Job Alert : ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಶೀಘ್ರದಲ್ಲಿ -ಸಿಎಂ ಸಿದ್ದು

transport department jobs

ಬ್ರೇಕಿಂಗ್ ನ್ಯೂಸ್(Breaking News): ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಸಿಎಂ ಸಿದ್ದರಾಮಯ್ಯ(CM Siddaramaiah) ಘೋಷಣೆ

“ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ನೇಮಕಾತಿ ಪ್ರಕ್ರಿಯೆಗಳಿಗೆ ಚುರುಕು ನೀಡಿದೆ. ಇದುವರೆಗೆ 1650 ಚಾಲಕ(drivers)/ನಿರ್ವಾಹಕರು(managers) ಹಾಗೂ 250 ತಾಂತ್ರಿಕ ಸಿಬ್ಬಂದಿ(technical staff)ಗಳನ್ನು ಯಶಸ್ವಿಯಾಗಿ ನೇಮಿಸಲಾಗಿದೆ. ಉಳಿದ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಭರದಿಂದ ನಡೆಯುತ್ತಿದೆ. ಶೀಘ್ರದಲ್ಲೇ ಉಳಿದ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ “ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಹೇಳಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಸಾರಿಗೆ ಇಲಾಖೆ ನೇಮಕಾತಿ(Transport Department Recruitment) :

“ನಾಲ್ಕು ಸಾರಿಗೆ ನಿಗಮಗಳಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 500 ಕ್ಕೂ ಹೆಚ್ಚು ಅನುಕಂಪದ ಆಧಾರದ ಮೇಲೆ ನೇಮಕಾತಿ ಪತ್ರಗಳನ್ನು ಸಿಬ್ಬಂದಿಗಳ ಅವಲಂಬಿತರಿಗೆ ನೀಡಲಾಗಿದೆ. ಇದು ಯುವಕರಿಗೆ ನಿರುದ್ಯೋಗ ಭಾಗ್ಯ ಕರುಣಿಸಿ, ಸಾರಿಗೆ ಸಂಸ್ಥೆಗಳನ್ನು ಅವನತಿಯತ್ತ ಕೊಂಡೊಯ್ಯುತ್ತಿರುವುದರ ಹೆಗ್ಗಳಿಕೆಯಲ್ಲ. ಆರ್. ಅಶೋಕ್ ಅವರೇ, ನಾವು ನುಡಿದಂತೆ ನಡೆಯುವವರಾಗಿದ್ದು, ಬರಿ ಭಾಷಣದಲ್ಲಿ ಕೋಟಿ ಕೋಟಿ ಉದ್ಯೋಗ ಭಾಗ್ಯ ಕರುಣಿಸಿ, ಯುವಜನರನ್ನು ಶೋಷಿಸುವ ಕೆಲಸ ಮಾಡಿಲ್ಲವೆಂದು ವಾದಿಸುತ್ತಾರೆ.

ಸಾರಿಗೆ ಸಂಸ್ಥೆಗಳಲ್ಲಿ ಕಳೆದ 5 ವರ್ಷಗಳಲ್ಲಿ ಹೊಸ ಬಸ್‌ಗಳನ್ನು ಸೇರ್ಪಡೆ ಮಾಡದೇ, ಡಕೋಟ ಬಸ್ಸುಗಳನ್ನು ದಯಪಾಲಿಸಿರುವುದು ಮಾತ್ರ ಸತ್ಯ. ನೀವು ಮಾತನಾಡುವ ಪರಿಗೆ ವಿಷಾದವಲ್ಲದೆ ಮತ್ತೇನು ಹೇಳಲು ಸಾಧ್ಯ? ತಮ್ಮ ಬೇಜವಾಬ್ದಾರಿ, ಆಧಾರರಹಿತ ಮತ್ತು ತಪ್ಪು ಹೇಳಿಕೆಗಳಿಗೆ ಸಂತಾಪ ಸೂಚಿಸುತ್ತ, ನಿಮಗೆ ನಂಬಿರುವ ದೇವರು ಸತ್ಯ ಹೇಳುವ ಸಮೃದ್ಧಿಯನ್ನು ಕರುಣಿಸಲೆಂದು ಹಾರೈಸುತ್ತೇನೆ.”

“ರಾಜ್ಯದ ಯುವಕರಿಗೆ ನಿರುದ್ಯೋಗದ ಸಂಕಷ್ಟಕ್ಕೆ ಪರಿಹಾರವಾಗಿ ಸರ್ಕಾರವು ಯಾವ ಯೋಜನೆಗಳನ್ನು ಕೈಗೊಂಡಿದೆ? ನೀವು ಇದರ ಬಗ್ಗೆ ನಿಮ್ಮ ಪೂಜ್ಯ ಪ್ರಧಾನ ಮಂತ್ರಿ ಮೋದಿಗೆ ಪ್ರಶ್ನೆ ಮಾಡಿ ಉತ್ತರವನ್ನು ಪಡೆಯಿರಿ. ಅಸಂಬದ್ಧ ಟ್ವೀಟ್ ಗಳ ಮೂಲಕ ಜ್ಞಾನವನ್ನು ಪ್ರದರ್ಶಿಸಬೇಡಿ, ಅಶೋಕ್ ಸರ್” ಎಂದು ಅವರಿಗೆ ಉತ್ತರ ನೀಡಿದ್ದಾರೆ.

“ರಾಜ್ಯದ ಬಿಜೆಪಿ ನಾಯಕರೇ, ನೀವು ನಿಮ್ಮ ಆಡಳಿತ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳ ಮೇಲೆ ರೂ. 5900 ಕೋಟಿ ಸಾಲ(loan) ಮಾಡಿ, ಆ ಹೊರೆ ರಾಜ್ಯದ ಜನರ ಮೇಲೆ ಬೇರಿಸಿದ್ದೀರಿ. ಶಾಂತಿನಗರ ಟಿ.ಟಿ.ಎಂ.ಸಿ.ಯನ್ನು ಸಾಲ ಪಡೆಯಲು ಅಡವಿಟ್ಟಿರುವುದು ಸ್ಪಷ್ಟ. ನಿಮ್ಮ ಆಡಳಿತದ ವೈಫಲ್ಯಗಳನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವೇ ಇಲ್ಲ. ಸಾರಿಗೆ ಸಂಸ್ಥೆಗಳಲ್ಲಿ 14,000 ಹುದ್ದೆಗಳು ಖಾಲಿ ಇದ್ದರೂ, ನಿಮ್ಮ ಅವಧಿಯಲ್ಲಿ ಒಂದೇ ಒಂದು ನೇಮಕಾತಿಯೂ ಮಾಡಿಲ್ಲ. ನಮ್ಮ ಕಾಲದಲ್ಲಿ ನೇಮಕಾತಿ ಪ್ರಕಟಣೆಗಳನ್ನು ತಡೆಯಲು ಯತ್ನಿಸಿದ್ದೀರಿ ಎಂಬುದನ್ನು ನೀವು ಮರೆತಿದ್ದೀರಾ?” ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಒಟ್ಟಾರೆಯಾಗಿ, ಹಿಂದಿನ ಆಡಳಿತದ ವೈಫಲ್ಯಗಳನ್ನು ಟೀಕಿಸುವ ಸಂದರ್ಭದಲ್ಲಿ ಖಾಲಿ ಹುದ್ದೆಗಳನ್ನು ಪರಿಹರಿಸಲು ಮತ್ತು ಸಾರಿಗೆ ವಲಯವನ್ನು ಸುಧಾರಿಸಲು ಪ್ರಸ್ತುತ ಸರ್ಕಾರದ ಪ್ರಯತ್ನಗಳನ್ನು ವಿಷಯವನ್ನು ಎತ್ತಿ ತೋರಿಸಿದ್ದಾರೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!