Picsart 25 10 31 23 14 45 125 scaled

ಉತ್ತರ ದಿಕ್ಕಿನ 5 ಶುಭ ವಸ್ತುಗಳು: ಮನೆಗೆ ಹಣ, ಅದೃಷ್ಟ ಮತ್ತು ಶಾಂತಿ ತರೋದು ಹೇಗೆ?  

WhatsApp Group Telegram Group

ಭಾರತೀಯ ಪಾರಂಪರಿಕ ವಾಸ್ತುಶಾಸ್ತ್ರದಲ್ಲಿ ದಿಕ್ಕುಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಮನೆ ಕಟ್ಟುವಾಗ, ಕೊಠಡಿಗಳ ವಿನ್ಯಾಸ ಮಾಡುವಾಗ, ಹಾಗೂ ಮನೆ ಒಳಗೆ ಯಾವ ವಸ್ತುವನ್ನು ಎಲ್ಲಿಡಬೇಕು ಎಂಬುದನ್ನು ನಿರ್ಧರಿಸುವಾಗ ದಿಕ್ಕುಗಳ ಶಕ್ತಿ ಮತ್ತು ಅವುಗಳ ಪ್ರಭಾವವನ್ನು ಗಮನದಲ್ಲಿಟ್ಟುಕೊಳ್ಳುವುದೇ ವಾಸ್ತು. ಪ್ರತಿಯೊಂದು ದಿಕ್ಕಿಗೂ ಅದರದೇ ಆದ ದೇವತೆ ಹಾಗೂ ಶಕ್ತಿಯ ಸ್ವರೂಪವಿದೆ ಎಂದು ನಂಬಲಾಗಿದೆ. ಅದರಲ್ಲಿ ಉತ್ತರ ದಿಕ್ಕು ಅತ್ಯಂತ ವಿಶೇಷ ಸ್ಥಾನ ಪಡೆದುಕೊಂಡಿದೆ. ವಾಸ್ತು ಪ್ರಕಾರ ಇದು ಧನದೇವರಾದ ಕುಬೇರನ ದಿಕ್ಕು. ಈ ದಿಕ್ಕಿನಲ್ಲಿ ಸರಿಯಾದ ವಸ್ತುಗಳನ್ನು ಇಡುವುದರಿಂದ ಮನೆಯಲ್ಲಿ ಆರ್ಥಿಕ ಸ್ಥಿರತೆ, ಸಮೃದ್ಧಿ, ಶಾಂತಿ, ಮತ್ತು ಶುಭಶಕ್ತಿ ಹೆಚ್ಚುತ್ತದೆ ಎಂದು ವಾಸ್ತು ತಜ್ಞರ ಹೇಳುತ್ತಾರೆ. ಹಾಗಿದ್ದರೆ, ಮನೆ ಅಥವಾ ಕಚೇರಿಯ ಉತ್ತರ ದಿಕ್ಕಿನಲ್ಲಿ ಈ 5 ವಿಶೇಷ ವಸ್ತುಗಳ ಇಡುವುದರಿಂದ ಧನಲಾಭ ಮತ್ತು ಸಕಾರಾತ್ಮಕ ಫಲ ನೀಡುತ್ತದೆ. ಹಾಗಿದ್ದರೆ ಆ ವಿಶೇಷ ವಸ್ತುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಉತ್ತರ ದಿಕ್ಕಿನಲ್ಲಿ ಇಡಬೇಕಾದ 5 ವಾಸ್ತು ವಸ್ತುಗಳು ಹೀಗಿವೆ:

ನೀರಿನ ಮಡಕೆ, ಕಾರಂಜಿ (Water Element):

ಉತ್ತರ ದಿಕ್ಕು ನೀರಿನ ತತ್ತ್ವವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಈ ಭಾಗದಲ್ಲಿ ನೀರನ್ನು ಸೂಚಿಸುವ ವಸ್ತುಗಳನ್ನು ಇಡುವುದು ಅತ್ಯಂತ ಅನುಕೂಲಕರ. ಉದಾಹರಣೆಗೆ, ನೀರಿನ ಮಡಕೆ, ಸಣ್ಣ ಕಾರಂಜಿ, ನೀರಿನ ಶುದ್ಧೀಕರಣ ಯಂತ್ರಗಳು.

ಇದರಿಂದ ಆಗುವ ಲಾಭಗಳು ಏನು?
ಮನೆಯಲ್ಲಿ ಒಳ್ಳೆಯ ಆಲೋಚನೆಗಳ ವೃದ್ಧಿ.
ಕೆಲಸದಲ್ಲಿ ಬರುವ ಅಡೆತಡೆಗಳ ದೂರಿಕೆ.
ಕುಟುಂಬದ ಆರ್ಥಿಕ ಸ್ಥಿತಿ ಮತ್ತು ಆರೋಗ್ಯ ಸುಧಾರಣೆ.

ನಗದು ಪೆಟ್ಟಿಗೆ ಅಥವಾ ಲಾಕರ್ (Cash Locker):

ಕುಬೇರನ ಆಶೀರ್ವಾದ ಪಡೆಯಲು ಹಣದ ಪೆಟ್ಟಿಗೆ ಅಥವಾ ಲಾಕರ್ ಉತ್ತರ ದಿಕ್ಕಿನಲ್ಲಿ ಇರಿಸುವುದು ಅತ್ಯಂತ ಶುಭ ಎಂದು ನಂಬಲಾಗಿದೆ.

ವಾಸ್ತು ನಂಬಿಕೆ:

ಉತ್ತರ ದಿಕ್ಕಿನಲ್ಲಿ ಹಣ ಇದ್ದರೆ ಮನೆಯಲ್ಲಿ ಹಣದ ಕೊರತೆ ಎದುರಾಗುವುದಿಲ್ಲ.

ಇದರಿಂದ ಸಿಗುವ ಲಾಭಗಳು ಏನು?:
ಹೊಸ ಆದಾಯ ಮಾರ್ಗಗಳು ತೆರೆದುಕೊಳ್ಳುವುದು.
ಆರ್ಥಿಕ ಪ್ರಗತಿ.
ದುರಾದೃಷ್ಟ ದೂರವಾಗುವುದು.
ಕುಟುಂಬದಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗುತ್ತದೆ.

ನದಿ ಅಥವಾ ಜಲಪಾತದ ಚಿತ್ರ (Flowing Water Painting):

ನೀರಿಗೆ ಸಂಬಂಧಿಸಿದ ಚಿತ್ರಗಳು ಮನೆಯ ಎನರ್ಜಿ ಫ್ಲೋ ಅನ್ನು ಜಾಗೃತಗೊಳಿಸುತ್ತವೆ.
ಉದಾಹರಣೆಗೆ, ಉತ್ತರ ದಿಕ್ಕಿನಲ್ಲಿ ಈ ಚಿತ್ರಗಳನ್ನು ಇರಿಸಬಹುದು ಹರಿಯುವ ನದಿಯ ಚಿತ್ರ, ಜಲಪಾತ, ನೀಲಾಕಾಶ ಮತ್ತು ನೀರು ಇರುವ ಚಿತ್ರ.

ಇದರಿಂದ ಸಿಗುವ ಲಾಭಗಳು ಯಾವುವು?:
ಮನೆಯಲ್ಲಿನ ಜಗಳ ತಕರಾರು ಕಡಿಮೆಯಾಗುತ್ತವೆ.
ಮನೆಯಲ್ಲಿ ಶಾಂತಿ ಮತ್ತು ಪ್ರೀತಿ ಹೆಚ್ಚಾಗುತ್ತದೆ.
ಮಾನಸಿಕ ಶಾಂತಿ ಮತ್ತು ಸಕಾರಾತ್ಮಕತೆ ಇರುತ್ತದೆ.

ಮೀನಿನ ತೊಟ್ಟಿ (Fish Aquarium):

ವಾಸ್ತು ಪ್ರಕಾರ ಉತ್ತರ ದಿಕ್ಕಿನಲ್ಲಿ ಮೀನಿನ ತೊಟ್ಟಿಯನ್ನು ಇಡುವುದು ಅತ್ಯಂತ ಶುಭಕರ.
9 ಮೀನುಗಳನ್ನು ಹಾಕುವುದು ಉತ್ತಮ.
8 ಚಿನ್ನದ ಮೀನುಗಳು + 1 ಕಪ್ಪು ಮೀನು (ವಾಸ್ತು ಶಿಫಾರಸು).

ಇದರಿಂದ ಸಿಗುವ ಲಾಭಗಳು ಏನು?
ಮನೆಯಲ್ಲಿನ ಕೆಟ್ಟ ಶಕ್ತಿಗಳು ದೂರವಾಗುತ್ತವೆ.
ಸುಭಿಕ್ಷತೆ ಮತ್ತು ಧನಲಾಭ ಹೆಚ್ಚಾಗುತ್ತದೆ.
ಕೆಲಸದಲ್ಲಿ ಯಶಸ್ಸು.
ಕುಟುಂಬದಲ್ಲಿ ಸಕಾರಾತ್ಮಕ ವಾತಾವರಣ ಇರುತ್ತದೆ.

ಕುಬೇರನ ವಿಗ್ರಹ ಅಥವಾ ಚಿತ್ರ (Lord Kubera Idol/Picture):

ಉತ್ತರ ದಿಕ್ಕು ಕುಬೇರನ ದಿಕ್ಕಾದ್ದರಿಂದ ಇಲ್ಲಿ ಕುಬೇರನ ಚಿತ್ರ ಅಥವಾ ವಿಗ್ರಹ ಇಡುವುದು ಅತ್ಯಂತ ಲಾಭಕರ.

ಇದರಿಂದ ಸಿಗುವ ಲಾಭಗಳು ಏನು?
ಮನೆಯಲ್ಲಿ ಅನಂತ ಸಂಪತ್ತು ಮತ್ತು ಐಶ್ವರ್ಯ.
ಕುಟುಂಬ ಸದಸ್ಯರಿಗೆ ಕುಬೇರನ ಆಶೀರ್ವಾದ.
ಜೀವನದಲ್ಲಿ ಪ್ರಗತಿ ಮತ್ತು ಯಶಸ್ಸು.
ಆರ್ಥಿಕ ಸ್ಥಿರತೆ ಇರುತ್ತದೆ.

ಒಟ್ಟಾರೆಯಾಗಿ, ಉತ್ತರ ದಿಕ್ಕು ನಿಮ್ಮ ಮನೆಯ ಆರ್ಥಿಕ ನೆರವಿಗೆ ಒಳಿತನ್ನು ಮಾಡುತ್ತದೆ. ಈ ದಿಕ್ಕಿನಲ್ಲಿ ಸರಿಯಾದ ವಸ್ತುಗಳನ್ನು ಇಡುವುದರಿಂದ ಮನೆಯಲ್ಲಿ ಲಕ್ಷಿ ಯಾವಾಗಲೂ ನೆಲೆಸಿರುತ್ತಾಳೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories