Vivo X Fold 3 Pro: ಭಾರತಕ್ಕೆ ಭರ್ಜರಿ ಎಂಟ್ರಿ ಕೊಡುತ್ತಿದೆ ವಿವೋ X ಫೋಲ್ಡ್ 3 ಪ್ರೊ ಮೊಬೈಲ್!

IMG 20240604 WA0000

ಜೂನ್ 6 ರಂದು ಭಾರತದಲ್ಲಿ ಬಿಡುಗಡೆಗೊಳ್ಳಲಿದೆ ವಿವೋ ಎಕ್ಸ್ ಪೋಲ್ಡ್ 3 ಪ್ರೊ(Vivo X Fold 3 Pro smartphone) :

ಪ್ರತಿದಿನವೂ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್ ಫೋನ್ ಗಳ ಬಿಡುಗಡೆ ಆಗುತ್ತಲೇ ಇರುತ್ತವೆ. ಹೌದು, ತಂತ್ರಜ್ಞಾನ (technology) ಬೆಳೆದಂತೆಲ್ಲ ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳನ್ನು ತಯಾರಿಸುತ್ತಿದ್ದಾರೆ. ಇವುಗಳಲ್ಲಿ ಮುಖ್ಯವಾಗಿ ಎಐ ತಂತ್ರಜ್ಞಾನ (AI technology) ಕೂಡ ಹೊಂದಿರುತ್ತದೆ. ಅಷ್ಟೇ ಅಲ್ಲದೆ ವಿಶಿಷ್ಟವಾದ ಫಿಚರ್ಸ್ ಗಳನ್ನು ಕೂಡ ನೀಡಿರುತ್ತಾರೆ. ಸ್ಮಾರ್ಟ್ ಫೋನ್ ಗಳನೆಂದರೆ ಮೊದಲು ಅವುಗಳ ಬ್ರ್ಯಾಂಡ್ ನೆನಪಿಗೆ ಬರುತ್ತವೆ. ಹಲವಾರು ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳು ಇಂದು ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಹೊಂದಿವೆ. ಅವುಗಳಲ್ಲಿ ವಿವೋ ಬ್ರ್ಯಾಂಡ್ ಕೂಡ ಒಂದಾಗಿದೆ. ವಿವೋ ಸ್ಮಾರ್ಟ್‌ಫೋನ್‌ (vivo smartphone) ಗಳಿಗೆ ಭಾರತದಲ್ಲಿ ವಿಶೇಷವಾದ ಬೇಡಿಕೆ ಇದ್ದು, ಈ ನಡುವೆ ಫೋಲ್ಡಬಲ್‌ ವಿವೋ ಫೋನ್‌ ಅನ್ನು 2 ದಿನಗಳಲ್ಲಿ ಭಾರತದಲ್ಲಿ ಬಿಡುಗಡೆ ಗೊಳಿಸಲಿದೆ. ಈ ಒಂದು ಪೋಲ್ಡೆಬಲ್ ಸ್ಮಾರ್ಟ್ ಫೋನ್ ನ ಫಿಚರ್ಸ್ ಮತ್ತು ಅದರ ಬೆಲೆಯ ಬಗ್ಗೆ ಈ ಲೇಖನದಲ್ಲಿ ತಿಳಿದು ಕೊಳ್ಳೋಣ.

ಭಾರಿ ಸೌಂಡ್‌ ಮಾಡುತ್ತಿರುವ ವಿವೋ X ಫೋಲ್ಡ್‌ 3 ಪ್ರೊ ಸ್ಮಾರ್ಟ್‌ಫೋನ್ :
vivo x fold 3 inline 1711518626240

ಕಳೆದ ವರ್ಷ ಭಾರತದಲ್ಲಿ ಹಲವಾರು ಬ್ರ್ಯಾಂಡ್ ನ ಫೋಲ್ಡಬಲ್ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದ್ದರು. ಹಾಗೆಯೇ ಇದೀಗ ವಿವೋ ಕಂಪೆನಿಯು ತನ್ನ ಹೊಸ ಫೋಲ್ಡಬಲ್ ಸ್ಮಾರ್ಟ್ ಫೋನ್ (foldable smartphone) ಅನ್ನು ಬಿಡುಗಡೆ ಗೊಳಿಸಿ ವಿವಿಧ ಸ್ಮಾರ್ಟ್ ಫೋನ್ ಕಂಪನಿಗಳಿಗೆ ಟಕ್ಕರ್ ನೀಡಲಿದೆ. ಇನ್ನು ವಿವೋ X ಫೋಲ್ಡ್‌ 3 ಪ್ರೊ (Vivo X Fold 3 Pro smartphone) ಇನ್ನೂ ಈ ಸ್ಮಾರ್ಟ್ ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿಲ್ಲವಾದರೂ ಈಗಾಗಲೇ ಇದು ಭಾರೀ ಸೌಂಡ್‌ ಮಾಡುತ್ತಿದೆ.

ಉತ್ತಮ ಫೋಲ್ಡಬಲ್ ಸ್ಮಾರ್ಟ್ ಫೋನ್ (foldable smartphone) ಇದಾಗಿದೆ :

ಕೆಲವು ಮಾಹಿತಿಗಳ ಪ್ರಕಾರ, ಈ ಫೋನ್‌ನ ಹಿಂಜ್ ಕಾರ್ಯವಿಧಾನದಲ್ಲಿ ಕಾರ್ಬನ್ ಫೈಬರ್ ಕೀಲ್ (carbon fiber keel) ಘಟಕವನ್ನು ಪಡೆದಿರುವ ಮೊದಲ ಫೋಲ್ಡ್‌ ಫೋನ್ ಆಗಿರಬಹುದು ಎನ್ನಲಾಗಿದೆ. ಈ ತಂತ್ರಜ್ಞಾನವು ಡಿವೈಸ್‌ನ ವರ್ಧಿತ ಪೋರ್ಟಬಿಲಿಟಿಗಾಗಿ (portability) ಹಾಗೂ ಹಗುರವಾದ ಅನುಭವ ನೀಡಲಿದ್ದು, ವ್ಯಾಪಕವಾದ ಬಳಕೆಯನ್ನು ಸಹಿಸಿಕೊಳ್ಳುವಷ್ಟು ದೃಢವಾಗಿರಲಿದೆ. ಅಲ್ಲದೆ TÅ”V Rheinland ನ ಪರೀಕ್ಷೆಯಲ್ಲಿ ಈ ಡಿವೈಸ್‌ 500,000 ಫೋಲ್ಡ್‌ ವರೆಗೆ ತಡೆದುಕೊಳ್ಳಬಲ್ಲದು ಎಂದು ದೃಢಪಡಿಸಿದೆ. ಅಂದರೆ ಸುಮಾರು 12 ವರ್ಷಗಳ ವಿಶ್ವಾಸಾರ್ಹ ಬಳಕೆಗೆ ಸಮಾನವಾಗಿದೆ.

ವಿವೋ X ಫೋಲ್ಡ್‌ 3 ಪ್ರೊ ಸ್ಮಾರ್ಟ್ ನ ಫಿಚರ್ಸ್ ಗಳ (features) ವಿವರ :

ಡಿಸ್ಪ್ಲೇ (display) :

ಈ ಫೋನ್ ಡ್ಯುಯಲ್ ಡಿಸ್ಪ್ಲೇಯನ್ನು ಹೊಂದಿದ್ದು, 6.53-ಇಂಚಿನ ಕವರ್ ಡಿಸ್ಪ್ಲೇ ಮತ್ತು 8.03 ಇಂಚಿನ ಒಳಗಿನ ಅಮೋಲೆಡ್‌ LTPO ಫೋಲ್ಡಿಂಗ್ ಡಿಸ್‌ಪ್ಲೇ ಹೊಂದಿದೆ. ಎರಡೂ ಡಿಸ್‌ಪ್ಲೇಗಳು 2480 x 2200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. 120Hz ರಿಫ್ರೆಶ್ ದರ ಮತ್ತು ಡಾಲ್ಬಿ ವಿಷನ್ , ಹೆಚ್‌ಡಿಆರ್‌10+ ನಂತಹ ಇತರ ಫೀಚರ್ಸ್‌ ಜೊತೆಗೆ 4,500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಹೊಂದಿರಲಿದೆ.

ಪ್ರೊಸೆಸರ್ (processor) :

ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಉತ್ತಮ ಗ್ರಾಫಿಕ್ಸ್ ಕಾರ್ಯಕ್ಷಮತೆಗಾಗಿ ಅಡ್ರಿನೋ ಜಿಪಿಯು ಅನ್ನು ಇದರಲ್ಲಿ ಜೋಡಿಸಲಾಗಿದೆ. ಹಾಗೆಯೇ ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ಒರ್ಜಿನ್‌ಓಎಸ್‌ 4 ನಲ್ಲಿ ರನ್ ಆಗುತ್ತದೆ.

ಸ್ಟೋರೇಜ್ (storage) :

ಈ ಡಿವೈಸ್‌ 16GB ವರೆಗೆ LPDDR5X RAM ಮತ್ತು 1TB ವರೆಗೆ UFS4.0 ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ.

ಕ್ಯಾಮೆರಾ (camera) :

ಇನ್ನು ಈ ಸ್ಮಾರ್ಟ್ ಫೋನ್ ನ ಕ್ಯಾಮರಾ ಬಗ್ಗೆ ನೋಡುವುದಾದರೆ, ಓಐಎಸ್‌ನೊಂದಿಗೆ 50 ಮೆಗಾಪಿಕ್ಸೆಲ್ ಅಲ್ಟ್ರಾ ಸೆನ್ಸಿಂಗ್ ಪ್ರಾಥಮಿಕ ಕ್ಯಾಮೆರಾ, 64 ಮೆಗಾಪಿಕ್ಸೆಲ್ 3x ಟೆಲಿಫೋಟೋ ಲೆನ್ಸ್ ಮತ್ತು 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಹೊಂದಿದೆ. ಇನ್ನು ಸೆಲ್ಫಿ ವಿಚಾರಕ್ಕೆ ಬಂದರೆ 32 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆದಿದೆ.

ಬ್ಯಾಟರಿ (battery) :

5,700mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಇದರಲ್ಲಿದೆ.

ವಿವೋ X ಫೋಲ್ಡ್‌ 3 ಪ್ರೊ ಸ್ಮಾರ್ಟ್‌ಫೋನ್‌ ನ ಬೆಲೆ (Price) :

ಭಾರತದಲ್ಲಿ ಈ ಸ್ಮಾರ್ಟ್ ಫೋನ್‌ನ ಬೆಲೆ 1.5 ಲಕ್ಷಕ್ಕಿಂತ ಕಡಿಮೆ ಇರುತ್ತದೆ ಎನ್ನಲಾಗಿದೆ. ಹಾಗೆಯೇ ಫ್ಲಿಪ್‌ಕಾರ್ಟ್, ವಿವೋ ಇಂಡಿಯಾದ ಆನ್‌ಲೈನ್ ಸ್ಟೋರ್ ಮತ್ತು ಇತರ ಆಫ್ಲೈನ್ ಸ್ಟಾರ್ ಗಳಲ್ಲಿ ಗ್ರಾಹಕರಿಗೆ ಈ ಸ್ಮಾರ್ಟ್ ಫೋನ್ ಖರೀದಿಗೆ ಲಭ್ಯವಿರುತ್ತದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!