Picsart 25 06 30 23 56 29 906 scaled

ವಿದೇಶ ದಲ್ಲಿದ್ದ 100 ಮೆಟ್ರಿಕ್ ಟನ್ ಬಂಗಾರ ವಾಪಸ್​ ತಂದ RBI: ಚಿನ್ನದ ಬೆಲೆ ಭಾರಿ ಕುಸಿತ?ಇಲ್ಲಿದೆ ಡೀಟೇಲ್ಸ್

Categories:
WhatsApp Group Telegram Group

ಆರ್ಥಿಕ ಸ್ವಾಯತ್ತತೆಯ ದಿಟ್ಟ ಹೆಜ್ಜೆ: RBI ವಿದೇಶಿ ನಿಕ್ಷೇಪದಿಂದ(RBI foreign reserves) 100 ಟನ್ ಚಿನ್ನವನ್ನು ಭಾರತಕ್ಕೆ ವಾಪಸ್ ತರಲಾಗುತ್ತಿದೆ.

ಭಾರತದ ಆರ್ಥಿಕ ಸ್ವಾವಲಂಬನೆಗೆ ಹೊಸ ದಿಕ್ಕನ್ನು ನೀಡುವ ಮಹತ್ತರ ಹೆಜ್ಜೆಯೊಂದನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ತೆಗೆದುಕೊಂಡಿದೆ. 2024-25ರ ಹಣಕಾಸು ವರ್ಷದ ಅಂತ್ಯದ ವೇಳೆಗೆ, ಆರ್‌ಬಿಐ ತನ್ನ ವಿದೇಶಿ ಚಿನ್ನದ ನಿಕ್ಷೇಪಗಳಿಂದ 100.32 ಮೆಟ್ರಿಕ್ ಟನ್ ಭೌತಿಕ ಚಿನ್ನವನ್ನು ಭಾರತಕ್ಕೆ ಮರಳಿ ತರಲಿದೆ. ಈ ಮೂಲಕ ಭಾರತದಲ್ಲಿನ ಒಟ್ಟು ಸ್ಥಳೀಯ ಚಿನ್ನದ ನಿಕ್ಷೇಪ (physical gold stock) 200.06 ಮೆಟ್ರಿಕ್ ಟನ್‌ಗೆ ಏರಿಕೆಯಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಇದು ಭಾರತದ ಆರ್ಥಿಕ ಇತಿಹಾಸದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ವಿದೇಶಿ ಸಂಗ್ರಹದಲ್ಲಿದ್ದ ಸುಮಾರು 100.32 ಮೆಟ್ರಿಕ್ ಟನ್ ಚಿನ್ನವನ್ನು ಭಾರತಕ್ಕೆ ಮರಳಿ ತರಲು ಎಚ್ಚರಿಕೆಯಿಂದ ನಿರ್ಧಾರ ಕೈಗೊಂಡಿದೆ. ಈ ತೀರ್ಮಾನವು ಒಂದು ದಿಟ್ಟ ಹೆಜ್ಜೆಯಾಗಿ ಪರಿಗಣಿಸಲ್ಪಡುತ್ತಿದ್ದು, ದೇಶದ ಆರ್ಥಿಕ ಭದ್ರತೆ, ಸ್ವಾಯತ್ತತೆ ಮತ್ತು ಭವಿಷ್ಯದ ಆರ್ಥಿಕ ಬಿಕ್ಕಟ್ಟುಗಳಿಗೆ ತಕ್ಕ ಮುನ್ನೆಚ್ಚರಿಕೆಯ ಕ್ರಮವಾಗಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿಯಲ್ಲಿ ಉಂಟಾಗಬಹುದಾದ ಅನಿಶ್ಚಿತತೆ, ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಹಳೆಯ ಹಣಕಾಸು ವ್ಯವಸ್ಥೆಗಳ ಮೇಲೆ ಹೆಚ್ಚುತ್ತಿರುವ ಅವಲಂಬನೆ ಇತ್ಯಾದಿ ಕಾರಣಗಳಿಂದಾಗಿ ಭಾರತ ತನ್ನ ಚಿನ್ನದ ನಿಕ್ಷೇಪಗಳನ್ನು ದೇಶೀಯ ಭಂಡಾರಗಳಿಗೆ ಸ್ಥಳಾಂತರಿಸಿತು.

ಈ ಹಿಂದೆ ಈ ಚಿನ್ನವನ್ನು ಲಂಡನ್‌ನ ಬ್ಯಾಂಕ್ ಆಫ್ ಇಂಗ್ಲೆಂಡ್(Bank of England, London) ಸೇರಿದಂತೆ ಸ್ವಿಟ್ಜರ್‌ಲ್ಯಾಂಡ್‌ನ ಬ್ಯಾಸೆಲ್(Basel, Switzerland) ನಗರದಲ್ಲಿರುವ ಬ್ಯಾಂಕ್ ಫಾರ್ ಇಂಟರ್‌ನ್ಯಾಷನಲ್ ಸೆಟಲ್‌ಮೆಂಟ್ಸ್ (BIS) ಮತ್ತು ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಆಫ್ ನ್ಯೂಯಾರ್ಕ್(American Federal Reserve Bank of New York) ನಂತಹ ಸ್ಥಿರ ಬಾಂಧವ್ಯಗಳ ಮೂಲಕ ವಿದೇಶಗಳಲ್ಲಿ ಸಂಗ್ರಹಿಸಲಾಗುತ್ತಿತ್ತು. ಆದರೆ ವಿಶ್ವದ ತೀವ್ರ ರಾಜಕೀಯ ಹಾಗೂ ಆರ್ಥಿಕ ಅನಿಶ್ಚಿತತೆಗಳ ಮಧ್ಯೆ ಚಿನ್ನವನ್ನು ಸ್ವದೇಶಕ್ಕೆ ತರಬೇಕೆಂಬ ತೀರ್ಮಾನವನ್ನು ಆರ್‌ಬಿಐ ಕೈಗೊಂಡಿದೆ.

ಏಕೆ ಚಿನ್ನವನ್ನು ವಿದೇಶಗಳಿಂದ ಭಾರತಕ್ಕೆ ಮರಳಿ ತರಲಾಗುತ್ತಿದೆ?:

ಆರ್ಥಿಕ ತಜ್ಞರ ಅಭಿಪ್ರಾಯದಲ್ಲಿ, ವಿದೇಶಗಳಲ್ಲಿ ಸಂಗ್ರಹವಾಗಿರುವ ಚಿನ್ನವು ಕೆಲವು ಸಂದರ್ಭಗಳಲ್ಲಿ ರಾಜಕೀಯ-ಆರ್ಥಿಕ ಕುತಂತ್ರಗಳು ಅಥವಾ ನಿರ್ಬಂಧಗಳ ಪರಿಣಾಮವಾಗಿ ಅಪಾಯಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಅದರ ಬದಲಾಗಿ, ದೇಶೀಯವಾಗಿ ಚಿನ್ನವನ್ನು ಭದ್ರವಾಗಿ ಸಂಗ್ರಹಿಸುವುದು ನಿಜವಾದ ಸುರಕ್ಷತೆ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣ ಲಭ್ಯತೆ ಎಂಬ ಆರ್ಥಿಕ ಉದ್ದೇಶಗಳಿಂದ  ಈ ರೀತಿಯ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇನ್ನು, ಇದರಿಂದ RBI ತನ್ನ ಆರ್ಥಿಕ ನಿರ್ಧಾರಗಳನ್ನು ಬಹುಮಟ್ಟಿಗೆ ಸ್ವತಂತ್ರವಾಗಿ ತೆಗೆದುಕೊಳ್ಳಬಹುದಾಗಿದೆ. ಇದರಿಂದ ದೇಶದ ಆರ್ಥಿಕ ನೀತಿಯ ಮೇಲೆ ಬರುವ ವಿದೇಶಿ ಪ್ರಭಾವ ಕಡಿಮೆಯಾಗಲಿದೆ ಮತ್ತು ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಚಿನ್ನವನ್ನು ಆಸ್ತಿ ರೂಪದಲ್ಲಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ.

ಚಿನ್ನದ ಬೆಲೆಯಲ್ಲಿ ಏನಾದರೂ ಬದಲಾವಣೆ ಸಾಧ್ಯವೇ?:

ಈ ಹೆಜ್ಜೆಯ ನಂತರ, ಚಿನ್ನದ ಮಾರುಕಟ್ಟೆಯಲ್ಲಿ ಪರಿಣಾಮಗಳು ಕಾಣಿಸಿಕೊಳ್ಳಬಹುದೆಂದು ಕೆಲ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ಹೆಚ್ಚು ಚಿನ್ನ ಲಭ್ಯವಿರುವುದು ಮತ್ತು ಆರ್‌ಬಿಐ(RBI) ತನ್ನ ನೆರವಿಗೆ ಅದನ್ನು ಉಪಯೋಗಿಸಬಹುದಾದ ಸ್ಥಿತಿಯು ಚಿನ್ನದ ಬೆಲೆಯಲ್ಲಿ ಇಳಿಕೆ ತರಬಹುದು ಎಂದು ಅಂದಾಜಿಸಲಾಗಿದೆ.

ಹೆಚ್ಚುವರಿ ಚಿನ್ನದ ಲಭ್ಯತೆ, ಮತ್ತು ಚಿನ್ನದ ಮೇಲಿನ ತಾತ್ಕಾಲಿಕ ಬೇಡಿಕೆಯಲ್ಲಿ ಉಂಟಾಗುವ ಏರುಪೇರಿನಿಂದಾಗಿ ಬೆಲೆಯು ಸಮತೋಲಿತವಾಗಬಹುದು. ಕೆಲವೊಂದು ವರದಿಗಳ ಪ್ರಕಾರ, ಮುಂಬರುವ ತಿಂಗಳಲ್ಲೇ ಚಿನ್ನದ ಬೆಲೆಯಲ್ಲಿ ಶೇ. 20ರಿಂದ 30ರಷ್ಟು ಇಳಿಕೆ ಸಾಧ್ಯ ಎಂದು ಹೇಳಲಾಗುತ್ತಿದೆ.

ಆರ್ಥಿಕ ದೃಷ್ಟಿಕೋನದಿಂದ ಈ ಹೆಜ್ಜೆ ಮಹತ್ವ:

ಆರ್‌ಬಿಐ ತನ್ನ 2023-24 ರ ವಾರ್ಷಿಕ ವರದಿಯಲ್ಲಿ ಈ ಮಾಹಿತಿಯನ್ನು ಅಧಿಕೃತವಾಗಿ ದಾಖಲಿಸಿದೆ. ಚಿನ್ನದ ನಿಕ್ಷೇಪಗಳ(Gold deposits) ಮೌಲ್ಯವು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಶೇ.57.12ರಷ್ಟು ಹೆಚ್ಚಾಗಿದೆ. ರೂ. 2,74,714.27 ಕೋಟಿಯಿಂದ ರೂ. 4,31,624.80 ಕೋಟಿಗೆ ಏರಿಕೆಯಾಗಿದೆ. ಇದಕ್ಕೆ ಕಾರಣಗಳು ಕೆಳಗಿನಂತಿವೆ,
54.13 ಮೆಟ್ರಿಕ್ ಟನ್ ಹೊಸ ಚಿನ್ನದ ಸೇರ್ಪಡೆ.
ಚಿನ್ನದ ಜಾಗತಿಕ ಮೌಲ್ಯದಲ್ಲಿ ಏರಿಕೆ.
ಭಾರತೀಯ ರೂಪಾಯಿಯ ಮೌಲ್ಯ ಕುಸಿತ.
ಈ ಮೂರು ಅಂಶಗಳೂ RBI ಯ ಚಿನ್ನದ ಮೌಲ್ಯವನ್ನು ಹೆಚ್ಚಿಸಿದವು. ಇದು ದೇಶದ ವಿದೇಶಿ ವಿನಿಮಯ ಭಂಡಾರಕ್ಕೆ ಹೊಸ ಬಲ ನೀಡುತ್ತದೆ.

ಒಟ್ಟಾರೆಯಾಗಿ, ಭಾರತದ ಆರ್ಥಿಕತೆಯ ದೀರ್ಘಕಾಲಿಕ ದೃಷ್ಟಿಕೋನದಲ್ಲಿ ಈ ಹೆಜ್ಜೆ ಬಹುಮೂಲ್ಯವಾಗಿದೆ. ಚಿನ್ನದಂತಹ ನಗದು ಸಮಾನವಾದ ಆಸ್ತಿಯನ್ನು ಸ್ವದೇಶದಲ್ಲಿ ಹೊಂದಿರುವುದು ಬಹಳ ಮುಖ್ಯ. ಭವಿಷ್ಯದ ಹಣಕಾಸು ಬಿಕ್ಕಟ್ಟುಗಳನ್ನು ಎದುರಿಸಲು ಇದು ಪೂರಕವಾಗಾಲಿದೆ. ಇನ್ನು, ಇಂತಹ ತೀರ್ಮಾನಗಳು ಚಿನ್ನದ ಮೌಲ್ಯ ಮತ್ತು ಹೂಡಿಕೆದಾರರ ನಿರೀಕ್ಷೆಗಳಿಗೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಆದರೆ ಅದರ ಹಿಂದಿನ ಉದ್ದೇಶ ರಾಷ್ಟ್ರದ ಆರ್ಥಿಕ ಭದ್ರತೆ ಮತ್ತು ಸ್ವಾಯತ್ತತೆಯ ಮೆರುಗು ಎಂಬುದು ಸ್ಪಷ್ಟ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories