CNG ಕಾರುಗಳು: ಮುಖ್ಯಾಂಶಗಳು
- ನಂಬರ್ 1 ಮೈಲೇಜ್: ಭಾರತದಲ್ಲೇ ಅತಿ ಹೆಚ್ಚು ಮೈಲೇಜ್ (34.43 km/kg) ನೀಡುವ ಸಿಎನ್‌ಜಿ ಕಾರು ಮಾರುತಿ ಸುಜುಕಿ ‘ಸೆಲೆರಿಯೊ’ (Celerio).
- ಅತ್ಯಂತ ಅಗ್ಗದ ಕಾರು: ಕೇವಲ ₹4.82 ಲಕ್ಷ ಆರಂಭಿಕ ಬೆಲೆಯಲ್ಲಿ ಸಿಗುವ ‘ಆಲ್ಟೊ ಕೆ10’ (Alto K10) ಬಜೆಟ್ ಫ್ರೆಂಡ್ಲಿ ಕಾರಾಗಿದೆ.
- ಮಾರುತಿಯದ್ದೇ ಪಾರುಪತ್ಯ: ದೇಶದ ಟಾಪ್ 5 ಅತಿ ಹೆಚ್ಚು ಮೈಲೇಜ್ ನೀಡುವ ಎಲ್ಲಾ ಸಿಎನ್‌ಜಿ ಕಾರುಗಳು ಮಾರುತಿ ಸುಜುಕಿ ಕಂಪನಿಯದ್ದೇ ಆಗಿವೆ.
ಒಂದು ಕೆಜಿ ಸಿಎನ್‌ಜಿಗೆ 34 ಕಿ.ಮೀ ಮೈಲೇಜ್! ನಿಮ್ಮ ಹಣ ಉಳಿಸಲಿವೆ ಈ 5 ಬಜೆಟ್ CNG ಕಾರುಗಳು
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಈ ಕಾಲದಲ್ಲಿ, ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರಿಗೆ ಕಾರು ನಿರ್ವಹಣೆ ಮಾಡುವುದು ದೊಡ್ಡ ಸವಾಲಾಗಿದೆ. ಇನ್ನು ಎಲೆಕ್ಟ್ರಿಕ್ (EV) ಮತ್ತು ಹೈಬ್ರಿಡ್ ಕಾರುಗಳ ಬೆಲೆ ಬಜೆಟ್‌ಗಿಂತ ಭಾರಿ ದುಬಾರಿ. ಹೀಗಾಗಿ, ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ರಾಹಕರ ಮೊದಲ ಆಯ್ಕೆ ‘CNG ಕಾರುಗಳು’.
ಪೆಟ್ರೋಲ್‌ಗೆ ಹೋಲಿಸಿದರೆ ಸಿಎನ್‌ಜಿ ದರ ಕಡಿಮೆ ಇರುವುದು ಮಾತ್ರವಲ್ಲದೆ, ಇವುಗಳಲ್ಲಿ ಮೈಲೇಜ್ ಕೂಡ ಅದ್ಭುತವಾಗಿ ಸಿಗುತ್ತದೆ. ಭಾರತದ ಸಿಎನ್‌ಜಿ ಕಾರ್ ಮಾರುಕಟ್ಟೆಯಲ್ಲಿ ಸದ್ಯ ಮಾರುತಿ ಸುಜುಕಿ (Maruti Suzuki) ಕಂಪನಿಯೇ ಮೇಲುಗೈ ಸಾಧಿಸಿದ್ದು, ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 5 ಕಾರುಗಳ ಸಂಪೂರ್ಣ ವಿವರ ಇಲ್ಲಿದೆ.
1. ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio):

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಸಿಎನ್‌ಜಿ ಕಾರ್ ಎಂದರೆ ಅದು ಸೆಲೆರಿಯೊ. ಇದು ಪ್ರತಿ ಕೆಜಿ ಸಿಎನ್‌ಜಿಗೆ ಬರೋಬ್ಬರಿ 34.43 ಕಿ.ಮೀ ಮೈಲೇಜ್ ನೀಡುತ್ತದೆ! ಇದರ VXI CNG ಮಾದರಿಯ ಎಕ್ಸ್ ಶೋರೂಮ್ ಬೆಲೆ ₹5.98 ಲಕ್ಷ ರೂಪಾಯಿ ಆಗಿದ್ದು, ಬಜೆಟ್ ಬೆಲೆಯಲ್ಲಿ ಉತ್ತಮ ಲುಕ್ ಮತ್ತು ಫೀಚರ್ಸ್ ಬಯಸುವವರಿಗೆ ಇದು ಹೇಳಿ ಮಾಡಿಸಿದಂತಿದೆ.
2. ಮಾರುತಿ ಸುಜುಕಿ ವ್ಯಾಗನ್ ಆರ್ (Maruti Suzuki WagonR):

ಮಧ್ಯಮ ವರ್ಗದ ಕುಟುಂಬಗಳ ನೆಚ್ಚಿನ ಆಯ್ಕೆ ಈ ವ್ಯಾಗನ್ ಆರ್. ವಿಶಾಲವಾದ ಕ್ಯಾಬಿನ್ ಹೊಂದಿರುವ ಈ ಕಾರು ಪ್ರತಿ ಕೆಜಿ ಸಿಎನ್‌ಜಿಗೆ 34 ಕಿ.ಮೀ. ಮೈಲೇಜ್ ನೀಡುತ್ತದೆ. LXI CNG ಮಾದರಿಗೆ ₹5.89 ಲಕ್ಷ ಮತ್ತು VXI CNG ಮಾದರಿಗೆ ₹6.42 ಲಕ್ಷ (ಎಕ್ಸ್ ಶೋರೂಮ್) ನಿಗದಿಯಾಗಿದೆ.
3. ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10):

ದೇಶದ ಎರಡನೇ ಅತಿ ಅಗ್ಗದ ಸಿಎನ್‌ಜಿ ಕಾರ್ ಇದಾಗಿದೆ. ಚಿಕ್ಕ ಫ್ಯಾಮಿಲಿಗೆ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಬಯಸುವವರಿಗೆ ಇದು ಬೆಸ್ಟ್. ಇದು ಪ್ರತಿ ಕೆಜಿ ಸಿಎನ್‌ಜಿಗೆ 33.85 ಕಿ.ಮೀ ಮೈಲೇಜ್ ನೀಡುತ್ತದೆ. LXI S-CNG ವೇರಿಯಂಟ್ ಕೇವಲ ₹4.82 ಲಕ್ಷ ಹಾಗೂ VXI S-CNG ವೇರಿಯಂಟ್ ₹5.32 ಲಕ್ಷಕ್ಕೆ ಲಭ್ಯವಿದೆ.
4. ಮಾರುತಿ ಸುಜುಕಿ ಡಿಜೈರ್ (Maruti Suzuki Dzire):

ಸೆಡಾನ್ ಕಾರುಗಳ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವಾಗುವ ಡಿಜೈರ್ ಕೂಡ ಸಿಎನ್‌ಜಿಯಲ್ಲಿ ಲಭ್ಯವಿದೆ. ಪ್ರೀಮಿಯಂ ಲುಕ್ ಜೊತೆಗೆ ಪ್ರತಿ ಕೆಜಿ ಸಿಎನ್‌ಜಿಗೆ 33 ಕಿ.ಮೀ ಮೈಲೇಜ್ ನೀಡುತ್ತದೆ. ಇದರ VXI CNG ಮಾದರಿಗೆ ₹8.03 ಲಕ್ಷ ಹಾಗೂ ಟಾಪ್ ಎಂಡ್ ZXI CNG ವೇರಿಯಂಟ್‌ಗೆ ₹9.04 ಲಕ್ಷ ಬೆಲೆಯಿದೆ.
5. ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift):

ಸ್ಪೋರ್ಟಿ ಲುಕ್ ಮತ್ತು ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಸ್ವಿಫ್ಟ್ ಅಧಿಪತ್ಯ ಮುಂದುವರಿದಿದೆ. ಯುವಜನತೆಯ ಫೇವರಿಟ್ ಆಗಿರುವ ಇದು ಪ್ರತಿ ಕೆಜಿ ಸಿಎನ್‌ಜಿಗೆ 32 ಕಿ.ಮೀ. ಮೈಕೇಜ್ ನೀಡುತ್ತದೆ. ಇದರ VXI CNG ಬೆಲೆ ₹7.45 ಲಕ್ಷದಿಂದ ಆರಂಭವಾಗಿ, ZXI CNG ಮಾದರಿಗೆ ₹8.39 ಲಕ್ಷದವರೆಗೆ ಇರುತ್ತದೆ.
❓ CNG ಕಾರುಗಳ ಕುರಿತ ಸಾಮಾನ್ಯ ಪ್ರಶ್ನೆಗಳು (FAQ)
ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ CNG ಕಾರು ಯಾವುದು?
ಅತ್ಯಂತ ಕಡಿಮೆ ಬೆಲೆಗೆ ಸಿಗುವ ಸಿಎನ್‌ಜಿ ಕಾರು ಯಾವುದು?
ಫ್ಯಾಮಿಲಿಗೆ ಬೆಸ್ಟ್ CNG ಕಾರು ಯಾವುದು?
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Rakshit With over 4 years of dedicated experience in journalism, Rakshit is a seasoned writer known for his accurate and timely reporting. He specializes in breaking down complex government schemes, local news, and current affairs for the common reader. His commitment to fact-checking ensures readers get only the most reliable information.


WhatsApp Group




