ಟೊಯೊಟಾ ಗ್ಲಾನ್ಜಾ (Toyota Glanza) ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಹೆಚ್ಚು ಜನಪ್ರಿಯ ಮತ್ತು ವಿಶ್ವಾಸಾರ್ಹ ಕಾರುಗಳಲ್ಲಿ ಒಂದಾಗಿದೆ. ಆಕರ್ಷಕ ವಿನ್ಯಾಸ ಮತ್ತು ಉತ್ತಮ ವೈಶಿಷ್ಟ್ಯಗಳಿಂದಾಗಿ ಇದು ಗ್ರಾಹಕರ ಗಮನ ಸೆಳೆಯುತ್ತದೆ. ಬೆಂಗಳೂರಿನಲ್ಲಿ ಈ ಕಾರಿನ ಎಕ್ಸ್-ಶೋರೂಂ ಬೆಲೆಯು ಕನಿಷ್ಠ ರೂ. 6.39 ಲಕ್ಷದಿಂದ ಗರಿಷ್ಠ ರೂ. 9.15 ಲಕ್ಷದವರೆಗೆ ಇದೆ.
ನೀವು ಹೊಸ ಕಾರು ಖರೀದಿಸುವ ಯೋಜನೆ ಹಾಕಿದ್ದರೆ, ಉತ್ತಮ ಮೈಲೇಜ್ ನೀಡುವ ‘ಗ್ಲಾನ್ಜಾ’ ಒಂದು ಅತ್ಯುತ್ತಮ ಆಯ್ಕೆಯಾಗಬಹುದು. ಈ ಲೇಖನದಲ್ಲಿ, ಟೊಯೊಟಾ ಗ್ಲಾನ್ಜಾ ಹ್ಯಾಚ್‌ಬ್ಯಾಕ್‌ನ ವಿವಿಧ ರೂಪಾಂತರಗಳ ಆನ್-ರೋಡ್ ಬೆಲೆ (On-Road Price) ಮತ್ತು ಸುಲಭವಾದ ಇಎಂಐ (EMI) ಆಯ್ಕೆಗಳ ಕುರಿತು ಪ್ರಮುಖ ವಿವರಗಳನ್ನು ನೀಡಲಾಗಿದೆ.
ಗ್ಲಾನ್ಜಾ ವಿವಿಧ ರೂಪಾಂತರಗಳ ಆನ್-ರೋಡ್ ಬೆಲೆ ಮತ್ತು ಇಎಂಐ ವಿವರ:
- ‘E’ (ಪೆಟ್ರೋಲ್) ರೂಪಾಂತರ: ಇದರ ಆನ್-ರೋಡ್ ಬೆಲೆ ಸುಮಾರು ರೂ. 7.64 ಲಕ್ಷದವರೆಗೆ ಇದೆ. ರೂ. 3 ಲಕ್ಷ ಡೌನ್-ಪೇಮೆಂಟ್ ಪಾವತಿಸಿದರೆ, ಉಳಿದ ರೂ. 4.64 ಲಕ್ಷಕ್ಕೆ ಸಾಲ ಪಡೆಯಬಹುದು. ಶೇ. 8% ಬಡ್ಡಿ ದರದಲ್ಲಿ 5 ವರ್ಷಗಳ ಅವಧಿಗೆ ಮಾಸಿಕ ಸುಮಾರು ರೂ. 9,500 ರವರೆಗೆ ಇಎಂಐ ಪಾವತಿಸಬೇಕಾಗುತ್ತದೆ.
- ‘S’ (ಪೆಟ್ರೋಲ್) ರೂಪಾಂತರ: ಇದರ ಆನ್-ರೋಡ್ ದರ ಸುಮಾರು ರೂ. 8.63 ಲಕ್ಷದವರೆಗೆ ಇದೆ. ರೂ. 3 ಲಕ್ಷ ಡೌನ್-ಪೇಮೆಂಟ್ ಕಟ್ಟಿದರೆ, ರೂ. 5.63 ಲಕ್ಷದವರೆಗೆ ಸಾಲ ಲಭ್ಯವಿರುತ್ತದೆ. ಶೇ. 8% ಬಡ್ಡಿ ದರದಲ್ಲಿ, 5 ವರ್ಷಗಳ ಅವಧಿಗೆ ಮಾಸಿಕ ಸುಮಾರು ರೂ. 11,500 ವರೆಗೆ ಇಎಂಐ ಬರುತ್ತದೆ.
- ‘G’ (ಪೆಟ್ರೋಲ್) ರೂಪಾಂತರ: ಇದರ ಆನ್-ರೋಡ್ ಬೆಲೆ ಸುಮಾರು ರೂ. 9.70 ಲಕ್ಷದವರೆಗೆ ಇದೆ. ರೂ. 3 ಲಕ್ಷ ಡೌನ್-ಪೇಮೆಂಟ್ ಪಾವತಿಸಿ ಖರೀದಿಸಿದರೆ, ರೂ. 6.70 ಲಕ್ಷದವರೆಗೆ ಸಾಲ ಪಡೆಯಬಹುದು. ಶೇ. 8% ಬಡ್ಡಿ ದರದಲ್ಲಿ, 5 ವರ್ಷಗಳಿಗೆ ಮಾಸಿಕ ಸುಮಾರು ರೂ. 13,500 ವರೆಗೆ ಇಎಂಐ ಕಟ್ಟಬೇಕು.
- ‘S’ ಸಿಎನ್‌ಜಿ (CNG) ರೂಪಾಂತರ: ಇದರ ಆನ್-ರೋಡ್ ಬೆಲೆ ಸುಮಾರು ರೂ. 9.60 ಲಕ್ಷದವರೆಗೆ ಇದೆ. ರೂ. 3 ಲಕ್ಷ ಡೌನ್-ಪೇಮೆಂಟ್ ಪಾವತಿಸಿದರೆ, ರೂ. 6.60 ಲಕ್ಷದವರೆಗೆ ಸಾಲ ಲಭ್ಯವಿರುತ್ತದೆ. ಶೇ. 8% ಬಡ್ಡಿ ದರದಲ್ಲಿ, 5 ವರ್ಷಗಳ ಅವಧಿಗೆ ತಿಂಗಳಿಗೆ ಸುಮಾರು ರೂ. 13,400 ವರೆಗೆ ಇಎಂಐ ಪಾವತಿಸಬೇಕಾಗುತ್ತದೆ.
ಟೊಯೊಟಾ ಗ್ಲಾನ್ಜಾ ವಿಶೇಷತೆಗಳು:
ಮೈಲೇಜ್: ಈ ಕಾರು ರೂಪಾಂತರ ಮತ್ತು ಇಂಧನ ಆಯ್ಕೆಯನ್ನು ಅವಲಂಬಿಸಿ 22 ರಿಂದ 30 ಕಿ.ಮೀ ವರೆಗೆ ಉತ್ತಮ ಮೈಲೇಜ್ ನೀಡುತ್ತದೆ.
ಎಂಜಿನ್: ಇದು 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1.2-ಲೀಟರ್ ಪೆಟ್ರೋಲ್ + ಸಿಎನ್‌ಜಿ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ.
ವಿನ್ಯಾಸ ಮತ್ತು ವೈಶಿಷ್ಟ್ಯಗಳು: ಆಕರ್ಷಕ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಡಿಆರ್‌ಎಲ್‌ಗಳು, ಟೈಲ್ ಲ್ಯಾಂಪ್‌ಗಳು ಮತ್ತು ಅಲಾಯ್ ವೀಲ್‌ಗಳನ್ನು ಹೊಂದಿದೆ. 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ಕೀಲೆಸ್ ಎಂಟ್ರಿ ಇದರಲ್ಲಿದೆ.
ಸುರಕ್ಷತೆ: ಪ್ರಯಾಣಿಕರ ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು 360 ಡಿಗ್ರಿ ಕ್ಯಾಮೆರಾದಂತಹ ಪ್ರಮುಖ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.
ಗಮನಿಸಿ: ಇಲ್ಲಿ ನೀಡಲಾದ ಆನ್-ರೋಡ್ ಬೆಲೆ ಮತ್ತು ಇಎಂಐ ವಿವರಗಳು ಅಂದಾಜು ಮಾತ್ರ. ನಿಖರ ದರ ಮತ್ತು ಸಾಲದ ಆಯ್ಕೆಗಳಿಗಾಗಿ ನಿಮ್ಮ ಹತ್ತಿರದ ಟೊಯೊಟಾ ಶೋರೂಂಗೆ ಭೇಟಿ ನೀಡಿ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಲಿಂಗರಾಜ ರಾಮಪುರ (Lingaraj Ramapur) ಅವರು NeedsOfPublic.in ನ ಸಂಸ್ಥಾಪಕರು ಮತ್ತು ಪ್ರಧಾನ ಸಂಪಾದಕರಾಗಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಐಟಿ (BCA, MCA) ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ (M.A) ಪದವಿ ಪಡೆದಿರುವ ಇವರು ತಾಂತ್ರಿಕ ಮತ್ತು ಮಾಧ್ಯಮ ರಂಗದ ಅಪರೂಪದ ಸಂಗಮವಾಗಿದ್ದಾರೆ. ಡಿಜಿಟಲ್ ಪತ್ರಿಕೋದ್ಯಮಕ್ಕೆ ಕಾಲಿಡುವ ಮುನ್ನ ಬೆಂಗಳೂರಿನ ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿಗಳಾದ Infosys ಮತ್ತು Concentrix ನಲ್ಲಿ ತಾಂತ್ರಿಕ ಹುದ್ದೆಗಳಲ್ಲಿ ಕೆಲಸ ಮಾಡಿದ ಜಾಗತಿಕ ಅನುಭವ ಇವರಿಗಿದೆ. 2017 ರಿಂದ ಮಾಧ್ಯಮ ರಂಗದಲ್ಲಿದ್ದು, ಕಳೆದ 9 ವರ್ಷಗಳಿಂದ ಡೇಟಾ-ಆಧಾರಿತ ವರದಿಗಾರಿಕೆ, ನಿಖರವಾದ ಫ್ಯಾಕ್ಟ್-ಚೆಕಿಂಗ್ ಮತ್ತು ಸಾರ್ವಜನಿಕರಿಗೆ ವಿಶ್ವಾಸಾರ್ಹ ಮಾಹಿತಿಯನ್ನು ತಲುಪಿಸುವ ಸಂಪಾದಕೀಯ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.


WhatsApp Group




Leave a Reply