Vidya Lakshmi Yojana: ಗ್ಯಾರಂಟಿ ಇಲ್ಲದೆ 10 ಲಕ್ಷದವರೆಗೆ ಶೈಕ್ಷಣಿಕ ಸಾಲ ಪಡೆಯುವುದು ಹೇಗೆ?
ಭಾರತದಲ್ಲಿ ಶಿಕ್ಷಣ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಇಂಜಿನಿಯರಿಂಗ್, ವೈದ್ಯಕೀಯ, ಮ್ಯಾನೇಜ್ಮೆಂಟ್ ಕೋರ್ಸ್‌ಗಳ ಶುಲ್ಕಗಳು ಸಾಮಾನ್ಯ ಕುಟುಂಬಗಳಿಗೂ ಭಾರವಾಗುತ್ತವೆ. ಈ ಹಿನ್ನೆಲೆಯಲ್ಲಿ ಪ್ರತಿಭಾವಂತ ಆದರೆ ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲವನ್ನು ಸುಲಭಗೊಳಿಸುವ ಉದ್ದೇಶದಿಂದ ಪ್ರಧಾನಮಂತ್ರಿ ವಿದ್ಯಾ ಲಕ್ಷ್ಮಿ ಯೋಜನೆ (PM Vidya Lakshmi Yojana) ಅನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಈ ಯೋಜನೆಯಡಿ, ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂಪಾಯಿಗೆ ಕಡಿಮೆಯಿದ್ದರೆ, ಯಾವುದೇ ಗ್ಯಾರಂಟಿ ಇಲ್ಲದೆ 10 ಲಕ್ಷ ರೂಪಾಯಿ ವರೆಗೆ ಶೈಕ್ಷಣಿಕ ಸಾಲವನ್ನು ಪಡೆಯಬಹುದು. ಜೊತೆಗೆ, ಸಾಲದ ಬಡ್ಡಿಯ ಮೇಲೆ 3% ಸಬ್ಸಿಡಿ ನೀಡಲಾಗುತ್ತದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯೋಜನೆಯ ವಿಶೇಷತೆಗಳು(Yojana Highlights): ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ!
ಗ್ಯಾರಂಟಿ ಇಲ್ಲದೆ 10 ಲಕ್ಷ ರೂ. ವರೆಗೆ ಸಾಲ: ಸಾಲ ಪಡೆಯಲು ಯಾವುದೇ ಜಾಮೀನುದಾರರ ಅಗತ್ಯವಿಲ್ಲ.
3% ಬಡ್ಡಿ ಸಬ್ಸಿಡಿ: ಬಡ್ಡಿದರದಲ್ಲಿ ಕಡಿತ, ಇದರಿಂದ ಪಾವತಿ ಹೊರೆ ಕಡಿಮೆ.
ಸರಳ ಡಿಜಿಟಲ್ ಪ್ರಕ್ರಿಯೆ: Vidya Lakshmi Portal ಮೂಲಕ ಅರ್ಜಿ ಸಲ್ಲಿಸಿ, ಅನುಮೋದನೆ ಪಡೆಯಲು ಸುಲಭ ವಿಧಾನ.
ಪ್ರತಿ ವರ್ಷ 1 ಲಕ್ಷ ವಿದ್ಯಾರ್ಥಿಗಳಿಗೆ ಸಾಲ: ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಅನುಕೂಲ.
ಯಾರು ಅರ್ಹ?Who is eligible?
ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ.ಗಿಂತ ಕಡಿಮೆ ಇರಬೇಕು.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಶ್ರೇಯಾಂಕಿತ ವಿದ್ಯಾಸಂಸ್ಥೆಯಿಂದ ಪ್ರವೇಶ ಪಡೆದಿರಬೇಕು
NIRF ಟಾಪ್ 100 ಅಥವಾ ರಾಜ್ಯ ಮಟ್ಟದ ಶ್ರೇಯಾಂಕದ ಟಾಪ್ 200 ಸಂಸ್ಥೆಯಲ್ಲಿ ಸೀಟ್ ದೊರಕಿರಬೇಕು.
7.5 ಲಕ್ಷದವರೆಗೆ ಸಾಲ ಪಡೆಯಲು ಸರ್ಕಾರ 75% ಕ್ರೆಡಿಟ್ ಗ್ಯಾರಂಟಿ ನೀಡುತ್ತದೆ.
ಅರ್ಜಿ ಸಲ್ಲಿಸುವ ವಿಧಾನ(How to apply):
Vidya Lakshmi ಪೋರ್ಟಲ್ ( www.vidyalakshmi.co.in ) ಗೆ ಭೇಟಿ ನೀಡಿ.
ಹೊಸ ವಿದ್ಯಾರ್ಥಿಯಾಗಿ ನೋಂದಾಯಿಸಿ.
ಆಧಾರ್(Aadhar Card), ಶಿಕ್ಷಣ ಪ್ರಮಾಣಪತ್ರಗಳು, ಮತ್ತು ಇತರ ದಾಖಲೆಗಳು ಅಪ್‌ಲೋಡ್ ಮಾಡಿ.
ಅರ್ಜಿ ಸಲ್ಲಿಸಿ, ಡಿಜಿಲಾಕರ್(Digilocker)ಮೂಲಕ ಪರಿಶೀಲನೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ.
ಅನುಮೋದನೆ ಸಿಕ್ಕ ನಂತರ ಬ್ಯಾಂಕ್(Bank) ಗಳಿಂದ ಸಾಲ ಪಡೆಯಲು ಸಾಧ್ಯ.
ಈ ಯೋಜನೆಯಿಂದ ನೀವು ಪಡೆಯಬಹುದಾದ ಲಾಭಗಳು(Benefits you can get from this project):
ಶೈಕ್ಷಣಿಕ ಭದ್ರತೆ(Educational Security): ಈ ಯೋಜನೆಯ ಮೂಲಕ, ವಿದ್ಯಾರ್ಥಿಗಳು ಹಣಕಾಸಿನ ಕೊರತಿಯಿಂದ ವಿದ್ಯಾಭ್ಯಾಸವನ್ನು ತ್ಯಜಿಸುವ ಅನಿವಾರ್ಯತೆ ಎದುರಿಸದೆ, ತಮ್ಮ ಶಿಕ್ಷಣವನ್ನು ನಿರಂತರವಾಗಿ ಮುಂದುವರಿಸಬಹುದು.
ಕಡಿಮೆ ಬಡ್ಡಿದರದ ಸಾಲ(Low-interest loan): ಸಾಲದ ಬಡ್ಡಿದರ ಕಡಿಮೆಯಾಗಿರುವುದರಿಂದ, ವಿದ್ಯಾರ್ಥಿಗಳು ಹೆಚ್ಚಿನ ಹಣಕಾಸಿ ಹೊರೆ ಅನುಭವಿಸದೆ, ಸುಲಭವಾಗಿ ತಲುಪಿಸಬಹುದಾದ ಕಂತುಗಳಲ್ಲಿ ಪಾವತಿ ಮಾಡಬಹುದು.
ಉನ್ನತ ಶಿಕ್ಷಣದ ಅವಕಾಶ(Higher education opportunities): ವಿದ್ಯಾರ್ಥಿಗಳಿಗೆ ಶ್ರೇಷ್ಠ ಮತ್ತು ಪ್ರಖ್ಯಾತ ಕಾಲೇಜುಗಳಲ್ಲಿ ಪ್ರಿಯಪಡಿಸುವ ಕೋರ್ಸ್‌ಗಳನ್ನು ಓದಲು ಅವಕಾಶ ನೀಡುತ್ತದೆ, ಇದರಿಂದ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಹಾಯವಾಗುತ್ತದೆ.
ಶಿಕ್ಷಣದ ಕನಸು ನನಸು ಮಾಡಿಕೊಳ್ಳಿ!
ಹಣದ ಕೊರತೆ ನಿಮ್ಮ ವಿದ್ಯಾಭ್ಯಾಸಕ್ಕೆ ಅಡಚಣೆಯಾಗಬಾರದು. ಪ್ರಧಾನಮಂತ್ರಿ ವಿದ್ಯಾ ಲಕ್ಷ್ಮಿ ಯೋಜನೆ ನಿಮ್ಮ ಭವಿಷ್ಯ ಕಟ್ಟಲು ಸಹಾಯ ಮಾಡುತ್ತದೆ. ಈಗಲೇ Vidya Lakshmi Portal ನಲ್ಲಿ ಲಾಗಿನ್ ಮಾಡಿ ಮತ್ತು ನಿಮ್ಮ ಕನಸುಗಳನ್ನು ಹಕ್ಕಿಗಳಂತೆ ಹಾರಿಸಿಕೊಳ್ಳಿ!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.