ವಾದಿಸಿದರು.
  • ಮುನಿಯಪ್ಪ ಅವರು ತಮ್ಮ ಸಮುದಾಯದ ಜನಸಂಖ್ಯೆ ಹೆಚ್ಚಿರುವುದರಿಂದ ಹೆಚ್ಚಿನ ಮೀಸಲಾತಿ ಪಾಲನ್ನು ಒತ್ತಾಯಪೂರ್ವಕವಾಗಿ ಕೋರಿದರು.
  • ಡಾ. ಪರಮೇಶ್ವರ್ ಅವರು ‘ಆದಿ ಕರ್ನಾಟಕ’ (AK) ಮತ್ತು ‘ಆದಿ ದ್ರಾವಿಡ’ (AD) ಪ್ರಮಾಣಪತ್ರಗಳ ಗೊಂದಲದ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು. ಕೆಲವು ಜಿಲ್ಲೆಗಳಲ್ಲಿ ಈ ಸಮುದಾಯಗಳನ್ನು ಎಡಗೈ ಗುಂಪಿಗೆ ಸೇರಿಸಿದರೆ, ಇನ್ನು ಕೆಲವು ಜಿಲ್ಲೆಗಳಲ್ಲಿ ಬಲಗೈ ಗುಂಪಿಗೆ ಸೇರಿಸಲಾಗುತ್ತದೆ. ಈ ಅಸ್ಪಷ್ಟತೆಯನ್ನು ಬಗೆಹರಿಸುವ ಅಗತ್ಯವಿದೆ ಎಂದು ಸಲಹೆ ಮಾಡಿದರು.

ಮುಂದಿನ ಹೆಜ್ಜೆ ಮತ್ತು ನಿರೀಕ್ಷೆಗಳು:

ಈ ತೀರ್ಮಾನದ ಅಂತಿಮ ಆದೇಶವನ್ನು ಇನ್ನೆರಡು ದಿನಗಳೊಳಗೆ ಹೊರಡಿಸಲಾಗುವ ನಿರೀಕ್ಷೆಯಿದೆ. ರಾಜ್ಯದ ದಲಿತ ಸಮುದಾಯದ ಎರಡೂ ಪ್ರಬಲ ಪಂಗಡಗಳ ನಡುವೆ ದಶಕಗಳಿಂದಲೂ ಇದ್ದ ಅಸಮಾಧಾನ ಮತ್ತು ಅಸ್ಥಿರತೆಯನ್ನು ಈ ನಿರ್ಧಾರ ತಗ್ಗಿಸಲು ಸಹಾಯ ಮಾಡುತ್ತದೆ ಎಂದು ರಾಜಕೀಯ ವಲಯಗಳು ಮತ್ತು ಸಾಮಾಜಿಕ ಕಾರ್ಯಕರ್ತರು ನಿರೀಕ್ಷಿಸಿದ್ದಾರೆ. ಇದು ಸಮಾಜದಲ್ಲಿನ ನ್ಯಾಯ ಮತ್ತು ಸಮಾನತೆಯ ದಿಶೆಯಲ್ಲಿ ಒಂದು ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories