Vivo T4 Lite 5G : ಭಾರತದಲ್ಲಿ ಭರ್ಜರಿ ಎಂಟ್ರಿ ಖರೀದಿಗೆ ಮುಗಿಬಿದ್ದ ಜನ, ಬೆಲೆ ಎಷ್ಟು ಗೊತ್ತಾ.?

Picsart 25 06 26 20 30 28 0972

WhatsApp Group Telegram Group

ಮೊಬೈಲ್ ಪ್ರಿಯರಿಗೆ ಹೊಸ ಎಚ್ಚರಿಕೆ! ನಿಮಗೆ 5G ಸ್ಮಾರ್ಟ್‌ಫೋನ್ ಬೇಕು, ಆದರೆ ಬೆಲೆ ಕಡಿಮೆ ಇರಬೇಕು ಅಂತ ಯೋಚಿಸುತ್ತಿದ್ದೀರಾ? ಆಗಿದ್ರೆ, ಈ ಹೊಸ Vivo T4 Lite 5G ನಿಮಗಾಗಿ. ಈ ಸ್ಮಾರ್ಟ್ ಫೋನ್ ಬಜೆಟ್ ಸ್ನೇಹಿ ಆದರೂ, ಈ ಫೋನ್‌ನಲ್ಲಿ ತುಂಬಾ ವಿಶಿಷ್ಟವಾದ ಫೀಚರ್ಸ್ ಇವೆ. ವಿಶೇಷವಾಗಿ, ಇದು ನವೀಕರಿಸಿದ iQOO Z10 Lite ನ ಮರುಬ್ರಾಂಡಿಂಗ್ ಆಗಿರುವ ಸಾಧ್ಯತೆ ಇದೆ ಎಂಬ ಊಹೆ ಕೂಡ ಉಂಟಾಗಿದೆ. ಬನ್ನಿ ಹಾಗಾದರೆ ಈ ಸ್ಮಾರ್ಟ್ ಫೋನ್ ನ ಸಂಪೂರ್ಣ ಮಾಹಿತಿ ತಿಳಿಯೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬ್ಯಾಟರಿ ಶಕ್ತಿ(Battery capacity)– ಡೈಲಿ ಯೂಸ್‌ಗಾಗಿ ಸೂಪರ್‌ಪವರ್:

ಈ ಸ್ಮಾರ್ಟ್ ಫೋನ್ ಅಲ್ಲಿ ಅತ್ಯುನ್ನತವಾದ 6,000mAh ಸಾಮರ್ಥ್ಯದ ಬ್ಯಾಟರಿ ಅನ್ನು ಬಳಸಲಾಗಿದೆ. ಹೆಚ್ಚು ಕಾಲ ಫೋನ್ ಬಳಸುವವರಿಗೆ ಇದು ಬೆಸ್ಟ್ ಗಿಫ್ಟ್. ಜೊತೆಗೆ 15W ವೈಯರ್ಡ್ ಫಾಸ್ಟ್ ಚಾರ್ಜಿಂಗ್ ಹಾಗೂ ರಿವರ್ಸ್ ಚಾರ್ಜಿಂಗ್ ಸಪೋರ್ಟ್ (Wired fast charging and reverse charging support) ಕೂಡ ಇದೆ . ಇತರೆ ಡಿವೈಸ್‌ಗಳನ್ನೂ ಚಾರ್ಜ್ ಮಾಡಬಹುದು.

ಪರ್ಫಾರ್ಮನ್ಸ್ (Performance) – ಶಕ್ತಿಶಾಲಿ ಪ್ರೊಸೆಸರ್ ಬಳಕೆ:

MediaTek Dimensity 6300 (6nm) ಆಕ್ಟಾ-ಕೋರ್ ಚಿಪ್‌ಸೆಟ್ (Octa-core chipset) ಬಳಸಿ, ಫೋನ್‌ನ ಕಾರ್ಯಕ್ಷಮತೆ ಎತ್ತರಕ್ಕೆ ತಲುಪಿದೆ. ವೇಗದ 5G ಸಂಪರ್ಕ, ಲ್ಯಾಗ್ ಇಲ್ಲದ ಮೆಲ್ಚಟ, ಗೇಮಿಂಗ್ ಎಲ್ಲವೂ ಸ್ಮೂತ್ ಆಗಿ ಕಾರ್ಯ ನಿರ್ವಹಿಸುತ್ತದೆ.

RAM ಮತ್ತು ಸ್ಟೋರೇಜ್ ಆಯ್ಕೆಗಳು:

4GB, 6GB, 8GB RAM ಆಯ್ಕೆಗಳು ಹೊಂದಿದೆ.

128GB ಅಥವಾ 256GB ಇಂಟರ್ನಲ್ ಸ್ಟೋರೇಜ್ (internal storage) ಹೊಂದಿರುತ್ತದೆ.

microSD ಮೂಲಕ ವಿಸ್ತರಣೆ ಸಾಧ್ಯ. (ಬಿಡುಗಡೆಯಾದ ವೇರಿಯಂಟ್ ಆಧಾರಿತ)

RAM ವಿಸ್ತರಣೆ ಫೀಚರ್ ಮೂಲಕ ಹೆಚ್ಚುವರಿ 8GB ವರೆಗೆ ವಿಸ್ತರಿಸಬಹುದು.

ಡಿಸ್ಪ್ಲೇ (Display)– ದೃಷ್ಟಿಗೆ ರುಚಿಕಟ್ಟಾದ ಅನುಭವ:

6.74 ಇಂಚಿನ HD+ IPS LCD ಡಿಸ್ಪ್ಲೇ (display) ಹೊಂದಿದೆ.

90Hz ರಿಫ್ರೆಶ್ ದರ(refresh rate) ಹೊಂದಿದೆ.

1000 nits ಹೈ ಬ್ರೈಟ್‌ನೆಸ್ ಮೋಡ್ (HBM) – ಹೊರಗೆ ಬಳಸುವಾಗಲೂ ಸ್ಪಷ್ಟತೆ ಇರುತ್ತದೆ.

vivo t4 lite 5g
ಕ್ಯಾಮೆರಾ (Camera) – AI ಮ್ಯಾಜಿಕ್:

50MP ಪ್ರಾಥಮಿಕ Sony ಕ್ಯಾಮೆರಾ (primary sony camera), ಉತ್ತಮ ವಿವರಗಳೊಂದಿಗೆ ಫೋಟೋಗಳಿಗಾಗಿ ಬಳಸಲಾಗಿದೆ.

2MP ಸೆಕೆಂಡರಿ ಲೆನ್ಸ್ (secondary lens) ಹೊಂದಿರುತ್ತದೆ.

ಮುಂಭಾಗದಲ್ಲಿ 5MP ಅಥವಾ 8MP ಸೆಲ್ಫಿ ಕ್ಯಾಮೆರಾ (selfie camera) ನೀಡಿರುತ್ತಾರೆ.

AI Eraser, AI Photo Enhance ಮುಂತಾದ ಫೀಚರ್‌ಗಳು ಹೊಂದಿದೆ.ಫೋಟೋ ಎಡಿಟಿಂಗ್ ಇನ್ನೂ ಸುಲಭವಾಗುತ್ತದೆ.

ಬಿಲ್ಡ್ ಕ್ವಾಲಿಟಿ (Bulid quality)– ದೈನಂದಿನ ಬಳಕೆಗಾಗಿ ಸದೃಢತೆ:

MIL-STD-810H ಮಿಲಿಟರಿ ಸ್ಟ್ಯಾಂಡರ್ಡ್ ಹೊಂದಿದೆ.

IP64 ಧೂಳು-ನೀರು ಪ್ರತಿರೋಧ, ಗ್ಲಾಸ್ ಫ್ರಂಟ್, ಪ್ಲಾಸ್ಟಿಕ್ ಫ್ರೇಮ್ ಮತ್ತು ಬ್ಯಾಕ್ ಹೊಂದಿದೆ.

ಇತರೆ ಗಮನಾರ್ಹ ವೈಶಿಷ್ಟ್ಯಗಳು:

ಸೈಡ್ ಫಿಂಗರ್‌ಪ್ರಿಂಟ್ ಸೆನ್ಸರ್ (Side fingerprint sensor), ಸ್ಟೀರಿಯೋ ಸ್ಪೀಕರ್ (Stereo speaker),
3.5mm ಹೆಡ್‌ಫೋನ್ ಜ್ಯಾಕ್ (Headphone jack)
ಡ್ಯುಯಲ್ ಸಿಮ್ (dual sim), USB Type-C ಪೋರ್ಟ್ ಹೊಂದಿದೆ.

ಸ್ಮಾರ್ಟ್ ಫೋನ್ ಬಣ್ಣಗಳ ಆಯ್ಕೆಗಳು:

ಟೈಟಾನಿಯಂ ಬ್ಲೂ(Titanium blue), ಸೈಬರ್ ಗ್ರೀನ್(Cyber green), ವೈಬ್ರೆಂಟ್ ಗ್ರೀನ್ (Vibrant Green), ಮೆಜೆಸ್ಟಿಕ್ ಬ್ಲಾಕ್ (Majestic Black)

ಕೊನೆಯದಾಗಿ ಹೇಳುವುದಾದರೆ, Vivo T4 Lite 5G ನ ವಿಶೇಷತೆ ಎಂದರೆ ಇದು ಬಜೆಟ್‌ ಪ್ರಕಾರದ ಫೋನ್ ಆಗಿದ್ದರೂ, ಅದರೊಳಗಿನ ಫೀಚರ್‌ಗಳು ಮಿಡ್-ರೇಂಜ್ ಸ್ಮಾರ್ಟ್‌ಫೋನ್‌ಗಳಿಗಿಂತಲೂ ಶ್ರೇಷ್ಠ. ಶಕ್ತಿಯುತ ಬ್ಯಾಟರಿ, ಉತ್ತಮ ಕ್ಯಾಮೆರಾ, ಪ್ರಭಾವಶಾಲಿ ಪ್ರೊಸೆಸರ್ ಮತ್ತು ಸ್ಮೂತ್ ಡಿಸ್ಪ್ಲೇ – ಇವೆಲ್ಲವೂ ಇದರ ಆಯ್ಕೆ ಮಾಡಿಕೊಳ್ಳುವ ಪ್ರಮುಖ ಕಾರಣಗಳು.ಹೆಚ್ಚು ಹಣ ಖರ್ಚು ಮಾಡದೆ ಉತ್ತಮ 5G ಅನುಭವ ಬೇಕಾದ್ರೆ, Vivo T4 Lite 5G ತಪ್ಪದೇ ಪರಿಗಣಿಸಬಹುದಾದ ಫೋನ್ ಇದಾಗಿದೆ.ಮತ್ತು ಇಂತಹ ಉತ್ತಮವಾದ  ಮಾಹಿತಿಯನ್ನು ನೀವು ತಿಳಿದಮೇಲೆ  ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!