SC/ST ಸಬ್ಸಿಡಿ ಸಾಲ & ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ | SC ST Subsidy Loan Scheme Karnataka 2023

sc st loan

ಇದೀಗ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ( ST / SC ) ಆರ್ಥಿಕ ಅಭಿವೃದ್ಧಿಗಾಗಿ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಹೌದು ಬರೋಬ್ಬರಿ  4.75 ಲಕ್ಷ ರೂ. ವರೆಗೆ ಸಾಲ & ಸಹಾಯ ಧನಕ್ಕೆ ಆನ್ಲೈನ್ ಮೂಲಕ ಅರ್ಜಿ ಕರೆದಿದ್ದಾರೆ. ಈ ಎಲ್ಲಾ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

SC ST Subsidy loan scheme Karnataka 2023 – Apply Online

1. ಸ್ವಯಂ ಉದ್ಯೋಗ ನೇರಸಾಲ ಯೋಜನೆ :

ಈ ಯೋಜನೆ ಅಡಿಯಲ್ಲಿ ಸಣ್ಣ ಮಟ್ಟದ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ ಹಾಗೂ ಸಾಲ ಮಂಜೂರು ಮಾಡಲಾಗುತ್ತದೆ. ಹಾಗೆಯೇ ಇದರಲ್ಲಿ ಘಟಕ ವೆಚ್ಚ 1 ಲಕ್ಷ ಆಗಿದ್ದು ಸಹಾಯಧನವಾಗಿ 50 ಸಾವಿರ ರೂ ನೀಡಲಾಗುತ್ತದೆ.  ಮತ್ತು ಈ ಯೋಜನೆಯಲ್ಲಿ ಶೇ.4 ರಷ್ಟು ಬಡ್ಡಿದರ ನೀಡಲಾಗುತ್ತದೆ.

2. ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ :

ಈ ಯೋಜನೆ ಬ್ಯಾಂಕ್ ಗಳ ಸಹಯೋಗದಲ್ಲಿ ನಡೆಯುತ್ತದೆ. ಹಾಗೂ ವ್ಯಾಪಾರ ಮತ್ತು ಇತರ ಉದ್ಯಮಗಳಿಗೆ ಸಹಾಯಧನ ನೀಡಲಾಗುತ್ತದೆ. ಮತ್ತು ಉಳಿದ ಮೊತ್ತವು ಬ್ಯಾಂಕ್ ನ ಸಾಲವಾಗಿರುತ್ತದೆ.

ಇದರಲ್ಲಿ ಘಟಕ ವೆಚ್ಚ ಶೇ. 70ರಷ್ಟು ಆಗಿದ್ದು ಸಹಾಯಧನ ಅಥವಾ ಗರಿಷ್ಠ ರೂ.1.00 ಲಕ್ಷ ಸಿಗುತ್ತದೆ. ಸರಕು ವಾಹನ /ಟ್ಯಾಕ್ಸಿ ( Taxi ) (ಹಳದಿ ಬೋರ್ಡ್‌) ( yellow board ) ಖರೀದಿಸುವ ಉದ್ದೇಶಕ್ಕೆ ಘಟಕ ವೆಚ್ಚದ ಶೇ.75 ರಷ್ಟು ಸಹಾಯಧನ ಅಥವಾ ಗರಿಷ್ಠ ರೂ. 4.00 ಲಕ್ಷ ನೀಡಲಾಗುತ್ತದೆ.

3. ಮೈಕ್ರೋಕ್ರೆಡಿಟ್ (ಪ್ರೇರಣಾ) ಯೋಜನೆ :

ಮಹಿಳಾ ಸಹಾಯ ಸಂಘಗಳಿಗೆ (ಕನಿಷ್ಟ 10 ಸದಸ್ಯರು) ಕಿರು ಆರ್ಥಿಕ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ ಸೌಲಭ್ಯ ನೀಡಲಾಗುತ್ತದೆ.
ಇದರಲ್ಲಿ ಘಟಕ ವೆಚ್ಚ: ರೂ ಸಹಾಯಧನ. 2.50 ಲಕ್ಷ ರೂ.1.50 ಲಕ್ಷ. ಸಾಲ: ರೂ. 1.00 ಲಕ್ಷ ಮತ್ತು ಶೇಕಡ 4 ರಷ್ಟು ಬಡ್ಡಿದರ ದೊರೆಯುತ್ತದೆ.

4. ಭೂ ಒಡೆತನ ಯೋಜನೆ :

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಈ ಕೆಳಕಂಡ ಘಟಕ ವೆಚ್ಚದಲ್ಲಿ ಕೃಷಿ ಜಮೀನು ಖರೀದಿಸಿ ನೀಡಲಾಗುವುದು. ಘಟಕ ವೆಚ್ಚ ರೂ. 25,00 ಲಕ್ಷ ರೂ. 20,000 ಲಕ್ಷ ಸಹಾಯಧನ: ಶೇ. 50 ಸಾಲ: ಶೇ. 50 (ಶೇಕಡ 1ರಷ್ಟು ಬಡ್ಡಿದರ) ನೀಡಲಾಗುತ್ತದೆ.

5. ಗಂಗಾ ಕಲ್ಯಾಣ ಯೋಜನೆ :

1.20 ಎಕರೆ ಯಿಂದ 5.00 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಕೊಳವೆಬಾವಿ ಕೊರೆಯ ಪಂಪ್ ಸೆಟ್ ಅಳವಡಿಸಿ, ವಿದ್ಯುದೀಕರಣಗೊಳಿಸಿ ನೀರಾಮ ಸೌಲಭ್ಯ ಒದಗಿಸಿಕೊಡಲಾಗುತ್ತದೆ. ಮತ್ತು ಈ ಯೋಜನೆಯಲ್ಲಿ  ಘಟಕ ವೆಚ್ಚ ರೂ. 1.75 ಲಕ್ಷ / ರೂ. 375 ಲಕ್ಷ – ಅದರಲ್ಲಿ ರೂ. 50,000/- ಸಾಲವೂ ಇರುತ್ತದೆ.

sc st loan karnataka

ಇದಿಷ್ಟು ಮುಖ್ಯ ಐದು ಯೋಜನೆಗಳಗಿದ್ದು , ಈ ಯೋಜನೆಗೆ ನಿಗಮದ ನಿರ್ದೇಶಕ ಮಂಡಳಿ ವಿರೇಚನಾ ಕೋಟಾ ಅಥವಾ ಸರ್ಕಾರದ ಸಾಂಸ್ಥಿಕ ಕೋಟಾದಲ್ಲಿ ಸ್ವೀಕರಿಸುವ ಅರ್ಜಿಗಳನ್ನು ಸಹ ಸೇವಾ ಸಿಂಧು ಪೋರ್ಟಲ್ ( https://sevasindhu.karnataka.gov.in ) ಮೂಲಕವೇ ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 29 ಕೊನೆಯ ದಿನಾಂಕವಾಗಿದೆ.

ಹೆಚ್ಚಿನ ಮಾಹಿತಿಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರುಗಳ ಕಚೇರಿ, ಅಥವಾ ನಿಗಮಗಳ ವೆಬ್ಸೈಟ್ ಗೆ ಸಂಪರ್ಕಿಸಬಹುದು.

ಕಲ್ಯಾಣ ಮಿತ್ರ SC/ST ಸಹಾಯವಾಣಿ ಸಂಖ್ಯೆ 9482-300-400 ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.

ಇದನ್ನೂ ಓದಿ – Loan Scheme – ಮಹಿಳೆಯರಿಗೆ 2 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ, ಇಲ್ಲಿದೆ ಸಂಪೂರ್ಣ ಮಾಹಿತಿ

ಇದನ್ನೂ ಓದಿ – ಭಾಗ್ಯಲಕ್ಷ್ಮಿ ಬಾಂಡ್ ಗೆ 18 ವರ್ಷ, ಎಲ್ಲಾ ಹೆಣ್ಣು ಮಗುವಿಗೆ ಬರುತ್ತೆ ಬರೋಬ್ಬರಿ 1 ಲಕ್ಷ ರೂಪಾಯಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!