ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು! ಪ್ರಾಥಮಿಕ ಶಿಕ್ಷಣದಲ್ಲಿ ಡಿಪ್ಲೊಮಾ ಅತ್ಯಗತ್ಯ ಅರ್ಹತೆ.
ಶಿಕ್ಷಣದ ವಿಚಾರದಲ್ಲಿ ನಮ್ಮ ದೇಶ ಮುಂದುವರಿಯುತ್ತಲೇ ಇದೆ. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರಾಗಿರಬಹುದು ಅಥವಾ ಕಾಲೇಜಿನ ಮಟ್ಟದಲ್ಲಿ ಶಿಕ್ಷಕರ (Teachers) ಆಯ್ಕೆ ಆಗಿರಬಹುದು ಎಲ್ಲವುದಕ್ಕೂ ಅದರದ್ದೇ ಆದಂತಹ ನೀತಿ ನಿಯಮಗಳನ್ನು ಒಳಗೊಂಡಂತೆ ಶಾಲಾ ಶಿಕ್ಷಕರ ಆಯ್ಕೆಯನ್ನು ಮಾಡಲಾಗುತ್ತದೆ. ಶಾಲಾ ಶಿಕ್ಷಕರಾಗಲು ಕೆಲವೊಂದಷ್ಟು ಅರ್ಹತೆಗಳು (Qualifications) ಬೇಕಾಗುತ್ತವೆ. ಅದರಲ್ಲೂ ಕೂಡ ಪದವಿ, ಸ್ನಾತಕೋತ್ತರ ಪದವಿ, ಬಿ ಎಡ್ ಹೀಗೆ ಕೆಲವೊಂದಷ್ಟು ಶಿಕ್ಷಣದ ಅರ್ಹತೆ ಬೇಕಾಗುತ್ತದೆ. ಅದೇ ರೀತಿಯಾಗಿ ಈ ಹಿಂದೆ ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಪದವಿ (B.Ed.) ಇರಲೇ ಬೇಕಾಗಿತ್ತು. ಆದರೆ ಇದೀಗ ಭಾರತದ ಸರ್ವೋಚ್ಚ ನ್ಯಾಯಾಲಯವು (Supreme Court) ಮಹತ್ತರ ತೀರ್ಪೊಂದನ್ನು ನೀಡಿದೆ. ಆ ತೀರ್ಪು ಏನು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು ಭಾರತದ ಸರ್ವೋಚ್ಚ ನ್ಯಾಯಾಲಯವು (Supreme Court) ನ್ಯಾಯಮೂರ್ತಿ ಅನಿರುದ್ಧ ಬೋಸ್ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ದೇವೇಶ್ ಶರ್ಮಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ (2023 INSC 704) ಪ್ರಕರಣದಲ್ಲಿ ಹಿಂದಿನ ತೀರ್ಪನ್ನು ಉಳಿಸಿಕೊಂಡು ತೀರ್ಪು ನೀಡಿದೆ.
2009 ರಲ್ಲಿ ಭಾರತೀಯ ಸಂವಿಧಾನದ 21 (A) ಮತ್ತು ಶಿಕ್ಷಣ ಹಕ್ಕು ಕಾಯಿದೆ ಅಡಿಯಲ್ಲಿ ಹೇಳಲಾಗಿರುವಂತೆ ಭಾರತದಲ್ಲಿ ಪ್ರಾಥಮಿಕ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಹಾಗೂ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು (Free and Compulsory Education) ನೀಡಬೇಕು ಎಂದು ಪೀಠವು ಅಭಿಪ್ರಾಯಪಟ್ಟಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕಂದರೆ ಶಿಕ್ಷಕರಿಗೂ ಕೂಡ ಗುಣಮಟ್ಟದ ಶಿಕ್ಷಣದ ಅವಶ್ಯಕತೆ ಇರುತ್ತದೆ. ಆದ್ದರಿಂದ ಸರ್ಕಾರವು ತನ್ನದೇ ಆದ ನೀತಿ ನಿಯಮಗಳನ್ನು ಒಳಗೊಂಡಂತೆ ಶಿಕ್ಷಕರ ಆಯ್ಕೆಯನ್ನು ಮಾಡಿಕೊಳ್ಳುತ್ತದೆ.
ಆದ್ದರಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಭೋದಿಸಲು ಮೂಲಭೂತ ಶಿಕ್ಷಣದ ಮಿತಿಯನ್ನು ಹಾದುಹೋಗದ ಕಾರಣ ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಪದವಿ (B.Ed.) ಮಾನ್ಯವಾದ ಅರ್ಹತೆ ಅಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು (Supreme Court) ಪುನರುಚ್ಚರಿಸಿದೆ.
ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಭೋದಿಸಲು, ಪದವಿ (B.Ed.) ಪಡೆದವರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಅಸಾಧ್ಯ ಎಂದು ಸುಪ್ರೀಂ ಕೋರ್ಟ್ ಸಮರ್ಥಿಸಿಕೊಂಡಿದೆ. ಹಾಗೂ ಆಗಸ್ಟ್ 11, 2023 ರ ಮೊದಲು ನೇಮಕಗೊಂಡ B.Ed ಶಿಕ್ಷಕರನ್ನು ರಕ್ಷಿಸುತ್ತದೆ ಎಂದು ನಿರ್ದೇಶಿಸಿದೆ.
ಭಾರತದ ಸರ್ವೋಚ್ಚ ನ್ಯಾಯಾಲಯವು (Supreme Court) ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪದವಿ (B.Ed.) ಮಾನ್ಯವಾದ ಅರ್ಹತೆ ಅಲ್ಲ ಎಂದು ಪುನರುಚ್ಚರಿಸಿದ ನಂತರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಪ್ರಾಥಮಿಕ ಶಿಕ್ಷಣದಲ್ಲಿ ಡಿಪ್ಲೋಮೋ ಅತ್ಯಗತ್ಯ ಅರ್ಹತೆ ಎಂದು ತಿಳಿಸಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




