Tech Tips: ಸುಡು ಬಿಸಿಲಿಗೆ ನಿಮ್ಮ ಫೋನ್ ಬ್ಲಾಸ್ಟ ಆಗುವ ಸಾಧ್ಯತೆ, ಚಾರ್ಜ್ ಹಾಕುವಾಗ ನಿರ್ಲಕ್ಷತೆ ಬೇಡ

Picsart 23 05 24 17 36 47 299 scaled

ಎಲ್ಲರಿಗೂ ನಮಸ್ಕಾರ, ಬೇಸಿಗೆಯಲ್ಲಿ ಸ್ಮಾರ್ಟ್ ಫೋನ್ ಸ್ಪೋಟ ಆಗುವ ಸಾಧ್ಯತೆ ಇರುತ್ತದೆ.  ಹಾಗಾದರೆ ಈ ಸ್ಪೋಟಕವನ್ನು ತಡೆಯುವುದು ಹೇಗೆ ಹಾಗೂ ಅದಕ್ಕೆ ಸೇರಿದಂತೆ ಮುಂತಾದ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಈ ಬೇಸಿಗೆ ಬಿಸಿಲಿನಲ್ಲಿ ಫೋನ್ಗಳಿಗೂ ಬಂತು ಆಪತ್ತು(This summer heat is also dangerous for smartphones):

ಬೇಸಿಗೆ ಬರುತ್ತಿದ್ದಂತೆ, ನಿಮ್ಮ ಸ್ಮಾರ್ಟ್ ಫೋನ್ ಚಿಕ್ಕದಾದ ಫೈರ್‌ಬಾಲ್ ಆಗಿ ರೂಪಾಂತರಗೊಳ್ಳುವ ಸಾಧ್ಯತೆ ಇದೆ ಹಾಗೂ ಅಪಾಯವನ್ನುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಈ ಬಾರಿಯ ಬೇಸಿಗೆಯಲ್ಲಿ ಬಿಸಿಲು ವಿಪರೀತವಾಗಿದೆ. ಬಹುತೇಕ  ರಾಜ್ಯಗಳಲ್ಲಿ, ಹಲವು ನಗರಗಳಲ್ಲಿ  ತಾಪಮಾನವು 40 ಡಿಗ್ರಿ ಸೆಲ್ಸಿಯಸ್​ ದಾಟಿದೆ.
ದೆಹಲಿಯಲ್ಲಿ ಬಹುತೇಕ ಎಲ್ಲಾ ಭಾಗವು ಬಿಸಿಲಿನ ತೀವ್ರ ಶಾಖವು ವಿಪರೀತವಾಗಿದ್ದು, ಅಪಾಯ ಸಂಭಾವಿಸುವ ಸಾಧ್ಯತೆ ಇರುತ್ತದೆ ಎಂದು ಇತ್ತೀಚ್ಚಿನ ವರದಿ ಹೇಳಿದೆ. ಈ ಬೇಸಿಗೆಯ ಬಿಸಿಯು ಸ್ಮಾರ್ಟ್​ಫೋನ್​ಗಳಿಗೂ(Smartphones) ಕೂಡ ಅಪಾಯಕಾರಿ ಆಗಿದೆ. ಮೊಬೈಲ್​ಗಳು ತುಂಬಾ ಹೀಟ್ ಆಗುತ್ತಿವೆ. ಇದರ ಪರಿಣಾಮವಾಗಿ ಮೊಬೈಲ್ ಸ್ವಿಚ್ ಆಫ್, ಹ್ಯಾಂಗ್ ಹಾಗೂ ಕೊನೆಯದಾಗಿ ಬ್ಲಾಸ್ಟ್ ಆಗುವ ಸಾಧ್ಯತೆಗಳು ಕಂಡುಬರುತ್ತಿವೆ. ಈಗಿರುವ ಫಾಸ್ಟ್ ಚಾರ್ಜರ್​ಗಳಿಂದ ಬೇಗನೆ ಬಿಸಿ ಆಗುವ ಮೊಬೈಲ್​ಗಳು ಬಿಸಿಲಿನಿಂದ ಇನ್ನಷ್ಟು ಹೆಚ್ಚಾಗಿ ಹೀಟ್( Heat ) ಆಗುತ್ತಿದೆ. ಹಾಗಾದರೆ ಬಿಸಿಲ ಬೇಗೆಯಿಂದ ನಿಮ್ಮ ಮೊಬೈಲ್ ಅನ್ನು ತಂಪಾಗಿಡುವುದು ಹೇಗೆ ಎಂಬುದರ ಕುರಿತು ಇಲ್ಲಿದೆ ಟಿಪ್ಸ್.

Untitled 1 scaled

ಮೊಬೈಲ್ ಬ್ಲಾಸ್ಟ್  ಆಗದಂತೆ ಇರಲು ಟಿಪ್ಸ್(Tips to avoid mobile blast):

  • ನೇರ ಸೂರ್ಯನಿಂದ ಬೆಳಕನ್ನು ತಪ್ಪಿಸಿ:                                                                                                                

ನಿಮ್ಮ ಫೋನ್ ಅನ್ನು ಬಿಸಿಲಿನ ಬೇಗೆಯಿಂದ ದೂರವಿಡಲು ಸುಲಭದ ಉಪಾಯವೆಂದರೆ, ನಿಮ್ಮ ಫೋನ್ ಅನ್ನು ನೇರ ಸೂರ್ಯನ ಬೆಳಕಿನಿಂದ, ಶಾಖದ ಮೂಲಗಳಿಂದ ದೂರವಿಡಿ ಮತ್ತು ತಂಪಾದ ಸ್ಥಳದಲ್ಲಿ ಇಡೀ.

  • ಅಧಿಕೃತ ಮತ್ತು ಪ್ರಮಾಣೀಕೃತ ಚಾರ್ಜರ್‌ಗಳನ್ನು ಬಳಸಿ:

ಮೊಬೈಲ್​ ಅತೀಯಾಗಿ ಬಿಸಿಯಾಗಲು ಅಥವಾ ಬ್ಲಾಸ್ಟ್​​ ಆಗಲು ಮುಖ್ಯ ಕಾರಣ ಚಾರ್ಜ್​ ಆಗುತ್ತಿರುವಾಗಲೇ ಮೊಬೈಲ್​ ಬಳಕೆ ಮಾಡುವುದು. ಚಾರ್ಜ್​ಗೆ ಹಾಕಿ ಮೊಬೈಲ್ ಉಪಯೋಗಿಸಿದಾಗ RAM ಸೇರಿದಂತೆ ಎಲ್ಲಾ ಪ್ರೋಸೆಸ್ರ್(processor)ಗಳು ಎಲ್ಲವೂ ಕಾರ್ಯ ನಿರ್ವಹಿಸುತ್ತಲೇ ಇರುತ್ತದೆ. ಹೀಗಿರುವಾಗ ಮೊಬೈಲ್​ ಬೇಗನೇ ಬಿಸಿಯಾಗುತ್ತದೆ. ತಾಪಮಾನ ಕೂಡ ಅಧಿಕವಿರುವ ಕಾರಣದಿಂದ ಹೆಚ್ಚಿನ ಸಂದರ್ಭದಲ್ಲಿ ಇದು ಬ್ಲಾಸ್ಟ್​ ಆಗಬಹುದು. ಚಾರ್ಜ್ ಆಗುವಾಗ ಕೆಲವು ಫೋನ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಹೀಟ್ (Heat)ಉತ್ಪಾದಿಸುತ್ತವೆ. ತಯಾರಕರು ಅನುಮೋದಿಸಿದ ಚಾರ್ಜರ್‌ಗಳು ಮತ್ತು ಕೇಬಲ್‌ಗಳನ್ನು ಮಾತ್ರ ಬಳಸಿ. ನಕಲಿ ಅಥವಾ ಅಗ್ಗದ ಚಾರ್ಜರ್‌ಗಳು ಅತಿಯಾಗಿ ಚಾರ್ಜ್ ಆಗುವುದು, ಬಿಸಿಯಾಗುವುದು ಮತ್ತು ಫೋನ್ ಸ್ಫೋಟಗಳಿಗೆ ಕಾರಣವಾಗುತ್ತದೆ.

ಉಚಿತ ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here
  • ಯಾವುದೇ ಅಪ್ಲಿಕೇಶನ್ ಬಳಸಿದ ಮೇಲೆ ಅದನ್ನು ಪೂರ್ಣವಾಗಿ ಕ್ಲೀನ್ ಮಾಡಿ, ಇಲ್ಲದಿದ್ದಲ್ಲಿ ಅದು ಬ್ಯಾಗ್ರೌಂಡ್ ಅಲ್ಲಿ ಸ್ವಯಂ ಚಾಲನೆಯಲ್ಲಿ ಇರುತ್ತದೆ ಹಾಗಾಗಿ ಫೋನ್ ಚಾರ್ಜ್ ಗೆ ಇಡುವ ಮುನ್ನ ನಿಮ್ಮ್ ಫೋನ್ ಬ್ಯಾಗ್ರೌಂಡ್ ಕ್ಲೀನ್ ಮಾಡಿದ ನಂತರ ಚಾರ್ಜ್ ಹಾಕಿ.
  • ಬಹಳ ಸಮಯದ ವರೆಗೂ Wi-Fi ಮತ್ತು HotSpot ಬಳಸಿದರೆ ನಮ್ಮ ಮೊಬೈಲ್ ಬಿಸಿ ಬರುತ್ತದೆ ಗಮನವಿರಲಿ.
  • ಸ್ಕ್ರೀನ್ ಬ್ರೈಟ್‌ನೆಸ್ ಅನ್ನು ಕಡಿಮೆ ಇಡೀ, ಮನೆಯಲ್ಲಿ ಹಾಗೂ ರಾತ್ರಿ ಬ್ರೈಟ್‌ನೆಸ್ ಹೆಚ್ಚಾಗಿ ಇಡುವ ಅವಶ್ಯಕತೆ ಇರುವುದಿಲ್ಲ. ಹಾಗಾಗಿ ಆದಷ್ಟು ಬ್ರೈಟ್‌ನೆಸ್ ಕಡಿಮೆ ಮಾಡಿ
  • ಹಾನಿಗೊಳಗಾದ ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳುವ ಸಾಧ್ಯತೆಗಳು ಹೆಚ್ಚು ಹಾಗಾಗಿ ಹಾನಿಗೊಳಗಾದ ಫೋನ್ ಅನ್ನು ಬಳಸಬೇಡಿ.

ಈ ಮೇಲಿರುವ ಟಿಪ್ಸ್ ಅನ್ನು ಅನುಸರಿಸಿ ಹಾಗೂ ನಿಮ್ಮ ಸ್ಮಾರ್ಟ್ ಫೋನ್ ಬ್ಲಾಸ್ಟ್ ಆಗುವ ಸಾಧ್ಯತೆ ತಡೆಗಟ್ಟಿಸಿ. ಹಾಗೆಯೇ ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ  ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.

telee

ಇದನ್ನೂ ಓದಿ: ₹7999ಕ್ಕೆ ಹೊಸ ಮೊಬೈಲ್ 😎 ಜಗತ್ತಿನ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ – LAVA Yuva 2 Pro

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *