UKPSC PCS 2025 ನೇಮಕಾತಿ ( UKPSC PCS Recruitment 2025 )ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಉತ್ತರಾಖಂಡ ಸರ್ಕಾರ ತನ್ನ ಆಡಳಿತಾತ್ಮಕ ವ್ಯವಸ್ಥೆಗಾಗಿ ಪ್ರತಿಭಾಶಾಲಿ ಮತ್ತು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ UKPSC PCS 2025 ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಭಾರಿ ಒಟ್ಟು 123 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಸರ್ಕಾರೀ ಸೇವೆಯಲ್ಲಿ ಸೇರಲಿಚ್ಚಿಸುವ ಅಭ್ಯರ್ಥಿಗಳಿಗಿದು ಬಹು ನಿರೀಕ್ಷಿತ ಅವಕಾಶ.
ನೇಮಕಾತಿಯ ಪ್ರಮುಖ ಅಂಶಗಳು:
ಒಟ್ಟು ಹುದ್ದೆಗಳ ಸಂಖ್ಯೆ: 123
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 2025 ಮೇ 7
ಕೊನೆ ದಿನಾಂಕ: 2025 ಮೇ 27
ಅಧಿಕೃತ ವೆಬ್‌ಸೈಟ್: psc.uk.gov.in
ಹುದ್ದೆಗಳ ವಿವರ:
ಈ ನೇಮಕಾತಿಯ ಅಡಿಯಲ್ಲಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಸೇವೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. ಪ್ರಮುಖ ಹುದ್ದೆಗಳಲ್ಲಿದೆ:
ಉಪ ಶಿಕ್ಷಣ ಅಧಿಕಾರಿ
ಸಿಬ್ಬಂದಿ ಅಧಿಕಾರಿ
ಕಾನೂನು ಅಧಿಕಾರಿ
ಪ್ರೊಬೇಷನ್ ಅಧಿಕಾರಿ
ಈ ಹುದ್ದೆಗಳು ನೇರವಾಗಿ ಸಾರ್ವಜನಿಕ ಸೇವಾ ನಿರ್ವಹಣೆಗೆ ಸಂಬಂಧಪಟ್ಟ ಮಹತ್ವದ ಸ್ಥಾನಗಳಾಗಿದ್ದು, ಅಧಿಕಾರಿಗಳಿಂದ ನೀತಿಪರತೆ, ಪರಿಣಾಮಕಾರಿತ್ವ ಮತ್ತು ಜನಸೇವೆಯ ನಿಷ್ಠೆ ನಿರೀಕ್ಷಿಸಲಾಗುತ್ತದೆ.
ಅರ್ಹತಾ ಮಾನದಂಡಗಳು:
ಶೈಕ್ಷಣಿಕ ಅರ್ಹತೆ: ಕನಿಷ್ಠ ಪದವಿ ಹೊಂದಿರಬೇಕು.
ಉಪ ಶಿಕ್ಷಣ ಅಧಿಕಾರಿ, ಸಿಬ್ಬಂದಿ ಅಧಿಕಾರಿ ಹಾಗೂ ಕಾನೂನು ಅಧಿಕಾರಿ ಹುದ್ದೆಗಳಿಗೆ ಸ್ನಾತಕೋತ್ತರ ಪದವಿ ಅಗತ್ಯ.
ಪ್ರೊಬೇಷನ್ ಅಧಿಕಾರಿ ಹುದ್ದೆಗೆ ಸಮಾಜಶಾಸ್ತ್ರ ಅಥವಾ ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಬೇಕು.
ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳ ವಯಸ್ಸು 21 ರಿಂದ 42 ವರ್ಷಗಳ ನಡುವೆ ಇರಬೇಕು.
ಎಸ್‌ಸಿ/ಎಸ್‌ಟಿ/ಒಬಿಸಿ/ದಿವ್ಯಾಂಗ/ಸ್ವಾತಂತ್ರ್ಯ ಹೋರಾಟಗಾರರಿಗೆ ಗರಿಷ್ಠ ವಯಸ್ಸಿನಲ್ಲಿ 5 ವರ್ಷಗಳ ಸಡಿಲಿಕೆ ಇದೆ.
ಅರ್ಜಿ ಶುಲ್ಕ:
ವರ್ಗಅರ್ಜಿ ಶುಲ್ಕ
ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್₹172
ಎಸ್‌ಸಿ/ಎಸ್‌ಟಿ₹82
ದಿವ್ಯಾಂಗ (PWD)₹22
ಪಾವತಿ ವಿಧಾನ: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ UPI
ಅರ್ಜಿ ಸಲ್ಲಿಸುವ ಕ್ರಮ:
ಅಧಿಕೃತ ವೆಬ್‌ಸೈಟ್ psc.uk.gov.in ಗೆ ಲಾಗಿನ್ ಆಗಿ.
UKPSC PCS 2025 ಲಿಂಕ್ ಕ್ಲಿಕ್ ಮಾಡಿ.
ಹೆಸರು, ಇಮೇಲ್, ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿ ನಮೂದಿಸಿ.
ಶೈಕ್ಷಣಿಕ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಅರ್ಜಿ ಶುಲ್ಕ ಪಾವತಿಸಿ, ಫಾರ್ಮ್ ಸಲ್ಲಿಸಿ ಮತ್ತು ಪ್ರಿಂಟ್ ಅನ್ನು ತೆಗೆದುಕೊಳ್ಳಿ.
ಕೊನೆಯದಾಗಿ ಹೇಳುವುದಾದರೆ, UKPSC PCS ಪರೀಕ್ಷೆ 2025 ಅಭ್ಯರ್ಥಿಗಳಿಗೆ ಅಧಿಕಾರವಾನೆಯುಳ್ಳ, ಗೌರವಾನ್ವಿತ ಹಾಗೂ ಜನಸೇವೆ ಮಾಡಬಹುದಾದ ಅವಕಾಶವನ್ನು ನೀಡುತ್ತಿದೆ. ಶೈಕ್ಷಣಿಕ ಅರ್ಹತೆ ಹೊಂದಿರುವ, ಸರ್ಕಾರೀ ಸೇವೆಯಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು. ಸಮಯಮಿತಿಯಲ್ಲಿ ಅರ್ಜಿ ಸಲ್ಲಿಸಿ, ಪರೀಕ್ಷೆಗೆ ತಯಾರಾಗಿ ಮುಂದಿನ ಹಂತಗಳಿಗೆ ಸಜ್ಜಾಗಿರಿ.ಮತ್ತು ಇಂತಹ ಉತ್ತಮವಾದ ಮಾಹಿತಿಯನ್ನು ನೀವು ತಿಳಿದಮೇಲೆ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.