Picsart 25 10 04 22 21 02 017 scaled

ರಾಜ್ಯದಲ್ಲಿ BPL ಕಾರ್ಡ್ ಮತ್ತು ವಿವಿಧ ಉಚಿತ ಸೇವೆಗಳಿಗೆ ರಾಜ್ಯ ಸರ್ಕಾರ ಕಡಿವಾಣ: ಅನರ್ಹ ಫಲಾನುಭವಿಗಳಿಗೆ ಬಿಗ್ ಶಾಕ್.!

Categories:
WhatsApp Group Telegram Group

ರಾಜ್ಯದಲ್ಲಿ ಬಡವರ ಹಿತಕ್ಕಾಗಿ ರೂಪಿಸಲಾದ ಹಲವು ಕಲ್ಯಾಣ ಯೋಜನೆಗಳ (Welfare Scheme’s) ಲಾಭವನ್ನು ಅನರ್ಹರು ಪಡೆದುಕೊಳ್ಳುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಬಡತನ ರೇಖೆಗಿಂತ ಕೆಳಗಿನವರಿಗೆ (BPL) ಸೌಲಭ್ಯ ನೀಡುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಕೆಲವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಈ ಯೋಜನೆಗಳ ಲಾಭ ಪಡೆಯುತ್ತಿರುವುದು ಸತತವಾಗಿ ವರದಿಯಾಗಿದೆ. ಬಡವರ ಪಾಲಿನ ಸಹಾಯವನ್ನು ಮಧ್ಯಮ ವರ್ಗ ಅಥವಾ ಆರ್ಥಿಕವಾಗಿ (Economically) ಸದೃಢರು ತಮ್ಮ ಪಾಲಾಗಿಸಿಕೊಂಡಿರುವ ಘಟನೆಗಳು ಸರ್ಕಾರದ ಗಮನ ಸೆಳೆದಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು (State government) ಪರಿಶೀಲನೆ ಆರಂಭಿಸಿ ನಕಲಿ ದಾಖಲೆಗಳ ಮೂಲಕ ಪಡೆದ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುವುದರ ಜೊತೆಗೆ, ಅನರ್ಹ ಫಲಾನುಭವಿಗಳನ್ನು ಯೋಜನೆಗಳಿಂದ ಹೊರಗಿಡುವ ಪ್ರಮುಖ ಹೆಜ್ಜೆ ಇಟ್ಟಿದೆ. ಈ ಕ್ರಮದಿಂದ ಅನರ್ಹ ಫಲಾನುಭವಿಗಳಿಗೆ ಬಿಗ್ ಶಾಕ್ (Big Shock) ಸಿಕ್ಕಿದ್ದು, ನೂರಾರು ಕೋಟಿ ರೂಪಾಯಿ ಮೊತ್ತದ ದುರುಪಯೋಗವನ್ನು ತಡೆಗಟ್ಟುವ ನಿರೀಕ್ಷೆಯಿದೆ.

ಬಿಪಿಎಲ್ ಕಾರ್ಡ್‌ಗಳ (BPL Card’s) ದುರುಪಯೋಗಕ್ಕೆ ಕಡಿವಾಣ:

ಆಹಾರ ಇಲಾಖೆ ರಾಜ್ಯದಾದ್ಯಂತ ನಕಲಿ ದಾಖಲೆಗಳ ಆಧಾರದ ಮೇಲೆ ಬಿಪಿಎಲ್ ಕಾರ್ಡ್ ಪಡೆದವರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಪರಿಶೀಲನೆಯ ನಂತರ, ಅನರ್ಹ ಕಾರ್ಡ್‌ಗಳನ್ನು ರದ್ದುಪಡಿಸಿ, ಅವರನ್ನು ಎಪಿಎಲ್ (APL) ವರ್ಗಕ್ಕೆ ವರ್ಗಾವಣೆ ಮಾಡುವ ಕಾರ್ಯ ವೇಗವಾಗಿ ನಡೆಯುತ್ತಿದೆ. ಈ ಮೂಲಕ ನಿಜವಾದ ಬಡವರಿಗೆ ಸರಿಯಾದ ಪಡಿತರ ಸಿಗುವಂತೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ.

ಸಾಮಾಜಿಕ ಭದ್ರತಾ ಯೋಜನೆಗಳಲ್ಲಿಯೂ ಅಕ್ರಮ ಬಯಲು:

ಬಿಪಿಎಲ್ ಕಾರ್ಡ್‌ಗಳಷ್ಟೇ ಅಲ್ಲ, ವೃದ್ಯಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ ಹಾಗೂ ಅಂಗವಿಕಲರ ಮಾಸಾಶನ ಸೇರಿದಂತೆ ಹಲವು ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಸಹ ವ್ಯಾಪಕ ದುರುಪಯೋಗ ಪತ್ತೆಯಾಗಿದೆ.
ಸರ್ಕಾರದ ಇತ್ತೀಚಿನ ಪರಿಶೀಲನೆ ಪ್ರಕಾರ,
ವೃದ್ಯಾಪ್ಯ ವೇತನ (Old age pension) ಯೋಜನೆಯಲ್ಲಿ 4,52,451 ಫಲಾನುಭವಿಗಳು ಅನರ್ಹರು ಎಂದು ಪತ್ತೆಯಾಗಿದೆ.
ಇವರಲ್ಲಿ 60 ವರ್ಷ ಪೂರೈಸದವರ ಸಂಖ್ಯೆ ಸಾಕಷ್ಟು ಇದೆ.
3,59,397 ಜನರು ನಿಗದಿತ ಆದಾಯ ಮಿತಿಗಿಂತ ಹೆಚ್ಚು ಆದಾಯ ಹೊಂದಿದ್ದಾರೆ.
3,600 ಜನರು ಆದಾಯ ತೆರಿಗೆ (Income tax) ಪಾವತಿಸುತ್ತಿದ್ದರೂ ವೃದ್ಯಾಪ್ಯ ವೇತನ ಪಡೆಯುತ್ತಿದ್ದಾರೆ.
ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ 7 ಲಕ್ಷಕ್ಕೂ ಹೆಚ್ಚು ಜನರು ನಿಗದಿತ ವಯಸ್ಸು ಪೂರೈಸದೇ ಯೋಜನೆಯ ಲಾಭ ಪಡೆದಿದ್ದಾರೆ.
ವಿಧವಾ ವೇತನ ಯೋಜನೆಯಲ್ಲಿ 3.71 ಲಕ್ಷ ಮಹಿಳೆಯರು ಆದಾಯ ಮಿತಿಗಿಂತ ಅಧಿಕ ಆದಾಯ ಹೊಂದಿದ್ದರೂ ಸಹಾಯಧನ (Subsidy) ಪಡೆದುಕೊಂಡಿದ್ದಾರೆ.
ಸರ್ಕಾರಿ ನೌಕರರ ಕುಟುಂಬಗಳೂ ಸಹ ವೃದ್ಯಾಪ್ಯ ವೇತನ ಪಡೆಯುತ್ತಿರುವ ಘಟನೆಗಳು ಬಯಲಾಗಿದೆ.

ಸರ್ಕಾರದ ತೀರ್ಮಾನದಿಂದ ಅನರ್ಹರಿಗೆ ಕತ್ತರಿ:

ಈ ಎಲ್ಲ ಅಕ್ರಮ ಮತ್ತು ದುರುಪಯೋಗದ ಪ್ರಕರಣಗಳನ್ನು ಗಮನಿಸಿದ ರಾಜ್ಯ ಸರ್ಕಾರವು (State government), ಅನರ್ಹ ಫಲಾನುಭವಿಗಳನ್ನು ಯೋಜನೆಗಳಿಂದ ಹೊರಗಿಡುವ ನಿರ್ಧಾರ ಕೈಗೊಂಡಿದೆ. ಈಗಾಗಲೇ ಸಾವಿರಾರು ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ ಮತ್ತು ಮುಂದಿನ ದಿನಗಳಲ್ಲಿ ಈ ಶೋಧ ಅಭಿಯಾನವನ್ನು ಇನ್ನಷ್ಟು ವಿಸ್ತರಿಸಲಾಗುತ್ತದೆ.

ಈ ಕ್ರಮದಿಂದ ನಿಜವಾದ ಬಡವರಿಗೆ ಸರ್ಕಾರದ ಯೋಜನೆಗಳು (Government Schemes) ತಲುಪುವ ಸಾಧ್ಯತೆ ಹೆಚ್ಚಾಗಿದ್ದು, ಸಾಮಾಜಿಕ ಭದ್ರತಾ ಯೋಜನೆಗಳ ವಿಶ್ವಾಸಾರ್ಹತೆಯೂ ಹೆಚ್ಚುವ ನಿರೀಕ್ಷೆ ವ್ಯಕ್ತವಾಗಿದೆ.

ಒಟ್ಟಾರೆಯಾಗಿ, ಸರ್ಕಾರ ರೂಪಿಸುವ ಕಲ್ಯಾಣ ಯೋಜನೆಗಳ ಉದ್ದೇಶ ಬಡವರಿಗೆ ನೆರವು (Help for poor people) ನೀಡುವುದಾಗಿದ್ದು, ಅನರ್ಹರು ಮಧ್ಯೆ ನುಗ್ಗಿ ಸೌಲಭ್ಯ ಪಡೆದುಕೊಳ್ಳುವುದು ಯೋಜನೆಯ ನಿಜವಾದ ಗುರಿಯನ್ನು ಹಾಳುಮಾಡುತ್ತದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಕೈಗೊಂಡಿರುವ ಕಠಿಣ ಕ್ರಮಗಳು ಬಡವರಿಗೆ ನ್ಯಾಯ ದೊರಕುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

WhatsApp Image 2025 09 05 at 11.51.16 AM 12

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories