ಬೆಂಗಳೂರು: ರಾಜ್ಯ ಸರ್ಕಾರವು 2026ನೇ ಸಾಲಿನ ಸಾರ್ವತ್ರಿಕ ರಜೆಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಮುಖ್ಯಮಂತ್ರಿಗಳ ಅನುಮೋದನೆಯ ಮೇರೆಗೆ ಹೊರಡಿಸಲಾದ ಈ ಆದೇಶದಲ್ಲಿ, ರಾಜ್ಯದ ಸರ್ಕಾರಿ ನೌಕರರಿಗೆ ಒಟ್ಟು 20 ದಿನಗಳ ಸಾರ್ವತ್ರಿಕ ರಜೆ ಹಾಗೂ 21 ದಿನಗಳ ಪರಿಮಿತ ರಜೆಗಳನ್ನು (Restricted Holidays) ನೀಡಲಾಗಿದೆ. ರಾಜ್ಯ ಸರ್ಕಾರದ ಅಧಿಕೃತ ಪ್ರತಿಗಳು ಲೇಖನದ ಕೊನೆಯ ಭಾಗದಲ್ಲಿವೆ ಅಲ್ಲಿ ನೀವು ವೀಕ್ಷಿಸಬಹುದು
ಭಾನುವಾರ ಮತ್ತು ಎರಡನೇ ಶನಿವಾರದ ರಜೆಗಳ ವಿವರ
ಸಾಮಾನ್ಯವಾಗಿ ಹಬ್ಬಗಳು ಭಾನುವಾರ ಅಥವಾ ಎರಡನೇ ಶನಿವಾರ ಬಂದರೆ ನೌಕರರಿಗೆ ಹೆಚ್ಚುವರಿ ರಜೆ ಸಿಗುವುದಿಲ್ಲ. 2026ರಲ್ಲಿ ಈ ಕೆಳಗಿನ ಹಬ್ಬಗಳು ರಜಾ ದಿನಗಳಂದೇ ಬಂದಿವೆ:
ಭಾನುವಾರ/ಶನಿವಾರ ಬರುವ ರಜೆಗಳ ವಿವರ
| ಹಬ್ಬದ ಹೆಸರು | ದಿನಾಂಕ ಮತ್ತು ದಿನ |
|---|---|
| ಮಹಾ ಶಿವರಾತ್ರಿ | February 15 (ಭಾನುವಾರ) |
| ಮಹಾಲಯ ಅಮವಾಸ್ಯೆ | October 10 (2ನೇ ಶನಿವಾರ) |
| ಮಹರ್ಷಿ ವಾಲ್ಮೀಕಿ ಜಯಂತಿ | October 25 (ಭಾನುವಾರ) |
| ಕನ್ನಡ ರಾಜ್ಯೋತ್ಸವ | November 1 (ಭಾನುವಾರ) |
| ನರಕ ಚತುರ್ದಶಿ | November 8 (ಭಾನುವಾರ) |
ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವ ಸ್ಥಳೀಯ ರಜೆಗಳು
ಕೊಡಗು ಜಿಲ್ಲೆಯ ಸಾಂಸ್ಕೃತಿಕ ಹಬ್ಬಗಳಿಗಾಗಿ ವಿಶೇಷವಾಗಿ ಮೂರು ದಿನಗಳ ಸ್ಥಳೀಯ ರಜೆಯನ್ನು ಘೋಷಿಸಲಾಗಿದೆ:
ಕೊಡಗು ಜಿಲ್ಲೆಯ ಸ್ಥಳೀಯ ರಜೆಗಳು – 2026
| ಹಬ್ಬದ ಹೆಸರು | ದಿನಾಂಕ ಮತ್ತು ವಾರ |
|---|---|
| ಕೈಲ್ ಮುಹೂರ್ತ | September 03, 2026 (ಗುರುವಾರ) |
| ತುಲಾ ಸಂಕ್ರಮಣ | October 18, 2026 (ಭಾನುವಾರ) |
| ಹುತ್ತರಿ ಹಬ್ಬ | November 26, 2026 (ಗುರುವಾರ) |
ಆಡಳಿತಾತ್ಮಕ ಸೂಚನೆಗಳು
ಸರ್ಕಾರದ ಆದೇಶದಂತೆ, ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳು ಮುಚ್ಚಿರುತ್ತವೆ. ಆದರೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಜರೂರು ಕೆಲಸಗಳನ್ನು ನಿರ್ವಹಿಸಲು ಇಲಾಖಾ ಮುಖ್ಯಸ್ಥರು ಸೂಕ್ತ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ.






HAPPY NEW YEAR
2026
ಹೊಸ ವರ್ಷದ ಹಾರ್ದಿಕ ಶುಭಾಶಯಗಳು!
Wishes from:
Needs of Public Team
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಶಿವರಾಜ್ ಅವರು NeedsOfPublic.in ನಲ್ಲಿ ಸಾರ್ವಜನಿಕ, ಶೈಕ್ಷಣಿಕ ಮತ್ತು ಸ್ಥಳೀಯ ಸುದ್ದಿಗಳ ವಿಭಾಗದ ಹಿರಿಯ ಸಂಪಾದಕರಾಗಿದ್ದಾರೆ (Senior Editor). ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದರೂ, ಮಾಧ್ಯಮ ಕ್ಷೇತ್ರದ ಮೇಲಿರುವ ಅತೀವ ಆಸಕ್ತಿಯಿಂದಾಗಿ 2019 ರಲ್ಲಿ ಡಿಜಿಟಲ್ ಜಗತ್ತಿಗೆ ಕಾಲಿಟ್ಟರು. ಇವರು ಆರಂಭಿಸಿದ “Suddi No.1 Kannada” ಯೂಟ್ಯೂಬ್ ಚಾನೆಲ್ ಪ್ರಸ್ತುತ 300K ಗೂ ಹೆಚ್ಚು ಸಬ್ಸ್ಕ್ರೈಬರ್ಗಳನ್ನು ಹೊಂದುವ ಮೂಲಕ ಜನಪ್ರಿಯವಾಗಿದೆ. ಡಿಜಿಟಲ್ ಮಾಧ್ಯಮದಲ್ಲಿ ಉತ್ತಮ ಅನುಭವ ಹೊಂದಿರುವ ಇವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಕೀರ್ಣ ಯೋಜನೆಗಳನ್ನು ಹಾಗೂ ವಿದ್ಯಾರ್ಥಿವೇತನಗಳನ್ನು (Scholarships) ಸರಳವಾಗಿ ವಿಶ್ಲೇಷಿಸಿ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತಲುಪಿಸುವಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ. ಇದರ ಜೊತೆಗೆ ಪ್ರಮುಖ ಶೈಕ್ಷಣಿಕ ಅಪ್ಡೇಟ್ಗಳು ಮತ್ತು ನಿಖರ ಮಾಹಿತಿ ನೀಡುವ ವಿಡಿಯೋ ಕಂಟೆಂಟ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ಇವರ ಬರವಣಿಗೆಯ ವಿಶಿಷ್ಟ ಶೈಲಿಯಾಗಿದೆ.


WhatsApp Group




