ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ (KSBDB)ಯು ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಸಮುದಾಯದವರು ಸ್ವಯಂ ಉದ್ಯೋಗ ಕೈಗೊಳ್ಳಲು ನೇರವಾಗಿ ಸಾಲ ಮತ್ತು ಸಹಾಯಧನ ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ. ಈ ವಿಪ್ರ ಸ್ವ-ಉದ್ಯೋಗ ನೇರ ಸಾಲ ಯೋಜನೆಯಡಿ, ಆಕಳು ಸಾಕಾಣಿಕೆ, ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ, ಹೋಟೆಲ್ ಉದ್ಯಮ, ಟ್ಯಾಕ್ಸಿ ಮುಂತಾದ ವಿವಿಧ ವ್ಯಾಪಾರ ವಹಿವಾಟುಗಳನ್ನು ಆರಂಭಿಸಲು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಪಡೆಯಬಹುದಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಏನಿದು ವಿಪ್ರ ಸ್ವ-ಉದ್ಯೋಗ ನೇರ ಸಾಲ ಯೋಜನೆ?
ಆರ್ಥಿಕವಾಗಿ ದುರ್ಬಲರಾಗಿರುವ ಬ್ರಾಹ್ಮಣ ಸಮುದಾಯದವರಿಗೆ ಸ್ವಯಂ ಉದ್ಯೋಗವನ್ನು ಉತ್ತೇಜಿಸಲು ಈ ಯೋಜನೆಯನ್ನು ರೂಪಿಸಲಾಗಿದೆ.
ಆರ್ಥಿಕ ನೆರವು: ಕನಿಷ್ಠ ರೂ. 1.00 ಲಕ್ಷ ಮತ್ತು ಗರಿಷ್ಠ ರೂ. 2.00 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುವುದು.
ಸಬ್ಸಿಡಿ ಮತ್ತು ಬಡ್ಡಿ ದರ:
ಸಾಲದ ಮೊತ್ತದಲ್ಲಿ ಶೇ. 20ರಷ್ಟು ಸಹಾಯಧನ (ಸಬ್ಸಿಡಿ) ಲಭ್ಯ.
ಉಳಿದ ಶೇ. 80ರಷ್ಟು ಸಾಲದ ಮೊತ್ತಕ್ಕೆ ವಾರ್ಷಿಕ ಕೇವಲ ಶೇ. 4ರಷ್ಟು ಬಡ್ಡಿ ದರ ವಿಧಿಸಲಾಗುತ್ತದೆ.
ಉದಾಹರಣೆಗೆ: ರೂ. 2 ಲಕ್ಷ ಸಾಲ ಪಡೆದರೆ, ರೂ. 40,000 ಸಹಾಯಧನವಾಗಿದ್ದು, ರೂ. 1,60,000ಕ್ಕೆ ಮಾತ್ರ ಶೇ. 4ರ ಬಡ್ಡಿದರ ಇರುತ್ತದೆ.
ಯೋಜನೆಯ ಪ್ರಮುಖ ವೈಶಿಷ್ಟ್ಯಗಳು
ಸಾಲದ ಹಣವನ್ನು ಸಣ್ಣ ಮತ್ತು ಅತೀ ಸಣ್ಣ ವ್ಯಾಪಾರಸ್ಥರು ತಮ್ಮ ಮಳಿಗೆ ನಿರ್ಮಾಣಕ್ಕೆ ಅಥವಾ ಅಗತ್ಯ ಸಲಕರಣೆಗಳನ್ನು ಖರೀದಿಸಲು ಬಳಸಬಹುದು.
ಮೀಸಲಾತಿ:
ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ (ಇದರಲ್ಲಿ ವಿಧವೆಯರು, ವಿಚ್ಛೇದಿತ ಮಹಿಳೆಯರು ಮತ್ತು ತೃತೀಯ ಲಿಂಗಿಗಳಿಗೆ ಶೇ. 50ರಷ್ಟು ಮೀಸಲಾತಿ).
ದಿವ್ಯಾಂಗದವರಿಗೆ (ವಿಶೇಷಚೇತನರಿಗೆ) ಶೇ. 5ರಷ್ಟು ಮೀಸಲಾತಿ.
ಅರ್ಹತಾ ಮಾನದಂಡಗಳು
ಅರ್ಜಿದಾರರು ಬ್ರಾಹ್ಮಣ ಸಮುದಾಯದ ಸಾಮಾನ್ಯ ವರ್ಗಕ್ಕೆ ಸೇರಿದವರಾಗಿರಬೇಕು.
ಕಡ್ಡಾಯವಾಗಿ ಚಾಲ್ತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದ ಪ್ರಮಾಣಪತ್ರ (EWS ಪ್ರಮಾಣ ಪತ್ರ) ಹೊಂದಿರಬೇಕು.
ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
ವಯಸ್ಸು 18 ರಿಂದ 65 ವರ್ಷಗಳ ಒಳಗಿರಬೇಕು.
ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
ಅರ್ಜಿದಾರರ ಆಧಾರ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು ಮತ್ತು ಬ್ಯಾಂಕ್ ಖಾತೆ ಸೀಡ್ ಆಗಿರಬೇಕು.
ಸಾಲ ಮರುಪಾವತಿ ವಿವರಗಳು
ಸಾಲ ಮಂಜೂರಾದ 2 ತಿಂಗಳ ನಂತರ, ಸಾಲ ಮತ್ತು ಬಡ್ಡಿಯನ್ನು ಮುಂದಿನ 3 ವರ್ಷಗಳ ಕಾಲ (ಒಟ್ಟು 34 ಮಾಸಿಕ ಕಂತುಗಳಲ್ಲಿ) ಆನ್‌ಲೈನ್ ಮೂಲಕ (UPI/ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್) ಪಾವತಿಸಬೇಕು.
ರೂ. 1,00,000 ಸಾಲಕ್ಕೆ: ರೂ. 20,000 ಸಹಾಯಧನ. ಉಳಿದ ರೂ. 80,000ಕ್ಕೆ ಪ್ರತಿ ತಿಂಗಳು ರೂ. 2,511 ರಂತೆ ಮರುಪಾವತಿ.
ರೂ. 2,00,000 ಸಾಲಕ್ಕೆ: ರೂ. 40,000 ಸಹಾಯಧನ. ಉಳಿದ ರೂ. 1,60,000ಕ್ಕೆ ಪ್ರತಿ ತಿಂಗಳು ರೂ. 5,022 ರಂತೆ ಮರುಪಾವತಿ.
ಮರುಪಾವತಿಯನ್ನು ಪ್ರತಿ ತಿಂಗಳ ದಿನಾಂಕ 5ರೊಳಗೆ ಮಾಡಬೇಕು.
ಸಾಲದ ಹಣ ಮತ್ತು ಸಹಾಯಧನವನ್ನು ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ (DBT) ಮೂಲಕ ಬಿಡುಗಡೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ವಿಪ್ರ ಸ್ವ-ಉದ್ಯೋಗ ನೇರ ಸಾಲ ಯೋಜನೆಗೆ ಅರ್ಜಿ ಸಲ್ಲಿಸಲು 31.10.2025 ಸಂಜೆ 5:00 ಗಂಟೆ ಕೊನೆಯ ದಿನಾಂಕವಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ, ಮಂಡಳಿಯ ಅಧಿಕೃತ ವೆಬ್‌ಸೈಟ್ www.ksbdb.karnataka.gov.in ಗೆ ಭೇಟಿ ನೀಡಿ.
ವೆಬ್‌ಸೈಟ್‌ನ ಕೆಳಭಾಗದಲ್ಲಿರುವ ‘ಲಾಗಿನ್ ಬಟನ್’ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ, ಬರುವ ಒಟಿಪಿಯನ್ನು ನಮೂದಿಸಿ ಲಾಗಿನ್ ಆಗಿ.
ಆಧಾರ್ ದೃಢೀಕರಣಕ್ಕಾಗಿ ನಿಮ್ಮ ಆಧಾರ್ ಸಂಖ್ಯೆ ಮತ್ತು ಬರುವ ಒಟಿಪಿಯನ್ನು ನಮೂದಿಸಿ.
ನಂತರದ ಹಂತಗಳಲ್ಲಿ ನಿಮ್ಮ ಜಾತಿ ಪ್ರಮಾಣಪತ್ರ, ವೈಯಕ್ತಿಕ ವಿವರಗಳು, ಸಾಲದ ವಿವರಗಳು, ಉದ್ಯಮದ ವಿವರ (ಕನಿಷ್ಠ 10 ಪದಗಳಲ್ಲಿ) ಮತ್ತು ಒಪ್ಪಂದದ ಪ್ರತಿಗಳನ್ನು ಭರ್ತಿ ಮಾಡಿ.
ಕೇಳಲಾದ ಎಲ್ಲ ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
ಭರ್ತಿ ಮಾಡಿದ ಅರ್ಜಿ ಮತ್ತು ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿ, ತದನಂತರ ಅಂತಿಮವಾಗಿ ಅರ್ಜಿಯನ್ನು ಸಲ್ಲಿಸಿ.
ಸಲ್ಲಿಸಿದ ಅರ್ಜಿಯ ದೃಢೀಕರಣ ಪ್ರತಿಯನ್ನು ಡೌನ್‌ಲೋಡ್ ಮಾಡಿ ಅಥವಾ ಪ್ರಿಂಟ್ ತೆಗೆದುಕೊಳ್ಳಿ.
ಅಗತ್ಯವಿರುವ ದಾಖಲೆಗಳು:
- ಜಾತಿ ಪ್ರಮಾಣ ಪತ್ರ (EWS ಪ್ರಮಾಣ ಪತ್ರ ಸೇರಿದಂತೆ)
- ಆದಾಯ ಪ್ರಮಾಣ ಪತ್ರ
- ಆಧಾರ್ ಕಾರ್ಡ್ ಪ್ರತಿ
- ವೋಟರ್ ಐಡಿ ಅಥವಾ ಬ್ಯಾಂಕ್ ಪಾಸ್‌ಬುಕ್ ಪ್ರತಿ
- ವಯಸ್ಸಿನ ದೃಢೀಕರಣ ದಾಖಲೆ
- ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
- ವ್ಯಾಪಾರ/ಮಳಿಗೆಗೆ ಸಂಬಂಧಿಸಿದ ದಾಖಲೆಗಳು


ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Kavitha holds a Master’s degree in Computer Applications (MCA) and has a deep interest in technology. Leveraging her academic background, she writes articles on science and technology, simplifying complex technical topics for general readers. Her work focuses on making cutting-edge advancements in tech accessible and engaging.


WhatsApp Group




