Gold Rate Today : ವಾರದ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಏರಿಕೆ.! ಇಂದಿನ ರೇಟ್ ಇಲ್ಲಿದೆ!

Picsart 25 03 10 06 57 25 277

WhatsApp Group Telegram Group

ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆ: ಗ್ರಾಹಕರಿಗೆ ಆತಂಕ

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ (Gold and Silver) ಹೂಡಿಕೆಗಳು ಆರ್ಥಿಕ ಸ್ಥಿರತೆ ಮತ್ತು ಸಾಂಸ್ಕೃತಿಕ ಮಹತ್ವದಿಂದಾಗಿ ಜನಪ್ರಿಯವಾಗಿವೆ.  ಮದುವೆಗಳು, ಹಬ್ಬಗಳು, ವಿಶೇಷ ಸಂದರ್ಭಗಳಲ್ಲಿ ಚಿನ್ನದ ಆಭರಣಗಳ ಖರೀದಿ ಹೆಚ್ಚಾಗುತ್ತದೆ. ಇತ್ತೀಚಿನ ತಿಂಗಳುಗಳಲ್ಲಿ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಳಿತಗಳು ಕಂಡುಬಂದಿವೆ, ಇದು ಗ್ರಾಹಕರಲ್ಲಿ ಆತಂಕವನ್ನುಂಟುಮಾಡಿದೆ.
2025ರ ಆರಂಭದಿಂದ ಚಿನ್ನದ ಬೆಲೆಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (American president Donald trump) ಸುಂಕ ಏರಿಕೆ ಘೋಷಿಸಿದ ನಂತರ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆ ಕಂಡುಬಂದಿದೆ. ಇದು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದ್ದು, ಚಿನ್ನದ ಬೇಡಿಕೆಯನ್ನು ಹೆಚ್ಚಿಸಿದೆ. ಮಾರ್ಚ್ ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದರೂ, ಇತ್ತೀಚೆಗೆ ಮತ್ತೆ ಏರಿಕೆ ಕಂಡುಬಂದಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and Silver) ಬೆಲೆ ಇಂದು, ಮಾರ್ಚ್ 10, 2025: Gold Price Today

ಕಳೆದ ಕೆಲವು ತಿಂಗಳಿನಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ (Increased) ಇತ್ತು, ಆದರೆ ಈ ತಿಂಗಳ ಮೊದಲ ದಿನದಿಂದಲೂ ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆಗಳು ಕಂಡುಬರುತ್ತಿದ್ದವು, ಇನ್ನು ಈ ಬದಲಾವಣೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ (Gold and silver rate) ಸ್ವಲ್ಪ ಇಳಿಕೆಯಾಗಿರುವುದನ್ನು ನಾವು ಗಮನಿಸಿರುತ್ತೇವೆ. ಆದರೆ ಇದೀಗ ಮತ್ತೆ ಚಿನ್ನದ ದರ ಏರಿಕೆಯಾಗಿದ್ದು, ಗ್ರಾಹಕರು ನಿರಾಶೆಗೊಂಡಿದ್ದಾರೆ.  ಹಾಗಿದ್ದರೆ, ಇಂದಿನ ಚಿನ್ನದ ಬೆಲೆಯಲ್ಲಿ ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 040 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,771 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,578 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 99, 100 ತಲುಪಿದೆ. 

ಚಿನ್ನದ ಬೆಲೆ ಏರಿಕೆ (Increased gold rate) :

ಮಾರ್ಚ್ 9, 2025 ರಂದು, ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹80,400 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ₹87,710 ಕ್ಕೆ ತಲುಪಿದೆ. ಈ ಹಿಂದಿನ ದರಗಳಿಗೆ ಹೋಲಿಸಿದರೆ, ಕ್ರಮವಾಗಿ ₹500 ಮತ್ತು ₹550 ಏರಿಕೆಯನ್ನು ನಾವು ಕಾಣಬಹುದು.

ಬೆಳ್ಳಿಯ ದರ (Silver rate):

ಬೆಳ್ಳಿಯ ದರಗಳು ಸ್ಥಿರವಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಕೆಜಿಗೆ ₹99,100 ರಷ್ಟಿದೆ. ಹೈದರಾಬಾದ್‌ನಲ್ಲಿ, ಬೆಳ್ಳಿ ದರ ಪ್ರತಿ ಕೆಜಿಗೆ ₹1,08,100 ಕ್ಕೆ ನಷ್ಟಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ:

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ (International market) ಚಿನ್ನದ ಬೆಲೆಗಳು ಬಹುತೇಕ ಸ್ಥಿರವಾಗಿವೆ. ಸ್ಪಾಟ್ ಚಿನ್ನದ ದರ ಪ್ರಸ್ತುತ ಪ್ರತಿ ಔನ್ಸ್‌ಗೆ $2,910 ನಸ್ಟಿದ್ದು, ಸ್ಪಾಟ್ ಬೆಳ್ಳಿ ದರ ಪ್ರತಿ ಔನ್ಸ್‌ಗೆ $32.55 ಆಗಿದೆ. ಇಲ್ಲದೆ, ಭಾರತೀಯ ರೂಪಾಯಿ ಮೌಲ್ಯವು ಡಾಲರ್ ಎದುರು ₹87.168 ನಷ್ಟು ವಹಿವಾಟು ನಡೆಸುತ್ತಿದೆ.

ಚಿನ್ನದ ಬೆಲೆಯಲ್ಲಿ ಏರಿಕೆಗೆ ಕಾರಣಗಳೇನು (Causes)?

ಜಾಗತಿಕ ಆರ್ಥಿಕ ಕುಸಿತ ಮತ್ತು ವಾಣಿಜ್ಯ ಯುದ್ಧ:
ಅಮೆರಿಕಾ ಮತ್ತು ಚೀನಾದ ನಡುವಿನ ವ್ಯಾಪಾರ ಯುದ್ಧದ ಪರಿಣಾಮವಾಗಿ ಚಿನ್ನದ ಬೆಲೆ ಸ್ಥಿರವಾಗಿ ಏರುತ್ತಿದೆ.
ಭಾರತದಲ್ಲಿ ಆಭರಣ ಕ್ಷೇತ್ರದ (jewellery field) ಬೇಡಿಕೆ:
ಮದುವೆ ಮತ್ತು ಹಬ್ಬ ಹಂಚಿಕೆಯ ಸಮಯದಲ್ಲಿ ಚಿನ್ನದ ಖರೀದಿ ಹೆಚ್ಚಾಗುವುದರಿಂದ ದರ ಹೆಚ್ಚಳ ಕಾಣಿಸುತ್ತದೆ.

ಗ್ರಾಹಕರಿಗೆ ಮಹತ್ವದ ಸೂಚನೆ:

ಚಿನ್ನ ಮತ್ತು ಬೆಳ್ಳಿ ಖರೀದಿಸುವ ಮುನ್ನ ಸ್ಥಳೀಯ ಮಾರುಕಟ್ಟೆಯ ನಿಖರ ದರ ಪರಿಶೀಲಿಸಿ.
ಜಿಎಸ್‌ಟಿ(GST), ಮೇಕಿಂಗ್ ಚಾರ್ಜ್(Making charge) ಮುಂತಾದ ಹೆಚ್ಚುವರಿ ಶುಲ್ಕಗಳನ್ನು ಗಮನಿಸಿ ಚಿನ್ನ ಕೊಂಡುಕೊಳ್ಳಿ.
ನಕಲಿ ಚಿನ್ನದ(fake gold) ಖರೀದಿ ತಪ್ಪಿಸಲು BIS ಹಾಲ್‌ಮಾರ್ಕ್(Hallmark) ಚೆಕ್ ಮಾಡಿ.

ಚಿನ್ನದ ಬೆಲೆ ಏರಿಕೆಯಿಂದಾಗಿ, ಮದುವೆ, ಮುಂಜಿ, ಮತ್ತು ಇತರ ಶುಭ ಕಾರ್ಯಗಳ ಸಮಯದಲ್ಲಿ ಚಿನ್ನದ ಖರೀದಿ ಜನಸಾಮಾನ್ಯರಿಗೆ (For people) ಹೊರೆಯಾಗುವ ಸಾಧ್ಯತೆ ಇದೆ. ಹೀಗಾಗಿ, ಚಿನ್ನದ ಖರೀದಿಗೆ ಮುಂದಾಗುವವರು ದರಗಳ ಮೇಲಿನ ನಿಗಾವಹಿಸಿ, ಸೂಕ್ತ ಸಮಯದಲ್ಲಿ ಹೂಡಿಕೆ ಮಾಡುವುದು ಒಳಿತು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!