Rain news – ಭಾರಿ ಮಳೆಗೆ ಶಾಲಾ ಕಾಲೇಜು ರಜೆ, ಟ್ರೈನ್ & ವಿಮಾನ ಹಾರಾಟ ಬಂದ್

rain 3

WhatsApp Group Telegram Group

ತಮಿಳುನಾಡಿನಲ್ಲಿ ಧಾರಾಕಾರವಾಗಿ ಮಳೆ(Heavy Rainfall in Tamilnaadu) ಸುರಿಯುತ್ತಿದೆ. ಈ ಮಳೆಗೆ ಕಾರಣ ಏನೆಂದರೆ,  ಮಿಚಾಂಗ್ ಚಂಡಮಾರುತ (Maichaung Cyclone). ಬಂಗಾಲ ಕೊಲ್ಲಿಯಲ್ಲಿ ಎದ್ದಿರುವ ಈ ಚಂಡಮಾರುತದಿಂದಾಗಿ ಚೆನ್ನಾಗಿ ಸೇರಿದಂತೆ ಇನ್ನಿತರ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಆಗುತ್ತದೆ. ಸತತವಾಗಿ ಸುರಿಯುತ್ತಿರುವ ಈ ಮಳೆಯಿಂದಾಗಿ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ ಅಷ್ಟೇ ಅಲ್ಲದೆ ಅರೈಲು ಹಾಗೂ ವಿಮಾನದ ಸಂಚಾರವು ಕೂಡ ಸ್ಥಗಿತಗೊಂಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ವರದಿಯಲ್ಲಿದೆ ಹಾಗಾಗಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. 

ಭಾರಿ ಮಳೆಯಿಂದಾಗಿ ಚೆನ್ನೈಗೆ ಆಪತ್ತು :

rain 5

ಈ ಚಂಡಮಾರುತದ ಮಳೆಯಿಂದಾಗಿ ಈಗಾಗಲೇ ಚೆನ್ನೈ ತತ್ತರಿಸಿ ಹೋಗಿದೆ. ಅದರಲ್ಲೂ, ಚನ್ನೈನ ಕಣತೂರ್‌ನಲ್ಲಿ ಭಾರಿ ಮಳೆಗೆ ಇತ್ತೀಚೆಗಷ್ಟೇ ಕಟ್ಟಿದ ಗೋಡೆ ಕುಸಿದು ಇಬ್ಬರು ಮೃತಪಟಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟ ಇಬ್ಬರೂ ಜಾರ್ಖಂಡ್‌ನವರು ಎಂದು ತಿಳಿದುಬಂದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಕ್ಕ ಪಕ್ಕದ ರಾಜ್ಯಗಳಾದ ಕರ್ನಾಟಕದ ಬೆಂಗಳೂರಿನಲ್ಲಿ ಹಾಗೂ ಆಂಧ್ರಪ್ರದೇಶದಲ್ಲಿಯೂ ಕೂಡ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಇಂದು ಹತ್ತಕ್ಕಿಂತ ಜಾಸ್ತಿ ರೈಲುಗಳನ್ನು ಕರ್ನಾಟಕದಿಂದ ತಮಿಳುನಾಡಿಗೆ ತೆರಳುವ ಸಂಚಾರವನ್ನು ಸ್ಥಗಿತಗೊಳಿತಗೊಳಿಸಲಾಗಿದೆ. ಅಷ್ಟೇ ಅಲ್ಲದೆ ಹವಾಮಾನ ಸರಿ ಇಲ್ಲದ ಕಾರಣ ಹವಾಮಾನ ಇಲಾಖೆಯವರು ವಿಮಾನಗಳ ಸಂಚಾರವನ್ನು ಕೂಡ ನಿಲ್ಲಿಸಿದ್ದಾರೆ. ಚೆನ್ನೈ ವಿಮಾನ ನಿಲ್ದಾಣವು ಜಲಾವೃತಗೊಂಡಿದೆ.

ತಮಿಳುನಾಡಿನಲ್ಲಿ ಇಂದು ಸಾರ್ವಜನಿಕ ರಜೆ ಘೋಷಿಸಲಾಗಿದೆ :

rain 4

ಇಂದು ಅಂದರೆ ಸೋಮವಾರ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಆದರೆ ಅಗತ್ಯ ಸೇವೆಗಳು, ಆಸ್ಪತ್ರೆ, ಹಾಲು, ವಿದ್ಯುತ್ ಸರಬರಾಜು ಇತ್ಯಾದಿಗಳು ಲಭ್ಯವಿರುತ್ತವೆ. ಮಂಗಳವಾರವು ಬೆಳಗ್ಗೆ ಚಂಡಮಾರುತದ ವೇಗ ಹೆಚ್ಚೆರುವುದರ ನಿರೀಕ್ಷೆಯಿದ್ದಾಗಿ ಇಂದು ರಜೆಯನ್ನು ಘೋಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಮಾತನಾಡಿದ್ದು, ಪೂರ್ವ ಕರಾವಳಿ ರಾಜ್ಯಕ್ಕೆ ಅಪ್ಪಳಿಸಲಿರುವ ‘ಮಿಚಾಂಗ್’ ಚಂಡಮಾರುತದ ಪೂರ್ವಭಾವಿ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಮಳೆಯಿಂದಾಗಿ ನಗರದಲ್ಲಿ ವಾಹನಗಳ ಸಂಚಾರಕ್ಕೂ ತೀವ್ರ ತೊಂದರೆಯಾಗಿದೆ. ಚೆನ್ನೈಗೆ ಮತ್ತು ಅಲ್ಲಿಂದ ಹೊರಡುವ ಹಲವಾರು ರೈಲುಗಳು ಮತ್ತು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಉಪನಗರ ರೈಲುಗಳು ಬೆಳಿಗ್ಗೆ 8 ಗಂಟೆಯವರೆಗೆ ಕಾರ್ಯನಿರ್ವಹಿಸಲಿಲ್ಲ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತಿ ಒಂದು ಗಂಟೆಗೆ ರೈಲನ್ನು ಓಡಿಸಲಾಗುತ್ತಿದೆ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

WhatsApp Group Join Now
Telegram Group Join Now

Related Posts

Editor in Chief

Editor in Chief

Lingaraj Ramapur BCA, MCA, MA ( Journalism );as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.

Leave a Reply

Your email address will not be published. Required fields are marked *

error: Content is protected !!