Vegh S60- ಕಮ್ಮಿ ಬೆಲೆಯಲ್ಲಿ ಬಿಡುಗಡೆ ಆಯ್ತು ಮತ್ತೊಂದು ಇ ಸ್ಕೂಟರ್, ಒಂದೇ ಚಾರ್ಜ್ ನಲ್ಲಿ 120 km ಓಡುತ್ತೆ

WhatsApp Image 2023 09 25 at 16.16.31

ಸ್ಕೂಟರ್ ಚಾಲಕರಿಗೆ ಇದೀಗ ಮತ್ತೊಂದು ಹೊಸ ಸುದ್ದಿ ಸಿಕ್ಕಿದೆ. ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ (Two wheeler )ಸಂಸ್ಥೆಯು ಈಗ ಮಾರುಕಟ್ಟೆಗೆ (Market )ಮತ್ತೊಂದು ಸ್ಕೂಟರ್ ಬಿಡುಗಡೆ ಮಾಡಿದೆ. ಈ ಸ್ಕೂಟರ್‌ನ ವಿಶೇಷತೆ ಏನು ? ಯಾವೆಲ್ಲ ವಿಶೇಷಣಗಳು  (specifications )ಇದ್ದಾವೆ ಈ ಎಲ್ಲಾ ಮಾಹಿತಿಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ

ವೇಗ್ ಎಸ್ 60(vegh S60) 2023:

ಟಾಪ್ ಸ್ಪೀಡ್, ಬ್ಯಾಟರಿ ಸಾಮರ್ಥ್ಯ ಸೇರಿದಂತೆ ಪ್ರಮುಖ ಮಾಹಿತಿ ಈ ಲೇಖನದ ಮೂಲಕ ನಿಮ್ಮ ಮುಂದೆ ನೀಡುತ್ತೇವೆ. ವೇಗ್ ಆಟೋಮೊಬೈಲ್ಸ್ ತನ್ನ ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ vegh S60 ಅನ್ನು ಬಿಡುಗಡೆ ಮಾಡಿದೆ. ಇವಿ ಇಂಡಿಯಾ ಎಕ್ಸ್‌ಪೋ 2023ರಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದ್ದು, ಇದರ ಆರಂಭಿಕ ಬೆಲೆ 1.25 ಲಕ್ಷ ರೂಪಾಯಿ (ಎಲ್ಲಾ ತೆರಿಗೆಗಳನ್ನು ಹೊರತುಪಡಿಸಿ). ಗ್ರಾಹಕರು ಎಸ್‌60 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಖರೀದಿಸಬಹುದಾಗಿದೆ. ಅದೂ ಅಲ್ಲದೆ, ಮುಂದೆ ಬರುವ ತಿಂಗಳುಗಳಲ್ಲಿ ಶೀಘ್ರದಲ್ಲಿಯೇ ಎಸ್‌60 ಯ ಹೊಸ modified  ಸ್ಕೂಟರ್ ಬಿಡುಗಡೆ ಮಾಡುವುದಾಗಿ ಕಂಪನಿ ಹೇಳಿದೆ.

WhatsApp Image 2023 09 21 at 6.52.49 AM

ಬ್ಯಾಟರಿ ವಿವರ :

ವೇಗ್ ಎಸ್ 60 ಮ್ಯಾಟ್ ಬ್ಲಾಕ್, ಲೈಟ್ ಗ್ರೇ, ವೈಟ್ ಮತ್ತು ಲೈಟ್ ಗ್ರೀನ್ ಹೀಗೆ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಈ ಸ್ಕೂಟರ್ ಲಭ್ಯವಿದೆ. ಇದು 3 kWh ಬ್ಯಾಟರಿಯನ್ನು ಹೊಂದಿದೆ. ಈ ಹೈ ಸ್ಪೀಡ್ ಇ ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ 120 ಕಿಲೋಮೀಟರ್‌ಗೂ ಅಧಿಕ ದೂರ ಚಲಿಸುತ್ತದೆ.

ಇದು 2.5 kW ಪೀಕ್ ಮೋಟರ್‌ ಹೊಂದಿದ್ದು, ಇದರ ಟಾಪ್ ಸ್ಪೀಡ್ 75 kmph ಆಗಿದೆ. ವೇಗದ ಚಾರ್ಜಿಂಗ್ ವೈಶಿಷ್ಟ್ಯವನ್ನು ಬಳಸಿಕೊಂಡು ಈ ಬ್ಯಾಟರಿಯನ್ನು 4-5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ.

ಇನ್ನು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನ ವೈಶಿಷ್ಟ್ಯಗಳ ಬಗ್ಗೆ ನೋಡೋಣ ಬನ್ನಿ:

ಇದು ಡಿಜಿಟಲ್ ಡಿಸ್‌ ಪ್ಲೇ, ಕಂಬೈನ್ಡ್‌ ಬ್ರೇಕಿಂಗ್ ಸಿಸ್ಟಮ್ ಮತ್ತು ಬ್ಯಾಟರಿ ಕಾರ್ಯಕ್ಷಮತೆಗಾಗಿ ಇದು ಮೂರು ರೈಡ್ ಮೋಡ್‌ಗಳನ್ನು ಹೊಂದಿದ್ದು, ನಗರ ಮತ್ತು ಪಟ್ಟಣದ ಚಾಲನೆಯ ದಕ್ಷತೆಯನ್ನು ಖಚಿತಪಡಿಸುತ್ತದೆ ಎಂದು ವೇಗ್ ಕಂಪನಿ ತಿಳಿಸಿದೆ. ಈ ಆಕರ್ಷಕ ಎಲೆಕ್ಟ್ರಿಕ್ ಸ್ಕೂಟರ್ ವಿಶಾಲವಾದ ಸೀಟುಗಳು ಮತ್ತು ಹೈಡ್ರಾಲಿಕ್ ಸಸ್ಪೆನ್ಷನ್ ಅನ್ನು ಒಳಗೊಂಡಿದೆ. ಸದ್ಯ ಭಾರತದಲ್ಲಿ ಎಕೆಕ್ಟ್ರಿಕ್ ಸ್ಕೂಟರ್‌ಗಳ ಬೇಡಿಕೆ ಹೆಚ್ಚಾಗುತ್ತಿದ್ದು, ಕಂಪನಿಗಳು ಹೊಸ ಹೊಸ ವೈಶಿಷ್ಟ್ಯಗಳೊಂದಿಗೆ ಇ ಸ್ಕೂಟರ್‌ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!