ಡಿಜಿಟಲ್ ಹಾಜರಾತಿ ಗುರುತಿಸುವಿಕೆ ವಿರುದ್ಧ ತೀವ್ರ ವಿರೋಧ: ಎಫ್‌ಆರ್‌ಎಸ್ ರದ್ದುಪಡಿಸಲು ತಜ್ಞರ ಒತ್ತಾಯ

Picsart 25 07 25 00 41 08 043

WhatsApp Group Telegram Group

ರಾಜ್ಯ ಸರ್ಕಾರವು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಹಾಜರಾತಿಯನ್ನು (Attendance of teachers and students) ಖಚಿತಪಡಿಸಿಕೊಳ್ಳಲು ಜಾರಿಗೆ ತಂದಿರುವ ಮುಖ ಚಹರೆ ಗುರುತಿಸುವಿಕೆ ಅಥವಾ ಫೇಸ್ ರಿಕಗ್ನಿಷನ್ ಸಿಸ್ಟಮ್ (Facial Recognition System)ಇದೀಗ ಹಲವು ತಜ್ಞರು, ಸಂಘಟನೆಗಳು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳ ತೀವ್ರ ವಿರೋಧಕ್ಕೆ ಗುರಿಯಾಗಿದೆ. ತಂತ್ರಜ್ಞಾನ ಬಳಸುವ ಮೂಲಕ ಶಿಸ್ತು ಹಾಗೂ ಪಾರದರ್ಶಕತೆಗೆ ಉತ್ತೇಜನ ನೀಡಬೇಕು ಎಂಬ ಉದ್ದೇಶ ಹಿನ್ನಲೆಯಲ್ಲಿ ಜಾರಿಗೊಳಿಸಿದ ಈ ವ್ಯವಸ್ಥೆಯ ಪರಿಣಾಮಗಳು, ವ್ಯಾವಹಾರಿಕತೆ ಮತ್ತು ಸಂವಿಧಾನಿಕ ಮೌಲ್ಯಗಳ (Pragmatism and constitutional values) ಕುರಿತ ಚರ್ಚೆಗಳು ಕೇಳಿಬರುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಒಂದು ಪ್ರಮುಖ ಸಮಾಲೋಚನಾ ಸಭೆಯಲ್ಲಿ ಈ ವಿಷಯವು ಚರ್ಚೆಯ ಕೇಂದ್ರಬಿಂದುವಾಗಿತ್ತು. ಈ ಸಭೆಯನ್ನು ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ (State Anganwadi Employees Association and Bharat Gyan Vijnan Samiti) ಜಂಟಿಯಾಗಿ ಆಯೋಜಿಸಿದ್ದವು. ಈ ವೇದಿಕೆಯಲ್ಲಿ ತಜ್ಞರು, ಶಿಕ್ಷಕರು, ನೌಕರರ ಪ್ರತಿನಿಧಿಗಳು ಹಾಗೂ ಹಕ್ಕುಗಳ ರಕ್ಷಣೆಗೆ ತೊಡಗಿರುವ ಸಂಘಟನೆಗಳು ಎಫ್‌ಆರ್‌ಎಸ್ ಜಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಏನು ಈ ಎಫ್‌ಆರ್‌ಎಸ್(FRS), ಏಕೆ ವಿರೋಧ?:

ಎಫ್‌ಆರ್‌ಎಸ್ ಎನ್ನುವುದು ಮುಖದ ಚಿತ್ರ ಗುರುತಿಸಿ ಹಾಜರಾತಿ ದಾಖಲಿಸುವ ದಿಟ್ಟ ತಂತ್ರಜ್ಞಾನ. ಇದನ್ನು ಇದೀಗ ಅಂಗನವಾಡಿಗಳಲ್ಲಿಯೂ ಬಳಸಲಾಗುತ್ತಿದೆ. ಗರ್ಭಿಣಿಯರು, ಮಕ್ಕಳಿಗೆ ಪೌಷ್ಟಿಕ ಆಹಾರ (Nutritious food) ನೀಡುವ ಪ್ರಕ್ರಿಯೆಗೂ ಇದನ್ನು ಅನ್ವಯಿಸಲಾಗಿದೆ. ಈ ತಂತ್ರಜ್ಞಾನವನ್ನು ಕೇಂದ್ರ ಸರ್ಕಾರ ಪಿಎಂ-ಪೋಷಣ್ ಯೋಜನೆಯಡಿಯಲ್ಲಿ ಮತ್ತು ರಾಜ್ಯ ಸರ್ಕಾರ ಶಾಲಾ ಶಿಕ್ಷಣದಲ್ಲಿ ಜಾರಿಗೆ ತಂದಿದೆ. ಆದರೆ, ಈ ಕ್ರಮದ ಹಿಂದೆ ಯಾವುದೇ ಸಾರ್ವಜನಿಕ ಚರ್ಚೆ, ಪಾಲುದಾರರ ಅಭಿಪ್ರಾಯ ಸಂಗ್ರಹಣೆ ನಡೆದಿಲ್ಲವೆಂಬುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

ಶಿಕ್ಷಣ ತಜ್ಞರ(Education Specialist) ಆತಂಕ: ತಾಂತ್ರಿಕತೆಯ ಹೆಸರಿನಲ್ಲಿ ಹಕ್ಕುಗಳ ಹರಣ,

ಭಾರತ ಜ್ಞಾನ ವಿಜ್ಞಾನ ಸಮಿತಿಯ ಉಪಾಧ್ಯಕ್ಷ ಶುಭಂಕರ್ ಚಕ್ರವರ್ತಿ ಮಾತನಾಡಿ, “ಕರ್ನಾಟಕದಲ್ಲಿ ಶಿಕ್ಷಕರ ಗೈರುಹಾಜರಾತಿ ಪ್ರಮಾಣ ಕಡಿಮೆ ಇದ್ದು, ಈ ಪೈಪೋಟಿಯಲ್ಲಿ ಎಫ್‌ಆರ್‌ಎಸ್ ಪರಿಚಯಿಸುವ ಅಗತ್ಯವಿಲ್ಲ. ಇದೊಂದು ಅನಗತ್ಯ ಕ್ರಮ. ನಾಗರಿಕ ಸಮಾಜ ಒಗ್ಗೂಡಿ ಇದರ ವಿರುದ್ಧ ಹೋರಾಡಬೇಕು” ಎಂದು  ಅಭಿಪ್ರಾಯಪಟ್ಟಿದ್ದಾರೆ.

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ರಾಜೇಂದ್ರನ್ ನಾರಾಯಣನ್ (Azim Premji University Professor Dr. Rajendran Narayanan) ಇದು “ಸಾಂವಿಧಾನಿಕ ಮೌಲ್ಯಗಳ ಮೇಲೆ ನಡೆಸಲಾಗುತ್ತಿರುವ ದಾಳಿ” ಎಂದು ಗುಡುಗಿದ್ದಾರೆ. “ಈ ತಂತ್ರಜ್ಞಾನವನ್ನು ರೂಪಿಸಿದ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋ ನಗರದಲ್ಲಿಯೇ(San Francisco, USA) ಅದನ್ನು ಬಳಕೆಯಲ್ಲಿಲ್ಲ. ಹೀಗಿರುವಾಗ ಭಾರತದಲ್ಲಿ, ಹಳ್ಳಿಗಳಲ್ಲಿ, ಸರಳ ಅಂಗನವಾಡಿ ಕಾರ್ಯಕ್ಷೇತ್ರಗಳಲ್ಲಿ ಇದನ್ನು ಯಾಕೆ ಜಾರಿಗೆ ತರಬೇಕು?” ಎಂದು ಪ್ರಶ್ನಿಸಿದರು.

ನೌಕರರ ಪರಿತಾಪ: ಹೊರೆ ಹೆಚ್ಚಿದರೂ ಮಾನ್ಯತೆ ಇಲ್ಲ,

ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್. ವರಲಕ್ಷ್ಮಿ ಮಾತನಾಡುತ್ತಾ, “ಐಸಿಡಿಎಸ್ ಯೋಜನೆಯ (ICDS Scheme) ಫಲಾನುಭವಿಗಳ ಸಂಖ್ಯೆ ಇತ್ತೀಚೆಗೆ ಕಡಿಮೆ ಮಾಡಲಾಗುತ್ತಿದೆ. ಜೊತೆಗೆ ಎಫ್‌ಆರ್‌ಎಸ್ ಜಾರಿಗೆ ತರುವ ಮೂಲಕ ಕೆಲಸದ ಒತ್ತಡ ಹೆಚ್ಚಿಸಲಾಗಿದೆ. ಇದರ ವಿರುದ್ಧ ನಿಲ್ಲದ ಕಾರ್ಯಕರ್ತೆಯರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಇದು ಶೋಷಣೆಯ ಹೊಸ ರೂಪವಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.

ಇನ್ನು, ಎಫ್‌ಆರ್‌ಎಸ್ ಜಾರಿಗೆ ತರುವ ಮುನ್ನ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 55 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕೆಂಬುದು ಪ್ರಮುಖ ಒತ್ತಾಯವಾಗಿದೆ. ಈ ತಂತ್ರಜ್ಞಾನದ ಬಳಕೆ ಮಾತ್ರ ಶಿಕ್ಷಕರ ಅಥವಾ ವಿದ್ಯಾರ್ಥಿಗಳ ಅನುಪಸ್ಥಿತಿಗೆ ಪರಿಹಾರವಲ್ಲ. ಮುಚ್ಚಿದ ದಾರಿಯನ್ನು ಎಫ್‌ಆರ್‌ಎಸ್ ಮೂಲಕ ತೆರೆಯುವ ಭ್ರಮೆಯಲ್ಲಿ ಸರ್ಕಾರಗಳು ಸಾರ್ವಜನಿಕ ಸಂಪತ್ತನ್ನೂ, ನಂಬಿಕೆಯನ್ನು ಕಳೆದುಕೊಳ್ಳುತ್ತಿವೆ.

ಸಾಮಾಜಿಕ ಭದ್ರತೆಗಾಗಿ ಹೋರಾಟ ಮುಂದುವರಿಯಲಿದೆ:

ಸಭೆಯಲ್ಲಿ ವಿವಿಧ ಹಕ್ಕು ಸಂಘಟನೆಗಳ ಪ್ರಮುಖರಾದ ನವೀನ್ (ಫ್ರೀ ಸಾಫ್ಟ್‌ವೇರ್ ಮೂವ್‌ಮೆಂಟ್ ಆಫ್ ಇಂಡಿಯಾ (Free Software Movement of India), ವಕೀಲ ವಿನಯ್ ಶ್ರೀನಿವಾಸ್, ಕಾನೂನು ತಜ್ಞೆ ಸುಧಾ ಹಾಗೂ ಸಿವಿಕ್ ಸಂಸ್ಥೆಯ ಕಾತ್ಯಾಯಿನಿ ಚಾಮರಾಜ್ ಭಾಗವಹಿಸಿದ್ದರು. ಎಲ್ಲರೂ ಕೂಡ ಎಫ್‌ಆರ್‌ಎಸ್ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದರು.

ಒಟ್ಟಾರೆಯಾಗಿ, ಎಫ್‌ಆರ್‌ಎಸ್‌ನ ಜಾರಿಗೆ ಸಂಬಂಧಿಸಿದಂತೆ ತಾಂತ್ರಿಕ, ನೈತಿಕ ಮತ್ತು ಸಂವಿಧಾನಿಕ ಪ್ರಶ್ನೆಗಳು ಉದ್ಭವವಾಗುತ್ತಿವೆ. ಈ ತಂತ್ರಜ್ಞಾನ ಶಿಕ್ಷಣ ಮತ್ತು ಆಹಾರ ಹಕ್ಕುಗಳ (Technology education and food rights) ನಿಯಂತ್ರಣದ ಸಾಧನವಾಗಬಾರದು ಎಂಬ ಎಚ್ಚರಿಕೆಯ ಸಂದೇಶ ಈ ಸಮಾಲೋಚನಾ ಸಭೆಯಿಂದ ಹೊರಬಂದಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!