PUC ನಂತರ ಈ ಟಾಪ್‌ ಕೋರ್ಸ್‌ಗಳು ಕೊಡುತ್ತವೆ ಹೆಚ್ಚು ಸಂಬಳದ ಗ್ಯಾರಂಟಿ ಕೆಲಸ.! 

Picsart 25 05 02 23 05 34 840

WhatsApp Group Telegram Group

ಪಿಯುಸಿ ನಂತರ ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುವಿರಾ? ಬೆಳೆಯುತ್ತಿರುವ ಈ ಕ್ಷೇತ್ರದಲ್ಲಿ ಅದ್ಭುತ ಅವಕಾಶಗಳಿವೆ! ಕೆಲವು ಉನ್ನತ ಕೋರ್ಸ್‌ಗಳು ಇಲ್ಲಿವೆ.

ಪಿಯುಸಿ ಮುಗಿಸಿದ ಬಳಿಕ “ಮುಂದೇನು?” ಎಂಬ ಪ್ರಶ್ನೆ ಪ್ರತಿಯೊಬ್ಬ ವಿದ್ಯಾರ್ಥಿಯ ಮನಸ್ಸಿನಲ್ಲಿ ಸಾಂದರ್ಭಿಕವಾಗಿ ಮೂಡುವುದು ಸಹಜ. ಇಂಜಿನಿಯರಿಂಗ್ ಅಥವಾ ಡಿಗ್ರಿ ಪದವಿಗಳಿಂದ ಹೊರಗಾದ್ದು, ತ್ವರಿತ ಉದ್ಯೋಗ ಅವಕಾಶಗಳನ್ನು ಒದಗಿಸಬಲ್ಲ ಒಂದು ಆಧುನಿಕ ಮತ್ತು ತಾಂತ್ರಿಕ ಕ್ಷೇತ್ರವೇ ಡಿಜಿಟಲ್ ಮಾರ್ಕೆಟಿಂಗ್. ತೀವ್ರವಾಗಿ ಬೆಳೆಯುತ್ತಿರುವ ಈ ಕ್ಷೇತ್ರವು ಹೆಚ್ಚು ಅಧ್ಯಯನ ಬೇಕಾಗದೆ, ತ್ವರಿತ ತರಬೇತಿಗಳ ಮೂಲಕ ವೇತನದ ಉದ್ಯೋಗದತ್ತ ನಿಮ್ಮನ್ನು ಮುನ್ನಡೆಸುವ ಶಕ್ತಿ ಹೊಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇಲ್ಲಿ ನಾವು ಪಿಯುಸಿ ನಂತರ ಕಲಿಯಬಹುದಾದ ಪ್ರಮುಖ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್‌ಗಳ ಬಗ್ಗೆ ವಿಶ್ಲೇಷಣೆ ಮಾಡಿದ್ದೇವೆ:

ಸರ್ಚ್ ಇಂಜಿನ್ ಆಪ್ಟಿಮೈಸೇಶನ್ (SEO)

SEO ಅನ್ನು ಡಿಜಿಟಲ್ ಜಗತ್ತಿನ ರಹಸ್ಯ ಶಸ್ತ್ರಾಸ್ತ್ರ ಎಂದೆ ಹೇಳಬಹುದು. ವೆಬ್‌ಸೈಟ್‌ಗಳು Google ಅಥವಾ Bing ನಲ್ಲಿ ಮೊದಲು ತೋರಿಸಬೇಕಾದರೆ, SEO ತಂತ್ರಗಳು ಅವಶ್ಯಕ. ಈ ಕೋರ್ಸ್‌ನಲ್ಲಿ ನೀವು ಕೀವರ್ಡ್ ರಿಸರ್ಚ್, ಆನ್-ಪೇಜ್/ಆಫ್-ಪೇಜ್ SEO, ಟೇಕ್ನಿಕಲ್ SEO ಬಗ್ಗೆ ತಿಳಿಯಬಹುದು.

ಉದ್ಯೋಗ ಅವಕಾಶಗಳು:
SEO ಎಕ್ಸಪರ್ಟ್(SEO Expert), ಕಂಟೆಂಟ್ ಆಪ್ಟಿಮಿಟ್ಜರ್ (Content Optimizer), ಕೀವರ್ಡ್ ಅನಾಲಿಸ್ಟ್ (Keyword Analyst).

ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ (SMM)

Facebook, Instagram, Twitter ಮುಂತಾದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬ್ರ್ಯಾಂಡ್‌ಗಳನ್ನು ಹೇಗೆ ಪ್ರಸಾರ ಮಾಡಬೇಕು ಎಂಬುದನ್ನು ಕಲಿಸುವ ಈ ಕೋರ್ಸ್, ಕ್ರಿಯೇಟಿವ್ ಅಭಿರುಚಿಯುಳ್ಳವರಿಗಾಗಿ ಅತ್ಯುತ್ತಮ ಆಯ್ಕೆ.

ಮುಖ್ಯ ಕೌಶಲ್ಯಗಳು:
ಆಡ್ ಕ್ಯಾಂಪೇನ್ (Ad Campaigns), ಹ್ಯಾಶ್ ಟ್ಯಾಗ್ ಸ್ಟ್ರಾಟಜಿ (Hashtag Strategy), ಅನಾಲಿಟಿಕ್ಸ್(Analytics), ಇನ್ಫಲುಎನ್ಸರ್ ಕೊಲಾಬರೇಷನ್ (Influencer Collaboration).

ಉದ್ಯೋಗ ಅವಕಾಶಗಳು:
SMM Executive, ಸೋಶಿಯಲ್ ಮೀಡಿಯಾ ಸ್ಟ್ರೈತೆಜಿಸ್ಟ್ (Social Media Strategist), ಡಿಜಿಟಲ್ ಪಿ ಆರ್ (Digital PR).

ಕಂಟೆಂಟ್‌ ಮಾರ್ಕೆಟಿಂಗ್(Content Marketing):

ಇದು ಕೇವಲ ಬ್ಲಾಗ್(Blog) ಬರೆಯುವುದು ಮಾತ್ರವಲ್ಲ. ಗ್ರಾಹಕರನ್ನು ಸೆಳೆಯುವ, ವಿಶ್ವಾಸ ಹುಟ್ಟುಹಾಕುವ ಹಾಗೂ ಮಾರಾಟ ಹೆಚ್ಚಿಸುವ ದೃಷ್ಟಿಕೋನದಿಂದ ವಿಷಯವನ್ನು ರಚಿಸುವ ಕಲೆ. ಈ ಕೋರ್ಸ್‌ಗಳಲ್ಲಿ ಕಂಟೆಂಟ್ ಪ್ಲಾನಿಂಗ್, ಸ್ಟೋರಿ ಟೆಲಿಂಗ್(Story telling), ವೀಡಿಯೊ ಕಂಟೆಂಟ್ ಹಾಗೂ ಇನ್ಫೋಗ್ರಾಫಿಕ್ಸ್ ರೂಪಿಸಲು ಕಲಿಸಲಾಗುತ್ತದೆ.

ಉದ್ಯೋಗ ಅವಕಾಶಗಳು:
ಕಂಟೆಂಟ್ ರೈಟರ್ (Content Writer), ಕಂಟೆಂಟ್ ಸ್ಟ್ರಾಟೆಜಿಸ್ಟ್ (Content Strategist), ಕಾಪಿ ರೈಟರ್ (Copywriter).

ಇಮೇಲ್ ಮಾರ್ಕೆಟಿಂಗ್ ಮತ್ತು ಆಟೋಮೇಶನ್(Email Marketing and Automation):

ವ್ಯಕ್ತಿಗತವಾಗಿ ಗ್ರಾಹಕರಿಗೆ ತಲುಪಲು ಇಮೇಲ್ ಇನ್ನೂ ಬಹಳ ಪರಿಣಾಮಕಾರಿ ಮಾಧ್ಯಮವಾಗಿದೆ. Mailchimp ಅಥವಾ Hubspot ಮುಂತಾದ ಸಾಧನಗಳನ್ನು ಬಳಸಿ ಇಮೇಲ್ ಅಭಿಯಾನಗಳು ಹೇಗೆ ರೂಪಿಸಬೇಕು ಎಂಬುದನ್ನು ಇಲ್ಲಿ ಕಲಿಯಬಹುದು.

ಉದ್ಯೋಗ ಅವಕಾಶಗಳು:
Email Campaign Manager, CRM Executive.

ಡಿಜಿಟಲ್ ಡೇಟಾ ಅನಾಲಿಟಿಕ್ಸ್(Digital Data Analyst)

ಮಾರ್ಕೆಟಿಂಗ್ ಅಭಿಯಾನಗಳು ಯಶಸ್ವಿಯಾಗಿದೆಯಾ ಎಂಬುದನ್ನು ಅರ್ಥಮಾಡಿಕೊಳ್ಳಲು ಡೇಟಾ ವಿಶ್ಲೇಷಣೆ ಅತ್ಯಗತ್ಯ. ಈ ಕೋರ್ಸ್‌ನಲ್ಲಿ Google Analytics, Tag Manager, Conversion Tracking ಬಗ್ಗೆ ತಾಂತ್ರಿಕವಾಗಿ ತರಬೇತಿ ನೀಡಲಾಗುತ್ತದೆ.

ಉದ್ಯೋಗ ಅವಕಾಶಗಳು:
Digital Analyst, Google Analytics Expert.

ಡೇಟಾ ಸೈನ್ಸ್(Data Science)– ಡಿಜಿಟಲ್ ಮಾರ್ಕೆಟಿಂಗ್‌ನ ನೆರಳು ಸಹಾಯಕ

ಡೇಟಾ ಸೈನ್ಸ್ ನೈಜ ಅರ್ಥದಲ್ಲಿ ಡಿಜಿಟಲ್ ಮಾರ್ಕೆಟಿಂಗ್‌ನ ಭಾಗವಲ್ಲದಿದ್ದರೂ ಸಹ, ಅದರಲ್ಲಿ ವಿಶ್ಲೇಷಣೆ ಮತ್ತು ಬಳಕೆದಾರ ಮನಸ್ಸನ್ನು ತಿಳಿಯುವ ದೃಷ್ಟಿಯಿಂದ ಸಹಾಯಕ. Python, SQL ಮುಂತಾದ ಭಾಷೆಗಳ ಜ್ಞಾನವಿದ್ದರೆ ಇನ್ನೂ ಉತ್ತಮ.

ಈ ಕೋರ್ಸ್‌ಗಳನ್ನು ಎಲ್ಲಿ ಕಲಿಯಬಹುದು?

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು: Coursera, Udemy, Simplilearn, Great Learning ಮುಂತಾದವು.

ಬೆಂಗಳೂರು ಅಥವಾ ಇತರ ಮಹಾನಗರಗಳಲ್ಲಿನ ಇನ್ಸ್ಟಿಟ್ಯೂಟ್‌ಗಳು: Digital Academy 360, Web Marketing Academy, NIIT, Learn Digital Academy ಇತ್ಯಾದಿ.

ಪಿಯುಸಿ ನಂತರ ಯಾಕೆ ಡಿಜಿಟಲ್ ಮಾರ್ಕೆಟಿಂಗ್?

ತ್ವರಿತ ಉದ್ಯೋಗ(Quick employment): 3-6 ತಿಂಗಳ ತರಬೇತಿಯೊಂದಿಗೆ ಕೆಲಸ ಆರಂಭಿಸಬಹುದು.

ಹೆಚ್ಚು ಬೇಡಿಕೆ(High demand): ಸಣ್ಣ ವ್ಯಾಪಾರದಿಂದ ಹಿಡಿದು ದೊಡ್ಡ ಕಾರ್ಪೊರೇಟುಗಳವರೆಗೆ ಡಿಜಿಟಲ್ ಮಾರ್ಕೆಟಿಂಗ್ ತಜ್ಞರ ಅಗತ್ಯವಿದೆ.

ಫ್ರೀಲಾನ್ಸಿಂಗ್ ಅವಕಾಶ(Freelancing opportunity): ಮನೆಯಿಂದಲೇ ಕೆಲಸ ಮಾಡುವ ಅವಕಾಶ.

ವೃತ್ತಿ ಬೆಳವಣಿಗೆ(Career Growth): ಸದಾ ಬದಲಾಗುವ ತಂತ್ರಜ್ಞಾನದಲ್ಲಿ ನಿರಂತರ ಕಲಿಕೆಗೆ ಅವಕಾಶ.

ಡಿಜಿಟಲ್ ಮಾರ್ಕೆಟಿಂಗ್ ಪಿಯುಸಿ(PUC ) ನಂತರ ಹತ್ತಿಕೊಳ್ಳಬಹುದಾದ ಅತ್ಯುತ್ತಮ ಕರಿಯರ್ ಮಾರ್ಗವಾಗಿದೆ. ಉತ್ಸಾಹ, ಕ್ರಿಯೇಟಿವಿಟಿ ಮತ್ತು ತಂತ್ರಜ್ಞಾನದಲ್ಲಿನ ಆಸಕ್ತಿಯುಳ್ಳವರು ಈ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಣಬಹುದು. ಇಂದೇ ಪ್ರಾರಂಭಿಸಿ, ನಾಳೆಯ ಡಿಜಿಟಲ್ ಮಾರ್ಕೆಟಿಂಗ್ ನಿಪುಣನಾಗಿ ಹೊರಹೊಮ್ಮಿ!

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!