Picsart 25 11 11 22 01 56 520 scaled

ದಿನಕ್ಕೆ ₹3–₹4 ಉಳಿಸಿದರೆ ಸಾಕು: ಟಾಪ್-ಅಪ್ SIP ಮೂಲಕ 10 ಲಕ್ಷ ಗುರಿ ತಲುಪಬಹುದು

Categories:
WhatsApp Group Telegram Group

ಇಂದಿನ ವೇಗದ ಜೀವನದಲ್ಲಿ ಹಣ ಸಂಪಾದಿಸುವುದು ಸುಲಭವಾಗಿದ್ದರೂ, ಅದನ್ನು ಸರಿಯಾಗಿ ಉಳಿಸುವುದು ಮತ್ತು ಬುದ್ದಿವಂತಿಕೆಯಿಂದ ಹೂಡಿಕೆ ಮಾಡುವುದು ಬಹುತೇಕ ಜನರಿಗೆ ದೊಡ್ಡ ಸವಾಲಾಗಿದೆ. ಅನೇಕರು ನನ್ನಿಂದ ಉಳಿತಾಯ ಮಾಡುವುದಕ್ಕೆ ಆಗುವದೇ ಇಲ್ಲ ಎಂದು ಅಂದುಕೊಂಡಿರುತ್ತಾರೆ. ಆದರೆ ಉಳಿತಾಯಕ್ಕೆ ದೊಡ್ಡ ಮೊತ್ತಗಳೇ ಬೇಕಾಗಿಲ್ಲ, ದಿನಕ್ಕೆ ₹3–₹4 ಉಳಿಸಿದರೂ ಸಾಕಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಹೂಡಿಕೆ ಜಗತ್ತಿನಲ್ಲಿ ದೀರ್ಘಾವಧಿ (Long Term) ಹೂಡಿಕೆಯ ಮಹತ್ವ ಹೆಚ್ಚಿನದಾಗಿ ಇದೆ. ವಿಶೇಷವಾಗಿ ಮ್ಯೂಚುವಲ್ ಫಂಡ್ SIP ಎಂಬುದು ಸಾಮಾನ್ಯ ಆದಾಯ ಹೊಂದಿರುವ ಜನರಿಗೆ ಅತ್ಯಂತ ಸುಲಭ, ಬಜೆಟ್ ಸ್ನೇಹಿ ಮತ್ತು ಶಿಸ್ತುಬದ್ಧ ಹೂಡಿಕೆ ಮಾರ್ಗ.

ತಿಂಗಳಿಗೆ ₹100 SIP — 25 ವರ್ಷಗಳ ನಂತರ ದೊರೆಯುವ ಲಾಭ:

ನೀವು ಪ್ರತಿಮಾಸ ₹100 SIP ಹೂಡಿಕೆ ಮಾಡಿ 25 ವರ್ಷಗಳವರೆಗೆ ಮುಂದುವರಿಸಿದರೆ,
ಒಟ್ಟು ಹೂಡಿಕೆ: ₹30,000
ಅಂದಾಜು Returns (12% ದೀರ್ಘಾವಧಿಯ ಸರಾಸರಿ ಲಾಭದಷ್ಟೆ): ₹1.89 ಲಕ್ಷ
ಒಟ್ಟು ಲಾಭ: ₹1.59 ಲಕ್ಷ

ಹಾಗಾದರೆ ₹10 ಲಕ್ಷ ಹೇಗೆ ಸಿಗುತ್ತದೆ?:

ತಿಂಗಳಿಗೆ ಕೇವಲ ₹100 ಮೂಲಕ ₹10 ಲಕ್ಷ ಗುರಿ ತಲುಪಬೇಕಾದರೆ,  ನಿಮಗೆ ಸತತವಾಗಿ 47 ವರ್ಷ SIP ಹೂಡಿಕೆ ಮಾಡಬೇಕಾಗುತ್ತದೆ. ದೀರ್ಘಾವಧಿಯಲ್ಲಿ ಮಾರುಕಟ್ಟೆ Returns 12%–15% ಸಿಗುವುದು ಸಾಮಾನ್ಯ,  ಕೆಲವೆಡೆ 18%–20% ವರೆಗೆ ಕೂಡ ಕಾಣಬಹುದು. ಹೀಗಾಗಿ Returns ಹೆಚ್ಚಾದರೆ ಗುರಿ ಇನ್ನೂ ಬೇಗ ತಲುಪಬಹುದು.

ಟಾಪ್-ಅಪ್ SIP,  ವೇಗವಾಗಿ ಗುರಿ ತಲುಪುವ ಸುಲಭ ವಿಧಾನ:

ನೀವು ಪ್ರತಿವರ್ಷ SIP ಮೊತ್ತವನ್ನು 10% ಹೆಚ್ಚಿಸಿದರೆ ( ಉದಾಹರಣೆಗೆ ₹100, ₹110,  ₹121 ಹೀಗೆ),
ಬೇಗ ಗುರಿ ತಲುಪಬಹುದು. 
Returns ಕೂಡ ಕ್ರಮೇಣ ದ್ವಿಗುಣಗೊಳ್ಳಬಹುದು. ಆದ್ದರಿಂದ ಆದಾಯದ ಏರಿಕೆ, ಹೂಡಿಕೆ ಶಿಸ್ತು ಎಲ್ಲದಕ್ಕೂ ಇದು ಉತ್ತಮ ಆಯ್ಕೆ

ಏಕೆ SIP ಸಾಮಾನ್ಯ ಜನರಿಗೆ ಸೂಕ್ತ?:

ಆರಂಭಕ್ಕೆ ಕಡಿಮೆ ಹಣ ಸಾಕು.
ಮಾರುಕಟ್ಟೆಯ ಏರಿಳಿತದ ತೊಂದರೆ ಕಡಿಮೆ.
ದೀರ್ಘಾವಧಿಯಲ್ಲಿ returns ಹೆಚ್ಚು.
ಸಂಪತ್ತನ್ನು ನಿಧಾನವಾಗಿ, ಸುರಕ್ಷಿತವಾಗಿ ನಿರ್ಮಿಸಬಹುದು.
ಕೇವಲ ₹100–₹500 ಮೂಲಕ ಬೃಹತ್ ಗುರಿಗಳನ್ನು ತಲುಪಬಹುದು.

ಒಟ್ಟಾರೆಯಾಗಿ, ಹೂಡಿಕೆ ಮಾಡಲು ಬಹಳ ಹಣ ಬೇಕು ಎಂಬುದು ಶುದ್ಧ ಸುಳ್ಳು. ಕಡಿಮೆ ಮೊತ್ತವನ್ನೂ ಸರಿಯಾದ ಸ್ಥಳದಲ್ಲಿ, ಸರಿಯಾದ ಅವಧಿಗೆ ಹೂಡಿಕೆ ಮಾಡಿದರೆ ದೀರ್ಘಾವಧಿಯಲ್ಲಿ ಉತ್ತಮ ಫಲಿತಾಂಶ ಕಾಣಬಹುದು

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories