ನೀವೇನಾದರೂ ರೈಲು ಪ್ರಯಾಣ (Train travelling) ಮಾಡುತ್ತಿದ್ದರೆ ಅಥವಾ ಈಗಾಗಲೇ ಮಾಡಿದ್ದರೆ ನಿಮಗೆಲ್ಲ ಗೊತ್ತಿರುವಂತೆ ಟಿಕೆಟ್ ಪಡೆದುಕೊಳ್ಳುವುದು ಕಡ್ಡಾಯ ಎಂದು ತಿಳಿದೇ ಇದೆ. ಆದರೆ ಅವಸರದಲ್ಲಿ ಟಿಕೆಟ್ ಬುಕ್(Train ticket book) ಮಾಡದೆ ಅಥವಾ ಟಿಕೆಟ್ ಪಡೆದುಕೊಳ್ಳದೆ ಟ್ರೈನ್ ಹತ್ತಿ ಪ್ರಯಾಣ ಮಾಡುತ್ತಿರುವಾಗ ಸಿಕ್ಕಿ ಬಿದ್ದರೆ ದಂಡ ಕಟ್ಟಬೇಕಾಗುತ್ತದೆ ಎಂದು ಕೂಡಾ ನಮಗೆಲ್ಲ ಈಗಾಗಲೇ ತಿಳಿದೇ ಇದೆ. ಆದರೆ ಇದೀಗ ಆ ಚಿಂತೆ ಬೇಡಾ ಟಿಕೆಟ್ ಅನ್ನು ತಗೆದುಕೊಳ್ಳದೆ ಟ್ರೈನ್ ನಲ್ಲಿ ನಾವು ಇದೀಗ ಪ್ರಯಾಣ ಮಾಡಬಹುದು. ಇದೆಲ್ಲಾ ಹೇಗೆ ಸಾದ್ಯ ಎಂದು ಯೋಚನೆ ಮಾಡುತ್ತಿದ್ದೀರಿಯೇ. ಬನ್ನಿ ನಿಮಗೆ ಒಂದು ಉಪಯುಕ್ತ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಟಿಕೆಟ್ ತೆಗೆದುಕೊಳ್ಳದೆ ಇನ್ನು ಮುಂದೆ ರೈಲು ಹತ್ತಬಹುದು:
ಹೌದು, ಕ್ರೈಮ್ ಇನ್ವೆಸ್ಟಿಗೇಶನ್ ಬ್ಯೂರೋ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಭಾರತೀಯ ರೈಲ್ವೇಯ ಕೆಲವು ವಿಶೇಷ ರೂಲ್ಸ್ ಗಳನ್ನ ಹಂಚಿಕೊಂಡಿದೆ. ಇದರ ಪ್ರಕಾರ ಪ್ರಯಾಣಿಕರು ರೈಲು ಹತ್ತುವಾಗ ಟಿಕೆಟ್ ಖರೀದಿಸದಿದ್ದರೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದೆ.
ಈ ಹೊಸ ನಿಯಮಗಳ ಪ್ರಕಾರ ರೈಲಿನೊಳಗೆ ಟಿಕೆಟ್ ನೀಡುವ ಸೌಲಭ್ಯವನ್ನ ಪ್ರಯಾಣಿಕರಿಗೆ ರೈಲ್ವೆ ಪರಿಚಯಿಸಿದೆ. ಈ ಸೌಲಭ್ಯದ ಅಡಿಯಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತಿರುವ ಪ್ರಯಾಣಿಕರು ಟಿಕೆಟ್ ಪಡೆಯಲು ಟಿಟಿಇಯನ್ನ (TTE) ಸಂಪರ್ಕಿಸ ಬೇಕಾಗುತ್ತದೆ. ಹೌದು, ಮೊದಲಿಗೆ ನಿಮ್ಮ ಕೈಯಲ್ಲಿ ಟಿಕೆಟ್ ಇಲ್ಲದಿದ್ದರೆ ನೀವು ರೈಲು ಹತ್ತಿದ ತಕ್ಷಣ ಟಿಟಿಇಯನ್ನ (TTE) ಸಂಪರ್ಕಿಸಿ ಮತ್ತು ನಿಮ್ಮ ಪರಿಸ್ಥಿತಿಯನ್ನ ಅವರಿಗೆ ತಿಳಿಸಬೇಕಾಗುತ್ತದೆ. ನಂತರ ನಿಮಗೆ ಭಾರತೀಯ ರೈಲ್ವೆ ನಿಯಮಗಳ ಪ್ರಕಾರ ಟಿಟಿಇಯಿಂದ ನಿಮ್ಮ ಟಿಕೆಟ್ ಅನ್ನು ನೀಡಲಾಗುತ್ತದೆ.
ಈ ಸೌಲಭ್ಯದ ಅಡಿಯಲ್ಲಿ, ಟಿಟಿಇ(TTE) ಕೈಯಲ್ಲಿ ಹಿಡಿಯುವ ಯಂತ್ರವನ್ನ ಹೊಂದಿರುತ್ತದೆ. ಈ ಟಿಟಿಇ ಸಹಾಯದಿಂದ ರೈಲಿನೊಳಗಿನ ಪ್ರಯಾಣಿಕರಿಗೆ ಟಿಕೆಟ್ ನೀಡಲಾಗುತ್ತದೆ. TTE ನಲ್ಲಿನ ಯಂತ್ರವು ರೈಲ್ವೇ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ ಸರ್ವರ್‌ಗೆ(Railway passenger reservation system server) ಸಂಪರ್ಕ ಹೊಂದಿದೆ. ಪ್ರಯಾಣಿಕರು ಟಿಕೆಟ್ ಪಡೆಯಲು ಯಂತ್ರದಲ್ಲಿ ತಾವು ಇಳಿಯಬೇಕಾದ ಸ್ಥಳದ ಹೆಸರು ಮತ್ತು ನಿಲ್ದಾಣವನ್ನ ನಮೂದಿಸಿದ ತಕ್ಷಣ ಟಿಕೆಟ್ ನೀಡಲಾಗುತ್ತದೆ. ರೈಲಿನಲ್ಲಿ ಲಭ್ಯವಿರುವ ಬರ್ತ್‌ಗಳ ಮಾಹಿತಿಯನ್ನ ಈ ಯಂತ್ರದ ಮೂಲಕ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಅಷ್ಟೇ ಅಲ್ಲದೆ ನೀವು ಮುಂಚಿತವಾಗಿ ಟಿಕೆಟ್ಗಳನ್ನು ಖರೀದಿಸದಿದ್ದರೆ ನೀವು 250 ರೂಪಾಯಿ ದಂಡವನ್ನ ವಿಧಿಸಲಾಗುತ್ತದೆ. ಇಲ್ಲವೇ ನೀವು ರೈಲು ಹತ್ತಿದ ಸ್ಥಳದಿಂದ ಇಳಿಯ ಬೇಕು ಎನ್ನುವ ಸ್ಥಾನಕ್ಕೆ ಶುಲ್ಕವನ್ನ ಪಾವತಿಸಬೇಕಾಗುತ್ತದೆ ಎಂಬುದನ್ನ ನೆನಪಿನಲ್ಲಿ ಇಟ್ಟಿಕೊಳ್ಳಿ. ಭಾರತೀಯ ರೈಲ್ವೆಯ ಅಧಿಕೃತ ಟಿಕೆಟಿಂಗ್ ಅಪ್ಲಿಕೇಶನ್ (Official website of Indian Railway ticketing application) UTSನ್ನ ನಿಮ್ಮ ಫೋನ್‌ನಲ್ಲಿ ಡೌನ್‌ಲೋಡ್ ಮಾಡಬಹುದು. ಈ ಆಪ್ ಮೂಲಕ ಪ್ಲಾಟ್ ಫಾರಂ ಟಿಕೆಟ್(Flat form ticket), ಟಿಕೆಟ್ ಬುಕ್ ಮಾಡಬಹುದಾಗಿದೆ. ಇಂತಹ ಉಪಯುಕ್ತ ಹಾಗೂ ಮುಖ್ಯ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group








