2024-25: ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಹವಾಮಾನ ಆಧಾರಿತ ವಿಮೆ(Weather based insurance): WBCIS ಯೋಜನೆ ಅಡಿಯಲ್ಲಿ ಬೆಳೆವಿಮೆ ಪಡೆಯಲು FID ಕಡ್ಡಾಯ!
ರಾಜ್ಯದ ತೋಟಗಾರಿಕೆ ಬೆಳೆಗಾರರಿಗೆ 2024-25 ನೇ ಸಾಲಿನಲ್ಲಿ ಒದಗಿರುವ ಮಹತ್ವದ ಭದ್ರತಾ ಪ್ರಯೋಜನವೆಂದರೆ ಬೆಳೆ ವಿಮೆ ಯೋಜನೆ. ಹವಾಮಾನ ಆಧಾರಿತ ಈ ವಿಮೆ ಯೋಜನೆಯಡಿ ಅಡಿಕೆ, ಮಾವು, ಕಾಳುಮೆಣಸು, ದಾಳಿಂಬೆ, ವಿಳ್ಯದೆಲೆ ಸೇರಿದಂತೆ ಹಲವು ತೋಟಗಾರಿಕೆ ಬೆಳೆಗಳಿಗೆ ವಿಮಾ ನೀಡಲಾಗುತ್ತಿದೆ. ಈ ಯೋಜನೆ ತೋಟಗಾರಿಕೆ ಇಲಾಖೆ ಹಾಗೂ ವಿಮಾ ಕಂಪನಿಗಳ ಸಹಯೋಗದಲ್ಲಿ ರೈತರ ಆತ್ಮವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಾರಿಗೆ ತರಲಾಗಿದ್ದು, ಬೆಳೆ ನಷ್ಟದ ಹಿನ್ನಲೆಯಲ್ಲಿ ಸಂಭವಿಸುವ ಆರ್ಥಿಕ ಹೊರೆಗಳಿಂದ ರೈತರನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಹಾಗಿದ್ದರೆ ರೈತರು ಈ ವಿಮೆಗಾಗಿನ ಅರ್ಜಿ ಸಲ್ಲಿಸುವುದು ಹೇಗೆ? ಯಾವೆಲ್ಲ ಅಗತ್ಯ ದಾಖಲೆಗಳು ಬೇಕು? ಪ್ರಿಮಿಯಂ ಮೊತ್ತ ಸೇರಿದಂತೆ ಅಂತಿಮ ದಿನಾಂಕದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ರಾಜ್ಯದಲ್ಲಿ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ (Weather Based Crop Insurance Scheme – WBCIS) ತೋಟಗಾರಿಕೆ ಬೆಳೆಗಳಿಗೆ ವಿಮೆ ಕಲ್ಪಿಸುವ ಯೋಜನೆ ಇದೀಗ 2024-25ನೇ ಸಾಲಿಗೆ ಮರು ರೂಪುಗೊಂಡು, ರೈತರಿಗೆ ಹೊಸ ಅವಕಾಶಗಳನ್ನು ಒದಗಿಸಿವೆ. ಅಡಿಕೆ, ಮಾವು, ಕಾಳುಮೆಣಸು, ದಾಳಿಂಬೆ, ವಿಳ್ಯದೆಲೆ ಸೇರಿದಂತೆ ಹಲವಾರು ತೋಟಗಾರಿಕೆ ಬೆಳೆಗಳಿಗೆ ಈಗ ಸರ್ಕಾರ ಬೆಳೆವಿಮೆ (Adike Bele Vime) ಮಾಡಿಸಲು ಅವಕಾಶ ನೀಡಿದ್ದು, ಇದರ ಪ್ರಯೋಜನ ಪಡೆಯಲು ರೈತರು ಆನ್ಸೆನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಈ ಯೋಜನೆಯ ಉದ್ದೇಶ ಏನು?:
ಹವಾಮಾನ ಬದಲಾವಣೆ, ಅತಿವೃಷ್ಟಿ, ಅನಾವೃಷ್ಟಿ, ಕೀಟನಾಶ, ರೋಗಪೀಡಿತ ಬೆಳೆಯ ಸಮಸ್ಯೆಗಳಿಗೆ ತುತ್ತಾಗುವ ತೋಟಗಾರಿಕೆ ಬೆಳೆಗಾರರಿಗೆ ಆರ್ಥಿಕ ರಕ್ಷಣೆ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಇದರಿಂದ ರೈತರ ಆತ್ಮಹತ್ಯೆ ಪ್ರಮಾಣ ಕುಸಿಯಲು, ಹಾಗೂ ಕೃಷಿಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ.
2024-25 ಸಾಲಿನ ಬೆಳೆ ವಿಮೆ ವಿವರ (2.5 ಎಕರೆಗೆ):
ಪ್ರಿಮಿಯಂ ಮೊತ್ತ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ವಿವರ ಈ ಕೆಳಗಿನಂತಿದೆ:
ಅಡಿಕೆ: ವಿಮೆ ಪ್ರಿಮಿಯಂ ಮೊತ್ತ(2.5 ಎಕರೆಗೆ) – 6,400 ರೂ.
ಮೊತ್ತವನ್ನು ಪಾವತಿಸಲು ಕೊನೆಯ ದಿನಾಂಕ – 30-06-2025.
ಕಾಳುಮೆಣಸು(pepper) : ವಿಮೆ ಪ್ರಿಮಿಯಂ ಮೊತ್ತ(2.5 ಎಕರೆಗೆ) – 2,350ರೂ.
ಮೊತ್ತವನ್ನು ಪಾವತಿಸಲು ಕೊನೆಯ ದಿನಾಂಕ – 30-06-2025.
ದಾಳಿಂಬೆ(Pomegranate) : ವಿಮೆ ಪ್ರಿಮಿಯಂ ಮೊತ್ತ(2.5 ಎಕರೆಗೆ) – 6,350ರೂ.
ಮೊತ್ತವನ್ನು ಪಾವತಿಸಲು ಕೊನೆಯ ದಿನಾಂಕ – 30-06-2025.
ವಿಳ್ಯದೆಲೆ: ವಿಮೆ ಪ್ರಿಮಿಯಂ ಮೊತ್ತ(2.5 ಎಕರೆಗೆ) – 5,850ರೂ.
ಮೊತ್ತವನ್ನು ಪಾವತಿಸಲು ಕೊನೆಯ ದಿನಾಂಕ – 30-06-2025.
ಮಾವು(Mango) : ವಿಮೆ ಪ್ರಿಮಿಯಂ ಮೊತ್ತ(2.5 ಎಕರೆಗೆ) – 4,000ರೂ.
ಮೊತ್ತವನ್ನು ಪಾವತಿಸಲು ಕೊನೆಯ ದಿನಾಂಕ – 31-07-2025.
ವಿಮೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು?:
1. ರೈತರ ಆಧಾರ್ ಕಾರ್ಡ್(Adhar card).
2. ಆಧಾರ್ ಲಿಂಕ್ ಆದ ಬ್ಯಾಂಕ್ ಖಾತೆ ವಿವರ.
3. ಜಮೀನಿನ ಪಹಣಿ /ಉತಾರ್ / RTC.
4. ವಿಮೆ ಪ್ರೀಮಿಯಂ ಮೊತ್ತ.
5. ಪ್ರಸ್ತುತ ಮೊಬೈಲ್ ನಂಬರ್.
6. FID (Prots ID) ಸಂಖ್ಯೆ: ಇದು ಕಡ್ಡಾಯ.
FID (Prots ID) ಯ ಮಹತ್ವ ಮತ್ತು ತಿದ್ದುಪಡಿ ಮಾಹಿತಿ:
ಯಾವುದೇ ಬೆಳೆಗೆ ವಿಮೆ ಮಾಡಿಸಲು “PrOTs ಐಡಿ” ಹೊಂದಿರುವುದು ಕಡ್ಡಾಯ. ಇದು ಕೃಷಿ ಇಲಾಖೆಯಿಂದ ರೈತರಿಗೆ ನೀಡಲಾಗುವ ವಿಭಿನ್ನ ಗುರುತಿನ ಸಂಖ್ಯೆ. ಈ ಐಡಿಯಲ್ಲಿ ನಿಮ್ಮ ಎಲ್ಲಾ ಜಮೀನಿನ ಸರ್ವೆ ನಂಬರ್ ಮತ್ತು ವಿಸ್ತೀರ್ಣ ಸರಿಯಾಗಿ ದಾಖಲಾಗಿರಬೇಕು.
ಯಾವುದೇ ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು, ರೈತರು ತಮ್ಮ ಜಮೀನಿನ ಮಾಹಿತಿಯು Agriculture Department ನ Prots ID (FID) ಯಲ್ಲಿ ಸರಿಯಾಗಿ ನೊಂದಾಯಿತವಾಗಿರಬೇಕು. ಇರದಿದಲ್ಲಿ ಅಥವಾ ತಪ್ಪಾಗಿ ದಾಖಲಾಗಿದ್ದಲ್ಲಿ, ನಿಮ್ಮ ಹೋಬಳಿಯ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ತಿದ್ದುಪಡಿ ಮಾಡಿಸಬಹುದು.
ಅರ್ಜಿಯನ್ನು ಎಲ್ಲಿ ಮತ್ತು ಹೇಗೆ ಸಲ್ಲಿಸಬೇಕು?:
ರೈತರು ತಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, CSC ಕೇಂದ್ರ ಅಥವಾ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ಆನ್ಲೈನ್ ಮೂಲಕ ಪ್ರೀಮಿಯಂ ಪಾವತಿ ಮಾಡಿ ಅರ್ಜಿ ಸಲ್ಲಿಸಬಹುದು.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?:
Website: www.samrakshane.karnataka.gov.in ಗೆ ಭೇಟಿ ನೀಡಿ.
ನಂತರ Year: 2025-26″ ಮತ್ತು “ಋತು: Kharif/ಮುಂಗಾರು” ಆಯ್ಕೆ ಮಾಡಿ “Go” ಕ್ಲಿಕ್ ಮಾಡಿ.
“Go” ಕ್ಲಿಕ್ ಮಾಡಿದ ನಂತರ “Farmers” ವಿಭಾಗದಲ್ಲಿ “View Cut Off Dates” ಆಯ್ಕೆ ಮಾಡಿ
ನಿಮ್ಮ ಜಿಲ್ಲೆ ಆಯ್ಕೆ ಮಾಡಿದ ಬಳಿಕ, ಯಾವೆಲ್ಲ ಬೆಳೆಗೆ ವಿಮೆ ಮಾಡಬಹುದು ಮತ್ತು ಕೊನೆಯ ದಿನಾಂಕ ಯಾವುದು ಎನ್ನುವ ಮಾಹಿತಿ ದೊರೆಯುತ್ತದೆ.
ಹೆಚ್ಚಿನ ಮಾಹಿತಿಗಾಗಿ ವಿಮಾ ಕಂಪನಿಯ ಸಂಪರ್ಕ ಸಂಖ್ಯೆ (HDFC Ergo Insurance):
97438 55126
84314 62824
89716 08962
ಸರ್ಕಾರದ ಅಧಿಕೃತ ವೆಬ್‌ಸೈಟ್: https://www.samrakshane.karnataka.gov.in/CropHome.aspx
ಒಟ್ಟಾರೆಯಾಗಿ,ಅಡಿಕೆ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳಿಗೆ ಈ ವಿಮೆ ಯೋಜನೆ ರೈತರಿಗೆ ಅನಿಶ್ಚಿತ ಹವಾಮಾನದ ನಡುವೆಯೂ ಭದ್ರತೆ ನೀಡುತ್ತದೆ. ಸರಿಯಾದ ದಾಖಲೆಗಳನ್ನು ಹೊಂದಿ, ಪ್ರೊಟ್ಸ್ ಐಡಿಯನ್ನು ಸಿದ್ಧಪಡಿಸಿ, ಸಮಯಕ್ಕೆ ಮುನ್ನವೇ ಅರ್ಜಿ ಸಲ್ಲಿಸಿ ರೈತರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




